ವಿಶೇಷ ಶೈಲಿ



ವಾಹಿನಿಗಳೆಲ್ಲವೂ  ಶೋಕ ಆಚರಿಸಿತು.. ಸದನದಲ್ಲಿಯೂ ಒಂದೇ ಸಂಗತಿ ರವಿ ರವಿ.. ಆದರೆ ನಿಜವಾಗಿ ನ್ಯಾಯ ದೊರಕುತ್ತದೆಯೇ ? ಈ ಪ್ರಶ್ನೆ ಸದಾ ನನ್ನಂತಹ ಸಾಮಾನ್ಯರನ್ನು ಕಾಡುತ್ತಲೇ ಇರುತ್ತದೆ.ಯಾಕೋ ಮನದಲ್ಲಿ ಸೂತಕದ ಕಳೆ !!
ನನ್ನ ಕಿರಿಯ ಮಿತ್ರ ಒಂದು ಮಾತು ಹೇಳ್ತಾ ಇದ್ದ ಮತ್ತು ಹೇಳುತ್ತಲೇ ಇರುತ್ತಾನೆ. ನೋಡ್ರಿ ಯಾರಿಗೆ ನ್ಯಾಯಾಂಗದಲ್ಲಿ ನಂಬಿಕೆ ಇರುತ್ತೋ ಅವರು ಹೆಚ್ಚಾಗಿ ಬ್ಲಾಕ್ ಮನಿ ಹೊಂದಿರುವವರು, ಯಾರು ಸಾಮಾನ್ಯರೋ ಅವರಿಗೆ ಅಂತಹ ಯಾವ ನಂಬಿಕೆ ಇರಲ್ಲ. ಅವನು ಹೇಳಿದ್ದನ್ನು ನಾನು ಪರೀಕ್ಷಿಸಿದ್ದೇನೆ, ಸಾಕ್ಷಿ ಸಮೇತ ಸಿಕ್ಕಿ ಹಾಕಿಕೊಂಡು ಆ ಕೆಲಸ ಮಾಡಿದ್ದು ಆ ಸಂಬಂಧಿತ ವ್ಯಕ್ತಿ ಆಗಿದ್ದರು ಸಹಿತ ಆತ ಮಾಧ್ಯಮಗಳ ಮುಂದೆ ನನಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ ಎಂದು ಹೇಳುತ್ತಿರುತ್ತಾರೆ! 
ಇಂತಹ ನಂಬಿಕಸ್ತರು ಬಹಳಷ್ಟು ಜನರು ಈಗೀಗ ಮಾಧ್ಯಮಗಳ ಮುಂದೆ  ತಮ್ಮ ಪರಿಚಯ ಭಿನ್ನ   ರೀತಿಯಲ್ಲಿ ಮಾಡಿಕೊಳ್ಳುತ್ತಿರುತ್ತಾರೆ. ಅದೇರೀತಿ ಮಾಧ್ಯಮದವರು ಇದಕ್ಕೆ ಹೊರತಲ್ಲ ಬಿಡಿ ! ಪಕ್ಕಕ್ಕೆ ಇಡಿ ಆ ಸಂಗತಿ . ವೈಯಕ್ತಿಕವಾಗಿ ನನಗೆ ಸಿಕ್ಕಾಪಟ್ಟೆ ಭ್ರಮನಿರಸನ ಆಗಿದೆ. ಆದರೂ ಬದುಕನ್ನು ಬಂದಂಗೆ ಸ್ವೀಕರಿಸ ಬೇಕು.. ಅದು ಕಲಿಸಿಕೊಟ್ಟಿದೆ !!

@@
ಐ ಎ ಎಸ್ ಅಧಿಕಾರಿ  ರವಿ ಅವರ ಸಾವಿನ ಬಗ್ಗೆ ಕಾರ್ಯಕ್ರಮ ನಡೆಸುತ್ತಾ  ಸುವರ್ಣ  ನ್ಯೂಸ್ ನಿರೂಪಕ ರಾಘವೇಂದ್ರ ಕಾಂಚನ್ ನಡೆಸಿಕೊಟ್ಟ ವಿಶೇಷ ಕಾರ್ಯಕ್ರಮ ಇಂದು ಮುಂಜಾನೆ ಹತ್ತುಗಂಟೆ ಸುಮಾರಿಗೆ ಪ್ರಸಾರ ಆಯ್ತು. ಯಾವರೀತಿ ಹಿರಿಯ ಸರ್ಕಾರಿ ಅಧಿಕಾರಿಗಳು ಹತ್ಯೆಗೆ ಒಳಗಾಗಿದ್ದಾರೆ ಮತ್ತು ಹೇಗೆ  ಹಿರಿಯ ಅಧಿಕಾರಿಗಳು ಹಲ್ಲೆಗೆ  ಒಳಗಾಗಿದ್ದಾರೆ ಎನ್ನುವ  ಸಂಗತಿ ತೋರಿಸಿದರು. ನನಗೆ   ಗೊತ್ತಿಲ್ಲ ಇದೇ ವಿಷಯ ಬೇರೆ ವಾಹಿನಿಯವರು ಪ್ರಸಾರ ಮಾಡಿದರೇನೋ ಆದರೆ ನಾನು ವೀಕ್ಷಿಸಿದ್ದು ರಾಘವೇಂದ್ರ ಅವರ ಕಾರ್ಯಕ್ರಮ. ಜನಶ್ರೀಯಿಂದ ಸುವರ್ಣ ನ್ಯೂಸ್ ಗೆ ಬಂದಿರುವ ಈ ಪ್ರತಿಭಾವಂತ  ಕನ್ನಡದ ಉತ್ತಮ ನಿರೂಪಕರಲ್ಲಿ ಒಬ್ಬರು. ಸಾವಿನಂತಹ ಸೂಕ್ಷ್ಮ ಸಂಗತಿಗಳನ್ನು ಮಾತಾಡುವ ರೀತಿ,ಇದೆಯಲ್ಲ ಅದಕ್ಕೆ ವಿಶೇಷ ಶೈಲಿ ಬೇಕು. ಅದು ರಘು ಅವರಿಗಿದೆ.   

