ಕಷ್ಟ ಆಯ್ತದೆ


ನ್ಯಾಷನಲ್  ಜಿಯೋಗ್ರಫಿ ಚಾನೆಲ್ ನಲ್ಲಿ ಒಂದು ಕಾರ್ಯಕ್ರಮ ಪ್ರಸಾರ ಆಗುತ್ತಿತ್ತು. ಅದರಲ್ಲಿ ಪ್ರಾಣಿಗಳು ಹೇಗೆ ಬೇಟೆ ಆಡುತ್ತದೆ ಎನ್ನುವುದನ್ನು ತೋರಿಸುತ್ತಿದ್ದರು. ಕೆಲವು ಪ್ರಾಣಿಗಳು   ಯಾವರೀತಿ ಗುರಿ ಹೊಂದಿರ್ತಾ ಇತ್ತು ಅಂದ್ರೆ ಅದರ  ಪಕ್ಕದಲ್ಲೆ  ಮತ್ತೊಂದು, ಅಂದರೆ  ಉದಾಹರಣೆಗೆ .. ಮೊಲ ಮತ್ತು ಅದನ್ನು ತಿನ್ನುವ ಪ್ರಾಣಿ ಎಂದು ತೆಗೆದುಕೊಳ್ಳುವುದಾದರೆ  ಪಕ್ಕದಲ್ಲಿ ಇನ್ನೊಂದು ಮೊಲ ಇದ್ರೂ ಅದರ ಗಮನ ತಾನು ಬೇಟೆ ಆಡುವ ಮೊಲದ ಕಡೆಗೆ ಇರುತ್ತೆ, ಹಾಗೆ ವೀಕ್ಷಿಸುವಾಗ  ಬೇಟೆ ಆಡುವ ಪ್ರಾಣಿ  ಅದೆಷ್ಟು ದಡ್ಡ ಮೊದ್ದು   ಎಂದು ಅನ್ನಿಸುತ್ತದೆಯಾದರೂ ಸೂಕ್ಷ್ಮವಾಗಿ ಗಮನಿಸಿದರೆ ಅದು ಮನುಷ್ಯನಷ್ಟು ಆಸೆಪುರಕ ಅಲ್ಲ. ತನಗೆ ಬೇಕಾಗಿರುವಷ್ಟು ಮಾತ್ರ ಶೇಖರಿಸಿಕೊಳ್ಳುತ್ತದೆ. ಆದರೂ ಕಾಡಿನ ಪ್ರಾಣಿಗಳ ಜೀವನ ಶೈಲಿ ಸೆರೆ ಹಿಡಿದ ಮಂದಿ ಬಗ್ಗೆ ನಮೋನ್ನಮಃ ! ಆ ಛಾಯಾಗ್ರಾಹಕರು , ಆ ತಂಡ ಆಹಾ !! 
ನಮ್ಮ ಮನೆಯ ಹತ್ರ ರಾಶಿ ರಾಶಿ ಪಾರಿವಾಳಗಳಿವೆ. ನನ್ನ ಸಿಸ್ಟಂ ಇರುವ ರೂಂನಲ್ಲಿರುವ ಕಿಟಕಿ ಬಳಿ ಅಳಿಲು, ಪಾರಿವಾಳ, ಕಾಗೆ ಮತ್ತು ಇನ್ನು ಬೇರೆ ಬೇರೆ ಪಕ್ಷಿಗಳು ಬರುತ್ತವೆ. ಅಲ್ಲಿ ನಾವು  ಇತ್ತ ಆಹಾರ ಸೇವಿಸಿ ತಮ್ಮ ಪಾಡಿಗೆ ತಾವು ಹೊರತು ಹೋಗುತ್ತದೆ. ಪಾರಿವಾಳ, ಗುಬ್ಬಿ, ಕಾಗೆ , ಅಳಿಲು ಮನುಷ್ಯರ ಜೊತೆ ಬಾಳುವಂತಹದ್ದು ಸೊ ನಾವು ಅದಕ್ಕೆ ಆಹಾರದ ಅಭ್ಯಾಸ ಕೊಟ್ಟು ಸೋಮಾರಿತನ ಬೆಳೆಸ ಬಹುದು. 

