ಭದ್ರ.. ;-)


ಕನ್ನಡ ಕಲರ್ ವಾಹಿನಿಯಲ್ಲಿ ಬಿಗ್ ಬಾಸ್ 3 ರಿಯಾಲಿಟಿ ಷೋ ಕೊನೆ ದಿನಗಳನ್ನು ಸಮೀಸ್ತಾ ಇದೆ.. ಒಂದು ಕಡೆ ಯಾರು ಆ ಥೈಲಿ ಎತ್ತಿಕೊಂಡು ಹೋಗ್ತಾರೋ ಅಂತ ಒದ್ದಾಡುವ ಒಂದಷ್ಟು ಮಂದಿ.. ಇನ್ನೊಂದು ಕಡೆ ಶ್ರುತಿ ಬಗ್ಗೆ ನಾಟಕ  ಆಡ್ತಾ ಇದ್ದಾರೆ  ನಾಟಕ ಅನ್ನುವ ಜನಾ. ವಿಶೇಷ ಅಂದ್ರೆ ಶ್ರುತಿ ಏನೇ ಆಗಿರಲಿ ಆಕೆ ತಾಯಿ ಅನ್ನೋದು ಸತ್ಯ.. ಆಕೆಯು ತನ್ನ ಮಗಳನ್ನು ಕಂಡಾಗ ಸಹ ದುಃಖಿಸದೆ,ಭಾವನೆಗಳನ್ನು ತೋರಿಸದೆ ಇದ್ದಿದ್ದರೆ ಆಗ ಸಹ ಮಂದಿ ಅದನ್ನು ನಾಟಕ ಅಂತಾನೆ ಹೇಳ್ತಾ ಇದ್ರೂ. ಕನ್ನಡದ  ಹೆಣ್ಣುಮಗಳು ಆಕೆ.. ಆಕೆಯು ತನ್ನ ಬದುಕಲ್ಲಿ ಆದ , ಎದುರಿಸಿದ ಕಷ್ಟಗಳು, ಬೇಸರಗಳನ್ನು ಯಾರ ಮುಂದೇನೂ ಪ್ರಲಾಪಿಸ್ತಾ ಇಲ್ಲ.. ಅಳು ಬಂದ್ರು ತಡೆದು ಕೊಳ್ಳುವ ಮನಸ್ಥಿತಿ ಆಕೆ ಬಂದಿದೆ ಅಂದ್ರೆ ಅದಿನ್ಯಾವ ಪರಿ ಆಕೆಯ ಹೃದಯ ಒಡೆದಿರಬಹುದು ?.. ನಾಟಕ ಮಾಡೋರು ಎಷ್ಟು ಮಾಡೋಕೆ ಸಾಧ್ಯ.. ? ಮಗಳನ್ನು ನೋಡಿ ಅತ್ರು ನಾಟಕ ಅಂತಾರಲ್ಲ ಮಂದಿ..!
ಏನೇ ಹೇಳಿ ಬಿಗ್ ಬಾಸ್ ಈ ಅವತರಣಿಕೆ ಸಿಕ್ಕಾಪಟ್ಟೆ ಆಸಕ್ತಿ ಮೂಡಿಸ್ತಾ ಇದೆ.. ಅಯ್ಯಪ್ಪ ಅವರ ತಂದೆ ಜೊತೆ ಕನ್ನಡದಲ್ಲಿ ಮಾತಾಡಿ ಕನ್ನಡಿಗರಿಗೆ ಖುಷಿ ಕೊಟ್ರು, ಆದರೆ ಸಮೀನ ರೆಹಮಾನ್ ಜೊತೆ ಕನ್ನಡದಲ್ಲಿ ಮಾತಾಡ ಬಹುದಿತ್ತು.. ಪೂಜಾ ಗಾಂಧೀ ಅತ್ತೂ  ಅತ್ತೂ ಎರಡನೇ ಬಾರಿ ಹಾಯಾಗಿ ಬಿಗ್ ಬಾಸ್ ಮನೆಗೆ ಬಂದು ಈಗ  ಗ್ರಾಂಡ್ ಫಿನಾಲೆಗೂ ಅವಕಾಶ ಪಡೆದರಲ್ಲ.. ಆಹಾ.. ಹಾಗಾದ್ರೆ ಕೊನೆಯ ಫಲಿತಾಂಶ ಅಕಟಕಟಾ !
ಪೂಜಾ ಗಾಂಧೀ  ಕೈಲಿ ಸಿಕ್ಕಿ ಹಾಕಿಕೊಂಡ ಪಾಪ ಅಯ್ಯಪ್ಪನನ್ನು ಕಂಡ್ರೆ ಅಯ್ಯೋ ಪಾಪ ಅಂತ ಅನ್ನಿಸುತ್ತೆ ;-)
Image result for red flowers
ಕಿಚ್ಚ .. ದೀಪ್ ನಿಮ್ಮ ಕಡೆಗೆ ಈಗ  ಜನರ ಟ್ರಿಗರ್ ಇದೆ .. ಭದ್ರ.. ;-)
 ಉಪ್ಪಿ ಜೊತೆಯ ಕಾರ್ಯಕ್ರಮ ತುಂಬಾ ಮಂದಿಗೆ ಇಷ್ಟ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ವಿಶೇಷತೆ ಅವರ ಬರವಣಿಗೆ, ಆ ಸ್ಟೈಲು .. ದೀಪ್ ಅವರು ನಿಮಗೆ ಕಾಲು ಎಳೆದ ರೀತಿ ಸಕತ್ ಇತ್ತು.. ಅದ್ಸರಿ ನೀವೆ ಅದ್ಯಾಕೆ ಆ ಪರಿ ಉತ್ಸಾಹ ತೋರಿ ಜಾಗ ಬದಲಾಯಿಸಿಕೊಂಡು ಉಪ್ಪಿ ಬಳಿ  ಆ ರೀತಿ,  ಫಿಲಾಸಫಿಯ ಮೂಲಕ ಕಾಲು ಎಳೆಸಿ ಕೊಂಡ್ರಿ ಓಹ್ ಮೈ ಗಾಡ್ ಹೀಗೂ ಉಂಟೆ ;-)  ಏನೇ ಹೇಳಿ ಸುದೀಪ್ ನಾನಂತೂ ಬಿಗ್ ಬಾಸ್ ನ್ನು ಸಕತ್ ಎಂಜಾಯ್ ಮಾಡಿಕೊಂಡು ವೀಕ್ಷಿಸುತ್ತಾ ಇದ್ದೀನಿ.. 

ಜೆಕೆ ... ರಾವಣ

Image result for red flowers
ಸಕತ್  ಕೆಲಸ ... ಮೊದಲೆಲ್ಲಾ ಎಷ್ಟೇ ಕೆಲಸ ಇದ್ರೂ ಬ್ಲಾಗ್ ಸಹ ತಪ್ಪದೆ ಬರಿತಾ ಇದ್ದೆ.. ಆದರೆ ಈಗ ಸ್ವಲ್ಪ ಸೋಮಾರಿ ಆಗಿದ್ದೀನಿ ಹಾಗೆ ಎನ್ನುವುದಕ್ಕಿಂತ   ಮೊಬೈಲ್ ನಲ್ಲಿ ಡೌನ್ ಮಾಡಿಕೊಂಡಿರುವ ಆಟಗಳನ್ನು ಆಡೋ ಕಡೆ  ಚಿತ್ತ  ನೆಟ್ಟಿರುತ್ತೇನೆ. ಪೆಟ್ ಸಾಗ ನನಗೆ ಹೆಚ್ಚು ಪ್ರಿಯ..