@ಈ ಟೀವಿ ತೆಲುಗು ವಾಹಿನಿಯಲ್ಲಿ ಪ್ರತಿದಿನ 9 . 30ಗೆ ಪ್ರತಿದಿನ ಒಂದೊಂದು   ರಿಯಾಲಿಟಿ ಷೋ ಪ್ರಸಾರ ಮಾಡುತ್ತಿರುತ್ತದೆ. ಆದರೆ ಎಸ್ ಪಿ ಬಾಲ ಸುಬ್ರಮಣ್ಯಮ್ ಅವರ  ನೇತೃತ್ವದ ಪಾಡುತಾ ತೀಯಗ ಸಕತ್ತಾಗಿದೆ. ಅದೆಷ್ಟು ವರ್ಷಗಳಿಂದ ಬರ್ತಾ ಇದ್ರೂ, ಅವರ ಭಾಷೆಯಲ್ಲೇ ಹೇಳುವುದಾದರೆ ಆ ಗಾಯನಿಗಳ ಹಾಡುಗಳು ಆಹಾ! ಅದೇರೀತಿ  ಎಸ್ ಪಿ ಬಿ ಅವರ ಮಾಧುರ್ಯ ಎವರ್ ಗ್ರೀನ್. ಎದೆ ತುಂಬಿ ಹಾಡಿದೆನು  ಕಾರ್ಯಕ್ರಮದಂತೆ ಇದು ಇಷ್ಟ ಆಗುವ ಕಾರ್ಯಕ್ರಮ. ಕನ್ನಡದಲ್ಲಿ ಮತ್ತೆ ಎಸ್ಪಿಬಿ ಯಾವ  ಪ್ರಚ್ಚನ್ನ ಸಮಯದಲ್ಲಿ  ಬಂದು ಕಾರ್ಯಕ್ರಮ ನಡೆಸಿಕೊಡ್ತಾರೋ  ಎಂದು ನಾವು ಪ್ರಕ್ಷಾಳನ ಮನದಿಂದ ಕಾಯುತ್ತಿದ್ದೇವೆ. 

1 comment:

Badarinath Palavalli said...

ಒಂದು ಸಾವನ್ನು ಮೊದಲ ನೋಟದಲ್ಲೇ ಆತ್ಮಹತ್ಯೆ ಎಂದು ಘೋಷಿಸಿ ಬಿಡುವ ಆತುರ ಏಕೆ ಬೇಕಿತ್ತೋ ನನಗೆ ಅರಿವಾಗಲಿಲ್ಲ. ಮ.ಪ. ನಂತರ ವಿಷಯ ಹೇಗಿದ್ದರೂ ನಿಚ್ಛಳವಾಗುತ್ತಿತ್ತು!

ಆ ಕೋಲಾರದ ಹೆಣ್ಣು ಮಗಳು ಸಂಸ್ಕಾರಕಾಗಿ ತಂದ ತನ್ನ ನೆಲದ ಮಣ್ಣು, ರವಿಯವರ ಜನಪ್ರಿಯತೆಗೆ ನಿಜ ಮಾನದಂಡ.

ಸರಿಯಾದ ಅಧಿಕಾರಿಯ ಕೈಗೆ ಪ್ರಕರಣ ಹಸ್ತಾಂತರಗೊಂಡು, ಯಾವುದೇ ಹಸ್ತ ಕ್ಷೇಪವಿಲ್ಲದೆ. ತನಿಖೆ ನಿಜವನ್ನೇ ನುಡಿಯಲಿ.

ರಾಘಣ್ಣ ಸುವರ್ಣ ವಾಹಿನಿಯ ಸಂವೇದನಾಶೀಲ ವಾರ್ತಾ ವಾಚಕರು. ಅವರು ಸುದ್ದಿಯನ್ನು ವಿಶ್ಲೇಷಿಸುವ ಪರಿಯೇ ಆಮೂಲಾಗ್ರ.

ಈ ಟೀವು ತೆಲುಗಿನ ಇನ್ನೋಂದು ಉತ್ತಮ ಕಾರ್ಯಕ್ರಮ ಝುಮ್ಮಂದಿ ನಾದಂ.
ಈ ಟೀವಿ ಕನ್ನಡ ಈಗ ಬೇರೆ ಸಂಸ್ಥೆಯ ಒಡೆತನದಲ್ಲಿದ್ದರೂ ಬಲು ಬೇಗ ಮತ್ತೆ ಎದೆ ತುಂಬಿ ಹಾಡುವೆನು ಮತ್ತೆ ಆರಂಭಿಸಲಿ.