ಸದಭಿರುಚಿ


Image result for orange flower
ಇತ್ತೀಚೆಗೆ ಸದಭಿರುಚಿಯ ಧಾರವಾಹಿಗಳು ಸಹಿತ ಪ್ರಸಾರವಾಗುತ್ತಿದೆ. ಅದರಲ್ಲಿ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ  ಮೇರಿ ದುರ್ಗ  ಸಹಿತ ಸೇರಿದೆ. ಓಟದಲ್ಲಿ ಆಸಕ್ತಿ ಉಳ್ಳ ಗ್ರಾಮೀಣ ಪ್ರತಿಭೆಯ ಕಥೆ ಇದು. ಆಕೆಯನ್ನು  ನಗರದ ಶಾಲೆಗೆ ಸೇರಿಸುತ್ತಾರೆ. ಅಲ್ಲಿ ಆಕೆಯ ಕನಸು ಪೊರೆಯುವ ಕೋಚ್ ರಾಣ ಸಿಗುತ್ತಾರೆ. ಎರಡು ಹೆಣ್ಣುಮಕ್ಕಳ ತಂದೆ ಯಶ್ ಪಾಲ್  ಆಗಿ ನಟಿಸಿರುವ ವಿಕ್ಕಿ ಅಹುಜ ಪಾತ್ರವನ್ನು ನೋಡುವಾಗ ಆಮೀರ್ ಖಾನ್ ಅವರ ದಂಗಲ್ ನೆನಪಾಗುತ್ತದೆ. ಆ ಕಥೆಗೂ ಈ ಕಥೆಗೂ ಯಾವುದೇ ಹೋಲಿಕೆ ಇಲ್ಲ, ದಂಗಲ್ ಸಿನಿಮಾ ಕಥೆಯಂತೆ ಇದರಲ್ಲೂ ಸಹಿತ ತಂದೆ ತನ್ನೆರಡು ಹೆಣ್ಣುಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಾಕಷ್ಟು ಕಷ್ಟ ಪಡುತ್ತಾರೆ. ಅನನ್ಯ ಅಗರ್ ವಾಲ್ ಪುಟ್ಟ ದುರ್ಗ,  ಅದ್ಭುತವಾಗಿ ನಟಿಸಿದ್ದಾಳೆ. ಅವರ ಭಾವನಾಗಿ ಅದ್ವಿಕ್, ತಾಯಿಯಾಗಿರಶ್ಮಿ, ಅಕ್ಕನಾಗಿ ಐಶ್ವರ್ಯ , ಕೋಚ್  ಪಾತ್ರದಲ್ಲಿ ಅಂಕುರ ನಯ್ಯರ್, ಅಲ್ಲದೇ ದುರ್ಗ ಬಾಲ್ಯ ಗೆಳೆಯರಾಗಿ ಮಾಡಿರುವ ಇಬ್ಬರು ಹುಡುಗರು  ಹಾಗೂ ಎಲ್ಲರೂ ಸಕತ್ತಾಗಿ ನಟಿಸಿದ್ದಾರೆ. ಪ್ರಸ್ತುತ ನಮ್ ದುರ್ಗ  ಶಾಲೆಯ ಟ್ರಸ್ಟಿ ಮೋಸಕ್ಕೆ ಒಳಗಾಗಿ ಐದು ವರ್ಷಗಳ ನಿರ್ಬಂಧ ಶಿಕ್ಷೆ ಅನುಭವಿಸುತ್ತಿದ್ದಾಳೆ. ತುಂಬಾ ಸರಳ ರೀತಿಯಲ್ಲಿ ಕಥೆಯನ್ನು ಅದೂ ವಾಸ್ತವಿಕ ಅಂಶಗಳ ಅಡಿಯಲ್ಲಿ ಹಣಿದು ಜನರ ಮುಂದೆ ಇಟ್ಟಿದ್ದಾರೆ ಈ ಧಾರವಾಹಿಯ ಟೀಮ್. ಚಂದದ ಧಾರವಾಹಿ.ಇದರ ಕಥೆ ಹಾಗೂ ನಿರ್ದೇಶನ  ಅದ್ಭುತ.

