ಲೋಪದೋಷ ?



ತುಂಬಾ ದಿನದಿಂದ ನನ್ನ ಬ್ಲಾಗ್ ಕಡೆ ಗಮನ ನೀಡುವುದಕ್ಕೆ ಆಗೇ ಇಲ್ಲ ಅದಕ್ಕೆ ಕಾರಣ ಮುಖ್ಯವಾಗಿ ಈ ಸೆಟ್ ಅಪ್ ಬಾಕ್ಸ್  ಕಥೆ.. ಅ ಪೆಟ್ಟಿಗೆಯನ್ನು ದೂರ ಮಾಡಿ ಮಲ್ಟಿ ನ್ಯಾಷನಲ್  ಕೊಡೆಗಳ ಪಾದ ಹಿಡಿದಿದ್ದಕ್ಕೆ ಇಲ್ಲಿ ಕೆಲವು ಕನ್ನಡ ಚಾನೆಲ್ ಗಳು ಪ್ರಸಾರ ಆಗಲ್ಲ. ರಂಗಣ್ಣನ  ಪಬ್ಲಿಕ್ ಟೀವಿ ನೋಡೋ ಹಾಗೆ ಇಲ್ಲ.. ಭಯಂಕರ ವಿಷಯಗಳು ಬರ್ತಾ ಇದೆ ನೋಡು ಅಂತ ನಮ್ಮ ಮೇಡಂ ಫೋನ್ ಮಾಡ್ತಾ ಇದ್ರೂ ನೋಡಲಾಗದ ಸ್ಥಿತಿ . ಹೇಯ್ ರಂಗಣ್ಣ ಏನಿದು ಕಥೆ ಎಂದು ಹೇಳಲಾಗದೆ    ಸುಮ್ಮನಿರುವ ಪರಿಸ್ಥಿತಿ ! ಕನ್ನಡದವರು ಕನ್ನಡ ಚಾನೆಲ್ಲೇ ನೋಡುತ್ತಾರೆ, ಆದರೆ ಕನ್ನಡ ಚಾನೆಲ್ಗಳು ಪ್ರಸಾರ ಆಗೋದೇ ಕಡಿಮೆ.. ಒಂದು ಕೊಡೆಯಲ್ಲಿ ಬೇರೆ ಭಾಷೆಗಳ ಅಷ್ಟು ಚಾನೆಲ್ ಬಂದ್ರು ಕನ್ನಡದವರ ಸ್ವಲ್ಪ ಚಾನೆಲ್ ಗಳು ಕಾಣೋದೆ ಇಲ್ಲ, ಇಲ್ಲಿ ಯಾರದು ಲೋಪದೋಷ ?

ನಿನ್ನೆ ನನ್ನ ಫ್ರೆಂಡ್ ಒಬ್ಬರು ಫೋನಿಸಿದರು.. ಸಾಮಾನ್ಯವಾಗಿ ಲೋಕಾಭಿರಾಮವಾಗಿ ಮಾತಾಡುವ ಅವರು ತುಂಬಾ ಸೀರಿಯಸ್ ಆಗಿ ಕೇಳಿದ್ದು ಆ ನಿಕಿತಾನ್ನ ಯಾಕೆ ಅಲ್ಲಿ ಇನ್ನು ಇಟ್ಟಿರೋದು ? ಕನ್ನಡದವರು ಇವರಿಗೆ ಬೇಡ ಹಿಂದಿಯವಳು ಕಂಡ್ರೆ ಇಷ್ಟ. ಆ ಸುದೀಪ್ ಗೆ ದರ್ಶನ್ ಫ್ರೆಂಡ್ ಅಂತನಾ ಹೀಗೆ ಮಾಡ್ತಾ ಇರೋದು, ಅವಳು ಕನ್ನಡ ಕೆಟ್ಟದಾಗಿ ಮಾತಾಡ್ತಾ ಹಾಳು ಮಾಡ್ತಾ ಇದ್ರೆ ಇವರು  ಅವಳಿಗೆ ಯಾಕೆ ಅಷ್ಟೊಂದು ಪ್ರಾಮುಖ್ಯತೆ ನೀಡ್ತಾ ಇರೋದು.. ಹೀಗೆ ಮಾತಿನ ಪ್ರವಾಹ ಹರಿದಿತ್ತು. ಒಂದು ಕ್ಷಣ ನಂಗೆ ಅರ್ಥ ಆಗಲಿಲ್ಲ, ಆ ಮೇಲೆ ತಿಳಿಯಿತು ಅದು ಈ ಟೀವಿಯ  ಬಿಗ್ ಬಾಸ್  ವಿಷ್ಯ ಅಂತ.

