ಸುಬ್ರೀತ್ ಕೌರ್

Image result for yellow flowers
ಸುಬ್ರೀತ್ ಕೌರ್  ಅತ್ಯಂತ ಪ್ರತಿಭಾವಂತ ಸಾಹಸಿ ಹೆಣ್ಣು ಮಗಳು  ಆಕೆಯು  ಅದೆಷ್ಟರ ಮಟ್ಟಿಗೆ ಅಸಮಾನ್ಯ ಪ್ರತಿಭೆ ಎನ್ನುವುದನ್ನು ನೀವು ನೋಡ ಬೇಕಾದರೆ ಕಲರ್ ವಾಹಿನಿಯಲ್ಲಿ ಪ್ರಸಾರ ಆಗುವ ಝಲಕ್  ದಿಕ್ಲಾಜ  ಎನ್ನುವ ಡ್ಯಾನ್ಸ್ ಕಾರ್ಯಕ್ರಮ ನೋಡಲೇ ಬೇಕು. ಯಾವ ಕಾರಣಕ್ಕೆ ಈಕೆಯ ಬಗ್ಗೆ ಇಷ್ಟೊಂದು ಹೇಳ್ತಾ ಇದ್ದೀನಿ ಅಂದರೆ ಆಕೆಯು ಒಂದು ಕಾಲು ಕಳೆದು ಕೊಂಡಿದ್ದರು ನಿಲ್ಲ ಅದಮ್ಯ ಆಸಕ್ತಿ, ಹಾಗೂ ಪ್ರಯತ್ನದಿಂದ ಈ ಪ್ರತಿಷ್ಟಿತ ಕಾರ್ಯಕ್ರಮದ  ಭಾಗವಾಗಿದ್ದಾರೆ  . 
ಇದೆ ವಾಹಿನಿಯ ವಿಶಿಷ್ಟ ಕಾರ್ಯಕ್ರಮ ಇಂಡಿಯ ಗಾಟ್  ಟ್ಯಾಲೆಂಟ್  ನಲ್ಲಿ  ಇತ್ತೀಚಿನಕ್ಕಿಂತ ಮೊದಲು ಪ್ರಸಾರ ಆದ  ಇಂಡಿಯ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದ ಭಾಗವಾಗಿದ್ದರು ಈಕೆ. ಈಗ ಝಲಕ್ ನಲ್ಲಿ ನರ್ತಿಸುತ್ತಿದ್ದಾರೆ. ಶನಿವಾರ- ಭಾನುವಾರ ರಾತ್ರಿ ಪ್ರಸಾರ ಆಗುವ ಈ ಕಾರ್ಯಕ್ರಮದಲ್ಲಿ ಈ ಬಾರಿ ಸುಬ್ರೀತ್ ಬಗ್ಗೆ ಹೆಚ್ಚು ಆಕರ್ಷಣೆ ಈ ಕಾರ್ಯಕ್ರಮದ ಮತ್ತೊಂದಷ್ಟು ಆಕರ್ಷಣೆ  ಕರಣ್ ಜೋಹರ್  ಎನ್ನುವ ಚಕ್ರವರ್ತಿ, ಶಾಹಿದ್ ಕಪೂರ್ ಎನ್ನುವ ಯುವರಾಜ ಮತ್ತು ಮನೀಶ್ ಪಾಲ್ ಹಾಸ್ಯ. ಮಾಧುರಿ ಮತ್ತು ರೆಮೋ ರಹಿತ ಝಲಕ್ ಬಗ್ಗೆ  ಹೇಳುವುದಾದದರೆ ಈ ಸಂಗತಿಗಳು ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ . 
Image result for yellow flowers