@ ಇಂದುಕಾದಿದ್ದು ಸಿಯಾ ಕೆ ರಾಮ್ ಧಾರವಾಹಿ ನೋಡಿ ನಂತರ ಬರೆಯೋಕೆ ಕುಳಿತೆ.. ಈಗ  ಈ ಧಾರಾವಾಹಿಯ ಮುಖ್ಯ ಆಕರ್ಷಣೆ ಕನ್ನಡದ ನಟ ಜಯರಾಂ ಕಾರ್ತೀಕ್ ಅವರ ನಟನೆ. ಇಲ್ಲಿ ಅವರು ರಾವಣನ ಪಾತ್ರಧಾರಿಯಾಗಿದ್ದಾರೆ. ಕನ್ನಡ ಕಲರ್ ವಾಹಿನಿಯಲ್ಲಿ ಅಶ್ವಿನಿ ನಕ್ಷತ್ರ ಧಾರಾವಾಹಿಯ ಜೆಕೆ ಇಲ್ಲಿ ರಾವಣ.. ಖುಷಿ ಅನ್ನಿಸಿತು. ರಾವಣನ ಪಾತ್ರದ ಬಗ್ಗೆ ಹೆಚ್ಚಾಗಿ ನೋಡಿರೋದು ಅದೇ ದಪ್ಪದೇಹಿ, ಸಿಕ್ಕಾಪಟ್ಟೆ ಬೊಜ್ಜು, ನೋಡಲು ಅಷ್ಟೇನೂ ಚಂದ ಇಲ್ಲದ ವ್ಯಕ್ತಿ. ಆದರೆ  ಇಲ್ಲಿ ಮಾತ್ರ ಅದ್ಭುತವಾಗಿ ಆಯ್ಕೆ ಮಾಡಿದ್ದಾರೆ. ಜೆಕೆ ಅವರಿಗೆ ಈ ಧಾರಾವಾಹಿಯಲ್ಲಿ ಹೆಚ್ಚು ಅವಕಾಶ ಸಿಗುತ್ತೆ ಅನ್ನೋದೇ ಸಂತಸದ ಸಂಗತಿ. ಹೆಂಡತಿ ಹೆಂಡತಿ ಅಂತ ಕೇಳಿ ಸುಸ್ತಾಗಿದ್ದ ಕನ್ನಡ ವೀಕ್ಷಕರು ಸ್ವಲ್ಪ ದಿನಗಳಾದ ಬಳಿಕ ಜೆಕೆ ಅವರು ಸೀತಾ ಸೀತ ಅಂತ ಹೇಳೋದನ್ನು ಕೇಳಬಹುದು. ಮೊದಲೇ ನನಗೆ ಈ ಧಾರವಾಹಿ ಸಕತ್ ಇಷ್ಟ ಆಗಿದೆ. ಈಗ ಮತ್ತೂ ಇಷ್ಟ ಆಯ್ತು.

@ ಅಂಡ್ ಟೀವಿ ಯಲ್ಲಿ ಪ್ರಸಾರವಾಗುವ ಭಾಭಿಜಿ ಘರ್ ಪರ್ ಹೈ ಧಾರವಾಹಿ ಹಳ್ಳ ಹಿಡಿದಿದೆ ಎನ್ನುವ ಮಾತು ಕೆಲವು  ದಿನಗಳ ಹಿಂದೆ ಹೇಳಿದ್ದೆ.. ಅದನ್ನು ನೋಡುವ ಆಸಕ್ತಿ ಕಡಿಮೆ ಆಗಿತ್ತು.. ಆದರೆ ಈಗ ಮತ್ತೆ ಅದು ತನ್ನ ಮೊದಲ ರೂಪ ಪಡಿತಾ ಇದೆ.ನೆರೆಹೊರೆಯ ದಂಪತಿಗಳು, ಅವರ ಬದುಕು, ತನ್ನ ಎದುರುಮನೆಯ ಸುಂದರ  ಹೆಣ್ಣುಮಗಳಿಗೆ ಕಾಳು ಹಾಕುವ ಗೃಹಸ್ಥ..ಒಂದು ರಸ್ತೆ, ಅಲ್ಲೊಂದು ಜಟಕಾ ಬಂಡಿ, ಟೀ ಅಂಗಡಿ, ಪೊರ್ಕಿಗಳು ಎಲ್ಲವು ಒಂದು ಪಟ್ಟಣದ ಕಲ್ಪನೆ ನೀಡುತ್ತದೆ.
ಜಾಸ್ತಿ ಗಂಭೀರವಾಗಿ ನೋಡದೆ ಹಾಗೆ ಸುಮ್ಮನೆ ನೋಡಿದರೆ ಸಾಕು ಮಜಾ ಸಿಗುತ್ತೆ.. ವಿಶ್ಲೇಷಣೆ ಮಾಡೋಕೆ ಹೋದರೆ ಯಾವುದರಲ್ಲೂ ಗಮ್ಮತ್ತು ಇರಲ್ಲ.
