ಹೀಗೂ ಉಂಟೆ ? ಟೀವಿ ನೈನ್ ನಲ್ಲಿ ಪ್ರಸಾರ ಆಗುವ ಕಾರ್ಯಕ್ರಮ. ಆದರೆ ಅದೆಷ್ಟು ಇಷ್ಟ ಆಗುವ, ಬಳಕೆ ಆಗುವ ಪದ ಅಂದ್ರೆ ಮಾತು ಮಾತಿಗೂ ಹೀಗೂ ಉಂಟೆ . ಅದಕ್ಕೂ ಕಾರಣ ಇದೆ ಮುಖ್ಯವಾಗಿ ನಾರಾಯಣ ಸ್ವಾಮಿ ಕೈಲಿ ಎಳೆದು ಎಳೆದು ಬಿಸಾಡುವ ರೀತಿ ಕಂಡಾಗ ಪ್ರತಿ ಬಾರಿ ನನಗೆ ಹೀಗೂ ಉಂಟೆ ಎಂದು ಅನ್ನಿಸ್ತಾ ಇರುತ್ತದೆ. ಏನೇ ಆದರೂ ಆ ಕಾರ್ಯಕ್ರಮ ಮಧ್ಯಮ ವರ್ಗದ ಹೆಣ್ಣುಮಕ್ಕಳಲ್ಲಿ ಆಸಕ್ತಿಯನ್ನು ಉಳಿಸಿಕೊಂಡಿದೆ ಯಾರೇ ನೋಡಿದರೂ ಅದರಲ್ಲೂ ನನ್ನ ಪರಿಚಿತ ಹೆಣ್ಣುಮಕ್ಕಳು ಹೀಗೂ ಉಂಟೆ ನೋಡದೆ ಇರಲಾರರು.
ಈ ವಿಷಯದಲ್ಲಿ ಪದೇಪದೇ ಅನ್ನಿಸುವ ಏಕೈಕ ಮಾತು, ಪದ ಒಟ್ಟಾರೆ ನಮ್ಮನ್ನು ಕಾಡುವ ಕಟ್ಟ ಕಡೆಯ ಪ್ರಶ್ನೆ ... ಅದೆಂದರೆ ಹೀಗೂ ಉಂಟೆ ??
ಟೀವಿ ನೈನ್ ವಾಹಿನಿಯಲ್ಲಿ ಇಂದು ಬೆಳಿಗ್ಗೆ ಫೇಸ್ ಬುಕ್ ನಲ್ಲಿ ಕನ್ನಡ ಅವಹೇಳನ ಮಾಡಿದ್ದ ಪ್ರಾಣಿ ಬಗ್ಗೆ ಪ್ರಸಾರ ಆದ ಚರ್ಚೆ ಗಮಸಿದಾಗ ಉದಯ ರವಿ ಹೆಗಡೆ ಮತ್ತು ಸೈಬರ್ ತಜ್ಞೆಯ ಮಾತುಗಳು ಇಷ್ಟ ಆಯ್ತು. ಈ ಅಮೇರಿಕ ದೇಶದ ಲಾಗಳು, ಇಂತಹ ಸೋಶಿಯಲ್ ನೆಟ್ ವರ್ಕ್ ನಿಂದ ನಮ್ಮ ಸಮಾಜದ ಮೇಲೆ ಬೀರುತ್ತಿರುವ ಪ್ರಭಾವ ವರ್ಣಿ ಸಲಾಗದ್ದು. ಏಕೆಂದರೆ ಮದುವೆ ಆಗ್ತೀನಿ ಅಂತ ನಂಬಿಸಿ ಕೈಕೊಡುವ, ಪ್ರೀತಿ ವಿಷಯದಲ್ಲಿ ಆಟವಾಡುವಂತಹ ವಿಷಯಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಫೇಸ್ ಬುಕ್ ಮಂದಿ ಬಳಿ ಮಾಹಿತಿ ಕೇಳಿದರೂ ಅವರ ಕಡೆಯಿಂದ ಯಾವ ಪ್ರಯೋಜನಗಳು ಆಗ್ತಾ ಇಲ್ಲ. ತುಂಬಾ ಸಂಗತಿಗಳು ಇವೆ. ಅಂತಹವುಗಳಿಗೆ ಪರಿಹಾರ ಸಿಕ್ಕರೆ ಒಳ್ಳೆಯದು .
ಏನೇ ಆದರೂ ಕನ್ನಡ ಚಿತ್ರರಂಗದ ಕ್ಯೂಟ್ ನಟ ಚೇತನ್ ಜೊತೆ ಹುಚ್ಚ ವೆಂಕಟ್ ಬಂದಿದ್ದು, ಅದರಲ್ಲೂ ಮಿ ಹುಚ್ ರೈಸಿಂಗ್ ಲೆವೆಲ್ ಸಕತ್ ಅಟ್ರಾಕ್ಟ್ ಆಯ್ತು !!
No comments:
Post a Comment