ಭಿನ್ನ ವಿಭಿನ್ನ




How to Plant, Grow, and Care for Marigolds | Gardener's Path
 ನಾನು ಫೇಸ್ ಬುಕ್ ನಲ್ಲಿ ಕೆಲವು ಹೀರೋಗಳ ಪೇಜ್ ಗಳನ್ನೂ ಫಾಲೋ ಮಾಡ್ತೀನಿ. ಅದರಲ್ಲಿ ಜಗ್ಗೇಶ್, ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಕಿಚ್ಚ, ಅನಿರುದ್ಧ್  ,ಶಂಕರ್ ಅಶ್ವಥ್ ಹೀಗೆ ಒಂದಷ್ಟು .. ಲಾಕ್ ಡೌನ್ ಸಮಯದಲ್ಲಿ ಹೆಚ್ಚು ಜೀವಂತಿಕೆಯಾಗಿತ್ತ ಹೀರೋಗಳು ಇವರೆಲ್ಲ.. ಮುಖ್ಯವಾಗಿ ನಾನು ಜಗ್ಗಣ್ಣ, ಅನಿರುದ್ಧ್  ಮತ್ತು ಶಂಕರ್ ಅಶ್ವಥ್ ಅವರ ಬಗ್ಗೆ ಹೇಳಲೇ ಬೇಕು.. ರಿಯಾಲಿಟಿ ಷೋ ಬಿಡಿ ಆದ್ರೆ ಪೇಜ್ ನ್ನು ಸಹ ಅಷ್ಟೇ ಚಂದವಾಗಿಡುತ್ತಾರೆ ಜಗ್ಗಣ್ಣ. ರಾಯರ ಪರಮ ಭಕ್ತರಾದ ಜಗ್ಗೇಶ್ ರಾಯರು, ಸ್ವಲ್ಪ ಕೌನ್ಸಿಲಿಂಗ್, ಮನೆಯ ಬಗ್ಗೆ ಸ್ವಲ್ಪ  ಹೀಗೆ ಹಲವಾರು ವಿಷಯಗಳು, ಅನಿರುದ್ಧ್ ವಿಷಯ ಮತ್ತೊಂದಷ್ಟು ಭಿನ್ನ  ಅತ್ಯುತ್ತಮವಾದ ವಿಷಯಗಳನ್ನು ಸರಳ ರೀತಿಯಲ್ಲಿ ತಿಳಿ ಹೇಳುತ್ತಾರೆ ಅನಿರುದ್ಧ್ ..  ತಮ್ಮ ಪ್ರಸ್ತುತ ಜೀವನಶೈಲಿ ಬಗ್ಗೆ ಬರೆದು ಕೊಳ್ತಾರೆ ಚೆನ್ನಾಗಿರುತ್ತದೆ.

Bright Red Lilies #flower #orange | Red lily flower, Pretty ...

ಧಾರಾವಾಹಿ ಪ್ರಪಂಚದಲ್ಲಿ ಹೊಸದೊಂದು  ಪ್ರಪಂಚ ತೋರಿಸಿದ ಅಗ್ಗಳಿಕೆ ಜೊತೆಜೊತೆಯಲಿ ಧಾರಾವಾಹಿಗೆ ಸಿಗುತ್ತದೆ. ಜೀ ಕನ್ನಡ ವಾಹಿನಿ ಅನೇಕ ಅತ್ಯುತ್ತಮ ರಿಯಾಲಿಟಿ ಷೋಗಗಳು  ಮತ್ತು ಧಾರಾವಾಹಿಗಳನ್ನು ನೀಡಿದೆ. ಆದರೆ ಅನಿರುದ್ಧ್ ಅಭಿನಯದ ಈ ಧಾರಾವಾಹಿ ತುಂಬಾ ಭಿನ್ನವಾಗಿದೆ. ಡಾ. ವಿಷುವರ್ಧನ್ ಅವರನ್ನು ನೋಡಿದಂತಾಗುತ್ತದೆ ಅನಿರುದ್ಧ್ ಅವರ ನಟನೆ ಕಂಡಾಗ, ಆರ್ಯ ವರ್ಧನ್, ಮೀರಾ, ಅನು , ಆಕೆಯ ಅಪ್ಪ ಅಮ್ಮನ ಪಾತ್ರಧಾರಿಗಳು, ಮಾಮ್ ಇನ್  ಲಾ ಎಂದು ವೀಕ್ಷಕರನ್ನು ಆಕರ್ಷಿಸುವ ಮಾನ್ಸಿ, ಬೆಂಡೆ -ಝೇಂಡೆ , ಹರ್ಷ ವರ್ಧನ್, ಅನು  ಸ್ನೇಹಿತೆ-ಸ್ನೇಹಿತ ಮತ್ತು ಸ್ನೇಹಿತೆಯ ಅಮ್ಮ , ಮಾವ,ಮುಖ್ಯವಾಗಿ ಹಿರಿಯ ಚಾರ್ಮಿ೦ಗ್ ಕಲಾವಿದೆಯರಾದ ಸುಂದರಶ್ರೀ ಮತ್ತು ವಿಜಯ ಲಕ್ಷ್ಮಿ ಸಿಂಗ್ .. ಇಲ್ಲಿ ಯಾರು ಹೆಚ್ಚು ಯಾರು ಕಡಿಮೆ ಅನ್ನುವ ಹಾಗಿಲ್ಲ.. ಮತ್ತೊಂದು ಮುಖ್ಯ ಸಂಗತಿ ಈ ಧಾರಾವಾಹಿಯಲ್ಲಿ ಅತ್ಯಂತ ಶ್ರೀಮಂತರ  ಮನೆ , ಅವರ ಕೆಲಸದಾಳುಗಳು, ಅವರ  ಬ್ಯುಸಿನೆಸ್ ಜಾಗ ಎಲ್ಲವು ಪಕ್ಕಾ ಪರಫೆಕ್ಟ್  .. ಈ ಎಲ್ಲಾ  ಅಂಶಗಳಿಗೆ ಕ್ರೆಡಿಟ್ ಹೋಗ ಬೇಕಾಗಿರುವುದು ನಿರ್ದೇಶಕರು ಮತ್ತು ತಾಂತ್ರಿಕ ವರ್ಗಕ್ಕೆ ಅಲ್ವೇ! 
 