@ಸಬ್ ಟೀವಿಯಲ್ಲಿ ಹಾಸ್ಯಧಾರವಾಹಿಗಳ ಸುರಿಮಳೆ.. ಜಾಸ್ತಿ ನೆನೆಯೋಕೆ ಹೋಗಿಲ್ಲ.. ಸ್ವಲ್ಪ ಬಿಸಿಬಿಸಿ  ಕೆಲಸ.. ಅದು ಪೂರ್ಣ ಆದ ಬಳಿಕ ನನಗೆ ಇಷ್ಟ ಆದುದು ಹೇಳ್ತಿನಿ :-)

ಹಾಂ ಹೂಮ್ ರೀಮ್

Image result for red flower
ಒಂದು ಕಡೆ ಹಿಂದೂ ದೇವರು ದೇವರಲ್ಲ.. ಹಿಂದೂ ಧರ್ಮ ಎನ್ನುವುದೇ ಇಲ್ಲ ಅನ್ನುವ   ಮಾತು ಭಾರತದಲ್ಲಿ ಒಂದಷ್ಟು ಮಂದಿ ಹೇಳ್ತಾ ಇದ್ರೆ ವಿದೇಶಿಯರು ರಾಮ್ ರಾಮ್ ಎಂದೋ.. ಹನುಮ ನಮ್ಮ ತಾಯಿ ತಂದೆ ಎನ್ನುತ್ತಲೋ ತಮ್ಮ ನಂಬಿಕೆಯ ಬೆಳೆಸಿಕೊಳ್ಳುತ್ತಿದ್ದಾರೆ.. ಇಸ್ಕಾನ್ ಅಂತಹ ಕಡೆ ಹೋದರೆ ಆ  ಭಕ್ತಿಯ ಮಹಾಪೂರ ನೋಡುವಾಗ  ಆಹಾ ಅಂತ ಅನ್ನಿಸುತ್ತೆ..

@ಭಾನುವಾರ ರಾತ್ರಿ ಪಬ್ಲಿಕ್ ವಾಹಿನಿಯಲ್ಲಿ ಅಮೇರಿಕ ರಾಷ್ಟ್ರಾಧ್ಯಕ್ಷ   ಒಬಾಮ ಅವರು ಹನುಮನ ಭಕ್ತರು ಅನ್ನುವುದಕ್ಕೆ ಪುಷ್ಟಿ ನೀಡುವ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಆ ಸಂಗತಿ ಬಗ್ಗೆ  ಇಡೀ ವಾಹಿನಿಗಳನ್ನು ಸದ್ದು ಮಾಡಿತ್ತು. ಆದರೆ ಆ  ಸಂಗತಿಯನ್ನು ಒಳಗೊಂಡ ಕಾರ್ಯಕ್ರಮ ನಾನು ರಂಗಣ್ಣನ ವಾಹಿನಿಯಲ್ಲಿ ನೋಡಿದೆ.   ಒಬಾಮ ಅವರು ತಮ್ಮ ನಂಬಿಕೆ , ತಾವು ಜೊತೆ ತೆಗೆದುಕೊಂಡು ಹೋಗುವ ಮುಖ್ಯ ವಸ್ತುಗಳು ಅದರಲ್ಲೂ ಆಧ್ಯಾತ್ಮಿಕ ಅಂಶಗಳಿಗೆ ಪ್ರಾಮುಖ್ಯತೆ ನೀಡುವ ವಸ್ತುಗಳ ಬಗ್ಗೆ ಹೇಳುವಾಗ ಆ ಸಂದರ್ಶನದಲ್ಲಿ ಹನುಮನ ಪದಕ ಸಹ ಇತ್ತು . ಅವರ ಸಂದರ್ಶನ ಮಾಡುತ್ತಿದ್ದ ಆ ಹೆಣ್ಣು ಮಗಳ ಮುಂದೆ ಕುಳಿತ  ವಿಶ್ವದ ದೊಡ್ಡಣ್ಣನ ಪ್ರತಿನಿಧಿ ಸಾಮಾನ್ಯ ವ್ಯಕ್ತಿಯಂತೆ ಯಾವ ಹಮ್ಮೂ ಇಲ್ಲದೆ ವಿವರಿಸ್ತಾ ಇದ್ರೂ.. ಸ್ವಲ್ಪ ಅಧಿಕಾರ ಬಂದ್ರೆ ಸಾಕು, ಸ್ವಲ್ಪ ಹಣ ಮಾಡಿದ್ರೆ ಸಾಕು ..  