ನಿನ್ನೆ ಸಂಜೆ ಪಬ್ಲಿಕ್ ಟೀವಿ ಮತ್ತು ಈ ಟೀವಿ ನ್ಯೂಸ್ ನಲ್ಲಿ ಕಾರ್ಯಕ್ರಮ ವೀಕ್ಷಿಸಿದೆ. ಎರಡು ಒಂದೇ ಸಮಯದಲ್ಲಿ ಪ್ರಸಾರ ಆಗಿದ್ದು. ಅಂದ್ರೆ ಸಂಜೆ ಐದೂವರೆ ಸಮಯ. ಎರಡು ವಾಹಿನಿಗಳು ಸಹ ಪ್ರಾಣಿಗಳ ಬಗ್ಗೆ ಒಂದು ಕಾರ್ಯಕ್ರಮ ಪ್ರಸಾರ ಮಾಡಿತ್ತು. ತುಂಬಾ ಖುಷಿ ಕೊಟ್ಟ ಕಾರ್ಯಕ್ರಮಗಳು ಅದಾಗಿತ್ತು.
ಪ್ರಾಣಿಗಳ ಅದರಲ್ಲೂ ಕಾಡುಪ್ರಾಣಿಗಳು ಎದುರಿಗೆ ಮನುಷ್ಯ ಸಿಕ್ರೆ ಅವನ ಗತಿ ಅಧೋಗತಿ ಅಂಬೋದು ಎಲ್ಲರಿಗೂ ಗೊತ್ತಿದೆ. ಆದರೆ ಈ ಟೀವಿಯವರು ಆರೀತಿ ಕಾಡು ಪ್ರಾಣಿಗಳ ಕೈಗೆ ಸಿಕ್ಕ ಮನುಷ್ಯರು ಹೇಗೆ ಬಚಾವ್ ಆದರು ಎಂಬಂತಹ ಅಂಶದ ಅಡಿಯಲ್ಲಿ ಕಾರ್ಯಕ್ರಮ ಸಿದ್ಧಪಡಿಸಿದ್ದರು.ಕಾಮಿಡಿ ಮಿಕ್ಸ್ ಅಂತ ಪ್ರಾಯಶಃ ಅದರ ಹೆಸರು. ವಾಹನಗಳ ಎದುರಿಗೆ ಆನೆದಂಡು, ಹುಲಿ ಹೀಗೆ ಬೇರೆ ಪ್ರಾಣಿಗಳು ಬಂದಾಗ ಮನುಷ್ಯ ಪಟ್ಟ- ಪಡುವ ಪಡಿಪಾಟಲಿನ ಕಾರ್ಯಕ್ರಮ. ತುಂಬಾ ಆಸಕ್ತಿಯಿಂದ ಕೂಡಿತ್ತು.ಅದರ ಬಗ್ಗೆ ಹೇಳುವುದಕ್ಕಿಂತ ವೀಕ್ಷಿಸಬೇಕು ಆಗ ಅದರ ಮಜಾ ಗೊತ್ತಾಗೋದು.. ಸಂಜೆಯ ಸಮಯವನ್ನು ಆಹ್ಲಾದವಾಗಿ ಕಳೆಯುವತೆ ಮಾಡಿದ ಕಾರ್ಯಕ್ರಮ ಅದು.