ಈ ಟೀವಿ ತೆಲುಗು ವಾಹಿನಿ ಪ್ರತಿದಿನ ತಪ್ಪದೆ ರಾತ್ರಿ ಒಂಬತ್ತೂವರೆ ಸಮಯದಲ್ಲಿ ಬೇರೆ ಬೇರೆ ರಿಯಾಲಿಟಿ ಶೋ ಪ್ರಸಾರಿಸುತ್ತದೆ. ಅದರಲ್ಲಿ ಜಬರ್ದಸ್ತ್ ಎನ್ನುವ ಹಾಸ್ಯ ಕಾರ್ಯಕ್ರಮವು ಒಂದು . ಇಂತಹದ್ದೇ ಕಾನ್ಸೆಪ್ಟ್ ಮೊದಲು ನಾನು ಕಸ್ತೂರಿ ಕನ್ನಡ ವಾಹಿನಿಯಲ್ಲಿ ವೀಕ್ಷಿಸಿದ್ದೆ ಬಹಳ ಹಿಂದೆ . ಅದಕ್ಕೆ ಸಿಹಿಕಹಿ ಚಂದ್ರು- ದಯಾನಂದ್ ಮುಖ್ಯ ಅತಿಥಿ ಆಗಿದ್ದರು. ಅದರಲ್ಲಿ ಪರಿಚಿತ ಕಲಾವಿದರೇ ಇದ್ದರು. ಆದರೆ ಜಬರ್ದಸ್ತ್ ನಲ್ಲಿ ಎಲ್ಲ ಹೊಸಬರು ನನ್ನ ಪ್ರಕಾರ. ಈ ಹಾಸ್ಯ ಕಾರ್ಯಕ್ರಮದಲ್ಲಿ  ನಾಗೇಂದ್ರ ಬಾಬು ಮತ್ತು ರೋಜ ಮುಖ್ಯ ತೀರ್ಪುಗಾರರು. ಕನ್ನಡ ಚಿತ್ರಗಳಲ್ಲಿ ವಿಲನ್ ಆಗಿದ್ದ  ನಾಗೇಂದ್ರ ಬಾಬು ಚಿರು ಅಣ್ಣ ಅಂತ ನಿಮಗೆ ಗೊತ್ತೇ ಇದೆ. ಅದೇರೀತಿ ಕನ್ನಡ ಚಿತ್ರಗಳಲ್ಲಿ  ಹೀರೋಯಿನ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಅಮ್ಮನಾಗಿ ನಟಿಸಿದ್ದ ಪ್ರತಿಭೆ. ನಿಮಗೆ ತೆಲುಗು ಗೊತ್ತಿದ್ದರೆ ಖಂಡಿತ ಆ ಕಾರ್ಯಕ್ರಮದ ಸವಿ ಸವಿಯ ಬಹುದು. 

ಮಿ ಹುಚ್ ರೈಸಿಂಗ್

Image result for red flowers

ಹೀಗೂ ಉಂಟೆ ? ಟೀವಿ ನೈನ್ ನಲ್ಲಿ ಪ್ರಸಾರ ಆಗುವ ಕಾರ್ಯಕ್ರಮ. ಆದರೆ ಅದೆಷ್ಟು ಇಷ್ಟ ಆಗುವ, ಬಳಕೆ ಆಗುವ ಪದ ಅಂದ್ರೆ ಮಾತು ಮಾತಿಗೂ ಹೀಗೂ ಉಂಟೆ  . ಅದಕ್ಕೂ ಕಾರಣ ಇದೆ ಮುಖ್ಯವಾಗಿ ನಾರಾಯಣ ಸ್ವಾಮಿ ಕೈಲಿ ಎಳೆದು ಎಳೆದು  ಬಿಸಾಡುವ ರೀತಿ ಕಂಡಾಗ ಪ್ರತಿ ಬಾರಿ ನನಗೆ ಹೀಗೂ ಉಂಟೆ ಎಂದು ಅನ್ನಿಸ್ತಾ ಇರುತ್ತದೆ. ಏನೇ ಆದರೂ ಆ ಕಾರ್ಯಕ್ರಮ ಮಧ್ಯಮ ವರ್ಗದ ಹೆಣ್ಣುಮಕ್ಕಳಲ್ಲಿ ಆಸಕ್ತಿಯನ್ನು ಉಳಿಸಿಕೊಂಡಿದೆ  ಯಾರೇ ನೋಡಿದರೂ ಅದರಲ್ಲೂ  ನನ್ನ ಪರಿಚಿತ ಹೆಣ್ಣುಮಕ್ಕಳು ಹೀಗೂ ಉಂಟೆ ನೋಡದೆ ಇರಲಾರರು. 
ಈ ವಿಷಯದಲ್ಲಿ ಪದೇಪದೇ  ಅನ್ನಿಸುವ ಏಕೈಕ   ಮಾತು, ಪದ ಒಟ್ಟಾರೆ ನಮ್ಮನ್ನು ಕಾಡುವ ಕಟ್ಟ ಕಡೆಯ ಪ್ರಶ್ನೆ ... ಅದೆಂದರೆ ಹೀಗೂ ಉಂಟೆ ??

Image result for red flowers

ಟೀವಿ ನೈನ್  ವಾಹಿನಿಯಲ್ಲಿ ಇಂದು ಬೆಳಿಗ್ಗೆ  ಫೇಸ್  ಬುಕ್ ನಲ್ಲಿ ಕನ್ನಡ ಅವಹೇಳನ ಮಾಡಿದ್ದ  ಪ್ರಾಣಿ ಬಗ್ಗೆ ಪ್ರಸಾರ ಆದ ಚರ್ಚೆ ಗಮಸಿದಾಗ  ಉದಯ ರವಿ ಹೆಗಡೆ ಮತ್ತು  ಸೈಬರ್  ತಜ್ಞೆಯ ಮಾತುಗಳು ಇಷ್ಟ ಆಯ್ತು. ಈ ಅಮೇರಿಕ ದೇಶದ ಲಾಗಳು, ಇಂತಹ ಸೋಶಿಯಲ್ ನೆಟ್ ವರ್ಕ್ ನಿಂದ  ನಮ್ಮ ಸಮಾಜದ ಮೇಲೆ ಬೀರುತ್ತಿರುವ ಪ್ರಭಾವ ವರ್ಣಿ ಸಲಾಗದ್ದು. ಏಕೆಂದರೆ ಮದುವೆ  ಆಗ್ತೀನಿ ಅಂತ ನಂಬಿಸಿ ಕೈಕೊಡುವ, ಪ್ರೀತಿ ವಿಷಯದಲ್ಲಿ ಆಟವಾಡುವಂತಹ ವಿಷಯಗಳಿಗೆ ಸಂಬಂಧಪಟ್ಟಂತೆ  ಪೊಲೀಸರು ಫೇಸ್  ಬುಕ್ ಮಂದಿ ಬಳಿ  ಮಾಹಿತಿ ಕೇಳಿದರೂ ಅವರ ಕಡೆಯಿಂದ ಯಾವ ಪ್ರಯೋಜನಗಳು ಆಗ್ತಾ ಇಲ್ಲ.  ತುಂಬಾ ಸಂಗತಿಗಳು  ಇವೆ. ಅಂತಹವುಗಳಿಗೆ ಪರಿಹಾರ ಸಿಕ್ಕರೆ ಒಳ್ಳೆಯದು . 
ಏನೇ ಆದರೂ ಕನ್ನಡ ಚಿತ್ರರಂಗದ ಕ್ಯೂಟ್ ನಟ ಚೇತನ್ ಜೊತೆ ಹುಚ್ಚ  ವೆಂಕಟ್ ಬಂದಿದ್ದು, ಅದರಲ್ಲೂ  ಮಿ ಹುಚ್ ರೈಸಿಂಗ್ ಲೆವೆಲ್ ಸಕತ್ ಅಟ್ರಾಕ್ಟ್ ಆಯ್ತು !! 

