ನಾನು ಫೇಸ್ ಬುಕ್ ನಲ್ಲಿ ಕೆಲವು ಹೀರೋಗಳ ಪೇಜ್ ಗಳನ್ನೂ ಫಾಲೋ ಮಾಡ್ತೀನಿ. ಅದರಲ್ಲಿ ಜಗ್ಗೇಶ್, ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಕಿಚ್ಚ, ಅನಿರುದ್ಧ್ ,ಶಂಕರ್ ಅಶ್ವಥ್ ಹೀಗೆ ಒಂದಷ್ಟು .. ಲಾಕ್ ಡೌನ್ ಸಮಯದಲ್ಲಿ ಹೆಚ್ಚು ಜೀವಂತಿಕೆಯಾಗಿತ್ತ ಹೀರೋಗಳು ಇವರೆಲ್ಲ.. ಮುಖ್ಯವಾಗಿ ನಾನು ಜಗ್ಗಣ್ಣ, ಅನಿರುದ್ಧ್ ಮತ್ತು ಶಂಕರ್ ಅಶ್ವಥ್ ಅವರ ಬಗ್ಗೆ ಹೇಳಲೇ ಬೇಕು.. ರಿಯಾಲಿಟಿ ಷೋ ಬಿಡಿ ಆದ್ರೆ ಪೇಜ್ ನ್ನು ಸಹ ಅಷ್ಟೇ ಚಂದವಾಗಿಡುತ್ತಾರೆ ಜಗ್ಗಣ್ಣ. ರಾಯರ ಪರಮ ಭಕ್ತರಾದ ಜಗ್ಗೇಶ್ ರಾಯರು, ಸ್ವಲ್ಪ ಕೌನ್ಸಿಲಿಂಗ್, ಮನೆಯ ಬಗ್ಗೆ ಸ್ವಲ್ಪ ಹೀಗೆ ಹಲವಾರು ವಿಷಯಗಳು, ಅನಿರುದ್ಧ್ ವಿಷಯ ಮತ್ತೊಂದಷ್ಟು ಭಿನ್ನ ಅತ್ಯುತ್ತಮವಾದ ವಿಷಯಗಳನ್ನು ಸರಳ ರೀತಿಯಲ್ಲಿ ತಿಳಿ ಹೇಳುತ್ತಾರೆ ಅನಿರುದ್ಧ್ .. ತಮ್ಮ ಪ್ರಸ್ತುತ ಜೀವನಶೈಲಿ ಬಗ್ಗೆ ಬರೆದು ಕೊಳ್ತಾರೆ ಚೆನ್ನಾಗಿರುತ್ತದೆ.
ಧಾರಾವಾಹಿ ಪ್ರಪಂಚದಲ್ಲಿ ಹೊಸದೊಂದು ಪ್ರಪಂಚ ತೋರಿಸಿದ ಅಗ್ಗಳಿಕೆ ಜೊತೆಜೊತೆಯಲಿ ಧಾರಾವಾಹಿಗೆ ಸಿಗುತ್ತದೆ. ಜೀ ಕನ್ನಡ ವಾಹಿನಿ ಅನೇಕ ಅತ್ಯುತ್ತಮ ರಿಯಾಲಿಟಿ ಷೋಗಗಳು ಮತ್ತು ಧಾರಾವಾಹಿಗಳನ್ನು ನೀಡಿದೆ. ಆದರೆ ಅನಿರುದ್ಧ್ ಅಭಿನಯದ ಈ ಧಾರಾವಾಹಿ ತುಂಬಾ ಭಿನ್ನವಾಗಿದೆ. ಡಾ. ವಿಷುವರ್ಧನ್ ಅವರನ್ನು ನೋಡಿದಂತಾಗುತ್ತದೆ ಅನಿರುದ್ಧ್ ಅವರ ನಟನೆ ಕಂಡಾಗ, ಆರ್ಯ ವರ್ಧನ್, ಮೀರಾ, ಅನು , ಆಕೆಯ ಅಪ್ಪ ಅಮ್ಮನ ಪಾತ್ರಧಾರಿಗಳು, ಮಾಮ್ ಇನ್ ಲಾ ಎಂದು ವೀಕ್ಷಕರನ್ನು ಆಕರ್ಷಿಸುವ ಮಾನ್ಸಿ, ಬೆಂಡೆ -ಝೇಂಡೆ , ಹರ್ಷ ವರ್ಧನ್, ಅನು ಸ್ನೇಹಿತೆ-ಸ್ನೇಹಿತ ಮತ್ತು ಸ್ನೇಹಿತೆಯ ಅಮ್ಮ , ಮಾವ,ಮುಖ್ಯವಾಗಿ ಹಿರಿಯ ಚಾರ್ಮಿ೦ಗ್ ಕಲಾವಿದೆಯರಾದ ಸುಂದರಶ್ರೀ ಮತ್ತು ವಿಜಯ ಲಕ್ಷ್ಮಿ ಸಿಂಗ್ .. ಇಲ್ಲಿ ಯಾರು ಹೆಚ್ಚು ಯಾರು ಕಡಿಮೆ ಅನ್ನುವ ಹಾಗಿಲ್ಲ.. ಮತ್ತೊಂದು ಮುಖ್ಯ ಸಂಗತಿ ಈ ಧಾರಾವಾಹಿಯಲ್ಲಿ ಅತ್ಯಂತ ಶ್ರೀಮಂತರ ಮನೆ , ಅವರ ಕೆಲಸದಾಳುಗಳು, ಅವರ ಬ್ಯುಸಿನೆಸ್ ಜಾಗ ಎಲ್ಲವು ಪಕ್ಕಾ ಪರಫೆಕ್ಟ್ .. ಈ ಎಲ್ಲಾ ಅಂಶಗಳಿಗೆ ಕ್ರೆಡಿಟ್ ಹೋಗ ಬೇಕಾಗಿರುವುದು ನಿರ್ದೇಶಕರು ಮತ್ತು ತಾಂತ್ರಿಕ ವರ್ಗಕ್ಕೆ ಅಲ್ವೇ!
No comments:
Post a Comment