ಶ್ರೀ ಶಂಕರ-ರಾಚ್ಚಸ-ನಗುವನಯನ-ರಾಜೇಶ್ ವೈದ್ಯ

 


ಕಳೆದ ವರ್ಷ ಗಣೇಶ ಉತ್ಸವದ ಸಮಯ ಇರಬೇಕು. ಆಗ ಶ್ರೀ ಶಂಕರ ಚಾನಲ್ ನಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಇತ್ತು. ಸಾಮಾನ್ಯವಾಗಿ  ಮನೋರಂಜನಾ ಕಾರ್ಯಕ್ರಮಗಳು ಮಾತ್ರ   ಪ್ರಸಾರ ಆಗುವ ಚಾನಲ್ ಗಳನ್ನೂ ನಾನು ವೀಕ್ಷಣೆ ಮಾಡಿದರು ಜೊತೆಗೆ ನ್ಯೂಸ್, ಸಂಗೀತ, ಭಕ್ತಿ ಚಾನಲ್  ಗಳನ್ನೂ ತಪ್ಪದೆ ನೋಡುವ ಅಭ್ಯಾಸ ಇದೆ. ಟಿಟಿಡಿ  ಸಹ ನನ್ನ ಲಿಸ್ಟ್ ನಲ್ಲಿ ಇದೆ. ಶ್ರೀ ಶಂಕರ ಚಾನಲ್ ವಿಷ್ಯಕ್ಕೆ ಬರುವುದಾದರೆ  ಮೊದಲೇ ಹೇಳಿದಂತೆ ಆ  ಸಂಗೀತ ಕಾರ್ಯಕ್ರಮದಲ್ಲಿ ಓರ್ವ ಸಾಧಕರು  ಅಥವಾ ವೀಣಾ ವಾದಕರು ನಗುವ ನಯನ ಮಧುರ ಮೌನ ಹಾಡನ್ನು ಸಂಗೀತಾಸಕ್ತರ ಮುಂದೆ ಇಟ್ಟರು. ತುಂಬಾ ಯುನಿಕ್ ಆದ ಅವರ ಸಂಗೀತ ಹಾಗು ಅವರ ಸ್ಟೈಲ್ ನನಗೆ ಆಸಕ್ತಿ ಉಂಟು ಮಾಡಿ ಸರ್ಫ್ ಮಾಡಿದಾಗ ಅವರು ವೀಣಾವಾದಕ ರಾಜೇಶ್ ವೈದ್ಯ ಅಂತ ತಿಳಿಯಿತು. ತಮಿಳು ಭಾಷೆಯ ಈ ಪ್ರತಿಭೆಯು   ಸ್ವಲ್ಪ ಮಾತ್ರ   ನಗುವನಯನ ಮತ್ತು ಜಾಸ್ತಿ ಜೊತೆಜೊತೆಯಲಿ  ನುಡಿಸಿರುವ ವಿಡಿಯೋ ಯು ಟ್ಯೂಬ್ ನಲ್ಲಿ ನೋಡಿದೆ. / ಹಾಗೆ ಉಳಿದ ವಿಡಿಯೋಗಳನ್ನು ನೋಡಿದಾಗ ಎಸ್  ಬಿ  ಬಾಲು  ಸರ್  ಅವರು  ಹೇಳುತ್ತಿದ್ದ ರಾಚ್ಚಸ ರಲ್ಲಿ ಇವರು ಒಬ್ಬರು ಅಂತ ತಿಳಿಯಿತು. ಇಂತಹ ಅಗಾಧ ಪ್ರತಿಭೆ ಅಬ್ಭಾ  ಸಕತ್ ಖುಷಿ ಆಯ್ತು. ಇವರು ನಗುವ ನಯನ ಪೂರ್ತಿ ನುಡಿಸಿ ನಮ್ಮಂತಹ ಸಂಗೀತ ಆಸಕ್ತರ ಖುಷಿ ಹೆಚ್ಚಿಸಲಿ ಎಂದು  ಕೇಳಿಕೊಳ್ತಾ ಇದ್ದೀನಿ ಶ್ರೀ ಶಂಕರ ಚಾನಲ್ ನವರೇ.. ಕೇಳಿಸಿತಾ ನಿಮಗೆ.. ?!

No comments: