ಕಳೆದ ವಾರ ಸಂಪೂರ್ಣವಾಗಿ ಬಸವನಗುಡಿಯ ಕಾರಂಜಿ ಆಂಜನೇಯ ಸ್ವಾಮಿ ದೇಗುಲದಲ್ಲಿ ರಾಮನ ದೇವಸ್ಥಾನದಲ್ಲಿ ಸೆಟಲ್ ಆಗಿ ಬಿಟ್ಟಿದ್ದೆ. ಸಕತ್ ಖುಷಿ ಕೊಟ್ಟ ಸಂಗತಿ ನನಗೆ. ಸಾಮಾನ್ಯವಾಗಿ ನಾನು ಕಂಡಂಗೆ ರಾಮನವಮಿ ವಿಷಸ್ ಹೇಳೋಕೆ ಹೆದರ್ತಾರೆ ಮಂದಿ ! ಬೇರೆಯವರು ತಪ್ಪು ತಿಳಿದರೆ ಅಂತ ... ಬಿಡಿ ಆ ಸಂಗತಿ. ಪ್ರತಿವರ್ಷ ಅಲ್ಲಿರುವ ರಾಮ ಸೇವಾ ಸಮಿತಿ ವತಿಯಿಂದ ನಡೆಯುವ ಕಾರ್ಯಕ್ರಮಗಳು ವಾವ್! ಪ್ರತಿಯೊಂದು ಕಡೆ ರಾಮನವಮಿಯಿಂದ ಕಾರ್ಯಕ್ರಮಗಳು ಆರಂಭವಾದರೆ, ಇಲ್ಲಿ ಮಾತ್ರ ಯುಗಾದಿಯಿಂದ ಆರಂಭವಾಗಿ ರಾಮನವಮಿ ಆಗಿ ಎರಡು ದಿನಗಳ ನಂತರ ಮುಕ್ತಾಯ ಆಗುತ್ತದೆ. ಎಷ್ಟು ಚಂದದ ಕಲಾವಿದರು, ವಿದ್ವಾಂಸರು ಬರ್ತಾರೆ ! ತಮಾಷೆ ಅಂದ್ರೆ ಇದು ಒಂದಷ್ಟು ಮಂದಿಗೆ ಹೊರೆತು ಪಡಿಸಿ ಮಾಧ್ಯಮ ಲೋಕಕ್ಕೆ ಗೊತ್ತಿಲ್ಲ .. !
ವಿವಾದಕ್ಕೆ ಕಾರಣಗಳೇ ಬೇಕಿಲ್ಲ. ಕಳೆದ ಕೆಲವು ದಿನಗಳಿಂದ ರಾಮ ವಿವಾದದ ಕೇಂದ್ರ ಬಿಂದು. ಸಮಸ್ಯೆ ಇರೋದೇ ಇಲ್ಲಿ. ಪ್ರತಿಯೊಂದು ಸಂಗತಿಯು ಅದರದ್ದೇ ಆದ ನಂಬಿಕೆ ಅಪನಂಬಿಕೆಯ ಮೇಲೆ ನಿಂತಿದೆ. ರಾಮ ದೇವರು ಹೌದೋ ಅಲ್ಲವೋ ಅದು ಅಪ್ರಸ್ತುತ. ಆದರೆ ನನಗೆ ಇಷ್ಟವಾದ ದೇವರು. ಕಾರಣ ಇಷ್ಟೇ ರಾಮನವಮಿ ಬೇಸಿಗೆ ಕಾಲದಲ್ಲಿ ಬರುತ್ತದೆ. ಗಿಡ ಮರಗಳು ಹಳೆಯದನ್ನು ನಿರ್ಲಿಪ್ತವಾಗಿ ಕೊಡವಿ ಮತ್ತೆ ಹಸಿರು ಹಸಿರಾಗಿ ಜೀವನ್ಮುಖಿ ಆಗುತ್ತದೆ. ನನಗೆ ಹಸಿರು ಇಷ್ಟ.. ಬೇಸಿಗೆಯ ಬೆವರು ಬೇಸರ ಆದರೆ ಬೇಸಿಗೆಯ ತಂಗಾಳಿ ಇಷ್ಟ, ನನಗೆ ಈ ಕಾಲದಲ್ಲಿ ವಿಶೇಷವಾಗಿ ಹೊರ ಹೊಮ್ಮುವ ಬೇವಿನ ಹೂಗಳ ಘಮ, ರಾತ್ರಿ ರಾಣಿಯ ಅಹಂ , ಪಾರಿಜಾತದ ಘಮಲು, ಮಲ್ಲಿಗೆಯ ಸೊಬಗು ಸಕತ್ ಲೈಕು!
