ಶುಕ್ರ 'ಹುಚ್ಚ'


ಸಾಮಾನ್ಯವಾಗಿ ಭವಿಷ್ಯ ಹೇಳುವವರ ಅಬ್ಬರ ಟೀವಿಗಳಲ್ಲಿ ಇದ್ದೆ ಇದೆ. ಸಾಕಷ್ಟು ಜನ ಎಷ್ಟೇ ಕಷ್ಟ ಪಟ್ಟರು ಸಹಿತ ಆ ರೀತಿಯ ಕಾರ್ಯಕ್ರಮಗಳ ಬಗ್ಗೆ ಇರುವ ಮೋಹ ಕಡಿಮೆ ಆಗಿಲ್ಲ ಜನರಿಗೆ.
ಅದರಲ್ಲೂ   ಬ್ರಹ್ಮಾಂಡದ ನರೇಂದ್ರ ಶರ್ಮ ಅವರು ಪಬ್ಲಿಕ್  ಟೀವಿಯಲ್ಲಿ ಕುಳಿತು  ಪಬ್ಲಿಕ್ ಗೆ ಬುದ್ಧಿ ಹೇಳ್ತಾ ಹೇಳ್ತಾ ಮತ್ತು ಹೇಳ್ತಾ ಸೆನ್ಸಾರ್   ಇಲ್ಲದೆ ಮಾತಾಡುತ್ತಿದ್ದಾರೆ. ಅವರ ಮಾತಿನ ಭರದಲ್ಲಿ ಸರ್ವಾಂಗವು ಅವರ ಬಾಯಿಯ ಮೂಲಕ ಹೊರ ಬಂದು ವೀಕ್ಷಕ ಪ್ರಭುಗಳ ಕಿವಿಯನ್ನು ರಾಚ್ತಾ ಇದೆ. ಬಿಡಿ ಅವರ ಬಗ್ಗೆ ಜನರಿಗೆ ಒಳ್ಳೆ ಅಭಿಪ್ರಾಯ ಇದೆ. ಮುಖ್ಯವಾಗಿ ಅವರು ಒಂದು, ಜೊತೆಗೊಂದು , ಮತ್ತೊಂದರ ಸಂಗ ಸಾಂಗತ್ಯ ಇಲ್ಲದ ಗುರು.. ಬಾಯಿ ಸ್ವಲ್ಪ ಹೊಲಸು ಅಷ್ಟೇ. ಅದನ್ನು ಕೇಳಿಸಿ ಕೊಳ್ಳದೆ ಇದ್ದರಾಯ್ತು. ಅವರು ಈಗ ಇರುವ ಸ್ಥಳದ ಬಗ್ಗೆ ಹೀಗೆ ಒಬ್ಬರು ಹೇಳ್ತಾ ಇದ್ರೂ ವಿಶೇಷವಾದ ದೇಗುಲಗಳನ್ನು ನಿರ್ಮಾಣ ಮಾಡ್ತಾ ಇದ್ದಾರೆ. ಅವರು ಇರುವ ಕಡೆ ಕಾಳಿಂಗ ಸರ್ಪ ಇದೆ. ಮುಖ್ಯವಾಗಿ ಆ ಜಾಗ ಅವರ ಆ ದೇವಸ್ಥಾನದಿಂದ  ಪ್ರಖ್ಯಾತಿ  ಹೊಂದುತ್ತದೆ ಅಂತ. ಶ್ರದ್ಧಾವಂತಿಕೆ ಇರುವ ಸ್ಥಳಗಳು ಜನರಿಗೆ ಇಷ್ಟ ಆಗುತ್ತೆ ಬಿಡಿ! ಒಳ್ಳೆಯ ಕೆಲಸದ ಬಗ್ಗೆ ಹೇಳುವುದರಲ್ಲಿ- ಮಾಡುವುದರಲ್ಲಿ ತಪ್ಪಿಲ್ಲ ಬಿಡಿ ! 
@ ಜೀ ಕನ್ನಡದಲ್ಲಿ ಸ್ಥಾನ ಕಳೆದು ಕೊಂಡರು  ತೆಲುಗು ಜೀ ಕನ್ನಡದಲ್ಲಿ ಸ್ಥಾನ ಪಡೆದ  ಜ್ಯೋತಿಷಿ ದೇವಿಶ್ರೀ. ಈಗ ಕಷ್ಟ ಪಟ್ಟು ತೆಲುಗು ಭವಿಷ್ಯ ನುಡಿತಾ ಇದ್ದಾರೆ.ಅವರ ತೆಲುಗು ಕೇಳಲು ಆಗಾಗ ತೆಲುಗು ಜೀ ಕಡೆಗೆ ಹೋಗ್ತಾ ಇರ್ತೀನಿ.. ಅರ್ಥಾತ್ ಚಾನಲ್ ಬದಲಾವಣೆ !
 ನನ್ನ ಎಫ್ಭಿ ಮಿತ್ರರಾದ ವೆಂಕಟೇಶ ಮೂರ್ತಿ ..ಜ್ಯೋತಿಷಿಗಳ ಬಗ್ಗೆ ಹೀಗೆ ಹೇಳಿದ್ದಾರೆ.. ಪ್ಲೀಸ್ .. ಪ್ಲೀಸ್ ಓದಿಕೊಳ್ಳಿ ....
 ಕನ್ನಡ ವಾಹಿನಿಗಳಲ್ಲಿ ಜ್ಯೋತಿಷಿಗಳು ಬಂದು ಮನಬಂದಂತೆ ಬಡಬಡಾಯಿಸುತ್ತಿರುವುದರಿಂದ ಸಧ್ಯಕ್ಕೆ ಶುಕ್ರ 'ಹುಚ್ಚ' ಸ್ತಾನದಲ್ಲಿ ಇದ್ದಾನೆ.. 
ಇದನ್ನು ನೀವೆ ಅರ್ಥ ಮಾಡಿಕೊಳ್ಳ ಬೇಕು.. ಯಾಕೇಂದ್ರೆ ಜ್ಯೋತಿಷಿಗಳ ಮಾತಿನ ಶೈಲಿ ಬಗ್ಗೆ ವೆಂಕಟೇಶ್ ಮೂರ್ತಿ ಹೇಳಿರೋದನ್ನು ನಾನು ಆಗೇ ಎಲಿದ್ದೀನಿ.. ಉಚ್ಚರಾಗ್ತಿರೋ.. ಗ್ರಹಗಳನ್ನು ಹುಚ್ಚರನ್ನಾಗಿ ಮಾಡ್ತಿರೋ ನಿಮಗೆ ಬಿಟ್ಟಿದ್ದು  ! 