ನೀನು ನಿನ್ನ ಬ್ಲಾಗ್ ನಲ್ಲಿ ಬರಿ ಅಂತ ತುಂಬಾ ಫೋರ್ಸ್  ಮಾಡಿದ್ರು ಸುದೀಪ್ ಅದಕ್ಕೆ ಹೇಳ್ತಾ ಇದ್ದೀನಿ.ಸಮಸ್ತ ಕನ್ನಡ ವೀಕ್ಷಕರು ಇಷ್ಟು ದಿನ ಕಂಡಂಗೆ ನಿಕಿತ ಅನ್ನೋ ಬಣ್ಣದ ಬೊಂಬೆಯನ್ನು  ಯಾಕೆ ನೀವು ಇನ್ನು ಕನ್ನಡದವರ  ಜೊತೆ ಅಷ್ಟೊಂದು ಪ್ರೀತಿಯಾಗಿ ಸಾಕ್ತಾ ಇರೋದು, ಇದು ಹಿಂದಿ ಚಾನೆಲ್ ಅವರ ಕೃಪೆಯಿಂದ ಆರಂಭವಾದ ಕಾರ್ಯಕ್ರಮ ಎಂದಾ ? ನಾವು ಕಂಡಂಗೆ  ನಿಕಿತಾ ಕೇವಲ ಒಂದೆರಡು ಎಪಿಸೋಡ್  ಗೆ ಮಾತ್ರ ಲಾಯಕ್ಕಗಿದ್ದಳು ವಿನಃ ಇಷ್ಟು ದಿನಗಳ ಕಾಲ ಅಲ್ಲ . ಆದ್ರೆ ಅದ್ಯಾಕೋ ಬಿಗ್ ಬಾಸ್ ಮಂದಿ ಆಕೆ ಉತ್ತರ  ಭಾರತದಾಕೆ ಅಂತ ಸಕತ್ ಪ್ರೀತಿಯಿಂದ  ಇಲ್ಲೇ ಉಳಿಸಿಕೊಂಡಿದ್ದಾರೆ.
ಆದರು ಈ ವಾರದ ಎಲಿಮಿನೇಶನ್  ನಲ್ಲಿ ಆಕೆ ಉಳಿದು ಕನ್ನಡಿಗ ವೀಕ್ಷಕರ ಮನಕ್ಕೆ ಬೇಸರ ಆಗಿದೆ.. ಮತ್ತೆ ಮತ್ತೆ ಅದೆಷ್ಟರ ಮಟ್ಟಿಗೆ ಅಂದ್ರೆ ಈ ಕಾರ್ಯಕ್ರಮವನ್ನು ತುಂಬಾ ಆಸಕ್ತಿಯಿಂದ ವೀಕ್ಷಿಸುವ ಗ್ರಾಮೀಣ ಜನತೆಯು ಸಹ  ಯಾಕೆ ಹೀಗಾಗಿದೆ ಎಂದು  ಪ್ರಶ್ನಿಸುತ್ತಿದ್ದಾರೆ. ಬಿಗ್ ಬಾಸ್ ನ ಒಂದೆರಡು ಆವೃತ್ತಿ  ಬಿಟ್ರೆ  ನಾನು ಸಾಮಾನ್ಯವಾಗಿ ಎಲ್ಲವನ್ನು ನೋಡೇ ಇದ್ದೀನಿ ಹಿಂದಿಯಲ್ಲಿ. ಇದು ಸಹ ಬಿಗ್ ಬಾಸ್ ಗೇಂ ವಿಧಾನ ಅಂತ ಗೊತ್ತು ನನಗೆ, ಆದ್ರೆ ಈಗಷ್ಟೇ ವೀಕ್ಷಿಸೊಕೆ ಆರಂಭ ಮಾಡಿರುವ ಕನ್ನಡ ವೀಕ್ಷಕರು ಈ ಮಾತು ಒಪ್ಪಿಕೊಳ್ಳೋಕೆ ಸಿದ್ಧ ಇಲ್ಲ, ಅವರ ದೃಷ್ಟಿಕೋನದ ಬಗ್ಗೆ ನಾನು ತುಂಬಾ ಗೌರವ ನೀಡ್ತೀನಿ ಒಬ್ಬ ಕನ್ನಡಿಗಳಾಗಿ ಹೇಳಿ ಯಾಕೆ ಪದೇಪದೇ ಹೀಗೆ ಆಗಿದ್ದು?