ಸಿಕ್ಕಾಪಟ್ಟೆ ಲೆವೆಲ್ ತೋರಿಸುವ ಮಂದಿಯು ಹೆಚ್ಚಾಗಿರುವ ಈಗಿನ ಕಾಲದಲ್ಲಿ ಒಬಾಮ ಅವರ ಈ ರೀತಿಯ ಒಂದು ವಿಶೇಷತೆ ಏರುವವ ಚಿಕ್ಕವನಾಗಿರಬೇಕು ಎನ್ನುವ ಮಾತು ನೆನಪಿಸುತ್ತದೆ. ತುಂಬಾ ವಿಶೇಷ ಅನ್ನಿಸಿದ ಕಾರ್ಯಕ್ರಮ ಅದು.
@ ಭಾನುವಾರದ ಒಂದು ವಿಶೇಷತೆ ಬಗ್ಗೆ ಹೇಳುವಾಗ ಟೀವಿ ನೈನ್ ವಾಹಿನಿಯಲ್ಲಿ ಪ್ರಸಾರವಾಗುವ ಹೀಗೂ ಉಂಟೆ ಬಗೆ ನೆನಪಿಸಿಕೊಳ್ಳ ಬೇಕು. ಇದರ ಮುಖ್ಯ ಆಕರ್ಷಣೆ ನಾರಾಯಣ ಸ್ವಾಮಿ. ಎಲ್ಲೆಲ್ಲೋ ಓಡಾಡಿ ಏನೇನೋ ಕಂಡು ಹಿಡಿದು.. ಅಗೊಚರವನ್ನು ಗೋಚರ ಮಾಡಿ.. ಗೋಚರವನ್ನು ಅಗೋಚರಗೊಳಿಸುವ   ನಾರಾಯಣ ಸ್ವಾಮಿ ಅವರು ಎದುರು ಸಿಕ್ಕಾಗ ಮಾತು ಕಡಿಮೆ.. ಆದರೆ ಕ್ಯಾಮರ ಮುಂದೆ ಬೊಂಬಾಟಾಗಿ ಹಾಂ ಹೂಮ್ ರೀಮ್ ಅನ್ನುವಂತೆ ವಿಷಯಗಳನ್ನು   ತಿಳಿಸುತ್ತಾರೆ. ಯಾರು ನೋಡಲಿ ಬಿಡಲಿ ಸಾಕಷ್ಟು ಹೆಣ್ಣುಮಕ್ಕಳಿಗೆ ಪ್ರಿಯವಾದ ಕಾರ್ಯಕ್ರಮ ಇದು.. ಬಹಳ ದಿನಗಳ ನಂತರ  ವೀಕ್ಷಿಸಿದಾಗ ಸಹಿತ  ನನ್ನ ಕಣ್ಣಿಗೆ  ಜನರನ್ನು ಸೆಳೆಯುವ ಅಂಶಗಳು.. ಹಾಂ ಹೂಮ್ ರೀಮ್ ಅನ್ನುವ  ರೀತಿಯಲ್ಲಿ  ಪ್ರಸಾರ ಆಗ್ತಾ ಇತ್ತು..ವಾರದಲ್ಲಿ ಎರಡು ದಿನ - ಮೂರು ದಿನ ಪ್ರಸಾರ ಆಗುವ ಕಾರ್ಯಕ್ರಮ.. ನಿಮ್ಮ ಕಣ್ಣಿಗೆ ಕಂಡ್ರೆ  ನೋಡಿ.. ಹಾಂ ಹೂಮ್ ರೀಮ್ ;-)