ರಾಮ ಹೀಗೆ ನನ್ನೊಳಗೆ ಬೆರೆತಿರೋದು. ಇಲ್ಲಿ ನನಗೆ ಆತ ಮಾಂಸಾಹಾರಿ ಸಸ್ಯಾಹಾರಿ ಎನ್ನುವುದುದು ಅಪ್ರಸ್ತುತ.. ಆದರೆ ರಾಮನ ಹೆಸರಲ್ಲಿ ನಡೆಯುವ ಸಂಗೀತೋತ್ಸವ ಆಹಾ!
ರಾಮನ ಬಗ್ಗೆ ಎದ್ದ ವಿವಾದದ ಬಗ್ಗೆ ಮಿತ್ರ ರಾಘವೇಂದ್ರ ಕಾಂಚನ್ ಅವರು ಸುವರ್ಣ ನ್ಯೂಸ್ ನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟರು. ಅತಿ ಇಷ್ಟ ಆಗಿದ್ದು ಅವರು ಆ ಸಂಗತಿಯನ್ನು ಕರೆದೊಯ್ದ ಬಗೆ. ಎಲ್ಲಿಯೂ ಅವರ ಮಾತಲ್ಲಿ ಅಡ್ಡ ದಾರಿ ಹಿಡಿಸುವ ಹುಂಬತನ ಇರಲಿಲ್ಲ. ರಾಮನವಮಿಯ ಪಾನಕ, ಹೆಸರು ಬೆಳೆಯಷ್ಟೇ ಆಪ್ತವಾಗಿತ್ತು.
ನನಗೆ ನಗು ಬಂದಿದ್ದು, ಆ ಸಂಗತಿ ಹೇಗೆ ಇರಲಿ ಆ ಕಾರ್ಯಕ್ರಮದ ಅಂತ್ಯದಲ್ಲಿ ವಿವಾದ ಸೃಷ್ಟಿ ಮಾಡಿದ ವ್ಯಕ್ತಿಯ ವೈಯಕ್ತಿಕ ಬದುಕಿನ ಕಥೆ.... !
@@ ಕಳೆದ ಒಂದೆರಡು ವಾರದಿಂದ ಫೇಸ್ ಬುಕ್ ಪ್ರಪಂಚದಲ್ಲಿ ಅತಿ ಹೆಚ್ಚು ಚರ್ಚೆಗೆ ಬಂದವರು ಟೈಮ್ಸ್ ನೌವ್ ಆರ್ನಬ್ ಗೋಸ್ವಾಮಿ . ಆತನ ಮಾತು , ಶೈಲಿ ಅದು ಇದು.. ಒಂದರ್ಥದಲ್ಲಿ ಸೋಶಿಯಲ್ ನೆಟ್ ವರ್ಕ್ ಸ್ಟೇಟಸ್ ಗಳ ಟೀಆರ್ಪಿ ಆರ್ನಬ್ ಆಗಿದ್ದರು. ಯಾರೇ ಆರ್ನಬ್ ಹೆಸರು ಸಂಗತಿ ಬರೆದರೂ ಲೈಕು, ಕಮೆಂಟೂ :).ಆದರೆ ಫೇಸ್ ಬುಕ್ ಮಿತ್ರರಲ್ಲಿ ಒಬ್ಬರಾದ ಸಂತೋಷ್ ಎನ್ನುವವರು ಹಾಕಿದ್ದ ಈ ಸ್ಟೇಟಸ್ ಸಕತ್ ಇಷ್ಟ ಆಯ್ತು ನನಗೆ. ನಿಜ ಅಂದ್ರೆ ಲೈವ್ಲಿ ಆಗಿರುವ ಎಲ್ಲ ಅಂಶಗಳು ನನಗಿಷ್ಟ..ನೀವು ಓದಿ ಕೊಳ್ಳಿ..
Breaking news
ICC has disqualified Australia for ball tampering in yesterday's world cup semifinal match. Bowlers starc and Johnson have been named the culprits. Videos show clearly they tampered it in between the overs.
So this makes India automatically qualify to the finals against New Zealand. We still have a chance to win the cup.
Thanks to Arnab Goswami and times now channel for submitting the video to ICC.
Now we can cheer back saying we won't give it back.
.
.
.
April fool in advance.
April fool in advance.
