ಮಧುವನ... ಮನುವನ ???



ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ಅವರ ಅಂತಿಮ ಪಯಣದ ನೇರ ಪ್ರಸಾರ ಕನ್ನಡ ವಾಹಿನಿಗಳು  ಮಾಡುತ್ತಿತ್ತು. ಈ ಕಾರ್ಯಕ್ರಮದ ವೀಕ್ಷಣೆ ಬಹುತೇಕ ಗ್ರಾಮೀಣ ಪ್ರದೇಶದವರಿಗೆ ಸಾಧ್ಯವಾಗಲಿಲ್ಲ. ಯಾವ ಅರಸ ಬಂದರೇನು  ಗ್ರಾಮೀಣ ಪ್ರದೇಶಗಳಲ್ಲಿ ಸದಾ ಕರೆಂಟ್ ಕೊರತೆ!ಮಹಾರಾಜರ ಅಕಾಲಿಕ ಮರಣ ಸಿಕ್ಕಾಪಟ್ಟೆ ನೋವು ಉಂಟು ಮಾಡಿದೆ ನನಗೆ. ಕೇವಲ 60 ರ ಹರೆಯದ ಮಹಾರಾಜರು ಇನ್ನೂ ಕನಿಷ್ಠ 20 ವರ್ಷಗಳಾದರೂ ಬದುಕಬೇಕಿತ್ತು. .. ವಿಧಿ ಆಟವೇನು ಬಲ್ಲವರು ಯಾರು?


ಈ ಕಾರ್ಯಕ್ರಮದ ನೇರ ಪ್ರಸಾರದ ಬಗ್ಗೆ ನಾನು ಮೊದಲು ಹೇಳಿದೆನಲ್ಲ. ನನ್ನ ಮನೆಯಲ್ಲಿ ಕೇವಲ ಮೂರು ಕನ್ನಡ ವಾರ್ತಾ ಚಾನೆಲ್ ಗಳು ಪ್ರಸಾರ ಆಗುವುದು. ಸುವರ್ಣ ನ್ಯೂಸ್, ಉದಯ ನ್ಯೂಸ್ ಹಾಗೂ ಟಿವಿ ನೈನ್. ಅಂತ್ಯಕ್ರಿಯೆ ನಡೆಯುತ್ತಿದ್ದ ಸ್ಥಳದ ಹೆಸರನ್ನು  ಟೀವಿ ಪರದೆಯ ಮೇಲೆ ಮೂರು ವಾಹಿನಿಗಳು ತೋರಿಸುತ್ತಿತ್ತು. ಎರಡು ವಾಹಿನಿಗಳು ಒಂದು ಹೆಸರನ್ನು ತೋರಿಸುತ್ತಿದ್ದರೆ, ಒಂದು ವಾಹಿನಿ ಬೇರೆ ಹೆಸರನ್ನು ತೋರಿಸುತ್ತಿತ್ತು. ಉದಯ ಮತ್ತು ಟೀವಿ ನೈನ್ ಮನುವನ ಎಂದು  ತೋರಿಸುತ್ತಿದ್ದು ಅದೇ ಹೆಸರನ್ನು ನಿರೂಪಕರು ಹೇಳುತ್ತಿದ್ದರು. ಆದರೇ ಸುವರ್ಣ ನ್ಯೂಸ್ ನಲ್ಲಿ ಮಧುವನ ಎಂದು ತೋರಿಸುತ್ತಾ ಅದೇ ಹೆಸರನ್ನು ಹೇಳುತ್ತಿದ್ದರು ನಿರೂಪಕರು. ನನಗೆ ಗೊತ್ತಿರುವ ಪ್ರಕಾರ ಮನುವನ ಮಹಾರಾಜರ ರುದ್ರ ಭೂಮಿಯೆ ಹೊರೆತು ಮಧುವನವಲ್ಲ! ಸುವರ್ಣ ನ್ಯೂಸ್ ಪ್ರಕಾರ ಮಧು ಮತ್ತು ಮನುವನ ಬೇರೆ ಬೇರೆನಾ ಅಥವ ಒಂದೇನಾ?