ಚಿಂದಿ ಚಿತ್ರಾನ್ನ

Image result for pink color

 ನೀವು  ಕನಿಷ್ಠ ವಾರಕ್ಕೊಂದಾದರೂ ಪೋಸ್ಟ್ ಹಾಕಿ ಎಂದು ಕೇಳುವ ಸ್ನೇಹಿತರು ಬೇಕಾದಷ್ಟಿದ್ದಾರೆ.. ಆದರೆ ಸಾಕಷ್ಟು ಸರ್ತಿ ಬರೀಬೇಕು ಎಂದು ನಿರ್ಧಾರ ಮಾಡಿದರೂ ಸಹಿತ ಬರೆಯೋಕೆ ಆಗೋದೇ ಇಲ್ಲ.ಅದಕ್ಕಾಗಿ ನಾನು ಈಗ ನಿಯಮಕ್ಕೆ ಬದ್ಧಳಾಗಿರರದೇ, ಆದಾಗ ಬರೆಯುವ ಎಂದು ನಿರ್ಧಾರ ಮಾಡಿದ್ದೇನೆ.
@ ಕಲರ್ ಕನ್ನಡ ವಾಹಿನಿಯಲ್ಲಿ ಈಗ ಚಿಣ್ಣರ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಅದರಲ್ಲಿ ರವಿಚಂದ್ರನ್, ಪ್ರಿಯಾಮಣಿ ಮತ್ತು ಮಯೂರಿ  ಉಪಾಧ್ಯ   ತೀರ್ಪುಗಾರರಾಗಿದ್ದಾರೆ. ಅಲ್ಲದೆ ಅಕುಲ್ ನಿರೂಪಣೆ . ಕಷ್ಟ ಪಟ್ಟು ಕನ್ನಡ ಮಾತಾಡ್ತಾ ಇದ್ದಾರೆ ಅನ್ನಿಸಿದರೂ ಸಹ್ಯವಾಗುತ್ತದೆ. ನನ್ನ ಅನಿಸಿಕೆ ಪ್ರಕಾರ  ಸೆಲೆಬ್ರಿಟಿ ಡ್ಯಾನ್ಸಿಂಗ್ ಸ್ಟಾರ್ ಗಿಂತ ಸಾಮಾನ್ಯ ಮನೆಯ ಮಕ್ಕಳ ಈ ಡ್ಯಾನ್ಸಿಂಗ್ ಸ್ಟಾರ್  ರವಿ ಮಾಮ, ಪ್ರಿಯ ಹಾಗೂ ಮಯೂರಿಗೆ ಇಷ್ಟ ಆಗುತ್ತೆ. ನಿಜ ಬದುಕಿನ ಬವಣೆ, ಆಸೆ, ಅದಕ್ಕಾಗಿ ತಾಯಿತಂದೆ  ಮಾಡುವ ಪ್ರಯತ್ನ ಎಲ್ಲವೂ ಅರ್ಥ ಆಗುತ್ತೆ. ಇಂತಹ ಮಕ್ಕಳು ಅದಕ್ಕಿಂತ ಅವರ ತಾಯಿತಂದೆ ಮಾಡುವ ಸಾಧನೆ ಚಿಂದಿ ಚಿತ್ರಾನ್ನ ಬಿಡಿ!
ಜೋಗಯ್ಯ  ಶಿವಣ್ಣನದು ಸೊ ಇಷ್ಟವಾದ ಹಾಡುಗಳಲ್ಲಿ ಒಂದು. ಏನೇ ಹೇಳಿ ಎಲೆಮರೆಕಾಯಿ ಹುಡುಕುವ ಈ  ಮಕ್ಕಳ ಡ್ಯಾನ್ಸಿಂಗ್ ಸ್ಟಾರ್ .. ಬೇಜಾರಿಲ್ಲದೆ ವೀಕ್ಷಿಸ ಬಹುದು



