ಕಳೆದ ಎರಡು ವರ್ಷಗಳಿಂದ ಮಾಡಿದ ಪ್ರಯತ್ನಗಳು ವ್ಯರ್ಥವಾದರೂ ನಿರಂತರವಾಗಿ ಮಾಡುವ ಯತ್ನ ನಿಂತಿಲ್ಲ.. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಮೈಸೂರು ಮತ್ತು ಬೆಂಗಳೂರು ಎರಡು ಕಡೆ ಇರುವ ನಾನು ಮೈಸೂರು ಹಾಗು ಬೆಂಗಳೂರಿನ ರೇಡಿಯೋ ಸ್ಟೇಷನ್ ನಲ್ಲಿ ಅನೌನ್ಸರ್ ಆಗಿ ಸೇರಿಕೊಳ್ಳಲು (ಅರೆಕಾಲಿಕ) ಸಿದ್ಧತೆ ನಡೆಸಿದ್ದೆ. ಮೈಸೂರಿನಲ್ಲಿ ಬರೆದು ಪಾಸ್ ಆದರೂ ಧ್ವನಿ ಕೈ ಕೊಡ್ತು.. ಬೆಂಗಳೂರಿನಲ್ಲಿ ಬರೆಯುವ, ಧ್ವನಿ, ಟ್ರೈನಿಂಗ್ ಎಲ್ಲದರಲ್ಲೂ ಓಕೇ ಆಯ್ತು. ಕಿಚ್ಚ, ದಚ್ಚು ಸೇರಿದಂತೆ ಕನ್ನಡಿಗರ ಮುದ್ದಿನ ಕಲಾವಿದರ ಹಾಡುಗಳ ಪ್ಲೆ ಲಿಸ್ಟ್ ಸಿದ್ಧ ಮಾಡುವ, ಕೇಳಿಸಿ ಕೊಳ್ಳುವ, ಎಲ್ಲಾ ಹೋಮ್ ವರ್ಕ್ ಮಾಡಿದ್ದಾಯ್ತು.. ಆದ್ರೆ ಅಲ್ಲಿಯೂ ಅದೃಷ್ಟ ಕೈ ಕೊಡ್ತು ಸೊ ಮುಂದುವರೆಯಲು ಆಗಲಿಲ್ಲ, ಇದರ ಮಧ್ಯೆ ಚಾನೆಲ್, ಸಿನಿಮಾ, ಧಾರವಾಹಿ,ಪೇಪರ್ ಅಂತ ಪ್ರಯತ್ನ ಪಟ್ಟಿದ್ದಾಯ್ತು ಫಲಿತಾಂಶ ಶೂನ್ಯ ಶೂನ್ಯ..! ಹಣೆಯಲ್ಲಿ ಬರದಷ್ಟೇ ದಕ್ಕೋದು, ಮುಖ್ಯವಾಗಿ ನಾನು ಮಿಸ್ಫಿಟ್ ಆಗಿದ್ದಕ್ಕೆ ನನಗೆ ಅವಕಾಶಗಳು ಸಿಕ್ಕಿಲ್ಲ ಅನ್ನುವ ನಿರ್ಧಾರಕ್ಕೆ ಬಂದು ನನ್ನನ್ನು ಗುರುತಿಸಿದ್ದ ಹಿಂದೆ ಇದ್ದ ಪತ್ರಿಕೆಯಲ್ಲಿ ಫ್ರಿಲ್ಯಾನ್ಸರ್ ಆಗಿ ಹಾಯಾಗಿದ್ದೀನಿ.. ಇದು ನನ್ನ ಎರಡು ವರ್ಷದ ಅಫಿಡವಿಟ್ಟು..
ಕಳೆದ ವಾರದ ಆರಂಭದ ದಿನಗಳಲ್ಲಿ ನಾನು ತಿರುಪತಿ ಬೆಟ್ಟ ಹತ್ತುವ ಕಾರ್ಯಕ್ರಮದಲ್ಲಿ ಇದ್ದೆ ..ಅದೊಂದು ಖುಷಿಯ ಪ್ರಪಂಚ. ಯಾಕೆಂದ್ರೆ ಅಲ್ಲಿ ಸಾವಿರಾರು ಮೆಟ್ಟಿಲುಗಳು, ಅಪಾರವಾದ ಭಕ್ತರು, ಅವರ ರಾಶಿರಾಶಿ ನಂಬಿಕೆಗಳು, ಮೆಟ್ಟಿಲುಗಳಲ್ಲಿ ತಮ್ಮ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿಕೊಂಡಿರುವ ಸಣ್ಣಪುಟ್ಟ ವ್ಯಾಪಾರಿಗಳು.. ಇವೆಲ್ಲವೂ ಅದ್ಭುತವಾದ ಪ್ರಪಂಚವನ್ನು ಅನಾವರಣ ಮಾಡುತ್ತದೆ ...
ಬಿಗ್ ಬಾಸ್ (ಕನ್ನಡ-ಹಿಂದೀ) ರಿಯಾಲಿಟಿ ಷೋ ನನಗೆ ಯಾಕೆ ಆಕರ್ಷಿಸುತ್ತದೆ ಅಂದ್ರೆ ಅದ್ರ ಬಗ್ಗೆ ಯಾರೇನೇ ಹೇಳಲಿ ನಿಜ ಬದುಕಲ್ಲಿ ಮಾನವ ಅನಿವಾರ್ಯವಾದರೆ ಎಷ್ಟೆಲ್ಲಾ ಹೊಂದಾಣಿಕೆ ಮಾಡಿಕೊಳ್ತಾನೆ ಎನ್ನುವ ಅಂಶವನ್ನು ಪದೇಪದೇ ಸಾರಿ ಹೇಳುತ್ತದೆ.
ನಮಗಿಷ್ಟವಿಲ್ಲ ಅಂದವರು, ನಾವು ನೋಡುವುದೇ ಇಲ್ಲ ಎನ್ನುವವರು ಸಹ ಈ ಮನೆಗೆ ಬರುವುದಕ್ಕೆ ಆಶಿಸುತ್ತಾರೆ.ಇನ್ನು ವಾರದ ಕೊನೆಯಲ್ಲಿ ಕಿಚ್ಚನ, ಹರಟೆ, ಪಂಚಾಯಿತಿ, ಕನ್ನಡ ಎಲ್ಲವೂ ನನಗೆ ಇಷ್ಟವಾದುದು.. ಅದನ್ನು ಮಿಸ್ ಮಾಡಿಕೊಳ್ಳುವುದಕ್ಕೆ ಆಗಲ್ಲ..
ಹರೀಶ್ ರಾಜ್, ಕುರಿ ಪ್ರತಾಪ್ ಅವರು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ತಾರೆ..ಆ ಅಂಶ ಹೆಚ್ಚು ಇಷ್ಟವಾಗುತ್ತದೆ. ಪಾಪ ಚಂದನ್ ಆಚಾರ್ ಅಂದ್ರೆ ಅದ್ಯಾಕೋ ಮಂದಿಗೆ ಕಿರಿಕಿರಿ.. ಸಕತ್ ಪ್ರತಿಭಾವಂತ..ಆದ್ರೆ ಆತುರಗಾರ..
ಸಲ್ಮಾನ್ ವಿಷಯದಲ್ಲಿಯೂ ಅಷ್ಟೇ ಅವರ ಮಾತು , ಪ್ರತಿವಾರ ಧರಿಸುವ ಒಂದೇ ಕಲರ್ ನ ಬೇರೆಬೇರೆ ಬಟ್ಟೆ :-) (ಕರಿ ಬಣ್ಣದ್ದು) ಇವೆಲ್ಲವೂ ಆಸಕ್ತಿಯಿಂದ ವೀಕ್ಷಿಸುವಂತೆ ಮಾಡುತ್ತದೆ. ಆದ್ರೆ ಹಿಂದೀ ಬಿಗ್ ಬಾಸ್ ನಲ್ಲಿ ಬಂದಿರುವ ಸ್ಪರ್ಧಿಗಳು ಯಪ್ಪಾ ಅದೇನ್ ಜಗಳ ಮಾಡ್ತಾರೆ.. ಒಣಪ್ರತಿಷ್ಠೆಯ ಪ್ರತಿರೂಪಗಳು.. ಈ ಪ್ರಕೃತಿಯ ಮುಂದೆ..ನಾವೇನು ಅಲ್ಲ ಮುಖ್ಯವಾಗಿ ನಮ್ಮಂತವರು ಇದ್ದೀವಿ ಅನ್ನುವುದು ಸಹ ಪ್ರಪಂಚಕ್ಕೆ ಗೊತ್ತಿಲ್ಲ.. ಇರುವ ಎರಡು ದಿನಗಳು ಅದೇನು ಕಾದಾಟ, ಕೋಪಾಟ, ಒದ್ದಾಟ..
No comments:
Post a Comment