‘ಮನುವನ’ದಲ್ಲಿ ಸಮಾಧಿ
ಮೈಸೂರು: ಮಧುವನದ ಹಿಂಬದಿಯಲ್ಲಿ ಪಶ್ಚಿಮಕ್ಕಿರುವ ವೀಳ್ಯದೆಲೆ, ತೆಂಗು, ಅಡಿಕೆ ತೋಟದ ಮರಗಿಡಗಳ ಸಂದಿನಲ್ಲಿ ನುಸುಳಿ ನಡೆದರೆ ಆನೆ ಕರೋಟಿ ಸಿಗುತ್ತದೆ. ಹಾಗೆಯೇ ಮಧುವನದ ಬಲಕ್ಕೆ ಮಧುವನದ ವಿಸ್ತರಣೆಯೇನೋ ಅನ್ನುವಂತೆ ಇರುವ ವಿಶಾಲ ಆವರಣದಲ್ಲಿ ಪುಟ್ಟಪುಟ್ಟ ಸಮಾಧಿ, ಬೃಂದಾವನಗಳ ಸಮುಚ್ಛಯವೇ ಇದೆ. ಇದು ಮೈಸೂರು ಅರಸರ ಹಾಗೂ ಅವರ ವಂಶದವರ ರುದ್ರಭೂಮಿ ಮನುವನ.( ಕೃಪೆ : ವಾರ್ತಾ ಭಾರತಿ) 

ಲಿಂಕ್ ಕ್ಲಿಕ್ಕಿಸಿ:
http://www.vknews.in/2013/12/11/maysooru-king/

ಬೇಸರ ಕೇಳೋರುಯಾರು ?!



ನಮ್ಮನ್ನು ಅಗಲಿದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ ಆತ್ಮಕ್ಕೆ ಶಾಂತಿ ದೊರಕಲಿ




