ಒಂದು ಕಡೆ ಹಿಂದೂ ದೇವರು ದೇವರಲ್ಲ.. ಹಿಂದೂ ಧರ್ಮ ಎನ್ನುವುದೇ ಇಲ್ಲ ಅನ್ನುವ ಮಾತು ಭಾರತದಲ್ಲಿ ಒಂದಷ್ಟು ಮಂದಿ ಹೇಳ್ತಾ ಇದ್ರೆ ವಿದೇಶಿಯರು ರಾಮ್ ರಾಮ್ ಎಂದೋ.. ಹನುಮ ನಮ್ಮ ತಾಯಿ ತಂದೆ ಎನ್ನುತ್ತಲೋ ತಮ್ಮ ನಂಬಿಕೆಯ ಬೆಳೆಸಿಕೊಳ್ಳುತ್ತಿದ್ದಾರೆ.. ಇಸ್ಕಾನ್ ಅಂತಹ ಕಡೆ ಹೋದರೆ ಆ ಭಕ್ತಿಯ ಮಹಾಪೂರ ನೋಡುವಾಗ ಆಹಾ ಅಂತ ಅನ್ನಿಸುತ್ತೆ..
@ಭಾನುವಾರ ರಾತ್ರಿ ಪಬ್ಲಿಕ್ ವಾಹಿನಿಯಲ್ಲಿ ಅಮೇರಿಕ ರಾಷ್ಟ್ರಾಧ್ಯಕ್ಷ ಒಬಾಮ ಅವರು ಹನುಮನ ಭಕ್ತರು ಅನ್ನುವುದಕ್ಕೆ ಪುಷ್ಟಿ ನೀಡುವ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಆ ಸಂಗತಿ ಬಗ್ಗೆ ಇಡೀ ವಾಹಿನಿಗಳನ್ನು ಸದ್ದು ಮಾಡಿತ್ತು. ಆದರೆ ಆ ಸಂಗತಿಯನ್ನು ಒಳಗೊಂಡ ಕಾರ್ಯಕ್ರಮ ನಾನು ರಂಗಣ್ಣನ ವಾಹಿನಿಯಲ್ಲಿ ನೋಡಿದೆ. ಒಬಾಮ ಅವರು ತಮ್ಮ ನಂಬಿಕೆ , ತಾವು ಜೊತೆ ತೆಗೆದುಕೊಂಡು ಹೋಗುವ ಮುಖ್ಯ ವಸ್ತುಗಳು ಅದರಲ್ಲೂ ಆಧ್ಯಾತ್ಮಿಕ ಅಂಶಗಳಿಗೆ ಪ್ರಾಮುಖ್ಯತೆ ನೀಡುವ ವಸ್ತುಗಳ ಬಗ್ಗೆ ಹೇಳುವಾಗ ಆ ಸಂದರ್ಶನದಲ್ಲಿ ಹನುಮನ ಪದಕ ಸಹ ಇತ್ತು . ಅವರ ಸಂದರ್ಶನ ಮಾಡುತ್ತಿದ್ದ ಆ ಹೆಣ್ಣು ಮಗಳ ಮುಂದೆ ಕುಳಿತ ವಿಶ್ವದ ದೊಡ್ಡಣ್ಣನ ಪ್ರತಿನಿಧಿ ಸಾಮಾನ್ಯ ವ್ಯಕ್ತಿಯಂತೆ ಯಾವ ಹಮ್ಮೂ ಇಲ್ಲದೆ ವಿವರಿಸ್ತಾ ಇದ್ರೂ.. ಸ್ವಲ್ಪ ಅಧಿಕಾರ ಬಂದ್ರೆ ಸಾಕು, ಸ್ವಲ್ಪ ಹಣ ಮಾಡಿದ್ರೆ ಸಾಕು .. ಸಿಕ್ಕಾಪಟ್ಟೆ ಲೆವೆಲ್ ತೋರಿಸುವ ಮಂದಿಯು ಹೆಚ್ಚಾಗಿರುವ ಈಗಿನ ಕಾಲದಲ್ಲಿ ಒಬಾಮ ಅವರ ಈ ರೀತಿಯ ಒಂದು ವಿಶೇಷತೆ ಏರುವವ ಚಿಕ್ಕವನಾಗಿರಬೇಕು ಎನ್ನುವ ಮಾತು ನೆನಪಿಸುತ್ತದೆ. ತುಂಬಾ ವಿಶೇಷ ಅನ್ನಿಸಿದ ಕಾರ್ಯಕ್ರಮ ಅದು.
@ ಭಾನುವಾರದ ಒಂದು ವಿಶೇಷತೆ ಬಗ್ಗೆ ಹೇಳುವಾಗ ಟೀವಿ ನೈನ್ ವಾಹಿನಿಯಲ್ಲಿ ಪ್ರಸಾರವಾಗುವ ಹೀಗೂ ಉಂಟೆ ಬಗೆ ನೆನಪಿಸಿಕೊಳ್ಳ ಬೇಕು. ಇದರ ಮುಖ್ಯ ಆಕರ್ಷಣೆ ನಾರಾಯಣ ಸ್ವಾಮಿ. ಎಲ್ಲೆಲ್ಲೋ ಓಡಾಡಿ ಏನೇನೋ ಕಂಡು ಹಿಡಿದು.. ಅಗೊಚರವನ್ನು ಗೋಚರ ಮಾಡಿ.. ಗೋಚರವನ್ನು ಅಗೋಚರಗೊಳಿಸುವ ನಾರಾಯಣ ಸ್ವಾಮಿ ಅವರು ಎದುರು ಸಿಕ್ಕಾಗ ಮಾತು ಕಡಿಮೆ.. ಆದರೆ ಕ್ಯಾಮರ ಮುಂದೆ ಬೊಂಬಾಟಾಗಿ ಹಾಂ ಹೂಮ್ ರೀಮ್ ಅನ್ನುವಂತೆ ವಿಷಯಗಳನ್ನು ತಿಳಿಸುತ್ತಾರೆ. ಯಾರು ನೋಡಲಿ ಬಿಡಲಿ ಸಾಕಷ್ಟು ಹೆಣ್ಣುಮಕ್ಕಳಿಗೆ ಪ್ರಿಯವಾದ ಕಾರ್ಯಕ್ರಮ ಇದು.. ಬಹಳ ದಿನಗಳ ನಂತರ ವೀಕ್ಷಿಸಿದಾಗ ಸಹಿತ ನನ್ನ ಕಣ್ಣಿಗೆ ಜನರನ್ನು ಸೆಳೆಯುವ ಅಂಶಗಳು.. ಹಾಂ ಹೂಮ್ ರೀಮ್ ಅನ್ನುವ ರೀತಿಯಲ್ಲಿ ಪ್ರಸಾರ ಆಗ್ತಾ ಇತ್ತು..ವಾರದಲ್ಲಿ ಎರಡು ದಿನ - ಮೂರು ದಿನ ಪ್ರಸಾರ ಆಗುವ ಕಾರ್ಯಕ್ರಮ.. ನಿಮ್ಮ ಕಣ್ಣಿಗೆ ಕಂಡ್ರೆ ನೋಡಿ.. ಹಾಂ ಹೂಮ್ ರೀಮ್ ;-)
No comments:
Post a Comment