ಮೈ ಚಾಯ್ಸ್ ಮೈ ಚಾಯ್ಸ್ ಅಂತ ಹೆಣ್ಣುಮಕ್ಕಳು ವೀಡಿಯೋದಲ್ಲಿ ಮಾತಾಡಿದ್ದಕ್ಕೆ ಸಿಕ್ಕಾಪಟ್ಟೆ ಕೋಪಗೊಂಡರು . ಆದರೆ ಮೈ ಚಾಯ್ಸ್ ಅನ್ನುವ ಅನೇಕ ಸಂಗತಿಗಳು ಮಹಿಳಾ ಪ್ರಗತಿ ಪರರರಲ್ಲಿ ಮಾತ್ರವಲ್ಲ ಸಾಧಾರಣ ಮತ್ತು ಸಾಮಾನ್ಯ ಮಹಿಳೆಯರಲ್ಲೂ ಅಡಗಿರುತ್ತದೆ. ಆದರೆ ಅದನ್ನು ವ್ಯಕ್ತ ಪಡಿಸಲು ಹೋಗುವುದಿಲ್ಲ ಅಷ್ಟೇ.ಯಾರೇ ಆಗಲಿ ನಾವು ಮೊದಲು ನಮ್ಮ ಬಗ್ಗೆ ಅರಿತಾಗ ಮಾತ್ರ ಬೇರೆ ವಿಷಯದಲ್ಲಿ ಗೆಲ್ಲೋದು.
ಪಾಪ ದೀಪಿಕ ಪಡುಕೋಣೆ ಹೇಳಿದ ಮಾತುಗಳಿಗೆ ಆ ಪರಿ ಸಿಟ್ಟಾಗಿ , ಏನೇ ನೇ ನೇ ನೇ ನೇ ನೇ ನು ಬೈಗಳನ್ನು ಬೈದರು. ಅವರವರ ಅಭಿಪ್ರಾಯ ಅವರವರದ್ದು. ಅದನ್ನು ವ್ಯಕ್ತ ಪಡಿಸುವ ಹಕ್ಕು ಎಲ್ಲರಿಗೂ ಇರುತ್ತದೆ..
ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಹೇಳುವ ಮಾತುಗಳು ನೀವು ಕೇಳಬೇಕು, ಐ ಮೀನ್ ಓದಬೇಕು. ಮಖ ಮಖಕ್ಕೆ ನೀರು ಇಳಿಸಿರ್ತಾಳೆ. ಆಕೆ ಹೇಳೋದು ಅಲ್ಲರೀ ಕದ್ದು ಮುಚ್ಚಿ ಅಂತ ಸಿನಿಮಾ ನೋಡ್ತಿರಿ.. ಸ್ವಲ್ಪ ಹಾಸ್ಯ, ಸ್ವಲ್ಪ ಪ್ರೇಮ ಜೊತೆಗೆ ಅದೂ ಇದ್ದಾಗ ಕುಟುಂಬದ ಜೊತೆ ನೋಡೋಕೆ ಏನ್ರಿ ಸಿಗ್ಗು ಅಂತಾಳೆ ಆ ಮಹಾ ತಾಯಿ!ಸಾಮಾನ್ಯವಾಗಿ ಆ ಭಾರತ ಮೂಲದ ನಟಿ ಮಾತಿನ ಮುಂದೆ ಮೈ ಚಾಯ್ಸ್ ಏನೇ ನೇ ನೇ ನೇ ನೇ ನೇ ನು ಇಲ್ಲ. ;)
ನನಗೆ ಗೊತ್ತಿರುವ ಹಾಗೆ ಭಾರತ ಎಂತಹ ಸಂಸ್ಕೃತಿ ಹಾಗೂ ಆಚರಣೆ ಹೊಂದಿದೆ ಅಂದ್ರೆ ಪ್ರಗತಿಪರ ಮಾತುಗಳನ್ನು ಆಡುತ್ತಿರುವ ಬಹುತೇಕ ಗೆಳೆಯರು ಅಪ್ಪ ನೋಡಿದ ತನ್ನ ಜಾತಿಯ ಹುಡುಗಿಯನ್ನು ಮದುವೆ ಆಗಿ ಅಪ್ಪ ಅಮ್ಮನಿಗೆ ಬೇಜಾರು ಮಾಡಿಲ್ಲ.. ಅಂತಹ ವಿದ್ಯಾವಂತ ಪ್ರಗತಿಪರರ ಮುಂದೆ ಈ ಮೈ ಚಾಯ್ಸ್ ಏನೇ ನೇ ನೇ ನೇ ನೇ ನೇ ನು .. ಬಿಡಿ ಜಾಸ್ತಿ ಹೇಳೋಕೆ !
ತನ್ನ ದೇಹವನ್ನು ಅದರಲ್ಲೂ ಮುಂಭಾಗ , ಅದರಲ್ಲೂ ಮೇಲ್ಭಾಗವನ್ನೇ ಹೆಚ್ಚು ಹೈ ಲೈಟ್ ಮಾಡಿದ್ದಾರೆ ಪತ್ರಿಕೆಯವರು ಎಂದು ದೀಪಿಕಾ ಒಮ್ಮೆ ಕೂಗಾಡಿದ್ದಳು. ಆದರೆ ಆಕೆಯ ಪಟಗಳನ್ನು ಮೊದಲಿನಿಂದ ನೋಡುತ್ತಿದ್ದವರಿಗೆ ಆಕೆ ಮಾತು ಆಶ್ಚರ್ಯ ಆಗಿತ್ತು.ಅರಬೆತ್ತಲೆಯ ಆ ಪಟಗಳ ಮುಂದೆ ಈ ಮೈ ಚಾಯ್ಸ್ ಏನೇ ನೇ ನೇ ನೇ ನೇ ನೇ ನು ಇಲ್ಲ ಬಿಡಿ.
ಮೊನ್ನೆ ಟೀವಿ ನೈನ್ ನಲ್ಲಿ ಹರಿ ಪ್ರಸಾದ್ ಬಹಳ ಸೀರಿಯಸ್ ಆಗಿ ಮಾತಾಡ್ತಾ ಮೈ ಚಾಯ್ಸ್ ಬಗ್ಗೆ ಇದ್ರೂ.. ಅನೇಕ ಸಂಗತಿಗಳ ಮುಂದೆ ಇದು ಏನೇ ನೇ ನೇ ನೇ ನೇ ನೇ ನು ಅಲ್ಲ ಬಿಡಿ ಹರಿಪ್ರಸಾದ್ :-)
ಆದರೂ ಮಾಧ್ಯಮಗಳಲ್ಲಿ ಮಾತ್ರ ಎಲ್ಲವು ಹೈ ಲೈಟ್ ಆಗುತ್ತೆ ಏನೇ ನೇ ನೇ ನೇ ನೇ ನೇ ನು ಅಲ್ಲದೆ ಇದ್ರೂ :-)