ಕೋರೋನಾ ಆರಂಭ ಕಾಲದಲ್ಲಿ, ದೇಶವು ಸಂಪೂರ್ಣ ಲಾಕ್ ಡೌನ್ ಆದ ಸಂದರ್ಭದಲ್ಲಿ ಹೆಚ್ಚಾಗಿ ನ್ಯೂಸ್ ಚಾನೆಲ್ ಗಳನ್ನೂ ನೋಡ್ತಾ ಇದ್ದೆ. ಪಬ್ಲಿಕ್ ಟೀವಿ ರಂಗಣ್ಣ, ಅವರ ಶಿಷ್ಯ ಬಳಗದ ಕಾರ್ಯಕ್ರಮಗಳು, ಸುವರ್ಣ ನ್ಯೂಸ್ ರಮಾಕಾಂತ್,ಅಜಿತ್, ಜಯ ಪ್ರಕಾಶ್ ಶೆಟ್ರ ಕಾರ್ಯಕ್ರಮಗಳು, ನ್ಯೂಸ್ 18, ಟಿವಿ 9 ರಂಗನಾಥ್ ಟೀಮ್ ಎಲ್ಲರ ಕಾರ್ಯಕ್ರಮಗಳು ನೋಡುವ ಕೆಲಸ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಿತರ ಟಿವಿ ಕಾರ್ಯಕ್ರಮಗಳ ಬಗ್ಗೆ ಇದ್ದ ಅಭಿಪ್ರಾಯ, ಭಯ, ಸಂತೋಷ, ಸಂಭ್ರಮ, ಆತಂಕ, ನಿರಾಳತೆ ಹೀಗೆ ಹತ್ತು ಹಲವಾರು.
ಅನ್ (ಲಾಕ್ ) ಡೌನ್ ಸಮಯದಲ್ಲಿ ಸೀರಿಯಲ್ ಗಳು ಆರಂಭವಾಗಿದೆ.. ಜೊತೆಗೆ ಡಬ್ಬಿಂಗ್ ಸೀರಿಯಲ್ ಗಳ ಕಾಲ ..ಆದ್ರೂ ಭಾಷೆ ಅರ್ಥ ಆಗುತ್ತೋ ಬಿಡುತ್ತೋ ಮೂಲ ನೋಡಿ ಅರ್ಥ ಮಾಡಿಕೊಂಡು ಎಂಜಾಯ್ ಮಾಡೋದೇ ನಿಜವಾದ ಮಜಾ. ಯಾಕೆಂದ್ರೆ ನಿನ್ನೆ 2019 ರಲ್ಲಿ ರಿಲೀಜ್ ಆದ ತಮಿಳು ಸಿನೆಮಾ KEE ನೋಡಿದೆ.ಹಿಂದೀ ಭಾಷೆಗೆ ಡಬ್ ಮಾಡಿದ್ದು.ತಮಿಳು ಸಿನಿಮಾವನ್ನು ತಮಿಳಿನಲ್ಲಿ ನೋಡ ಬೇಕು ಅನ್ನಿಸಿತು.. ಆಗ .
@@ ಕಲರ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಗಳು ಜಾನಕಿ ಸೀರಿಯಲ್ ಅತ್ಯಂತ ಚಂದದ ಕಥಾ ಹಂದರ ಹೊಂದಿತ್ತು. ಮಧ್ಯದಲ್ಲಿ ನಿಂತಿದ್ದು ಬೇಸರ ತಂದಿದ್ದು ಸತ್ಯ.. ಆದರೆ ಬದಲಾವಣೆ ಜಗದ ನಿಯಮ. ಸೀತಾರಾಮ್ ಸರ್ ಗರಡಿಯಿಂದ ಇನ್ನು ವಿಶೇಷವಾದ ಧಾರಾವಾಹಿಗಳು ಬರುತ್ತದೆ ಎನ್ನುವ ನಿರೀಕ್ಷೆ ನಮ್ಮಂತಹ ಸಿರಿಯಲ್ ಪ್ರಿಯರಿಗೆ!
No comments:
Post a Comment