ಆ ಹಾಡು...




ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.. ಹೊಸ ವರ್ಷ ನಿಮ್ಮ ಕನಸುಗಳನ್ನು ನನಸು ಮಾಡಲಿ ಎನ್ನುವ ಶುಭ ಹಾರೈಕೆ ನನ್ನದು.
ಸಕತ್ತಾಗಿರುತ್ತೆ ಕಣ್ರೀ ಹಳೆಯ ಸಿನಿಮಾ ಹಾಡುಗಳು. ಅದು ಯಾವುದೇ ಭಾಷೆಯಾಗಿರಲಿ ಸಕತ್ ಮಜಾ ಸಿಗುತ್ತೆ.. 1965 ನೇ ಇಸವಿಯಲ್ಲಿ ಬಿಡುಗಡೆಯಾದ ಚಿತ್ರ ವಕ್ತ್ ಹಾಡು ಜೀ ಹಿಂದಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರವಾಹಿ ಏಕ್ತ ರಾಜ ಏಕ್ ಥಿ ರಾಣಿ ಧಾರಾವಾಹಿಯಲ್ಲಿ ಹಾಕಿದರು.. ಆಹಾ ಅನ್ನೋ ಹಾಗೆ ಆಯ್ತು
 ಆಗೇ ಭಿ  ಜಾನೆ  ನಾ  ತು , ಪೀಛೆ  ಭಿ  ಜಾನೆ  ನಾ  ತು ಜೋ  ಭಿ  ಹಾಯ್  ಬಸ್  ಯಹಿ  ಏಕ್  ಪಲ್  ಹೈ .. ಇದೇ ಆ ಹಾಡು.
ಅಂತಹ ಆಹಾ ಅನ್ನುವಂತೆ  ಜೀ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗಲು ಸಿದ್ದತೆ ನಡೆಸಿರುವ ಸ ರೆ ಗ ಮ ಪ .   ಪ್ರೀತಮ್ ಚಕ್ರಬೋರ್ತಿ , ಮಿಕ ಸಿಂಗ್ ,ಸಾಜಿದ್- ವಾಜಿದ್ ಅದವರ ಮಾರ್ಗದರ್ಶನದಲ್ಲಿ ಈ ಸ್ಪರ್ಧೆ ನಡೆಯುತ್ತದೆ. ಸಧ್ಯಕ್ಕೆ ಆಡಿಶನ್ ಪ್ರಸಾರ ಮಾಡುತ್ತಿದ್ದಾರೆ.  ಈ ಸ್ಪರ್ಧೆಗೆಂದು  ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಕನ್ನಡದ ಸೌಮ್ಯ ರಾವ್ ಸಹ ಅನೇಕ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ಪ್ರಾಯಶಃ ಅವರು ಮುಖ್ಯ ಸ್ಪರ್ಧೆಗಳಲ್ಲಿ ಕಾಣುವ ಸಾಧ್ಯತೆ ಕಡಿಮೆ ಎಂದು ಕಾಣುತ್ತದೆ. ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಸೌಮ್ಯ ಅವಕಾಶ ಪಡೆದದ್ದು ಕಂಡು ಖುಷಿ ಅನ್ನಿಸಿತು. ಕನ್ನಡ ಹಿರಿಯ ಮತ್ತು ಅಪರೂಪದ ಗಾಯಕಿ ಬಿ ಕೆ ಸುಮಿತ್ರ ಅವರ ಮಗಳು ಮುಂಬೈಯಲ್ಲಿ ಘಟಾನುಘಟಿಗಳ ಜೊತೆ ಸ್ಥಾನ ಪಡೆದಿರುವುದು ಅತ್ಯಂತ ಸಂತಸದ ಸಂಗತಿ.
ಮೇಲೆ ಹೇಳಿದ ಹಾಡಿನ ಬಗ್ಗೆ ಯಾಕಿಲ್ಲಿ ಹೇಳೋಕೆ ಹೊರಟೆ ಅಂದ್ರೆ.. ಆ ಚಿತ್ರದಲ್ಲಿ ಇದು ಬಾರ್ ಅಥವಾ ಕ್ಯಾಬರೆ ಹಾಡುಗಾರ್ತಿ.. ಪಾರ್ಟಿಯಲ್ಲಿ ಹಾಡುವ ಹಾಡು. ತುಂಬಾ ವಿಶೇಷವಾಗಿ ಪಾತ್ರಗಳನ್ನು ಸಿದ್ಧಗೊಳಿಸುತ್ತಿದ್ದ ಅಂದಿನ ನಿರ್ದೇಶಕರ ಬಗ್ಗೆ ಹೇಳೋಕೆ ಸಾಧ್ಯವಿಲ್ಲ. ಹೆಲೆನ್ ಕ್ಯಾಬರೆಟ್ ಎಂದಿಗೂ ಅಸಹ್ಯ ಅನ್ನಿಸಲ್ಲ.. ತುಂಬಾ ಇಷ್ಟ ಆಗುತ್ತೆ..
ಸರೆಗಮಪದಲ್ಲಿ  ಆಗೇ ಭಿ ಹಾಡು ಯಾವಾಗ ಯಾವ ಸ್ಪರ್ಧಿ ಹಾಡ್ತಾರೋ ಕುತೂಹಲದಿಂದ ಕಾಯ್ತಾ ಇದ್ದೇನೆ..

@ಸ್ಟಾರ್ ವಾಹಿನಿಯಲ್ಲಿ ನೋಡಲೇ ಬೇಕಾದ ಅತ್ಯುತ್ತಮ ಧಾರವಾಹಿ ತಮನ್ನಾ .. ಅದರ ಕಥೆ, ಪಾತ್ರಗಳು, ಆ ಪಾತ್ರಗಳಿಗೆ ಜೀವ ತುಂಬಿರುವ ಕಲಾವಿದರು ತುಂಬಾ ಚೆನ್ನಾಗಿದೆ ..
ಅನುಜ- ಧರ ಪಾತ್ರಧಾರಿ, ಕೇತಕಿ ಅಜ್ಜಿ ಪಾತ್ರಧಾರಿ, ವಿಶಾಲ್ ಗಾಂಧಿ ಗಂಡನ ಪಾತ್ರಧಾರಿ, ಕಿರಣ್  ಧರ ಅಮ್ಮನ ಪಾತ್ರಧಾರಿ, ಸುಧಾಂಶು, ಹರ್ಷ ಛಾಯ ಧರ ಕೋಚ್ ಪಾತ್ರಧಾರಿ ಆಂಚಲ್ - ಲಾವಣ್ಯ ಪಾತ್ರಧಾರಿ ಪ್ರತಿಯೊಬ್ಬರೂ ಇಷ್ಟ ಆಗ್ತಾರೆ.. ನನಗೆ ಅದರ ಕಥೆ, ನಿರೂಪಣೆ ಸಹ ಮನ ಸೆಳೆದಿದೆ..ನೋಡಬಹುದಾದ ಅದರಲ್ಲೂ ಹೆಣ್ಣು ಮಕ್ಕಳು ಇರುವ ತಾಯ್ತಂದೆ ನೋಡಲೇ ಬೇಕಾದ ಸುಂದರ ಧಾರವಾಹಿ.      

ಹಾಟ್ !

Image result for blue color flowers wallpaper
ನಿನ್ನೆ ಸಂಜೆ ಪಬ್ಲಿಕ್ ಟೀವಿ ಮತ್ತು ಈ ಟೀವಿ ನ್ಯೂಸ್ ನಲ್ಲಿ ಕಾರ್ಯಕ್ರಮ ವೀಕ್ಷಿಸಿದೆ. ಎರಡು ಒಂದೇ ಸಮಯದಲ್ಲಿ ಪ್ರಸಾರ ಆಗಿದ್ದು. ಅಂದ್ರೆ ಸಂಜೆ   ಐದೂವರೆ ಸಮಯ. ಎರಡು ವಾಹಿನಿಗಳು  ಸಹ ಪ್ರಾಣಿಗಳ ಬಗ್ಗೆ ಒಂದು ಕಾರ್ಯಕ್ರಮ ಪ್ರಸಾರ ಮಾಡಿತ್ತು. ತುಂಬಾ ಖುಷಿ ಕೊಟ್ಟ ಕಾರ್ಯಕ್ರಮಗಳು ಅದಾಗಿತ್ತು.
