ಅಹಿಲ್ಯಾ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಜೊತೆಜೊತೆಯಲಿ ನಾನು ತಪ್ಪದೇ ನೋಡುವ ಧಾರವಾಹಿ.ಮಧ್ಯದಲ್ಲಿ ಸ್ವಲ್ಪ ಬೋರ್ ಹೊಡಿಸಿತ್ತು.ಮತ್ತೇ ಅದು ಆಸಕ್ತಿ ಹೆಚ್ಚಿಸಿಕೊಳ್ಳುವಂತೆ ಮಾಡ್ತಾ ಇದೆ. ಆರ್ಯವರ್ಧನ್, ಝಂಡೆ, ಹರ್ಷ್್, ಅನು ಮತ್ತು ಅವಳ ಗೆಳತಿ, ಅಪ್ಪ ಅಮ್ಮ ಎಲ್ಲರ ಜೊತೆಗೆ  ಮೀರಾ ಪಾತ್ರಧಾರಿ ಮತ್ತು ವಿಜಯಲಕ್ಷ್ಮಿ ಸಿಂಗ್, ಸುಂದರಶ್ರೀ,ಪದ್ಮಜಾರಾವ್ ಪಾತ್ರಗಳು, ಕಲಾವಿದೆಯರು ತುಂಬಾ ಇಷ್ಟ ಆಗ್ತಾರೆ.ಏನೋ ಕಥೆ ಕಟ್ಟಿ ಎಳೆದುಕೊಂಡು ಹೋಗುವುದಕ್ಕಿಂತ ಕನ್ಕ್ಲೂಡ್ ಮಾಡಬೇಕು ಅದೇ ಚಂದ.

ಸ್ಟಾರ್ ಪ್ಲಸ್ ನಲ್ಲಿ ಗುಮ್ ಹೈ ಕಿಸಿ ಕೆ ಪ್ಯಾರ್ ಮೇ, ಸೋನಿಯಲ್ಲಿ ಮೇರಾ ಸಾಯಿ,ಅಹಿಲ್ಯಾ ಬಾಯ್ ಹೋಳ್ಕರ್ ತುಂಬಾ ಚಂದದ ಧಾರವಾಹಿಗಳು. ಸೋನಿಯ ಸೂಪರ್ ಡ್ಯಾನ್ಸರ್ ಸಹ ಸಖತ್. ಕೊರಿಯಾಗ್ರಾಫರ್ ಸುಬ್ರಮಣಿ ಸಹ J

ಸ್ಟಾರ್ ನಲ್ಲಿ ಪ್ರಸಾರ ಆಗುವ ಶೌರ್ಯ ಅನೋಕಿ ಕಥೆ ಆರಂಭದಲ್ಲಿ ಖುಷಿ ಕೊಡ್ತು ಈಗ ಯಪ್ಪಾ ಅನ್ನುವಂತೆ ಇದೆ.



ಆಟಗಾರ್ತಿ

ಯಾವುದೇ ಕೆಲಸ ಮಾಡುವುದಕ್ಕಾಗಿರಲಿ ಸಹನೆ ಬಹಳ ಮುಖ್ಯ.ಆದರೇ ಇತ್ತೀಚೆಗಂತೂ ನನಗೆ ಬ್ಲಾಗ್ ಬರೆಯೋದೆ ದೊಡ್ಡ ಸಹನೆಯ ಸಂಗತಿ ಆಗಿದೆ. ಅದಕ್ಕೂ ಕಾರಣವಿದೆ.ಟಿವಿ ಬಾಗಿಲು ತೆಗೆದರೆ ಸಾವಿನ ಸಂಗತಿ.ಅದನ್ನು ಹೊರೆತು ಪಡಿಸಿದರೆ,ಕಳೆದ ಕೆಲವು ದಿನಗಳು ನಮ್ಮ ನ್ಯೂಸ್ ಚಾನೆಲ್‍ಗಳು ಪೋರ್ನ್ ಚಾನಲ್‍ಗಳಾಗಿ ಬದಲಾಗಿ ಟಿವಿ ಅಂದ್ರೆ..!! ಜನರ ಮನಸ್ಥಿತಿ ಹೇಗೆ ಇರುತ್ತದೆ ಅನ್ನುವುದಕ್ಕೆ ಈ ಬಾರಿ ಬಿಗ್‍ಬಾಸ್‍ನಲ್ಲಿ ಕಿಚ್ಚ ಸುದೀಪ್ ಬರದೇ ಇದ್ದಾಗ ಅವರುಗಳು ವ್ಯಕ್ತಪಡಿಸಿದ ಕಡೆಗೆಟ್ಟ ಅಭಿಪ್ರಾಯಗಳೇ ಸಾಕ್ಷಿ.