ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರ ಆಗುವ ಡ್ಯಾನ್ಸ್ ಪ್ಲಸ್ ರಿಯಾಲಿಟಿ ಷೋ ತುಂಬಾ ವಿಶೇಷವಾದದ್ದು. ರೆಮೋ ಡಿಸೋಜ ಕ್ಯಾಪ್ಟನ್ ಆಗಿರುವ ಈ ಕಾರ್ಯಕ್ರಮ ನನ್ನನ್ನು ಯಾಕೆ ಆಕರ್ಷಿಸಿದೆ ಅಂದ್ರೆ, ಇದರಲ್ಲಿ ಮಹಾ ಗುರು ರೆಮೋ ತಮ್ಮ ಎಲ್ಲಾ ಶಿಷ್ಯರಿಗೂ ಅವರ ಆಯ್ಕೆಯ ದಾರಿಯಲ್ಲಿ ನಡೆಯಲು ಅವಕಾಶ ಮಾಡಿಕೊಟ್ಟಿರುವುದು. ಧರ್ಮೇಶ್ , ಪುನೀತ್ ಪಾಠಕ್ , ಸುರೇಶ ಮುಕುಂದ್ ಮತ್ತು ಕರಿಷ್ಮಾ ಚವಾಣ್ ಹಾಗು ನಿರೂಪಕ ರಾಘವ್ ಈ ಮಾಧ್ಯಮ ಪ್ರಪಂಚದಲ್ಲಿ ಬೆನ್ತಟ್ಟಿ ಬೆಳೆಸುವವರು ಮತ್ತು ಬೆಳೆಯಲು ಬಿಡದೆ ಇರುವವರು... ಎರಡು ