ಈಗ ಚಾನೆಲ್ ಗಳ ಭರಾಟೆ..ನ್ಯಾಷನಲ್ ಚಾನೆಲ್ ಪ್ರತಿಯೊಂದು ಭಾಷೆಯಲ್ಲೂ ಆರಂಭಗೊಂಡು ವಿಕ್ಷಕರು ಅವರು ನೀಡುವ ಅಲ್ಪಾಹಾರವನ್ನು ಸೇವಿಸುತ್ತಾ ಜೀವಿಸುತ್ತಿದ್ದರು. ಯಾವಾಗ ಕೇಬಲ್ ಕಾಲ ಆರಂಭ ಆಯ್ತೋ ಅಂದಿನಿಂದ ಚಾನೆಲ್ ಗಳ ಅಂದಿನಿಂದ ವೀಕ್ಷಕರಿಗೆ ಊಟ ಹೆಚ್ಚಾಗಿ ಅಜೀರ್ಣ ಜಾಸ್ತಿಯಾಗಿ ಅತ್ತ ಹೋಗಲಾಗದೆ, ಇತ್ತ ಇರಲೂ ಸಾಧ್ಯವಾಗದೆ ಬದುಕಿದ್ದಾರೆ. ಅಕಟಕಟಾ... !!!
ಆದರೇ ಈ ರೀತಿಯ ಚಾನೆಲ್ ಗಳ ನಡುವೆ ಸರಳವಾಗಿ ಸಿಹಿಯಾಗಿ ಸರಳ ಜೀವನ್ ಎಂಬ ಕನ್ನಡ ಚಾನೆಲ್ ತನ್ನದೇ ಅಸ್ತಿತ್ವ ಪಡೆದಿದೆ. ತುಂಬಾ ಸರಳ ಕಾರ್ಯಕ್ರಮಗಳು, ಸರಳ ಬದುಕಿನ ಬಗ್ಗೆ ತಿಳಿಸುವ, ಸ್ವಾದಿಷ್ಟ ಸಸ್ಯಹಾರಿ ಅಡುಗೆ ಬಗ್ಗೆ ಹೇಳುವ ಈ ಚಾನೆಲ್ ಎಲ್ಲಾ ಸಮಯದಲ್ಲೂ ವೀಕ್ಷಿಸುವಂತೆ ಕಾರ್ಯಕ್ರಮ ಸಿದ್ಧ ಮಾಡಿದ್ದಾರೆ. ಸರಳ ವಾಸ್ತು ಇಷ್ಟ ಪಡುವವರಿಗೂ ಇದು ಉತ್ತಮ ಆಯ್ಕೆ..ಇದರ ಲೊಗೊ ಸಹ ಸರಳವಾಗಿಯೇ ಇದೆ.. ಕಾರ ಮಸಾಲೆ ಊಟ ಮಾಡಿದವರಿಗೆ ಈದು ಸಪ್ಪೆ ಸಪ್ಪೆ ಅನ್ನಿಸ ಬಹುದು.. ಆದರೇ ಒಮ್ಮೆ ಸರಳ ಬದುಕನ್ನು ಅಭ್ಯಾಸ ಮಾಡಿಕೊಂಡರೆ ಬದುಕಲ್ಲಿ ನೊ ಟೆನ್ಷನ್..
No comments:
Post a Comment