ಪ್ರಾಣಿಗಳ ಅದರಲ್ಲೂ ಕಾಡುಪ್ರಾಣಿಗಳು  ಎದುರಿಗೆ ಮನುಷ್ಯ ಸಿಕ್ರೆ ಅವನ ಗತಿ ಅಧೋಗತಿ ಅಂಬೋದು ಎಲ್ಲರಿಗೂ ಗೊತ್ತಿದೆ. ಆದರೆ ಈ ಟೀವಿಯವರು ಆರೀತಿ ಕಾಡು ಪ್ರಾಣಿಗಳ ಕೈಗೆ  ಸಿಕ್ಕ ಮನುಷ್ಯರು ಹೇಗೆ ಬಚಾವ್ ಆದರು ಎಂಬಂತಹ ಅಂಶದ ಅಡಿಯಲ್ಲಿ ಕಾರ್ಯಕ್ರಮ ಸಿದ್ಧಪಡಿಸಿದ್ದರು.ಕಾಮಿಡಿ ಮಿಕ್ಸ್ ಅಂತ ಪ್ರಾಯಶಃ ಅದರ ಹೆಸರು. ವಾಹನಗಳ ಎದುರಿಗೆ ಆನೆದಂಡು, ಹುಲಿ ಹೀಗೆ ಬೇರೆ ಪ್ರಾಣಿಗಳು ಬಂದಾಗ ಮನುಷ್ಯ ಪಟ್ಟ- ಪಡುವ ಪಡಿಪಾಟಲಿನ ಕಾರ್ಯಕ್ರಮ. ತುಂಬಾ ಆಸಕ್ತಿಯಿಂದ ಕೂಡಿತ್ತು.ಅದರ ಬಗ್ಗೆ ಹೇಳುವುದಕ್ಕಿಂತ ವೀಕ್ಷಿಸಬೇಕು ಆಗ ಅದರ ಮಜಾ ಗೊತ್ತಾಗೋದು.. ಸಂಜೆಯ ಸಮಯವನ್ನು ಆಹ್ಲಾದವಾಗಿ ಕಳೆಯುವತೆ ಮಾಡಿದ ಕಾರ್ಯಕ್ರಮ ಅದು.
Image result for blue color flowers wallpaper
@ಪಬ್ಲಿಕ್ ಟೀವಿ ರಂಗಣ್ಣನಿಗೂ ಸಕತ್ ಹಾಟ್ ಮಗ  ಟ್ಯಾಗ್ ಲೈನ್ಗೂ  ಅವಿನಾಭಾವ ಸಂಬಂಧ ಇದೆ ಅಂತ ಕಾಣುತ್ತೆ. ಅವರು ಸುವರ್ಣ ನ್ಯೂಸ್ ನಲ್ಲಿ ಇದ್ದಾಗ  ಪ್ರೈಮ್ ನ್ಯೂಸ್ ಗೂ ಅದೇ ಹೆಸರು ನೀಡಿದ್ದರು.. ನಿನ್ನೆ ಪ್ರಸಾರವಾದ ಚೌ ಚೌ ಬಾತ್  ಕಾರ್ಯಕ್ರಮದಲ್ಲಿ ಪ್ರಸಾರವಾದ ಕಾರ್ಯಕ್ರಮದ ಹೆಸರು ಸಕತ್ ಹಾಟ್ ಮಗ... :-)
ಆದರೆ ಅದು ಬೇಸಿಗೆ ಕಾಲದಲ್ಲಿ ಪ್ರಾಣಿಗಳಿಗೆ ಪ್ರಾಣಿಸಂಗ್ರಹಾಲಯದವರು ನೀಡಿದ ಸೇವೆ ಸವಲತ್ತುಗಳ ಬಗ್ಗೆ ಪ್ರಸಾರ  ಮಾಡ್ತಾ ಇತ್ತು. ಜಪಾನಿನ ಪ್ರಾಣಿ ಸಂಗ್ರಹಾಲಯವನ್ನು ಕನ್ನಡದ ವೀಕ್ಷಕರಿಗೆ ತೋರಿಸುತ್ತಾ.. ಅಲ್ಲಿ ಮಂಜಿನ ಜೊತೆ, ನೀರಿನಲ್ಲಿ ಆಡ್ತಾ ಇದ್ದ ಪ್ರಾಣಿಗಳ ಬಗ್ಗೆ, ಹಣ್ಣು, ಐಸ್ ಕ್ರೀಮ್ ತಿಂದು ಹಾಯಾಗಿದ್ದ ಪ್ರಾಣಿಗಳು ಹೀಗೆ ಹಲವಾರು  ಅಂಶಗಳ ಬಗ್ಗೆ ಪ್ರಸಾರ ಮಾಡ್ತಾ ಇದ್ರು.. ಸಕತ್ ಮಜಾ ಕೊಡ್ತು.. ಇಂತಹ ಕಾರ್ಯಕ್ರಮಗಳು ಮನಸೋಲ್ಲಾಸ  ಹೆಚ್ಚಿಸುತ್ತದೆ ಅಲ್ವೇ !
