ಸಾಮಾನ್ಯವಾಗಿ ಮುಂಜಾನೆ 11ರಿಂದ ಸಂಜೆ 4 ತನಕ ಇರುವ ಬಿಸಿಲು ಒಳ್ಳೆಯದಲ್ಲ ಎಂದೇ ಓ ದಿದ್ದು. ಒಮ್ಮೆ ಒಂದು ಲೇಖನದಲ್ಲಿ ಮುಂಜಾನೆ ಒಂಬತ್ತರ ನಂತರ ದಯಮಾಡಿ ಬಿಸಿಲಿಗೆ ಹೋಗದಿರಿ ಎಂದು ಬರೆದಿದ್ದರು. ಅದೂ ಆಯ್ತು , ಇತ್ತೀಚಿಗೆ ಒಂದು ಲೇಖನದಲ್ಲಿ ಮುಂಜಾನೆ 11ರಿಂದ ಸಂಜೆ 3 ಗಂಟೆ ತನಕ ಜನ ಹೊರಗೆ ಬರೋದೆ ಇಲ್ಲ. ಆದಕಾರಣ ಅವರ ದೇಹದಲ್ಲಿ ವಿಟಮಿನ್ ಡಿ ಲೋಪ ಆಗಿದೆ. ಹೀಗೆ ಬರೆದರೆ ತಲೆ ಕೆಡಲ್ವ ?? :-)
ಹಾಗೆ ಆಗುತ್ತೆ ನನಗೆ ಅನೇಕ ಟೀವಿ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ. ಅದರಲ್ಲೂ ಚರ್ಚೆಗಳು ಅಂದ್ರೆ ಭಾರಿ ಗಾಬರಿ ನನಗೆ. ಬಿಡಿ ಅದರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ.
ಆದರೆ ಟೀವಿ ಪರದೆಯ ಮೇಲೆ ನಳನಳಿಸುತ್ತಾ ತುಂಬಾ ಗಂಭೀರವಾಗಿ ಮಾತನಾಡುವ ಹುಡುಗೀರು ರೀಲ್ ಹಿಂದೆ ಸಕತ್ ಸರಳ .
ಪಬ್ಲಿಕ್ ಟೀವಿಯ ರಾಧ ಹಿರೇ ಗೌಡರ್ ರಂಗಣ್ಣನ ಕ್ಯಾಂಪ್ ಮೆಂಬರ್ . ಆಕೆ ಬಗ್ಗೆ ಆಕೆಯ ಸಹೋದ್ಯೋಗಿ ಒಬ್ಬರಿಂದ ತಿಳಿದ ಮಾಹಿತಿ ಎಂದರೆ ಆಕೆ ಸಕತ್ ಸರಳ . ಅದರಲ್ಲೂ ತನ್ನ ಸಹೋದ್ಯೋಗಿಗಳ ಜೊತೆ ಆರಾಮವಾಗಿ, ಖುಷಿಯಾಗಿರುತ್ತಾರೆ. ಅದೇ ಚಾನೆಲ್ ನ ಒಬ್ಬ ಪುರುಷ ಮಹಾಶಯನ ಅವತಾರಗಳು !!
ಸುವರ್ಣ ವಾಹಿನಿಯ ವಿಷಯದಲ್ಲಿ ಇಂತಹ ವಿಷಯದಲ್ಲಿ ಹೇಳುವುದಾದರೆ ನಿರೂಪಣೆ ವಿಷಯದಲ್ಲಿ ಸಹನಾ ಭಟ್ ಸಕತ್ ಭಿನ್ನ . ಇಷ್ಟ ಆಗುವ ಶೈಲಿ, ಅತಿ ಅಲ್ಲದ ಹಾವಭಾವ, ಎಲ್ಲ ಕಾರ್ಯಕ್ರಮಗಳಿಗೂ ಹೊಂದಿಕೆಯಾಗುವ ಆಂಕರ್.
No comments:
Post a Comment