ವಾಹ್

 

ಸಂಕ್ರಾಂತಿ ಹಬ್ಬದ ವಾರದಲ್ಲಿ ಕೆಚ್ಚಲು ಕತ್ತರಿಸಿಕೊಂಡ ಗೋವುಗಳದ್ದೇ ನೆನಪಲ್ಲಿ ಉಳಿದು ಮನಕ್ಕೆ  ಬೇಜಾರಾಗಿತ್ತು. ಸುಗ್ಗಿ ಹಬ್ಬದ ಹರ್ಷ ಇಲ್ಲದಂತಾಗಿತ್ತು. ಅದು ಬಿಡಿ ಮನುಷ್ಯನ ಕ್ರೌರ್ಯ ಎಲ್ಲೇ ಮೀರಿದಾಗ ಯಾವುದಾದರೊಂದು ಘಟನೆ ನಡೆಯುತ್ತಿರುತ್ತದೆ,

ಈ ಬಾರಿ ಜೀ ಕನ್ನಡ ವಾಹಿನಿ ಯ ಸರೆಗಮಪ ಕಾರ್ಯಕ್ರಮ ತುಂಬಾ ಉಲ್ಲಾಸ ಕೊಟ್ಟಿದೆ. ಅದಕ್ಕೆ ಮುಖ್ಯ ಕಾರಣ ರಾಜೇಶ್‌ ಕೃಷ್ಣನ್.‌ ಅವರ ಧ್ವನಿ, . ಜೊತೆಗೆ ಅರ್ಜುನ್‌ ಜನ್ಯ ಮತ್ತು ವಿಜಯ ಪ್ರಕಾಶ್‌, ಅನುಶ್ರೀ  ಮತ್ತು ಇಡೀ ಟೀಂ.

ಸಂಕ್ರಾಂತಿ ಹಬ್ಬದ ಸಮಯದಲ್ಲಿ ಪ್ರಸಾರವಾದ ಕಾರ್ಯಕ್ರದಲ್ಲಿ ಕರಿಮಾಯಿ ರಂಗಗೀತೆ ಹೆಚ್ಚು ಖುಷಿ ಕೊಟ್ಟಿತ್ತು. ಅದೇರೀತಿ ನನ್ನ ಮೆಚ್ಚಿನ ಗಾಯಕಿಯರಲ್ಲಿ ಒಬ್ಬರಾದ ಅನುರಾಧ ಭಟ್‌ ಅವರ ಗಾನಸುಧೆ ಈ ಬಾರಿಯ ಕಾರ್ಯಕ್ರಮ ವಾಹ್ ಅನ್ನುವಂತೆ ಮಾಡಿತು..‌

ಸಂಕ್ರಾಂತಿ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು ತೀರ್ಪುಗಾರರ ಮುಂದೆ ಇಟ್ಟಿದ್ದ ಮರದ ಪುಟ್ಟ ಎತ್ತಿನಗಾಡಿ.. ಬೊಂಬೆ ಹಬ್ಬದಲ್ಲಿ ನಾನು ಕನಿಷ್ಟ ಎರಡು ಗಾಡಿಯನ್ನಾದರೂ ಇಟ್ಟು ಕಾನ್ಸೆಪ್ಟ್‌ ಮಾಡಿರುತ್ತೇನೆ.. ಓಹ್‌ ಗಾಡ್ಸ್‌ ನನಗೆ ಆ ಗಾಡಿ ಸಿಕ್ಕಿದ್ದಿದ್ದರೇ ಮುಂದಿನ ಬಾರಿಯ ಹಬ್ಬಕ್ಕೆ ಇಡ್ತಾ ಇದ್ದೆ J ಆದಷ್ಟು ಜ್ಯೂರಿಗಳ ಮತ್ತು ಮೆಂಟರ್‌ ಗಳ ಹೆಸರು ವೀಕ್ಷಕರಿಗೆ ಗೊತ್ತಾಗುವಂತೆ ಅವರಿರುವ ಕಡೆ ಅವರ  ನೇಮ್‌ ಪ್ಲೇಟ್‌ ಹಾಕಿ ಪಾ..ಹೆಚ್ಚು ಜನರನ್ನು ತಲಪುತ್ತೀರಿ..




ಕಿಚ್ಚ ಸುದೀಪ ನಟನೆಯ ಮ್ಯಾಕ್ಸ್‌ ಓಟ ತುಂಬಾ ಚೆನ್ನಾಗಿದೆ.. ನನ್ನ ಕಡೆಯಿಂದಕಡೆಯಿಂದ ವಿಶ್ವಾಸಪೂರಿತ ಕಂಗ್ರಾಟ್ಸ್‌ ಸುದೀಪ ಮತ್ತು ಟೀಂ.