Image result for blue color flowers wallpaper

@ಟೀವಿ ನೈನ್ ನಲ್ಲಿ  ನಿರೂಪಕ ಹರಿಪ್ರಸಾದ್  ಕಾರ್ಯಕ್ರಮ ನಡೆಸಿಕೊಡ್ತಾ ಇದ್ರು. ಮತ್ತದೇ  ಪ್ರಶ್ನೆಪತ್ರಿಕೆಗಳ ಬಗ್ಗೆ.  ಟೀವಿ ನೈನ್ ಹೊಸಬರಿಗೆ ಅವಕಾಶ ನೀಡಿ ಅವರಲ್ಲಿರುವ ನೈಪುಣ್ಯ ಹೊರತರುವ ವಿಷಯದಲ್ಲಿ ಸದಾ ಮುಂದಿರುತ್ತದೆ. ಹರಿಪ್ರಸಾದ್ ಅವರ ಕಾರ್ಯಕ್ರಮ ಗಮನವಿಟ್ಟು ವೀಕ್ಷಿಸಲಿಲ್ಲ.. ಆದರೆ ಅವರ ವೃತ್ತಿಯಲ್ಲಿ ಆದ ಬೆಳವಣಿಗೆ, ಅವರಿಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡ ಬಗೆ ಎಲ್ಲವು ಕನ್ನಡಿಗರಿಗೆ ಗೊತ್ತಿದೆ.. ಬಿಸಿಲಲ್ಲಿ ವರದಿಗಾರಿಕೆ ತಣ್ಣಗೆ ಮಾಡ್ತಾ ಇದ್ದವರು ಈಗ ತಣ್ಣನೆಯ ರೂಮಲ್ಲಿ ಕುಳಿತು ಬಿಸಿಯಾಗಿ ನಿರೂಪಣೆ- ಚರ್ಚೆ ಮಾಡ್ತಾ ಇದ್ದಾರೆ  :-) ಸಿಕ್ಕಂತಹ ಅವಕಾಶಗಳನ್ನು ಬಳಸಿಕೊಳ್ಳುವುದು ಬಹಳ ಮುಖ್ಯ !