ಇಂದು ಸಹ ರವಿ ಅವರದ್ದೇ  ಗುಣಗಾನ. ಅಂತಹ ಮಗನನ್ನು ಕಳೆದು ಕೊಂದ ತಂದೆ ತಾಯಿ- ಅಣ್ಣತಮ್ಮ  ಹೆಂಡತಿ ಮಕ್ಕಳಿಗೆ ಮಾತ್ರವಲ್ಲ ತಾಯ್ನೆಲಕ್ಕೂ ತುಂಬಲಾಗದ ನಷ್ಟ. ಅದ್ಯಾಕೋ ಈ ಸಾವು ಅತ್ಯಂತ ಬೇಸರ- ನೋವು ಮತ್ತು ಅಕ್ರೋಶ ಉಂಟು ಮಾಡಿದೆ ನನಗೆ. ನಿರ್ಭಯ ಸಾವು, ಆಕೆಗೆ ಆದ ಅನ್ಯಾಯ, ಆಕೆಯ ತಾಯಿತಂದೆ  ಅಸಹಾಯಕತೆ ಅಲ್ಲದೆ ಇತ್ತೀಚಿಗೆ ಸತ್ತ ಪ್ರಭ   ಇದೆ ರೀತಿಯ ಖೇದ ನನಗೆ ಆಗಿತ್ತು. 
ಈಗ ರವಿ ಅವರು. ಅವರ ಸಾವಿನ ಬಗ್ಗೆ ಚರ್ಚೆಗೆ ಕರಿಸಿ ಮಾತಾಡುವ ಕೆಲಸ ಮಂದಿ ಮಾಡ್ತಾ ಇದ್ದಾರೆ. ಆದರೆ ಪಬ್ಲಿಕ್ ಟೀವಿಯಲ್ಲಿ ನಿರೂಪಕ ಮಹಾಂತೇಶ್ ಅವರು ಕೋಲಾರದ  ನಗರ ಸಭೆ ಅಧ್ಯಕ್ಷರಾದ ಮುಬಾರಕ್    ಜೊತೆ ನಡೆಸಿದ  ಮಾತುಕತೆ  ಒಂದು ಬಗೆಯಲ್ಲಿ ಇಂಪ್ರೆಸ್ಸಿವ್ ಆಗಿತ್ತು. ಮುಬಾರಕ್ ಮಾತುಗಳಲ್ಲಿ  ಎಲ್ಲಿಯೂ ಅತಿರೇಕದ ಅಂಶಗಳು ಇರಲಿಲ್ಲ. ಅದೇರೀತಿ ನಿರೂಪಕ ಮಹಾಂತೇಶ್ ಅವರು ಸಹ! ಬಹಳ ದಿನದಿಂದ  ಮಹಾಂತೇಶ್ ಅವರನ್ನು ಗಮನಿಸಿದ್ದೇನೆ. ಸಂವೇದನಾತ್ಮಕ  ನಿರೂಪಕ. ಆ ಜಾಗದಲ್ಲಿ ಬೇರೆಯವರನ್ನು ಕುಳ್ಳರಿಸಿರಲಿಲ್ಲ  ಪಬ್ಲಿಕ್ ಟೀವಿಯವರು. ಏಕೆಂದರೆ ಯಾಕೆ ಯಾಕೆ ಸತ್ರು, ಯಾಕೆ ಹೀಗೆ ಮಾಡಿದ್ರು ಅಂತ ರೇಗೋ ಮಂದಿ ಪಬ್ಲಿಕ್ ಟೀವಿಯಲ್ಲಿ ಇದ್ದಾರೆ. ರಂಗಣ್ಣ .. ರಂಗಣ್ಣ.....!    ಅಂತವರ ಮಾತು ಕೇಳೋಕೆ ಕಷ್ಟ ಆಯ್ತದೆ ಸಾರ್ !!    

1 comment:

Badarinath Palavalli said...

ಪ್ರಾಣಿಗಳು ಮನುಜನಂತಲ್ಲ
ಹಸಿವಿಗಷ್ಟೇ ಹೊಟ್ಟೆ ಹೊರೆದಾವು
ತಲೆ ಒಡೆಯವು ತಿಕ್ಕಲಿಗೆ!

ರವಿಯವರ ಸಾವು ರಾಜಕಾರಣಿಗಳ ದಾಳವಾದದ್ದೇ ದುರಂತ!