ವಾಹ್ ವಾಹ್ ವಾಹ್

Image result for red flowers
ಜೀ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಆರಂಭವಾಗಿದೆ. ಉತ್ತಮ ಡ್ಯಾನ್ಸ್ ರಿಯಾಲಿಟಿ ಶೋಗಳನ್ನು  ಈ ವಾಹಿನಿಯು ವೀಕ್ಷಕರ ಕೈಗಿತ್ತಿದೆ. ಅತ್ಯುತ್ತಮ ಪ್ರತಿಭೆಗಳನ್ನು ನೀಡಿರುವ ಈ ರಿಯಾಲಿಟಿ ಶೋ ಈಗ ಮಗದಷ್ಟು ಪ್ರತಿಭೆಗಳನ್ನು ನೀಡುವತ್ತ ಸಾಗಿದೆ. ಅದು ಖುಷಿಯ ಸಂಗತಿ. ಆದರೇ ಜೀ ಕನ್ನಡದಲ್ಲಿ ಬಹುತೇಕ  ಎಲ್ಲಾ ರಿಯಾಲಿಟಿ ಶೋಗಳಲ್ಲಿ ಒಬ್ಬರೇ  ನಿರೂಪಣೆ ಮಾಡುವ ಅಂಶ ಮಾತ್ರ ಪರಮ ಬೋರ್ ಸಂಗತಿ.  
ಹೊಸಬರು ಹೇರಳ ಸಂಖ್ಯೆಯಲ್ಲಿ ಇರುವಾಗ ಅಥವಾ ಹಳಬರೆ ಬಹಳಷ್ಟು ಇರುವಾಗ ಸದಾ ಒಬ್ಬರಿಗೆ ಅವಕಾಶ ...!!!!!
ಆ ಅಂಶದಿಂದ ಯಾವುದೇ ರಿಯಾಲಿಟಿ ಶೋಗಳತ್ತ ಗಮನ ಕೊಡುವ ಆಸಕ್ತಿ ನನ್ನಲ್ಲಿ ಕಡಿಮೆಯಾಗಿದೆ.

                                       **********
Image result for red flowers
ಕೆಲವು ಕಾರ್ಯಕ್ರಮಗಳು ಮೈ ನವಿರೇಳಿಸುತ್ತದೆ. ಅದೆಷ್ಟರಮಟ್ಟಿಗೆಂದರೆ ಆ  ಕಾರ್ಯಕ್ರಮಕ್ಕಾಗಿ ಕಾಯುವಂತೆ ಮಾಡುತ್ತದೆ. ಈಗ ಪ್ರಸಾರವಾಗುತ್ತಿರುವ ಸ್ಟಾರ್ ಪ್ಲಸ್ ವಾಹಿನಿಯ ಡಿ ಪ್ಲಸ್ ಡ್ಯಾನ್ಸ್ ರಿಯಾಲಿಟಿ ಶೋ ಅದಕ್ಕೊಂದು ಉತ್ತಮ  ಉದಾಹರಣೆ.ರೇಮೊ ಡಿಸೋಜ ಅವರ ನಾಯಕತ್ವದಲ್ಲಿ ಪ್ರಸಾರವಾಗುತ್ತಿರುವ ಈ ರಿಯಾಲಿಟಿ ಶೋ ಶಕ್ತಿ, ಧರ್ಮೇಶ್ ಮತ್ತು ಪುನೀತ್ ಟೀಮ್ಗಗಳಲ್ಲಿರುವ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಸಕತ್ತಾಗಿ ತಮ್ಮ ಪ್ರತಿಭೆ ತೋರುತ್ತಿದ್ದಾರೆ. ಅತ್ಯುತ್ತಮ ಕಾನ್ಸೆಪ್ಟ್ ಗಳನ್ನು ಹೊಂದಿರುವ ಈ ರಿಯಾಲಿಟಿ ಶೋ  ವಾಹ್ ವಾಹ್ ವಾಹ್  

