ನೀವು ಕನಿಷ್ಠ ವಾರಕ್ಕೊಂದಾದರೂ ಪೋಸ್ಟ್ ಹಾಕಿ ಎಂದು ಕೇಳುವ ಸ್ನೇಹಿತರು ಬೇಕಾದಷ್ಟಿದ್ದಾರೆ.. ಆದರೆ ಸಾಕಷ್ಟು ಸರ್ತಿ ಬರೀಬೇಕು ಎಂದು ನಿರ್ಧಾರ ಮಾಡಿದರೂ ಸಹಿತ ಬರೆಯೋಕೆ ಆಗೋದೇ ಇಲ್ಲ.ಅದಕ್ಕಾಗಿ ನಾನು ಈಗ ನಿಯಮಕ್ಕೆ ಬದ್ಧಳಾಗಿರರದೇ, ಆದಾಗ ಬರೆಯುವ ಎಂದು ನಿರ್ಧಾರ ಮಾಡಿದ್ದೇನೆ.
@ ಕಲರ್ ಕನ್ನಡ ವಾಹಿನಿಯಲ್ಲಿ ಈಗ ಚಿಣ್ಣರ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಅದರಲ್ಲಿ ರವಿಚಂದ್ರನ್, ಪ್ರಿಯಾಮಣಿ ಮತ್ತು ಮಯೂರಿ ಉಪಾಧ್ಯ ತೀರ್ಪುಗಾರರಾಗಿದ್ದಾರೆ. ಅಲ್ಲದೆ ಅಕುಲ್ ನಿರೂಪಣೆ . ಕಷ್ಟ ಪಟ್ಟು ಕನ್ನಡ ಮಾತಾಡ್ತಾ ಇದ್ದಾರೆ ಅನ್ನಿಸಿದರೂ ಸಹ್ಯವಾಗುತ್ತದೆ. ನನ್ನ ಅನಿಸಿಕೆ ಪ್ರಕಾರ ಸೆಲೆಬ್ರಿಟಿ ಡ್ಯಾನ್ಸಿಂಗ್ ಸ್ಟಾರ್ ಗಿಂತ ಸಾಮಾನ್ಯ ಮನೆಯ ಮಕ್ಕಳ ಈ ಡ್ಯಾನ್ಸಿಂಗ್ ಸ್ಟಾರ್ ರವಿ ಮಾಮ, ಪ್ರಿಯ ಹಾಗೂ ಮಯೂರಿಗೆ ಇಷ್ಟ ಆಗುತ್ತೆ. ನಿಜ ಬದುಕಿನ ಬವಣೆ, ಆಸೆ, ಅದಕ್ಕಾಗಿ ತಾಯಿತಂದೆ ಮಾಡುವ ಪ್ರಯತ್ನ ಎಲ್ಲವೂ ಅರ್ಥ ಆಗುತ್ತೆ. ಇಂತಹ ಮಕ್ಕಳು ಅದಕ್ಕಿಂತ ಅವರ ತಾಯಿತಂದೆ ಮಾಡುವ ಸಾಧನೆ ಚಿಂದಿ ಚಿತ್ರಾನ್ನ ಬಿಡಿ!
ಜೋಗಯ್ಯ ಶಿವಣ್ಣನದು ಸೊ ಇಷ್ಟವಾದ ಹಾಡುಗಳಲ್ಲಿ ಒಂದು. ಏನೇ ಹೇಳಿ ಎಲೆಮರೆಕಾಯಿ ಹುಡುಕುವ ಈ ಮಕ್ಕಳ ಡ್ಯಾನ್ಸಿಂಗ್ ಸ್ಟಾರ್ .. ಬೇಜಾರಿಲ್ಲದೆ ವೀಕ್ಷಿಸ ಬಹುದು.
@ ಸೋನಿ ವಾಹಿನಿಯಲ್ಲಿ ಇಂಡಿಯನ್ ಐಡಲ್ ನಲ್ಲಿ ವಿಶಾಲ್, ಸೋನಾಕ್ಷಿ, ಸಲೀಮ್ ತೀರ್ಪಿನ ಅಡಿಯಲ್ಲಿ ಅನೇಕ ಪ್ರತಿಭೆಗಳು ಹೊರ ಬರುತ್ತಿವೆ.ರಿತ್ವಿಕ ತುಂಟತನ ಚಂದ ಇದೆ. ಇನ್ನು ಹುಸೇನ್ ಅವರ ನಿರೂಪಣೆ ನೋಡ್ತಾ ಇದ್ರೆ ಅವರು ಸ್ಟಾರ್ ವಾಹಿನಿಯಲ್ಲಿ ನಟಿಸಿದ್ದ ಕುಂ ಕುಂ ನೆನಪಾಗುತ್ತದೆ. ಸ್ವಲ್ಪ ದಿಲೀಪ್ ಕುಮಾರ್, ಸ್ವಲ್ಪ ಶಾರೂಖ್ ಖಾನ್ ಥರ ಮಾತಾಡುವ ಹಾಗೆನ್ನುವುದಕ್ಕಿಂತ ನಟಿಸುವ, ಅವರನ್ನು ಅನುಸರಿಸುವ ಪ್ರತಿಭೆ. ನಾನು ಆನ್ ಲೈನ್ ಪೇಪರ್ ನಲ್ಲಿ ಸಿನಿಮಾ ನ್ಯೂಸ್ ಬರೆಯುತ್ತೇನೆ. ಸಾಮಾನ್ಯವಾಗಿ ಸ್ಯಾಂಡಲ್ ವುಡ್ ಅಲ್ಲದೆ ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ನ್ಯೂಸ್ ಹೆಚ್ಚು ಬರಿತೀನಿ. ಆಗ ಹೆಚ್ಚು ಹೆಚ್ಚು ಓದುವ ಅಭ್ಯಾಸ.ಸೋನಾಕ್ಷಿಯ ಬಗ್ಗೇ ಸಹ ಜಾಸ್ತಿ ಓದಿದ್ದೇನೆ :-) ಏಕೆಂದರೆ ನಾನು ನನ್ನ ಓದುಗರಿಗೆ ಒಳ್ಳೆಯ ಅದರಲ್ಲೂ ಅವರ ಮನ ಸೆಳೆಯುವ ವಾರ್ತೆಗಳನ್ನು, ಗಾಸಿಪ್ ಗಳನ್ನೂ ಬರೆಯ ಬೇಕಲ್ಲ. ಅವೆಲ್ಲ ಈಗ ಹೇಳಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಈಕೆ ಇಷ್ಟ ಆದ್ರು. ಮುದ್ದಾದ ಗಲ್ .. ಆಕೆಯಲ್ಲಿ ಒಂದು ತೆರೆನಾದ ಸರಳತೆ ಇದೆ. ಆ ಸರಳತೆ ನಾಟಕೀಯ ಅಂತ ಅನ್ನಿಸಲ್ಲ . ಲವ್ ಇಟ್
ಜೀ ಹಿಂದಿ ವಾಹಿನಿಯಲ್ಲಿ ಡಿಐಡಿ ಇಷ್ಟಪಟ್ಟು ವೀಕ್ಷಿಸುವ ಕಾರ್ಯಕ್ರಮಗಳಲ್ಲಿ ಒಂದು . ಮಿಥುನ್ದಾ , ಮುದಸ್ಸರ್, ಪುನೀತ್, ಗೇತಿ, ಜಾಯ್ ಎಲ್ಲರೂ ನಮಗೆ ಸಕತ್ ಕ್ಲೋಸ್ ಅನ್ನಿಸುವಂತೆ ಕಾರ್ಯಕ್ರಮ ನಡೆಸಿಕೊಡ್ತಾರೆ. ಪ್ರಾಯಶಃ ಆ ಕಾರ್ಯಕ್ರಮ ಇಷ್ಟ ಆಗಿದ್ದಕ್ಕೆ ಹಾಗೆ ಅನ್ನಿಸಿರ ಬಹುದು. ಆದರೆ ನನಗೆ ಇತ್ತೀಚೆಗೆ ಹೆಚ್ಚು ಇಷ್ಟ ಆಗಿದ್ದು, ಸಿಂಡ್ರೆಲ್ಲಾ ಕಥೆಯನ್ನು ಶಾಸ್ತ್ರೀಯ ನೃತ್ಯ ರೂಪದಲ್ಲಿ ತೋರಿಸಿದ್ದು. ವಿಭಿನ್ನ ಅಂತ ಅನ್ನಿಸಿತು. ಎಲ್ಲ ಪ್ರತಿಭೆಗಳ ಡ್ಯಾನ್ಸ್ ಚೆನ್ನಾಗಿತ್ತು ಆದರೆ ಅದ್ಯಾಕೋ ಆ ಡ್ಯಾನ್ಸ್ ಬಹಳ ಖುಷಿ ಕೊಡ್ತು.
No comments:
Post a Comment