@  ಸೋನಿ ವಾಹಿನಿಯಲ್ಲಿ ಇಂಡಿಯನ್  ಐಡಲ್  ನಲ್ಲಿ ವಿಶಾಲ್, ಸೋನಾಕ್ಷಿ, ಸಲೀಮ್ ತೀರ್ಪಿನ ಅಡಿಯಲ್ಲಿ ಅನೇಕ ಪ್ರತಿಭೆಗಳು ಹೊರ ಬರುತ್ತಿವೆ.ರಿತ್ವಿಕ ತುಂಟತನ ಚಂದ ಇದೆ. ಇನ್ನು ಹುಸೇನ್ ಅವರ ನಿರೂಪಣೆ ನೋಡ್ತಾ ಇದ್ರೆ ಅವರು ಸ್ಟಾರ್ ವಾಹಿನಿಯಲ್ಲಿ ನಟಿಸಿದ್ದ ಕುಂ ಕುಂ ನೆನಪಾಗುತ್ತದೆ. ಸ್ವಲ್ಪ ದಿಲೀಪ್ ಕುಮಾರ್, ಸ್ವಲ್ಪ ಶಾರೂಖ್ ಖಾನ್ ಥರ  ಮಾತಾಡುವ ಹಾಗೆನ್ನುವುದಕ್ಕಿಂತ ನಟಿಸುವ, ಅವರನ್ನು ಅನುಸರಿಸುವ ಪ್ರತಿಭೆ. ನಾನು ಆನ್ ಲೈನ್ ಪೇಪರ್ ನಲ್ಲಿ ಸಿನಿಮಾ ನ್ಯೂಸ್ ಬರೆಯುತ್ತೇನೆ. ಸಾಮಾನ್ಯವಾಗಿ ಸ್ಯಾಂಡಲ್ ವುಡ್ ಅಲ್ಲದೆ ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ನ್ಯೂಸ್ ಹೆಚ್ಚು ಬರಿತೀನಿ. ಆಗ ಹೆಚ್ಚು ಹೆಚ್ಚು  ಓದುವ ಅಭ್ಯಾಸ.ಸೋನಾಕ್ಷಿಯ ಬಗ್ಗೇ ಸಹ ಜಾಸ್ತಿ  ಓದಿದ್ದೇನೆ :-) ಏಕೆಂದರೆ ನಾನು ನನ್ನ ಓದುಗರಿಗೆ ಒಳ್ಳೆಯ ಅದರಲ್ಲೂ ಅವರ ಮನ ಸೆಳೆಯುವ ವಾರ್ತೆಗಳನ್ನು, ಗಾಸಿಪ್ ಗಳನ್ನೂ ಬರೆಯ ಬೇಕಲ್ಲ. ಅವೆಲ್ಲ ಈಗ ಹೇಳಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಈಕೆ ಇಷ್ಟ ಆದ್ರು. ಮುದ್ದಾದ  ಗಲ್ .. ಆಕೆಯಲ್ಲಿ ಒಂದು ತೆರೆನಾದ ಸರಳತೆ ಇದೆ. ಆ ಸರಳತೆ ನಾಟಕೀಯ ಅಂತ ಅನ್ನಿಸಲ್ಲ . ಲವ್ ಇಟ್ 

Image result for pink color
ಜೀ ಹಿಂದಿ  ವಾಹಿನಿಯಲ್ಲಿ ಡಿಐಡಿ  ಇಷ್ಟಪಟ್ಟು ವೀಕ್ಷಿಸುವ ಕಾರ್ಯಕ್ರಮಗಳಲ್ಲಿ ಒಂದು .  ಮಿಥುನ್ದಾ , ಮುದಸ್ಸರ್, ಪುನೀತ್, ಗೇತಿ, ಜಾಯ್ ಎಲ್ಲರೂ ನಮಗೆ ಸಕತ್ ಕ್ಲೋಸ್ ಅನ್ನಿಸುವಂತೆ ಕಾರ್ಯಕ್ರಮ ನಡೆಸಿಕೊಡ್ತಾರೆ. ಪ್ರಾಯಶಃ  ಆ ಕಾರ್ಯಕ್ರಮ ಇಷ್ಟ ಆಗಿದ್ದಕ್ಕೆ ಹಾಗೆ ಅನ್ನಿಸಿರ ಬಹುದು. ಆದರೆ ನನಗೆ ಇತ್ತೀಚೆಗೆ ಹೆಚ್ಚು ಇಷ್ಟ ಆಗಿದ್ದು, ಸಿಂಡ್ರೆಲ್ಲಾ ಕಥೆಯನ್ನು ಶಾಸ್ತ್ರೀಯ ನೃತ್ಯ ರೂಪದಲ್ಲಿ ತೋರಿಸಿದ್ದು. ವಿಭಿನ್ನ ಅಂತ ಅನ್ನಿಸಿತು. ಎಲ್ಲ  ಪ್ರತಿಭೆಗಳ ಡ್ಯಾನ್ಸ್ ಚೆನ್ನಾಗಿತ್ತು ಆದರೆ ಅದ್ಯಾಕೋ ಆ ಡ್ಯಾನ್ಸ್ ಬಹಳ ಖುಷಿ ಕೊಡ್ತು.