ಕಿಚ್ಚನಿಗೆ ಹುಷಾರಿಲ್ಲ ಅನ್ನುವುದು ನನ್ನಂತಹ ಅಸಂಖ್ಯಾತ ಕನ್ನಡಿಗರಿಗೆ ಜೀರ್ಣಿಸಿಕೊಳ್ಳುವುದಕ್ಕೆ ಆಗಲಿಲ್ಲ.ಅಷ್ಟೊಂದು ಇಷ್ಟ ನನಗೆ ಸುದೀಪಾ.. ಕನ್ನಡದಲ್ಲಿ ಕಿಚ್ಚ, ಹಿಂದಿಯಲ್ಲಿ ಸಲ್ಮಾನ್ ಸಖತ್ ಇಷ್ಟ. ಅದೆಷ್ಟೇ ಸ್ಪರ್ಧಿಗಳು ಬರಲಿ,ಗೆಲ್ಲಲಿ..ಅವರು ಮನದಲ್ಲಿ ಉಳಿಯುವುದು ಆ ಸೀಸನ್ ಇರುವ ತನಕ ಆದರೇ ಕಿಚ್ಚ ಮತ್ತು ಸಲ್ಲೂ ಸದಾ ಮನದಲ್ಲಿ ಇದ್ದೇಇರುತ್ತಾರೆ. ಬಿಗ್‍ಬಾಸ್ ಹಿಂದಿಯನ್ನು ಸಹ ನಾನು ತಪ್ಪದೇ ವೀಕ್ಷಿಸಿ ಎಂಜಾಯ್ ಮಾಡಿದ್ದೀನಿ.ಅದೇರೀತಿ ಕನ್ನಡದ ಬಿಗ್‍ಬಾಸ್ ಸಹ ತಪ್ಪದೇ ನೋಡುತ್ತಿದ್ದೀನಿ.
ಈ ಬಾರಿ ನನಗೆ ಅರವಿಂದ್, ದಿವ್ಯಾ.ಯು ಜೊತೆಗೆ ಹೆಚ್ಚು ಇಷ್ಟ ಆದ ಸ್ಪರ್ಧಿ ರಾಜೀವ್.ಸಾಮಾನ್ಯವಾಗಿ ಕಳೆದ ಎಂಟೂ ಸೀಜನ್‍ನಲ್ಲಿ ಯಾರಾದರೂ ಒಬ್ಬ ಸ್ಪರ್ಧಿ ಕಿಚ್ಚನ ಕಡೆಯವರು ಎನ್ನುವ ಹಣೆಪಟ್ಟಿಯಿಂದ ಆಡಲು ಬರುತ್ತಾರೆ. ಆದರೇ ಅವರು ಕಿಚ್ಚ ನನಗೇ ಪ್ರಾಮುಖ್ಯತೆ ಕೊಡುವುದು ಅನ್ನುವ ಲೆವೆಲ್‍ನಲ್ಲಿ ಆಡ್ತಾರೆ ಸ್ವಲ್ಪ ದಿನಗಳಿದ್ದು ಹೊರಡುತ್ತಾರೆ ಅಥವಾ ಕೊನೆಯ ತನಕ ಇದ್ದರೂ ಗೆಲುವು ಮಾತ್ರ ಬೇರೆಯವರಿಗೆ! ಆದೇ ರೀತಿ ಈ ಸರ್ತಿ ರಾಜೀವ್ ಬಗ್ಗೆ ಅದೇ ಹಣೆಪಟ್ಟಿ ಇದೆ. ಬೇರೆಲ್ಲಾ ಸೀಜನ್‍ಗಳಿಗಿಂತ ಕಿಚ್ಚನರಾಜೀವ್ ಇನ್ವಾಲ್‍ಮೆಂಟ್ ಚೆನ್ನಾಗಿದೆ. ಅರವಿಂದ್ ಯಾಕೆ ತುಂಬಾ ಇಷ್ಟ ಆಗಿರೋದು ಅಂದ್ರೆ ಅವರ ಸಮಚಿತ್ತ.ಒಂದು ಆಟದಲ್ಲಿ ಇರಬೇಕಾದ ಕ್ರೀಡಾಪಟುವಿಗೆ ಇರಲೇಬೆಕಾದಂತಹ ಅಂಶ ಅದು. ಇನ್ನು ಹೆಣ್ಣುಮಕ್ಕಳಲ್ಲಿ ದಿವ್ಯಾ.ಯು ನಂತರ ವೈಷ್ಣವಿ ಚಂದದ ಆಟಗಾರ್ತಿಯರು. ದಿವ್ಯಾ ಸುರೇಶ್ ಉತ್ತಮ ಆಟಗಾರ್ತಿ ಆದರೂ ಯಾವುದೋ ಖಾಲಿತನವನ್ನು ಇಲ್ಲಿ ತುಂಬಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.ಈ ಬಾರಿಯ ಆಟದಲ್ಲಿ ದಿವ್ಯಾಗೆ ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದಿದ್ದರೆ ಆಕೆ ಗೆಲ್ಲಲು ಯಾವುದೇ ಮಾರ್ಗ ಬಳಸಿದ್ದರೂ ಅದು ತಂತ್ರಗಾರಿಕೆ ಆಗ್ತಾ ಇತ್ತು. ಆದರೇ ಆಕೆಯ ಕುತಂತ್ರವು ಆತುರ ಬುದ್ದಿ ತೋರಿಸುತ್ತೆ. ಹಾಗೇ ನೋಡಿದರೆ ನಿಧಿ ತಂತ್ರಗಾರಿಕೆ ಚೆನ್ನಾಗಿತ್ತು. ಆಕೆ ಸ್ಟ್ರೈಕರ್‍ನ್ನು ಹೊಡೆದ ರೀತಿ ದಿವ್ಯಾ ಅನ್ನುವ ಪಾನ್ ಪೋಚ್‍ಗೆ ಬೀಳಿಸಿದ ವಿಧಾನ ಪರ್ಫೆಕ್ಟ್. ಮಂಜು ಬಿಳಿಕಾಯಿ ಆಸೆಗೆ ಕರಿಕಾಯಿ ಹೊಡೆಯದೇ ಔಟ್ ಆಗಿದ್ದು ಕಂಡಾಗ ಅನ್ನಿಸಿದ್ದು ಪಾಪ! ಏನಾದ್ರೂ ಆತನ ಧೋರಣೆ ಮಾತ್ರ ಇಷ್ಟ ಆಗಲಿಲ್ಲ. ಪ್ರಶಾಂತ್ ಸಂಬರ್ಗಿ ಹೊಟ್ಟೆಕಿಚ್ಚು ಮೊಟ್ಟೆಕೋಳಿ  ಅವರ ಆಟದ ಶೈಲಿ ಮತ್ತು ಪ್ರಯತ್ನ ಚೆನ್ನಾಗಿದೆ.ಕೊಟ್ಟ ಅವಕಾಶ ಬಿಟ್ಟ ವೈಜಯಂತಿ ಅಡಿಗರನ್ನು ಕಂಡಾಗ ಸಿಕ್ಕ ಸಣ್ಣ ಅವಕಾಶಗಳನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿರುವ ನಾನು ಹಾಗೂ ನನ್ನಂತಹವರಿಗೆ ಅನ್ನಿಸೋದು ದುಡ್ಡಿನ ಮುಂದೆ ಸರ್ವೀಸ್‍ಗೆ ಬೆಲೆ ಇಲ್ಲ! ಚಂದದ ಪುಸ್ತಕಗಳ ಪ್ರೂಫ್ ನೋಡುವ ಕೆಲಸ ಇತ್ತು. ತುಂಬಾ ಖುಷಿಕೊಟ್ಟ ಕೆಲಸ ಅದು.ಗ್ಯಾಂಬ್ಲಿಂಗ್ ಅದೂ ಅರಣ್ಯದ ವಿಷಯದಲ್ಲಿ ನಡೆಯುವ ಗ್ಯಾಂಬ್ಲಿಂಗ್, ಗಿಡ ನೆಡುವ ವಿಷಯಗಳಲ್ಲಿ ನಡೆಯುವ ಮೋಸ..ಅನಗತ್ಯ ಗಿಡಗಳನ್ನು ಬೆಳೆಸುವುದು ಹೀಗೆ ಸಾಕಷ್ಟು ಸಂಗತಿಗಳ ಬಗ್ಗೆ ಮಾಹಿತಿ ಇರುವ ಪುಸ್ತಕ. ಜೊತೆ ತುಂಬಾ ತುಂಬಾ ತೆಲುಗು ಮತ್ತು ಮೋಹನ್‍ಲಾಲ್ ನಟನೆಯ ಸಿನಿಮಾಗಳನ್ನು ನೋಡಿದೆ.ಹೀಗೆ ಬದುಕಲ್ಲಿ ಇರುವ ಸಮಯದ ಬಳಕೆ..!