ಹಾಗೆ ಭಾನುವಾರ ಗೆಳತಿ ಭಾರತಿ ಬಿ.ವಿ. ಪುಸ್ತಕ ಬಿಡುಗಡೆಗೆ ಹೋಗಿದ್ದೆ. ಆಕೆ ನನ್ನ ಎಫ್ ಬಿ ಗೆಳತಿ. ಆದರೂ ಸಿಕ್ಕ ಮೂರು ನಾಲ್ಕು ಬಾರಿಯಲ್ಲಿ ಆತ್ಮೀಯತೆಯ ಹರಿವು ಹೆಚ್ಚಾಗಿದೆ. ಕಂಫರ್ಟಬಲ್ ಮಂದಹಾಸ ಹೆಚ್ಚು ಇಷ್ಟ ಪಡುವಂತೆ ಮಾಡಿದೆ.ಕಾರ್ಯಕ್ರಮದಲ್ಲಿ ಎಫ್ಭಿ ಗೆಳೆಯ ಗೆಳತಿಯರು ಸಿಕ್ಕಿದ್ದರು. ಭರಪೂರ ಮಾತು ಕಥೆ ನಗು !  ಪುಸ್ತಕದ ಬಗ್ಗೆ ಒಂದೆರಡು ಲೈನ್ ಬರೆದು ಕೊಡಿ ಎಂದು ಶಿವಮೊಗ್ಗದ ಎಚ್ಚರಿಕೆ ಪತ್ರಿಕೆ ಗೆಳೆಯ ಹರ್ಷ ಕೇಳಿರೋದ್ರಿಂದ್ರ ಓದಿ ಸುಮ್ಮನೆ ಕೂರುವಂತಿಲ್ಲ ಬರೆಯು ಕೆಲಸ ಸಾಗ ಬೇಕಾಗಿದೆ.
ಸಾಮಾನ್ಯವಾಗಿ ನಾನು ತುಂಬಾ ಆಸ್ಥೆಯಿಂದ ಪುಸ್ತಕಗಳ ಬಿಡುಗಡೆಗೆ ಹೋಗುತ್ತಿದ್ದೆ ಮೊದಲು. ಆದರೇ ಅಲ್ಲಿನ ವಾತಾವರಣ ಮನಸ್ಸಿಗೆ ಹೆಚ್ಚು ಘಾಸಿ, ಕಿರಿಕಿರಿ ಮಾಡಿದ್ದರಿಂದ   ಎಷ್ಟೇ ಆಪ್ತರಾಗಿದ್ದರೂ ತುಂಬಾ ತಡವಾಗಿ ಪುಸ್ತಕದ ಬಿಡುಗಡೆಗೆ ಹೋಗ್ತೀನಿ ಆದಷ್ಟೂ ಜನರಿಂದ ದೂರ ಇರುವಂತಹ ವಿಮುಖತೆ ಬೆಳೆದು ಬಿಟ್ಟಿದೆ. ಇನ್ನೂ ನಿಜ ಹೇಳ ಬೇಕು ಎಂದು ಅಂದರೇ ತುಂಬಾ ವಿಶ್ವಾಸವಾಗಿ, ವೈಯುಕ್ತಿಕವಾಗಿ ಕರೆದರೆ ಮಾತ್ರ ನಾನೀಗ ಬುಕ್ ರಿಲೀಸ್ ಗೆ ಹೋಗುವುದು. ಯಾವುದೇ ರೀತಿಯಲ್ಲೂ ಸ್ವಯಂ ಪ್ರೇರಿತವಾಗಿ ಹೋಗಲ್ಲ . ಮೊದಲೇ ಹೇಳಿದಂತೆ ಅನೇಕ ಘಟನೆಗಳು- ಕಾರಣಗಳು ಮನಕ್ಕೆ ಬೇಸರ ತಂದಿದೆ. ಅದು ಆತ್ಮೀಯರನ್ನು ಮತ್ತು ಅಲ್ಲದವರನ್ನು ಗುರುತಿಸುವ ಕೆಲಸದಲ್ಲಿ ಹೆಚ್ಚು ಮುಂದುವರೆಯುತ್ತಿಲ್ಲ :-) ಏನು ಮಾಡುವುದು ?

ರಘು ಅಪಾರ ಭೇಟಿ ಆಗಿದ್ದು ಭಾರತಿ ಕಾರ್ಯಕ್ರಮದಲ್ಲೇ!  ಟೀವಿ ನೋಡಿ ಹತ್ತು ವರ್ಷವಾಯಿತು ಎಂದು ಹೇಳಿದ್ದು ಬರಹಗಾರ ಛಂದ ವಸುಧೇಂದ್ರ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಕ್ಕ ವಸುಧೇಂದ್ರ ಅವರನ್ನು ಕೀಟಲೆ ಮಾಡಿದ್ದೆ ನನ್ನ ಬರಹ ಒಂದರಲ್ಲಿ.ಗೊತ್ತಲ್ಲ ನನ್ನ ಕೀಟಲೆ ಆರೋಗ್ಯಕರ. ಅದರ ಬಗ್ಗೆ ತಪ್ಪು ತಿಳಿಯುವವರ ಬಗ್ಗೆ ಏನೂ ಹೇಳೊಕೆ ಆಗಲ್ಲ. ವಸುಧೇಂದ್ರ ನಗುತ್ತಾ ಟೀವಿ ನೋಡಲ್ಲ ಅಂದಾಗ ಏನೂ ಹೇಳೋಕೆ ಆಗಲಿಲ್ಲ ಬಿಡಿ!
ನಾನು ಟೀವಿ ನೋಡೇ ನೋಡ್ತೀನಿ. ಅದು ನನ್ನ ಅಭ್ಯಾಸ. ಆದರೆ ಬರೆಯುವುದೇ ವೃತ್ತಿ ಆಗಿರುವುದರಿಂದ ಕನಿಷ್ಟ ಕೆಲವು ಸಂಗತಿಗಳನ್ನು ಓದೆ ಓದುತ್ತೇನೆ.. ಈ ವಿಷಯದಲ್ಲಿ ನಾನು ಹೆಲ್ಪ್ ಲೆಸ್ ;-)