ಬಿಗ್‌ ಬಾಸ್‌ ೧೧ ಹೇಳಿಕೊಳ್ಳುವಷ್ಟು ಖುಷಿ ಕೊಡಲಿಲ್ಲ. ನನಗೆ. ಬಹುತೇಕ ಎಲ್ಲಾ ಸ್ಪರ್ಧಿಗಳೂ  ಜಗಳಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆ ರಂಜಿಸಲು ಕೊಡಲಿಲ್ಲ. ಹಳೆಯ ಬಹುತೇಕ ಸೀಸನ್‌ ಗಳಲ್ಲಿ ಆದಷ್ಟು ತಮ್ಮ  ಪ್ರತಿಭೆಯನ್ನು ಜನರ ಮುಂದಿಡಲು  ಪ್ರಯತ್ನ ಪಡುತ್ತಿದ್ದರು. ಮಾಸ್ಟರ್‌ ಆನಂದ್‌, ಶೃತಿ, ಸೃಜನ್‌ ಲೋಕೇಶ್‌  , ಅರುಣ್‌ ಸಾಗರ್‌ ಯಾರೇ ಆಗಲಿ ಅವರು ಬರಲಿ ಅಂತ ಕಾತುರದಿಂದ ಕಾಯುವಂತಾಗುತ್ತಿತ್ತು. ಆದರೇ ಈ ಬಾರಿ ಆ ರಜತ್‌ ಅಹಂಕಾರ, ಭವ್ಯ ಅವರ ಅತಿ ನಾಟಕೀಯತೆ ಮತ್ತು ಸೋಗಲಾಡಿತನ ದೇವುಡಾ …! ಎಲ್ಲವನ್ನೂ ದಾಷ್ಟಿಕವಾಗಿ ಹೇಳುವ ಮತ್ತು ಒರಟಾಗಿ ನಡೆದುಕೊಳ್ಳುವ ವಿಧಾನ, ತಮ್ಮಿಂದ ಮಾತ್ರ  ಬಿಗ್‌ ಬಾಸ್‌ ನಂತಹ ಕಾರ್ಯಕ್ರಮಕ್ಕೆ ಟಿಆರ್‌ಪಿ ಎನ್ನುವ ಭ್ರಮೆ.. ಇವೆಲ್ಲಾ ಭ್ರಮನಿರಸನ ಉಂಟು ಮಾಡಿದೆ. ಮೋಕ್ಷಿತ, ಮ್ಯಾಕ್ಸ್‌ ಮಂಜು,ಹಣುಮಂತು ಇವರುಗಳು ಸ್ವಲ್ಪ ಜಾಸ್ತಿ ಇಷ್ಟ ಆದ್ರು.

ಬಿಗ್‌ ಬಾಸ್‌ ನ ಈ ಸೀಜನ್‌ ನನ್ನ ಕೊನೆಯ ಸೀಜನ್‌ ಅಂತ ಸುದೀಪ ಹೇಳಿದ್ದಾರೆ. ಅವರ ಮುಂದಿನ ಭವಿಷ್ಯ ಮತ್ತಷ್ಟು ಉಜ್ವಲವಾಗಿರಲಿ. ಸುದೀಪ ನಾನುಕಂಡ ಅತ್ಯುತ್ತಮ ನಿರೂಪಕರಲ್ಲಿ ನೀವೂ ಒಬ್ಬರು.ನಿಮ್ಮ ಜೊತೆ ನಿಮ್ಮನ್ನು ನಂಬಿರುವವರಿಗೂ ಯಶಸ್ಸು ಸಿಗಲಿ. ಸಾಮಾನ್ಯವಾಗಿ ನಾನು ಕಂಡಂತೆ ಬರೆಯುವವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗದು ಸುದೀಪ.(ನಾನು ಮತ್ತು ನನ್ನಂತ ಬರೆಯುವವರು ಸಾಮಾನ್ಯವಾಗಿ ನಿರ್ಲಕ್ಷಕ್ಕೆ ಒಳಗಾದವರೇ) ಕಳೆದ ಹದಿನೆಂಟು ವರ್ಷಗಳಿಂದ ನಾನು ಬ್ಲಾಗ್‌ ಬರೆದಿದ್ದೀನಿ ಟೀವಿ ಕಾರ್ಯಕ್ರಮಗಳ ಬಗ್ಗೆ. ಒಂದರ್ಥದಲ್ಲಿ ಗೋಸ್ಟ್‌ ರೈಟರ್.‌ ಆದರೇ ನನ್ನನ್ನು ಭೇಟಿ ಆಗಿರುವವರು ಮತ್ತು ಭೇಟಿ ಆಗಬೇಕು ಅಂತ ಇಷ್ಟ ಪಟ್ಟಿದ್ದು ಸಹ ಬೆರಳೆಣಿಕೆ. ನನ್ನ ಕೆರಿಯರ್‌ ಗ್ರಾಫ್‌ ನೆಲಕಚ್ಚಿದೆ, ಹಾಗಂತ ಬೇಜಾರಿಲ್ಲ ಯಾಕೇಂದ್ರೆ  ನಾಳೆ ಎನ್ನುವುದು ನಿಗೂಢ..