@ಪಬ್ಲಿಕ್ ಟೀವಿ ರಂಗಣ್ಣನಿಗೂ ಸಕತ್ ಹಾಟ್ ಮಗ ಟ್ಯಾಗ್ ಲೈನ್ಗೂ ಅವಿನಾಭಾವ ಸಂಬಂಧ ಇದೆ ಅಂತ ಕಾಣುತ್ತೆ. ಅವರು ಸುವರ್ಣ ನ್ಯೂಸ್ ನಲ್ಲಿ ಇದ್ದಾಗ ಪ್ರೈಮ್ ನ್ಯೂಸ್ ಗೂ ಅದೇ ಹೆಸರು ನೀಡಿದ್ದರು.. ನಿನ್ನೆ ಪ್ರಸಾರವಾದ ಚೌ ಚೌ ಬಾತ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಕಾರ್ಯಕ್ರಮದ ಹೆಸರು ಸಕತ್ ಹಾಟ್ ಮಗ... :-)
ಆದರೆ ಅದು ಬೇಸಿಗೆ ಕಾಲದಲ್ಲಿ ಪ್ರಾಣಿಗಳಿಗೆ ಪ್ರಾಣಿಸಂಗ್ರಹಾಲಯದವರು ನೀಡಿದ ಸೇವೆ ಸವಲತ್ತುಗಳ ಬಗ್ಗೆ ಪ್ರಸಾರ ಮಾಡ್ತಾ ಇತ್ತು. ಜಪಾನಿನ ಪ್ರಾಣಿ ಸಂಗ್ರಹಾಲಯವನ್ನು ಕನ್ನಡದ ವೀಕ್ಷಕರಿಗೆ ತೋರಿಸುತ್ತಾ.. ಅಲ್ಲಿ ಮಂಜಿನ ಜೊತೆ, ನೀರಿನಲ್ಲಿ ಆಡ್ತಾ ಇದ್ದ ಪ್ರಾಣಿಗಳ ಬಗ್ಗೆ, ಹಣ್ಣು, ಐಸ್ ಕ್ರೀಮ್ ತಿಂದು ಹಾಯಾಗಿದ್ದ ಪ್ರಾಣಿಗಳು ಹೀಗೆ ಹಲವಾರು ಅಂಶಗಳ ಬಗ್ಗೆ ಪ್ರಸಾರ ಮಾಡ್ತಾ ಇದ್ರು.. ಸಕತ್ ಮಜಾ ಕೊಡ್ತು.. ಇಂತಹ ಕಾರ್ಯಕ್ರಮಗಳು ಮನಸೋಲ್ಲಾಸ ಹೆಚ್ಚಿಸುತ್ತದೆ ಅಲ್ವೇ !
@ಟೀವಿ ನೈನ್ ನಲ್ಲಿ ನಿರೂಪಕ ಹರಿಪ್ರಸಾದ್ ಕಾರ್ಯಕ್ರಮ ನಡೆಸಿಕೊಡ್ತಾ ಇದ್ರು. ಮತ್ತದೇ ಪ್ರಶ್ನೆಪತ್ರಿಕೆಗಳ ಬಗ್ಗೆ. ಟೀವಿ ನೈನ್ ಹೊಸಬರಿಗೆ ಅವಕಾಶ ನೀಡಿ ಅವರಲ್ಲಿರುವ ನೈಪುಣ್ಯ ಹೊರತರುವ ವಿಷಯದಲ್ಲಿ ಸದಾ ಮುಂದಿರುತ್ತದೆ. ಹರಿಪ್ರಸಾದ್ ಅವರ ಕಾರ್ಯಕ್ರಮ ಗಮನವಿಟ್ಟು ವೀಕ್ಷಿಸಲಿಲ್ಲ.. ಆದರೆ ಅವರ ವೃತ್ತಿಯಲ್ಲಿ ಆದ ಬೆಳವಣಿಗೆ, ಅವರಿಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡ ಬಗೆ ಎಲ್ಲವು ಕನ್ನಡಿಗರಿಗೆ ಗೊತ್ತಿದೆ.. ಬಿಸಿಲಲ್ಲಿ ವರದಿಗಾರಿಕೆ ತಣ್ಣಗೆ ಮಾಡ್ತಾ ಇದ್ದವರು ಈಗ ತಣ್ಣನೆಯ ರೂಮಲ್ಲಿ ಕುಳಿತು ಬಿಸಿಯಾಗಿ ನಿರೂಪಣೆ- ಚರ್ಚೆ ಮಾಡ್ತಾ ಇದ್ದಾರೆ :-) ಸಿಕ್ಕಂತಹ ಅವಕಾಶಗಳನ್ನು ಬಳಸಿಕೊಳ್ಳುವುದು ಬಹಳ ಮುಖ್ಯ !
No comments:
Post a Comment