@@ ಈ ಬಾರಿ ಮತ್ತೆ ಮತ್ತೆ ನನ್ನ ಗಮನ ಸೆಳೆಯುತ್ತಿರುವ ಕಾರ್ಯಕ್ರಮ ಸ್ಟಾರ್ ವಾಹಿನಿಯ ಮಾಸ್ಟರ್ ಶಫ್. ಸಂಜೀವ್, ರಣವೀರ್, ವಿಕಾಸ್ ಎಲ್ಲರೂ ಖಾಸ್ ಖಾಸ್..
ನಿನ್ನೆ ಗಿಡಮೂಲಿಕೆ ಬಳಸಿ ಆಹಾರ ತಯಾರಿಕೆಯ ಸ್ಪರ್ಧೆ. ಈ ಕಾರ್ಯಕ್ರಮದಲ್ಲಿ ಅತಿ ಖುಷಿ ಕೊಡುವ ಸಂಗತಿ ಶೆಫ್ ಗಳು ಎಷ್ಟು ಸ್ಟೈಲೀಶ್ ಅಂತ :-) ಯಾಕೇಂದ್ರೆ ನಮಗೆ ಟಿಪಿಕಲ್ ಶಫ್ ಗಳನ್ನೂ ನೋಡಿ ಅಭ್ಯಾಸ. ಆದರೆ ಅಲ್ಲಿ ಸೆಲೆಬಿ ಶಫ್ ಗಳು.
ನನಗೆ ಅಡುಗೆ ವಿಷಯದಲ್ಲಿ ಆಸಕ್ತಿ ಇದೆ..ಆದರೆ ಅದರ ಜೊತೆ ಹೆಚ್ಚು ಇಷ್ಟ ಅಂದ್ರೆ ಬ್ಯೂಟಿಗೆ ಸಂಬಂಧಪಟ್ಟ ಸಂಗತಿಗಳ ಬಗ್ಗೆ! ಅದರಲ್ಲೂ ಹರ್ಬಲ್ ಪ್ರಾಡಕ್ಟ್ ಗಳ ಬಗ್ಗೆ. ಅದನ್ನು ಬ್ಲೆಂಟ್ ಮಾಡಿದರೆ ಯಾವ ಫಲಿತಾಂಶ ಸಿಗುತ್ತೆ ಎಂದು ಯೋಚನೆ ಮಾಡ್ತಾ ಇರ್ತೀನಿ.. ನಿಜ ಹೇಳ ಬೇಕು ಅಂದ್ರೆ ತುಂಬಾ ಸೀರಿಯಸ್ ವಿಷಯದ ಬಗ್ಗೆ ಹೆಚ್ಚು ಯೋಚಿಸಲ್ಲ ನಾನು ಯಾಕೆ ಅಂದ್ರೆ ಅತಿಯಾದ ಯೋಚನೆ ನನ್ನ ಸ್ಕಿನ್ ಮೇಲೆ ಪ್ರಭಾವ ಬೀರುತ್ತೆ :-)
1 comment:
ರಾಮನವಮಿ ಉತ್ಸವದ ಬಗೆಗೆ ತಾವು ಫೇಸ್ ಬುಕ್ಕಿನಲ್ಲಿ ಹಾಕಿದ್ದ ಚಿತ್ರ ಮನಸೆಳೆದಿತ್ತು.
ಭಗವಾನ್ ಎಂಬ ಮನೋ ವಿಕಾರಿ ಸೃಷ್ಟಿಸಿದ ಹೊಸ ವಿವಾದದ ಚರ್ಚೆಯಲ್ಲಿ ಕಾಂಚನ್ ಸಂವಾದಿಯಾದರೆ, ಆ ದಿನ ನಾನೇ ಸ್ಟುಡಿಯೋ ಛಾಯಾಗ್ರಾಹಕ!
ಟೈಮ್ಸ್ ನೌವ್ ಆರ್ನಬ್ ಗೋಸ್ವಾಮಿ ಬಗೆಗೆ ತಮಾಷೆ ಮಾತುಗಳೂ ದೆಂಡಿ ಇವೆ, ಬಿಡಿ....
ತಮ್ಮ ಪಾಕಶಾಲೆ ಕುರಿತಂತಹ ತೀವ್ರ ಉತ್ಸಾಹ ನೋಡಿದರೆ, ನಿಮ್ಮ ಕೈ ಅಡುಗೆ ತಿನ್ನುವ ಆತುರ ನಮಗೂ ಇದೆ!
Post a Comment