ತಲೆಬಿಸಿ



Image result for pink color
ಶನಿವಾರ ಹಾಗೂ ಭಾನುವಾರ ಎರಡು ಕಾರ್ಯಕ್ರಮಗಳು ಹೆಚ್ಚು ಇಷ್ಟದ ಸಾಲಿಗೆ ಸೇರಿತು. ಒಂದು ಕಲರ್ ವಾಹಿನಿಯಲ್ಲಿ ಪ್ರಸಾರ ಆಗುವ ಮಜಾ ಟಾಕೀಸ್. ಸೃಜನ್ ಹೆಸರೇ ಹೇಳುವಂತೆ ಸೃಜನಾತ್ಮಕ ಕಲಾವಿದ. ಅವರ ಜೊತೆ ದಯಾನಂದ್, ಕುರಿ ಪ್ರತಾಪ್, ಮಂಡ್ಯ ರಮೇಶ್, ಶ್ವೇತ ಚೆಂಗಪ್ಪ.. ಸಕತ್ ಮಜಾ ಕೊಡ್ತು. ಕೆಲವು ಹಾಸ್ಯ ಕಾರ್ಯಕ್ರಮಗಳು ನಿರಂತರವಾಗಿ ನಗೆ ಹೊನಲನ್ನು ಹರಿಸುತ್ತದೆ. ಆ ಸಾಲಿಗೆ ಮಜಾ ಟಾಕೀಸ್ ಸೇರ್ಪಡೆ ಆಯ್ತು. ಸಾಕಷ್ಟು ದಿನಗಳಿಂದ  ಕಾರ್ಯಕ್ರಮ ವೀಕ್ಷಿಸ ಬೇಕು ಎನ್ನುವ ಆಸೆ  ಇದ್ರೂ ಸಾಧ್ಯ ಆಗಿರಲಿಲ್ಲ. ಆದರೆ ಈ ವಾರ ತಪ್ಪದೆ ನೋಡಿದೆ. ಶನಿವಾರದ ಎಪಿಸೋಡ್ ನಲ್ಲಿ ಹಾಡನ್ನು ಅಭಿನಯಿಸಿ ಅದನ್ನು ಬೇರೆಯವರು ಹೇಳುವ ಒಂದು ಸ್ಪರ್ಧೆ ಸಕತ್ತಾಗಿತ್ತು. ನಕ್ಕೂ ನಕ್ಕೂ ಸಾಕಾಯ್ತು. ವೀಕ್ಷಕರು ತಲೆಬಿಸಿ ಮಾಡಿಕೊಳ್ಳುವ ಕಾರ್ಯಕ್ರಮಗಳಿಂದ ದೂರ ಇರಲು ಇಷ್ಟ ಪಡ್ತಾರೆ.  ಸೃಜ ಅವರ ಈ ಕಾರ್ಯಕ್ರಮ ತಲೆ ಸರಿ ಮಾಡಿ , ಮನಕ್ಕೆ ಮುದ, ಆಹ್ಲಾದತೆ, ಉಲ್ಲಾಸ ನೀಡುವಲ್ಲಿ ಸಫಲ ಆಗುತ್ತೆ.. ಒಂದು ಟೀಮ್   ಚೆನ್ನಾಗಿದ್ರೆ ಕಾರ್ಯಕ್ರಮ ಜನಕ್ಕೆ ಇಷ್ಟಾ ಆಗುತ್ತೆ ಅಲ್ವ್ರಾ !
Image result for pink color

@ ಜೀ ಕನ್ನಡ ವಾಹಿನಿಯಲ್ಲಿ ತುಂಬಾ ದಿನಗಳ ಬಳಿಕ ತ್ರಿಮೂರ್ತಿಗಳಾದ ರಾಜೇಶ್, ವಿಜಯ್ ಹಾಗೂ ಅರ್ಜುನ್ ಅವರ ತೀರ್ಪುಗಾರಿಕೆಯ , ಅನುಶ್ರೀ ಅವರ ಅದ್ಭುತ ನಿರೂಪಣೆಯ ಸ ರೆ ಗ ಮ ಪಾ ವೀಕ್ಷಿಸಿದೆ. ಗರನೆ ಗರ ಗರನೆ ತುಂಬಾ ಇಷ್ಟ ಆಯ್ತು .. ಬರೀ ಆ ಹಾಡಲ್ಲ ಎಲ್ಲಾ ಸ್ಪರ್ಧಿಗಳ ಹಾಡುಗಳು ಮೋದ ಕೊಡ್ತು. ಈ ವಾರದಲ್ಲಿ ಮತ್ತೆ ರೀ ಟೆಲಿಕಾಸ್ಟ್ ಆದಾಗ ನೋಡಬೇಕು. ಈ ಬಾರಿ ವಿಜಯ್, ಅರ್ಜುನ್, ರಾಜೇಶ್ ಅವರು ನೀಡಿದ ಸವಾಲುಗಳು , ಅದನ್ನು ಸ್ಪರ್ಧಿಗಳು ಎದುರಿಸಿದ ರೀತಿ ಪ್ರತಿಯೊಂದು ವಿಶೇಷವಾಗಿತ್ತು. ಜೊತೆಗೆ  ನಟ- ಹೀರೋ ಶರಣ್ ಅವರ ಹಾಡು .. ಆ ಕಂಠ ಅದಕ್ಕೆ ತೀರ್ಪುಗಾರರು ನೀಡಿದ ಅಂಕ ಸಕತ್ ಸೂ ...ಊ...ಊ ಪ..ರ್ 

ಕಳ್ರನ್ನ


Image result for red flowers
ಕೆಲವು ಕಾರ್ಯಕ್ರಮಗಳನ್ನು ಕಾಡು ನೋಡುತ್ತೇವೆ. ಅದರಲ್ಲೂ ರಿಯಾಲಿಟಿ ಶೋಗಳು ಇಷ್ಟವಾದರೆ ಅದನ್ನು ನೋಡುವುದಕ್ಕಾಗಿ ಕಾಯ್ತಾ ಇರ್ತೇವೆ. ಅಂತಹ ಕಾಯುವಿಕೆಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ . ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಅತಂತ ಸುಂದರ ಕಾರ್ಯಕ್ರಮ ಇದಾಗಿದೆ.
ಕಳೆದ ಮೂರು ಎಪಿಸೋಡ್ ಗಳಲ್ಲಿ ಸಾಧಕ ಹೆಣ್ಣುಮಕ್ಕಳ ಜೊತೆ ಮಾತನಾಡುತ್ತಾ ಅವರ ಬಾಳಪುಟಗಳನ್ನು ತೆರೆದು ಅವರ ಅಭಿಮಾನಿಗಳ ಮುಂದಿಡುವ ಪ್ರಯತ್ನ ಮಾಡಿದ್ದಾರೆ ರಮೇಶ್ ಹಾಗೂ ತಂಡ.
ಲೀಲಾವತಿ ಅವರಾಗಿರಬಹುದು, ಸುಧಾರಾಣಿ, ಬಿ ಸರೋಜಾದೇವಿ ಈ ಮೂರು ಹೆಣ್ಣುಮಕ್ಕಳು ಕಷ್ಟ ಗೆದ್ದು ಜನರ ಭವಿತವ್ಯವನ್ನು ಉಜ್ವಲ ಮಾಡಿಕೊಂಡ ಸಾಧಕಿಯರು.
ಲೀಲಾವತಿ ಅವರ ಕಾರ್ಯಕ್ರಮದಲ್ಲಿ ಶಿವಣ್ಣ ಹೇಳಿದ ಭರವಸೆ ಮಾತು ಕೇಳಿದ ಲೀಲಾವತಿಯವರು ಬೇರೆ ಎಲ್ಲಾ ಮಾತಿಗಿಂತ ತಮಗೆ ಶಿವಣ್ಣನ ಭರವಸೆಯ ಮಾತು ಇಷ್ಟವಾಯ್ತು ಎಂದು ಹೇಳಿದ ನೇರವಂತಿಕೆ ಮನಸೆಳೆಯಿತು.
@ಮುದ್ದಾದ ನಟಿ ಸುಧಾರಾಣಿ ಅವರ ನಟನೆಯಷ್ಟೇ ಮುದ್ದಾದ ಮಾತು ಜೊತೆಗೆ ಚಿತ್ರರಂಗದಲ್ಲಿ ಅವರಿಗಾದ ಕಹಿ ಅನುಭವಗಳು, ಹೇಗೆ ಸಿನಿಮಂದಿ ಅವರ ಪ್ರತಿಭೆ ತುಳಿದರು ಎನ್ನುವ ಮಾತುಗಳು ಹೃದಯ ತಾಕಿತು.
@ಅಪರೂಪದ ಕಲಾವಿದೆ ಬಿ ಸರೋಜಾದೇವಿ ಅವರ ಮಾತುಗಳು, ಆ ಶೈಲಿ ಎಲ್ಲವು ಇಷ್ಟವಾಯ್ತು..ಆದರೆ....ಆದರೆ....  ರಮೇಶ್ ಅರವಿಂದ್  ಸರೋಜಾದೇವಿ ಅವರ ಕಡೆಯ ಒಂದು ಮಾತು ಮಾತ್ರ ತುಂಬಾ ಇಷ್ಟ ಆಯ್ತು..
ಕಡೆಯದಾಗಿ ಅವರು ನಿಮ್ಮ ಬಳಿ ಕಳ್ರನ್ನ ಒಟ್ಟಿಗೆ ಸೇರಿಸಿ ಮಾಹಿತಿ ಕಲೆಕ್ಟ್ ಮಾಡೋದು ಅಂದ್ರೆ ಸುಮ್ಮನೆ ಅಲ್ಲ ಎಂದು ಹೇಳಿದರು..[ಭಾವಾರ್ಥ  ಬರುವಂತಹ ವಾಕ್ಯಇದು.. ಅವರು ಹೇಳಿದ ಡೈಲಾಗ್  ನೇರಾನೇರ ಇಲ್ಲ .. ಯಾಕೇಂದ್ರೆ ಅದನ್ನು ಮರೆತಿದ್ದೇನೆ :) ] ಸಿನಿಮಾದವರು ಅಕಟಕಟಾ..ಕಳ್ಳರೇ... ;-) ಸುಮ್ಮನೆ ಕೀಟಲೆ ಮಾಡಿದ್ದು..
ಎಲ್ಲದಕ್ಕಿಂತ ನಿರ್ದೇಶಕ ಭಾರ್ಗವ ತುಂಬಾ ಮನಸೆಳೆದರು..ಮಾತಿನಿಂದ.. ಆ ಹಾಡಿನಿಂದ.. ಜೋವಿಯಲ್ ನಿರ್ದೇಶಕ. ;-)
ಕಳೆದ ಸೀಸನ್ ತುಂಬಾ ಚೆನ್ನಾಗಿತ್ತು. ಆದರೆ ಟೀಆರ್ಪಿ ಇಲ್ಲದೆ ಬೇಗ ಪ್ರಸಾರ ನಿಂತಿದ್ದು ಸತ್ಯವಾದರೂ ಈ ಬಾರಿ ಸಕತ್ತಾಗಿದೆ.ಸಿನಿಮಾದವರು ಮಾತ್ರವಲ್ಲ ಬೇರೆ ಕ್ಷೇತ್ರದವರ ಬಗ್ಗೆಯೂ ಜನರು ಆಸಕ್ತಿಯಿಂದ ತಿಳಿಯಲು ಇಷ್ಟ ಪಡುತ್ತಿದ್ದಾರೆ.. ಆಗಾಗ ಬೇರೆ ರಂಗದವರು, ಇಲ್ಲವೇ ಮಿಕ್ಸ್ ಅಂಡ್ ಮ್ಯಾಚ್ ಮಾಡಬಹುದಲ್ಲವೇ .. ಒಂದು ಎಪಿಸೋಡ್ ಅವರಿಗೆ ಮತ್ತೊಂದು ಇವರಿಗೆ ನೀಡಿದರೆ ಚಂದ ಇರುತ್ತೆ.ಒಬ್ಬರನ್ನು ಕರೆಯಿಸಿ ಕಾರ್ಯಕ್ರಮ ಪ್ರಸಾರ ಮಾಡದೆ ಇರುವುದು ಯಾವುದೇ ಸಂಸ್ಥೆ -ಕಾರ್ಯಕ್ರಮಕ್ಕೆ ಶೋಭೆ ತರಲ್ಲ..ನಿಮಗೆ ಅರ್ಥ ಆಗಿರಬೇಕು ಯಾರ ಬಗ್ಗೆ ಇದು ಹೇಳಿದ್ದು ಅಂತ..!
ಯಾರ್ ಏನೇ ಹೇಳಲಿ ಕಿರುತೆರೆ ಲೋಕದದಲ್ಲಿ ಅನರ್ಘ್ಯ  ಕಾರ್ಯಕ್ರಮ ಇದು.