ನ್ಯೂಸ್ ಚಾನೆಲ್ ವೀಕ್ಷಿಸುತ್ತಾ ಇರುವಾಗ ಚಂದನ್ ಶರ್ಮ ಸುವರ್ಣ ನ್ಯೂಸ್ ನಲ್ಲಿ ಕಾಣಿಸಿದರು. ಅರ್ರೇ ಅವರು ಅಲ್ಲೇ ಕೆಲಸ ಮಾಡುವುದು. ಆದರೇ ಇತ್ತೀಚೆಗೆ ಚಂದನ್ ಟಿ ಎನ್ ಸೀತಾರಾಂ ಅವರ ಮಹಾ ಪರ್ವ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದರು ಸೀತಾರಂ ಆಸ್ಥಾನಕ್ಕೆ ಎಂಟ್ರಿಯಾದ ಹೊಸ ಪ್ರತಿಭೆ ಚಂದನ್ ನಟನೆ ಓಕೆ ಅನ್ನಿಸಿತು. ಆದರೇ ನ್ಯೂಸ್  ಓದುವಾಗ ಇರುಷ್ಟು ಚಂದ ಕಾಣ್ತಾ ಇರಲಿಲ್ಲ ಬಿಡಿ. ಆ ಧಾರವಾಹಿಯ ಸುಷ್ಮಾ ಭಾರದ್ವಾಜ್ ಒಳ್ಳೆಯ ಬರಹಗಾರ್ತಿ ಮತ್ತು ನಟಿ. ಆಕೆಯ ಪಾತ್ರ ಅತ್ಯಂತ ಆಸಕ್ತಿದಾಯಕ.ಈಕೆ ಸಹನನ್ನ ಎಫ್ಬಿ ಗೆಳತಿ. ಹೆಣ್ಣುಮಕ್ಕಳು ಬೇಗ ತಾಯಿತನದ ಮನಸ್ಥಿತಿ ಪಡೆದು ಬಿಡ್ತಾರೆ. ಈಕೆಯ ಅಸಿಸ್ಟೆಂಟ್ ಒಬ್ಬರು ಕೆಲಸ ಬಿಟ್ಟು (ಓದಲೆಂದು ಕಾಣುತ್ತೆ) ಹೋದಾಗ ತನ್ನ ಮಗನನ್ನು ದೂರ ಕಳುಹಿಸುವ ತಾಯಿಯಂತೆ ಭಾವನೆ ವ್ಯಕ್ತ ಪಡಿಸಿದ್ದರು. ಆಗ ಇಡೀ ಆಕೆಯ ಎಫ್ಬಿ  ಫ್ರೆಂಡ್ಸ್ ಯಾರು, ಏನು, ಯಾವಾಗ ಮದುವೆ ಆದಿ ಅಂತೆಲ್ಲ ಕೇಳಿದ್ರು ಅಂತ ಈ ಹೆಣ್ಣು ಮಗಳು ಮತ್ತೊಂದು ಗೋಡೆ ಬರಹದಲ್ಲಿ ತಿಳಿಸಿದ್ದರು. ಇನ್ನು ಅನ್  ಮ್ಯಾರಿಡ್ ಈ ಚೆಲುವೆ :-) ಹೋಗ್ಲಿ ಟೀವಿಲಾದರೂ ಮ್ಯಾರೇಜ್  ಆಗ್ತಾರಾ ಅಂದ್ರೆ ನಮ್ಮ ಚಂದನ್  ಸ್ವಾಮಿ ಮದುವೆ ಆದಂಗೆ ಆಗಿ ಬಿಟ್ಟು ನ್ಯೂಸ್ ಓದೋಕೆ ಬಂದಿದ್ದಾರೆ. ಪಾಪದ ಹೆಣ್ಣುಮಗಳ ಬೇಸರ ಕೇಳೋರುಯಾರು ?!