ಅದ್ಭುತ




ಸಾಮಾನ್ಯವಾಗಿ ನಾನು ಕಂಡಂತೆ ಬಹುತೇಕ  ವೀಕ್ಷಕರು  ವಾರದ ಕೊನೆಯ ಕಾರ್ಯಕ್ರಮಗಳನ್ನು ವೀಕ್ಷಿಸಲು ಹೆಚ್ಚು ಕಾತುರರಾಗಿರುತ್ತಾರೆ. ರಿಯಾಲಿಟಿ ಶೋಗಳು ಜನರ ಆಕರ್ಷಣೆಯ ಕೇಂದ್ರ ಬಿಂದುಗಳು ಎಂದರೆ ತಪ್ಪಲ್ಲ. 
ಝಿ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಸರೆಗಮಪ ಅತ್ಯಂತ ಮನಸೆಳೆದ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅದರಲ್ಲಿ ಭಾಗವಹಿಸುವ ಮಕ್ಕಳು, ಜ್ಯೂರಿ ಮೆಂಬರ್ ಗಳು, ನೇಹ, ಜಾವಿದ್, ಹಿಮೇಶ್ ರಂತಹ ತ್ರಿಮೂರ್ತಿ ತೀರ್ಪುಗಾರರು, ಜೊತೆಗೆ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ನಿರೂಪಕ ಆದಿತ್ಯ ನಾರಾಯಣ್ ... ಆವರ ಲವಲವಿಲಿಕೆಯ ನಿರೂಪಣೆ, ಮಾತಿನ ಶೈಲಿ ಎಲ್ಲವೂ ಅತ್ಯಂತ ಇಷ್ಟವಾಗುವ ಅಂಶಗಳು. ದಿನೇದಿನೇ ಕಾರ್ಯಕ್ರಮದ ಸವಿ ಹೆಚ್ಚಾಗುತ್ತಲೇ ಬಂದಿದೆ. ಅದರಲ್ಲೂ ಈಗ ಸೇರ್ಪಡೆಯಾಗಿರುವ ಗಾಯಕ್ವಾಡ್ ಸಿಸ್ಟರ್ಸ್ ಮತ್ತು ದಕ್ಷಿಣ ಭಾರತದ ಹೆಮ್ಮೆ ವೈಷ್ಣವ್ ಗಿರೀಶ್ (ವಿಜಿ)  ಕಾರ್ಯಕ್ರಮದ ಸೊಬಗನ್ನು ಮತ್ತಷ್ಟು ಹೆಚ್ಚು ಮಾಡಿದ್ದಾರೆ. ಜಯಸ್  ಮಾತ್ರವಲ್ಲ ಎಲ್ಲಾ ಮಕ್ಕಳೂ ಹೆಚ್ಚು ಇಷ್ಟ ವಾಗುವಂತೆ ತಮ್ಮ ಪ್ರತಿಭೆ ತೋರುತ್ತಿದ್ದಾರೆ.. 
ಈ ಬಾರಿಯ ಕಾರ್ಯಕ್ರಮಗಳಲ್ಲಿ ಜನ್ಮಾಷ್ಟಮಿ ಕುರಿತಾದ ವಿಶೇಷ  ಸಂಚಿಕೆ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಸಿದ್ಧ ಪಡಿಸಿದ ಸಂಚಿಕೆ ಎರಡೂ ಮನಸೆಳೆಯಿತು. ಅದರಲ್ಲೂ ಸ್ವಾತಂತ್ರ್ಯ ದಿನಾಚರಣೆಯದ್ದು ಹೆಚ್ಚು ಇಷ್ಟವಾಯ್ತು.  ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ, ಎಲೆಮರೆಯ ಸಮಾಜಮುಖಿಗಳ ಪರಿಚಯ ಮಾಡಿಕೊಟ್ಟ ರೀತಿ ಎಲ್ಲವೂ ಅದ್ಭುತ.
ಈ ರೀತಿ ಕಾರ್ಯಕ್ರಮ ಸಿದ್ಧ ಪಡಿಸಿ ಜನರ ಕೈಗಿತ್ತ ಸರೆಗಮಪ ಟೀಮ್ ಗೆ ನಲ್ಮೆಯ ವಂದನೆ..