ಸಕತ್ ಕೆಲಸ ... ಮೊದಲೆಲ್ಲಾ ಎಷ್ಟೇ ಕೆಲಸ ಇದ್ರೂ ಬ್ಲಾಗ್ ಸಹ ತಪ್ಪದೆ ಬರಿತಾ ಇದ್ದೆ.. ಆದರೆ ಈಗ ಸ್ವಲ್ಪ ಸೋಮಾರಿ ಆಗಿದ್ದೀನಿ ಹಾಗೆ ಎನ್ನುವುದಕ್ಕಿಂತ ಮೊಬೈಲ್ ನಲ್ಲಿ ಡೌನ್ ಮಾಡಿಕೊಂಡಿರುವ ಆಟಗಳನ್ನು ಆಡೋ ಕಡೆ ಚಿತ್ತ ನೆಟ್ಟಿರುತ್ತೇನೆ. ಪೆಟ್ ಸಾಗ ನನಗೆ ಹೆಚ್ಚು ಪ್ರಿಯ..
@ ಇಂದುಕಾದಿದ್ದು ಸಿಯಾ ಕೆ ರಾಮ್ ಧಾರವಾಹಿ ನೋಡಿ ನಂತರ ಬರೆಯೋಕೆ ಕುಳಿತೆ.. ಈಗ ಈ ಧಾರಾವಾಹಿಯ ಮುಖ್ಯ ಆಕರ್ಷಣೆ ಕನ್ನಡದ ನಟ ಜಯರಾಂ ಕಾರ್ತೀಕ್ ಅವರ ನಟನೆ. ಇಲ್ಲಿ ಅವರು ರಾವಣನ ಪಾತ್ರಧಾರಿಯಾಗಿದ್ದಾರೆ. ಕನ್ನಡ ಕಲರ್ ವಾಹಿನಿಯಲ್ಲಿ ಅಶ್ವಿನಿ ನಕ್ಷತ್ರ ಧಾರಾವಾಹಿಯ ಜೆಕೆ ಇಲ್ಲಿ ರಾವಣ.. ಖುಷಿ ಅನ್ನಿಸಿತು. ರಾವಣನ ಪಾತ್ರದ ಬಗ್ಗೆ ಹೆಚ್ಚಾಗಿ ನೋಡಿರೋದು ಅದೇ ದಪ್ಪದೇಹಿ, ಸಿಕ್ಕಾಪಟ್ಟೆ ಬೊಜ್ಜು, ನೋಡಲು ಅಷ್ಟೇನೂ ಚಂದ ಇಲ್ಲದ ವ್ಯಕ್ತಿ. ಆದರೆ ಇಲ್ಲಿ ಮಾತ್ರ ಅದ್ಭುತವಾಗಿ ಆಯ್ಕೆ ಮಾಡಿದ್ದಾರೆ. ಜೆಕೆ ಅವರಿಗೆ ಈ ಧಾರಾವಾಹಿಯಲ್ಲಿ ಹೆಚ್ಚು ಅವಕಾಶ ಸಿಗುತ್ತೆ ಅನ್ನೋದೇ ಸಂತಸದ ಸಂಗತಿ. ಹೆಂಡತಿ ಹೆಂಡತಿ ಅಂತ ಕೇಳಿ ಸುಸ್ತಾಗಿದ್ದ ಕನ್ನಡ ವೀಕ್ಷಕರು ಸ್ವಲ್ಪ ದಿನಗಳಾದ ಬಳಿಕ ಜೆಕೆ ಅವರು ಸೀತಾ ಸೀತ ಅಂತ ಹೇಳೋದನ್ನು ಕೇಳಬಹುದು. ಮೊದಲೇ ನನಗೆ ಈ ಧಾರವಾಹಿ ಸಕತ್ ಇಷ್ಟ ಆಗಿದೆ. ಈಗ ಮತ್ತೂ ಇಷ್ಟ ಆಯ್ತು.
@ ಅಂಡ್ ಟೀವಿ ಯಲ್ಲಿ ಪ್ರಸಾರವಾಗುವ ಭಾಭಿಜಿ ಘರ್ ಪರ್ ಹೈ ಧಾರವಾಹಿ ಹಳ್ಳ ಹಿಡಿದಿದೆ ಎನ್ನುವ ಮಾತು ಕೆಲವು ದಿನಗಳ ಹಿಂದೆ ಹೇಳಿದ್ದೆ.. ಅದನ್ನು ನೋಡುವ ಆಸಕ್ತಿ ಕಡಿಮೆ ಆಗಿತ್ತು.. ಆದರೆ ಈಗ ಮತ್ತೆ ಅದು ತನ್ನ ಮೊದಲ ರೂಪ ಪಡಿತಾ ಇದೆ.ನೆರೆಹೊರೆಯ ದಂಪತಿಗಳು, ಅವರ ಬದುಕು, ತನ್ನ ಎದುರುಮನೆಯ ಸುಂದರ ಹೆಣ್ಣುಮಗಳಿಗೆ ಕಾಳು ಹಾಕುವ ಗೃಹಸ್ಥ..ಒಂದು ರಸ್ತೆ, ಅಲ್ಲೊಂದು ಜಟಕಾ ಬಂಡಿ, ಟೀ ಅಂಗಡಿ, ಪೊರ್ಕಿಗಳು ಎಲ್ಲವು ಒಂದು ಪಟ್ಟಣದ ಕಲ್ಪನೆ ನೀಡುತ್ತದೆ.
ಜಾಸ್ತಿ ಗಂಭೀರವಾಗಿ ನೋಡದೆ ಹಾಗೆ ಸುಮ್ಮನೆ ನೋಡಿದರೆ ಸಾಕು ಮಜಾ ಸಿಗುತ್ತೆ.. ವಿಶ್ಲೇಷಣೆ ಮಾಡೋಕೆ ಹೋದರೆ ಯಾವುದರಲ್ಲೂ ಗಮ್ಮತ್ತು ಇರಲ್ಲ.
@ಸಬ್ ಟೀವಿಯಲ್ಲಿ ಹಾಸ್ಯಧಾರವಾಹಿಗಳ ಸುರಿಮಳೆ.. ಜಾಸ್ತಿ ನೆನೆಯೋಕೆ ಹೋಗಿಲ್ಲ.. ಸ್ವಲ್ಪ ಬಿಸಿಬಿಸಿ ಕೆಲಸ.. ಅದು ಪೂರ್ಣ ಆದ ಬಳಿಕ ನನಗೆ ಇಷ್ಟ ಆದುದು ಹೇಳ್ತಿನಿ :-)
No comments:
Post a Comment