ನಿರಾಳತೆ

 Best Plants with Red Flowers - BBC Gardeners' World Magazine

ಕೋರೋನಾ  ಆರಂಭ ಕಾಲದಲ್ಲಿ, ದೇಶವು  ಸಂಪೂರ್ಣ  ಲಾಕ್ ಡೌನ್  ಆದ ಸಂದರ್ಭದಲ್ಲಿ ಹೆಚ್ಚಾಗಿ ನ್ಯೂಸ್ ಚಾನೆಲ್ ಗಳನ್ನೂ ನೋಡ್ತಾ ಇದ್ದೆ. ಪಬ್ಲಿಕ್  ಟೀವಿ ರಂಗಣ್ಣ, ಅವರ ಶಿಷ್ಯ ಬಳಗದ ಕಾರ್ಯಕ್ರಮಗಳು, ಸುವರ್ಣ  ನ್ಯೂಸ್ ರಮಾಕಾಂತ್,ಅಜಿತ್, ಜಯ ಪ್ರಕಾಶ್ ಶೆಟ್ರ  ಕಾರ್ಯಕ್ರಮಗಳು, ನ್ಯೂಸ್ 18, ಟಿವಿ 9 ರಂಗನಾಥ್ ಟೀಮ್ ಎಲ್ಲರ ಕಾರ್ಯಕ್ರಮಗಳು ನೋಡುವ ಕೆಲಸ ಜೊತೆಗೆ ಸೋಷಿಯಲ್  ಮೀಡಿಯಾದಲ್ಲಿ ಸ್ನೇಹಿತರ ಟಿವಿ ಕಾರ್ಯಕ್ರಮಗಳ ಬಗ್ಗೆ ಇದ್ದ ಅಭಿಪ್ರಾಯ, ಭಯ, ಸಂತೋಷ, ಸಂಭ್ರಮ, ಆತಂಕ, ನಿರಾಳತೆ ಹೀಗೆ ಹತ್ತು ಹಲವಾರು. 
Orange and Red Flower Logo - LogoDix

ಅನ್ (ಲಾಕ್ ) ಡೌನ್ ಸಮಯದಲ್ಲಿ ಸೀರಿಯಲ್ ಗಳು ಆರಂಭವಾಗಿದೆ.. ಜೊತೆಗೆ ಡಬ್ಬಿಂಗ್ ಸೀರಿಯಲ್ ಗಳ  ಕಾಲ ..ಆದ್ರೂ  ಭಾಷೆ ಅರ್ಥ ಆಗುತ್ತೋ ಬಿಡುತ್ತೋ ಮೂಲ ನೋಡಿ ಅರ್ಥ ಮಾಡಿಕೊಂಡು ಎಂಜಾಯ್ ಮಾಡೋದೇ ನಿಜವಾದ ಮಜಾ. ಯಾಕೆಂದ್ರೆ ನಿನ್ನೆ 2019 ರಲ್ಲಿ ರಿಲೀಜ್ ಆದ ತಮಿಳು ಸಿನೆಮಾ KEE ನೋಡಿದೆ.ಹಿಂದೀ ಭಾಷೆಗೆ ಡಬ್ ಮಾಡಿದ್ದು.ತಮಿಳು ಸಿನಿಮಾವನ್ನು ತಮಿಳಿನಲ್ಲಿ ನೋಡ ಬೇಕು ಅನ್ನಿಸಿತು.. ಆಗ . 

@@ ಕಲರ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಗಳು ಜಾನಕಿ ಸೀರಿಯಲ್ ಅತ್ಯಂತ ಚಂದದ ಕಥಾ ಹಂದರ ಹೊಂದಿತ್ತು. ಮಧ್ಯದಲ್ಲಿ ನಿಂತಿದ್ದು ಬೇಸರ ತಂದಿದ್ದು ಸತ್ಯ.. ಆದರೆ ಬದಲಾವಣೆ ಜಗದ ನಿಯಮ. ಸೀತಾರಾಮ್ ಸರ್ ಗರಡಿಯಿಂದ ಇನ್ನು ವಿಶೇಷವಾದ ಧಾರಾವಾಹಿಗಳು ಬರುತ್ತದೆ ಎನ್ನುವ ನಿರೀಕ್ಷೆ ನಮ್ಮಂತಹ ಸಿರಿಯಲ್  ಪ್ರಿಯರಿಗೆ!