ಕಳ್ರನ್ನ


Image result for red flowers
ಕೆಲವು ಕಾರ್ಯಕ್ರಮಗಳನ್ನು ಕಾಡು ನೋಡುತ್ತೇವೆ. ಅದರಲ್ಲೂ ರಿಯಾಲಿಟಿ ಶೋಗಳು ಇಷ್ಟವಾದರೆ ಅದನ್ನು ನೋಡುವುದಕ್ಕಾಗಿ ಕಾಯ್ತಾ ಇರ್ತೇವೆ. ಅಂತಹ ಕಾಯುವಿಕೆಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ . ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಅತಂತ ಸುಂದರ ಕಾರ್ಯಕ್ರಮ ಇದಾಗಿದೆ.
ಕಳೆದ ಮೂರು ಎಪಿಸೋಡ್ ಗಳಲ್ಲಿ ಸಾಧಕ ಹೆಣ್ಣುಮಕ್ಕಳ ಜೊತೆ ಮಾತನಾಡುತ್ತಾ ಅವರ ಬಾಳಪುಟಗಳನ್ನು ತೆರೆದು ಅವರ ಅಭಿಮಾನಿಗಳ ಮುಂದಿಡುವ ಪ್ರಯತ್ನ ಮಾಡಿದ್ದಾರೆ ರಮೇಶ್ ಹಾಗೂ ತಂಡ.
ಲೀಲಾವತಿ ಅವರಾಗಿರಬಹುದು, ಸುಧಾರಾಣಿ, ಬಿ ಸರೋಜಾದೇವಿ ಈ ಮೂರು ಹೆಣ್ಣುಮಕ್ಕಳು ಕಷ್ಟ ಗೆದ್ದು ಜನರ ಭವಿತವ್ಯವನ್ನು ಉಜ್ವಲ ಮಾಡಿಕೊಂಡ ಸಾಧಕಿಯರು.
ಲೀಲಾವತಿ ಅವರ ಕಾರ್ಯಕ್ರಮದಲ್ಲಿ ಶಿವಣ್ಣ ಹೇಳಿದ ಭರವಸೆ ಮಾತು ಕೇಳಿದ ಲೀಲಾವತಿಯವರು ಬೇರೆ ಎಲ್ಲಾ ಮಾತಿಗಿಂತ ತಮಗೆ ಶಿವಣ್ಣನ ಭರವಸೆಯ ಮಾತು ಇಷ್ಟವಾಯ್ತು ಎಂದು ಹೇಳಿದ ನೇರವಂತಿಕೆ ಮನಸೆಳೆಯಿತು.
@ಮುದ್ದಾದ ನಟಿ ಸುಧಾರಾಣಿ ಅವರ ನಟನೆಯಷ್ಟೇ ಮುದ್ದಾದ ಮಾತು ಜೊತೆಗೆ ಚಿತ್ರರಂಗದಲ್ಲಿ ಅವರಿಗಾದ ಕಹಿ ಅನುಭವಗಳು, ಹೇಗೆ ಸಿನಿಮಂದಿ ಅವರ ಪ್ರತಿಭೆ ತುಳಿದರು ಎನ್ನುವ ಮಾತುಗಳು ಹೃದಯ ತಾಕಿತು.
@ಅಪರೂಪದ ಕಲಾವಿದೆ ಬಿ ಸರೋಜಾದೇವಿ ಅವರ ಮಾತುಗಳು, ಆ ಶೈಲಿ ಎಲ್ಲವು ಇಷ್ಟವಾಯ್ತು..ಆದರೆ....ಆದರೆ....  ರಮೇಶ್ ಅರವಿಂದ್  ಸರೋಜಾದೇವಿ ಅವರ ಕಡೆಯ ಒಂದು ಮಾತು ಮಾತ್ರ ತುಂಬಾ ಇಷ್ಟ ಆಯ್ತು..
ಕಡೆಯದಾಗಿ ಅವರು ನಿಮ್ಮ ಬಳಿ ಕಳ್ರನ್ನ ಒಟ್ಟಿಗೆ ಸೇರಿಸಿ ಮಾಹಿತಿ ಕಲೆಕ್ಟ್ ಮಾಡೋದು ಅಂದ್ರೆ ಸುಮ್ಮನೆ ಅಲ್ಲ ಎಂದು ಹೇಳಿದರು..[ಭಾವಾರ್ಥ  ಬರುವಂತಹ ವಾಕ್ಯಇದು.. ಅವರು ಹೇಳಿದ ಡೈಲಾಗ್  ನೇರಾನೇರ ಇಲ್ಲ .. ಯಾಕೇಂದ್ರೆ ಅದನ್ನು ಮರೆತಿದ್ದೇನೆ :) ] ಸಿನಿಮಾದವರು ಅಕಟಕಟಾ..ಕಳ್ಳರೇ... ;-) ಸುಮ್ಮನೆ ಕೀಟಲೆ ಮಾಡಿದ್ದು..
ಎಲ್ಲದಕ್ಕಿಂತ ನಿರ್ದೇಶಕ ಭಾರ್ಗವ ತುಂಬಾ ಮನಸೆಳೆದರು..ಮಾತಿನಿಂದ.. ಆ ಹಾಡಿನಿಂದ.. ಜೋವಿಯಲ್ ನಿರ್ದೇಶಕ. ;-)
ಕಳೆದ ಸೀಸನ್ ತುಂಬಾ ಚೆನ್ನಾಗಿತ್ತು. ಆದರೆ ಟೀಆರ್ಪಿ ಇಲ್ಲದೆ ಬೇಗ ಪ್ರಸಾರ ನಿಂತಿದ್ದು ಸತ್ಯವಾದರೂ ಈ ಬಾರಿ ಸಕತ್ತಾಗಿದೆ.ಸಿನಿಮಾದವರು ಮಾತ್ರವಲ್ಲ ಬೇರೆ ಕ್ಷೇತ್ರದವರ ಬಗ್ಗೆಯೂ ಜನರು ಆಸಕ್ತಿಯಿಂದ ತಿಳಿಯಲು ಇಷ್ಟ ಪಡುತ್ತಿದ್ದಾರೆ.. ಆಗಾಗ ಬೇರೆ ರಂಗದವರು, ಇಲ್ಲವೇ ಮಿಕ್ಸ್ ಅಂಡ್ ಮ್ಯಾಚ್ ಮಾಡಬಹುದಲ್ಲವೇ .. ಒಂದು ಎಪಿಸೋಡ್ ಅವರಿಗೆ ಮತ್ತೊಂದು ಇವರಿಗೆ ನೀಡಿದರೆ ಚಂದ ಇರುತ್ತೆ.ಒಬ್ಬರನ್ನು ಕರೆಯಿಸಿ ಕಾರ್ಯಕ್ರಮ ಪ್ರಸಾರ ಮಾಡದೆ ಇರುವುದು ಯಾವುದೇ ಸಂಸ್ಥೆ -ಕಾರ್ಯಕ್ರಮಕ್ಕೆ ಶೋಭೆ ತರಲ್ಲ..ನಿಮಗೆ ಅರ್ಥ ಆಗಿರಬೇಕು ಯಾರ ಬಗ್ಗೆ ಇದು ಹೇಳಿದ್ದು ಅಂತ..!
ಯಾರ್ ಏನೇ ಹೇಳಲಿ ಕಿರುತೆರೆ ಲೋಕದದಲ್ಲಿ ಅನರ್ಘ್ಯ  ಕಾರ್ಯಕ್ರಮ ಇದು.  

No comments: