ಚಿತ್ರಸೆರೆ : ವೆಂಕಟೇಶ್ ಮೂರ್ತಿ ಕಳೆದ ಭಾನುವಾರ, ದಿನಾಂಕ ೦೩-೧೧-೨೦೧೯ ರಂದು ಗೋಖಲೆ ಇನ್ಸ್ಟಿಟ್ಯುಟ್, ಎನ್.ಆರ್.ಕಾಲೋನಿಯಲ್ಲಿ ಶ್ರೀ ಮುರಳಿ ಶ್ರೀನಿವಾಸನ್ ಅವರ ವಸಂತ ಪ್ರಕಾಶನದ ಮೂಲಕ ಮಹಾಭಾರತ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶ್ರೀ ಪೇಜಾವರ ಮಠದ ಪರಮ ಪೂಜ್ಯ ಗುರುಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಆಗಮಿಸಿದ ವೇಳೆ ಸೆರೆಹಿಡಿದ ಚಿತ್ರ |
ಗುರುಗಳು ಶಾಶ್ವತವಾಗಿ ಭೌತಿಕ ದೇಹ ತ್ಯಜಿಸಿದ ದಿನ ಕನ್ನಡ ಸುದ್ದಿವಾಹಿನಿಗಳ ನಿರೂಪಕರು ನಿಜಕ್ಕೂ ಅದ್ಭುತವಾಗಿ ವಿಷಯದ ಪ್ರಸ್ತಾವನೆ, ಮಂಡನೆ ಮಾಡಿದರು . ಆದರೆ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ...! ಬಿಡಿ ...!
ಚಂದದ ಧಾರವಾಹಿ ಎಂದು ಹೇಳುವುದಕ್ಕಿಂತ ಸಾಮಾನ್ಯರಿಗೆ ಇಷ್ಟವಾಗುವಂತಹ ಕಥಾಹಂದರ ಇರುವಂತಹದ್ದು ಅಂದ್ರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸುಬ್ಬಲಕ್ಷ್ಮಿ ಸಂಸಾರ. ಸುಬ್ಬಲಕ್ಷ್ಮಿ ಪಾತ್ರಧಾರಿ ಬಗ್ಗೆ ಹೇಳುವಷ್ಟಿಲ್ಲ. ಬಾಲನಟಿಯಾಗಿ , ಕಂಠದಾನ ಕಲಾವಿದೆಯಾಗಿ, ಸೀರಿಯಲ್ ನಟಿಯಾಗಿ ಹೀಗೆ ಹಲವಾರು ಬಗೆಯಲ್ಲಿ ಕನ್ನಡ ಕಲಾಪ್ರಿಯರ ಮನಗೆದ್ದ ಪ್ರತಿಭಾವಂತೆ. ಅವರ ಜೊತೆ ಶನಾಯ, ಗುರುಮೂರ್ತಿ, ಮುಖ್ಯಮಂತ್ರಿ ಚಂದ್ರು, ಗಿರಿಜಾ ಲೋಕೇಶ್,ಜೊತೆಗೆ ಅರುಣ್ ಪಾತ್ರಧಾರಿ,ಬಾಲಕಲಾವಿದರು , ಮನೆಕೆಲದ ಪಾತ್ರ ಮಾಡಿರುವ ನಟಿ ... ಎಲ್ಲರು ಸಕತ್ತಾಗಿ ಮಾಡಿದ್ದಾರೆ. ಪತಿ ಪತ್ನಿ ವೊ ಎನ್ನುವ ಅಂಶದ ಅಡಿಯಲ್ಲಿ ಈ ಕಥೆ ಸಾಗುತ್ತದೆ. ಮುಖ್ಯವಾಗಿ ಈ ಧಾರಾವಾಹಿಯ ಸಂಭಾಷಣೆ ತುಂಬಾ ವಿಶೇಷವಾಗಿದೆ. ಇಡೀ ವಾರದಲ್ಲಿ ಪ್ರಸಾರವಾಗುವಂತಹ ಎಪಿಸೋಡ್ ಗಳಲ್ಲಿ ಪ್ರತಿ ಸಂಚಿಕೆಯಲ್ಲೂ ಸಾಮಾನ್ಯವಾಗಿ ಎರಡು ಮೂರಾದರೂ ತುಂಬಾ ಇಷ್ಟ ಆಗುವಂತಹ ಡೈಲಾಗ್ ಗಳು ಇರುತ್ತದೆ.(ಮಿನಿಮಮ್ ).
No comments:
Post a Comment