ಈ ಬಿಗ್ ಬಾಸ್ ಮುಗಿಯೋ ತನಕ ಇದರ ಬಗ್ಗೆನೇ ನನಗೆ ಗಮನ .. ಹಿಂದಿ ಬಿಗ್ ಬಾಸ್ ನೋಡುವಾಗ ಹಿಂದಿನ ಸೀಸನ್ ಗಳು ಅದರಲ್ಲ್ಊ ಸನ್ನಿ ಲಿಯೋನ್ ಇರುವಂತಹ ಸೀಸನ್ ನೆನಪಿಗೆ ಬರುತ್ತದೆ.. ಆಕೆ ಪೋರ್ನ್ ಸ್ಟಾರ್ ಆದರೆ ನಡುವಳಿಕೆ, ಸ್ಪರ್ಧಿಯಾಗಿ ಆಕೆ ಭಾಗವಹಿಸುತ್ತಿದ್ದ ರೀತಿ ಎಲ್ಲವೂ ತುಂಬಾ ಗಂಭಿರವಾಗಿರುತ್ತಿತ್ತು.. ಜಗಳದ ವಿಷಯದಲ್ಲಿ ಪೂಜಾ ಎನ್ನುವ ಸ್ಪರ್ಧಿಯದ್ದು ಸಿಕ್ಕಾಪಟ್ಟೆ ಗಲಾಟೆ ಆದರೆ ಪದೇಪದೇ ಆಕೆ ಸನ್ನಿ ಬಳಿ ನೀನು ಯಾವರೀತಿಯ ಚಿತ್ರಗಳಲ್ಲಿ ನಟಿಸುತ್ತೀಯಾ ಎನ್ನುವುದನ್ನು ಎಲ್ಲರಿಗೂ ಹೇಳಿದ್ದಿಯಾ ಅಂತ ನೆನಪು ಮಾಡುತ್ತಿದ್ದಸಳು.. ತಮಾಷೆ ಅಂದ್ರೆ ತುಂಬಾ ಕೆಟ್ಟದಾಗಿ ಬಿಹೇವ್ ಮಾಡ್ತಾ ಇದ್ದುದು ಸನ್ನಿ ಆಗಿರಲಿಲ್ಲ... ಯಾಕೆ ಈ ಮಾತು ಬರೀತಾ ಇದ್ದೀನಿ ಅಂದ್ರೆ ಸಾಮಾನ್ಯವಾಗಿ ಇತ್ತೀಚಿನ ಸೀಸನ್ಗಳು, ಅದರಲ್ಲಿರುವ ಸ್ಪರ್ಧಿಗಳು, ಅವರ ವರ್ತನೆ, ಮಾತು, ಶೈಲಿ, ಜೊತೆಗಾರರ ಜೊತೆ ನಡೆದುಕೊಳ್ಳುವ ರೀತಿ ಕೆಲವೊಂದಂತು ಕ್ಷಮಾರ್ಹವಲ್ಲ.. ಸಲ್ಮಾನ್ ಬಂದು ಅವರಿಗೆ ಹಾಗಲ್ಲ ಹೀಗೆ ಇರಿ ಅಂತ ಹೇಳಿದರೂ ಆ ಕ್ಷಣವಷ್ಟೇ ಅವರ ಹೂಗುಟ್ಟುವಿಕೆ..!
ಒಂದು ಸಂಗತಿ ನೆನಪಿರಲಿ ಇಂತಹ ರಿಯಾಲಿಟಿ ಶೋಗಳಲ್ಲಿ ಬರುವವರು ಒಳ್ಳೆ ಸೀರಿಯಲ್, ಒಳ್ಳೆಯ ಕಥೆಯ, ಒಳ್ಳೆಯ ಪಾತ್ರಧಾರಿಯಾಗಿರುತ್ತಾರೆ. ಅವರ ಬಗ್ಗೆ ವೀಕ್ಷಕರಿಗೆ ಅತ್ಯುತ್ತಮವಾದ ಭಾವನೆ ಇರುತ್ತದೆ.. ಬಾಲಿಕಾ ವಧು ಪಾತ್ರಧಾರಿ ಪ್ರತ್ಯುಷಾ ಬ್ಯಾನರ್ಜಿ ಮತ್ತು ಸುರೇಖಾ ಸಿಕ್ರಿ (ಅಜ್ಜಿ ಪಾತ್ರಧಾರಿ) ಅವರ ಫೋಟೊ ಸೆಷನ್ ಮಾಡಬೇಕು ಅನ್ನುವ ಆಸೆ ನನ್ನ ಮಿತ್ತರೊಬ್ಬರದಾಗಿತ್ತು. ಮೂಲ ಮನೆ ಕಟ್ಟುವ ಇಂಜಿನಿಯರ್ ಆಗಿರುವ ಪ್ರಕಾಶ್ ಹೆಗ್ಡೆ ಅತ್ಯತ್ತಮ ಬರಹಗಾರರು, ಅದ್ಭುತ ಛಾಯಾಚಿತ್ರಗಾರ.. ಪ್ರತ್ಯುಷಾ ಆಕಸ್ಮಿಕ ಮರಣವಾದಾಗ ತುಂಬಾ ಒಳ್ಳೆಯ ಮಾತುಗಳನ್ನು ಬರಹರೂಪದಲ್ಲಿ ಹೇಳಿದ್ದರು.ಜೊತೆಗೆ ತಮಗೆ ಆಕೆ ಫೋಟೋ ಸೆಷನ್ ಮಾಡುವ ಆಸೆ ಇತ್ತು ಎಂದು ಸಹ ಹೇಳಿಕೊಂಡಿದ್ದರು..
No comments:
Post a Comment