@  ಜೀ ಹಿಂದಿ ವಾಹಿನಿಯಲ್ಲಿ ಅಮ್ಮಂದಿರ ಡಿಐಡಿ ಆರಂಭವಾಗಿದೆ. ಅದರ ಆಡಿಶನ್ ನೋಡಿದೆ. ಮುಖ್ಯವಾಗಿ ನನಗೆ ಗೋವಿಂದಾ, ಗೀತ, ಟೆರೆನ್ಸ್ ಅವರ ತೀರ್ಪು, ಅದರೊಂದಿಗೆ ಟೆರೆನ್ಸ್ ವಿಶೇಷ ಡ್ರೆಸ್ ಗಳು ನೋಡುವ ಖುಷಿ. ಸಾಕಷ್ಟು ಕಡೆ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಗಳಲ್ಲಿ ಮಾತ್ರ ಕಾಣುವ ಉಡುಗೆಗಳು ಟೆರೆನ್ಸ್ ಮೈಮೇಲೆ ಕಾಣುತ್ತೆ.. ವೆರಿ ಇಂಟರೆಸ್ಟಿಂಗ್  ಫೆಲ್ಲ :-)

1 comment:

Badarinath Palavalli said...

ಆದರೂ ನರೇಂದ್ರ ಬಾಬು ಶರ್ಮರು ಬರೀ ತಮಿಳುನಾಡು ದೇವಸ್ಥಾನಗಳನ್ನು highlight ಮಾಡ್ತಾರಂತ ಆಪಾದನೆಯೂ ಇದೆ!

ದೇವಿಶ್ರೀ ಗುರೂಜೀಯನ್ನು ಕರ್ನಾಟಕ ವಾಹಿನಿಗಳಿಂದ ಓಡಿಸಿದ ಕೀರ್ತಿ ನಮ್ಮ ವಾಹಿನಿಗೇ ಸಲ್ಲುತ್ತದೆ!

ಅಂದಹಾಗೆ ಅದೇನೋ ಗೊತ್ತಿಲ್ಲಪ್ಪ ನನ್ನ ಮಟ್ಟಿಗೆ ಗುರು ಮತ್ತು ಶುಕ್ರ always "ಹುಚ್ಚ" ಸ್ಥಾನದಲ್ಲೇ ಇರ್ತಾರಪ್ಪ!

ಟೆರೆನ್ಸ್ ಅವರ ವಸ್ತ್ರಾಭಿರುಚಿ ಚೆನ್ನಾಗಿದೆ.