ಉಂಟೈ

Image result for pink flower

ಅಡುಗೆ ಕಾರ್ಯಕ್ರಮದ ನಿರೂಪಕರು ಅವರು ಮಾಡಿದ್ದಲ್ಲ ಬಂದವರು ಮಾಡಿದ್ದು ಉಣ್ಣುವ ಪಾಪಾತ್ಮರು. ಯಾಕೇಂದ್ರೆ ಬಂದವರು ಅಂತಿಂಥ ಅಡುಗೆ ಮಾಡಿ ಸುಮ್ಮನಾಗಲ್ಲ, ವೆರೈಟಿ ಮಾಡ್ತೀವಿ ಅಂತ ಏನೇನೇನೇನೇನೇನೇನೇನೇನೋ ಮಾಡಿ ಕಾರ್ಯಕ್ರಮದ ನಿರೂಪಕರ ಮುಂದೆ ಇಡುತ್ತಾರೆ.ಅಂತಹ ಏನೇನೇನೇನೇನೇನೇನೇನೇನೋ ವನ್ನು ತಿಂದು ಅರಗಿಸಿಕೊಳ್ಳಲಾಗದೆ ಪಾಪದ ನಿರೂಪಕರು ಜಾಗ ಖಾಲಿ ಮಾಡಿ ನೇರವಾಗಿ ಕಾಸ್ಮೆಟಿಕ್ ಸರ್ಜನ್ ಮುಂದೆ ಬಂದು ಕುಳಿತು ಸರ/ಮೇಡಮ್ಮು ಈ ವೇಯಿಟ್ ಕಡಿಮೆ ಆಗೋ ಹಂಗ ಮಾಡ್ರಲ ಎನ್ನುವ ಬೇಡಿಕೆ ಮುಂದಿಟ್ಟು, ಆ ಬಳಿಕ ನಟನೆ ಕಡೆಗೆ ಜಂಪ್ ಮಾಡಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೇ ಈ ಲಿಸ್ಟ್ ಗೆ ಬರದವರು  ಜೀ ಕನ್ನಡವಾಹಿನಿಯ ಮುರಳಿಯವರು. ಒಗ್ಗರಣೆ ಡಬ್ಬಿಯ ಮುರಳಿ ಅವರ ಧೈರ್ಯ -ಆ ಗಟ್ಟಿತನ ಕಂಡಾಗ ಅನ್ನಿಸುವ -ಹೊರಡುವ ಉದ್ಘಾರ ಹೀಗೂ ಉಂಟೈ! 
ಅದರಲ್ಲೂ ಇತ್ತೀಚೆಗೆ ಆರೋಗ್ಯ ರಕ್ಷಕರಿಬ್ಬರು ವಾರದಲ್ಲಿ ಬಂದು ಮುರಳಿ ಅವರಿಗೆ ಸೊಪ್ಪು ಸದೆ ಹಾಕಿ ಮಾಡಿಕೊಡುವ ಕಹಿ,ವಗರು ಕಷಾಯ  ಕುಡಿಯುತ್ತಾ, ಅವರ ಯಾವುದೇ ರಸೌಷಧಗಳಿಗೆ ಹೆದರದೆ ನಗುತ್ತಾ ಕಾರ್ಯಕ್ರಮ ನಡೆಸಿಕೊಡುವ ಮುರಳಿ ಅವರನ್ನು ಕಂಡಾಗ ವೀಕ್ಷಕರಿಗೆ ಪ್ರತಿಬಾರಿ ಅನ್ನಿಸುವು ಹೀಗೂ ಉಂಟೈ !!

ದ್ವಾಸೆ

Image result for pink flower



David Rocco's Dolce India ಇದನ್ನು ನೀವು ಹೇಗೆ ಬೇಕಾದರು ಉಚ್ಚಾರ ಮಾಡಿ. ಆದರೇ ಸೆಲೆಬ್ರಿಟಿ ಶೆಫ್ ಡೇವಿಡ್ ಅವರು ನಮ್ಮ ಭಾರತ ಅದರಲ್ಲೂ ದಕ್ಷಿಣ ಭಾರತಕ್ಕೆ ಭೇಟಿ ನೀಡಿ ಇಲ್ಲಿನ ಅಡುಗೆ ಸವಿದು ಜೊತೆಗೆ ಇಟಾಲಿಯನ್ ವೆಜ್  ಫುಡ್ ಮಾಡಿ ತೋರಿಸಿದ ಕಾರ್ಯಕ್ರಮ ಫಾಕ್ಸ್ ಲೈಫ್ ಚಾನೆಲ್ ನಲ್ಲಿ ಪ್ರಸಾರವಾಯ್ತು. ದಕ್ಷಿಣ ಭಾರತ ಅದರಲ್ಲೂ ಚೆನ್ನೈ ನಗರಕ್ಕೆ ಹೋಗಿ ಅಲ್ಲಿ ಪೇಪರ್ ದ್ವಾಸೆ, ಖಾರವಾದ ಚಟ್ನಿ, ಪಲ್ಯ, ಸಾಂಬರ್  ಜಮಾಯಿಸಿದ ಡೇವಿಡ್ಡೂ ಆ ಬಳಿಕ ' ದೋಸೆ ತಂಬಿ' ಕೈಲಿದ್ದ ಪೊರಕೆ ತೆಗೆದುಕೊಂಡು ಕಾದ ಹೆಂಚಿಗೆ ಎಣ್ಣೆ ಸವರಿ ದೋಸೆ ಹುಯ್ದು ಭೇಷ್ ಎಂದು ಅನ್ನಿಸಿ ಕೊಂಡರು.
ಮತ್ತೊಂದು ಅಡುಗೆ ಅಂಗಡಿಗೆ ಹೋಗಿ ಹಸಿ ಈರುಳ್ಳಿ ಕತ್ತರಿಸಿದ ಡೇವಿಡ್ಡೂ ಹೇಳಿದ್ದು ಯಪ್ಪಾ ಈ ಇಂಡಿಯ ಈರುಳ್ಳಿ ಶಾನೆ ಸ್ಟ್ರಾಂಗ್ ಉ ಉ 
ಡೇವಿಡ್ಡೂ ಚೆನ್ನೈ ದೋಸೆ ಮಾತ್ರವಲ್ಲ  ದಕ್ಷಿಣ ಭಾರತದ ಯಾವುದೇ ದ್ವಾಸೆ ಅಂಗಡಿಗೆ ಹೋದರೂ ಸಹ ಅಲ್ಲಿ ರುಚಿಕರ ,ವಿಭಿನ್ನ, ವಿಶೇಷ ದೋಸೆಗಳು ಸಿಗ್ತಾವೆ ಬಂಜು ರುಚಿ ನೋಡಿ ಮಾರ್ರೆ ಅಂತ ತೆಳ್ಳೇವು ಪ್ರಿಯ ಭಟ್ಟರು, ಹೆಗಡೆ ಹೇಳುತ್ತಿದ್ದಾರೆ..!!

ಚಿತ್ರ ವಿಚಿತ್ರ


Image result for pink and blue flowers
ನಾನು ಹೆಚ್ಚು ವೀಕ್ಷಿಸುವ ಚಾನೆಲ್ ಗಳಲ್ಲಿ ನೆಟ್ ಜಿಯೊ ಪೀಪಲ್ ಸಹ ಒಂದಾಗಿದೆ. ತುಂಬಾ ಆಸಕ್ತಿ ಉಂಟು ಮಾಡುವ ವಿಷಯಗಳು ಅದರಲ್ಲಿ ಪ್ರಸಾರವಾಗುತ್ತಿರುತ್ತದೆ.
ಜನ, ಜೀವನ ಶೈಲಿ, ಆಹಾರ-ವಿಹಾರ, ಆಸಕ್ತಿ, ಸಾಹಸ .. ಪ್ರತಿಯೊಂದೂ ಇದರಲ್ಲಿರುತ್ತದೆ. ತುಂಬಾ ಆಸಕ್ತಿಯಿಂದ ನೋಡುವಂತಹ ಅನೇಕಾನೇಕ ವಿಸ್ಮಯಭರಿತ ಸಂಗತಿಗಳು ಇದರ ಜೀವಾಳ..ಅದರಲ್ಲಿ ಚಾರ್ಲಿ ಲುಕ್ಸಟನ್ಸ್  ಹೋಂ ಬೈ ದ ಸೀ (Charlie Luxton's Homes by the Sea) ಕಾರ್ಯಕ್ರಮ ಸಖತ್. ಅದರಲ್ಲಿ ಚಿತ್ರವಿಚಿತ್ರವಾದ ಆಕಾರಗಳಲ್ಲಿ ನಿರ್ಮಿಸಿರುವಂತಹ ಕಟ್ಟಡಗಳನ್ನು ನೋಡುವುದೇ ಖುಷಿ ಕೊಡುವ ಸಂಗತಿ. ಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ನೀಡಿದರೇ ವೀಕ್ಷಕರಿಗೆ ಇಷ್ಟ ಆಗೇ ಆಗುತ್ತದೆ.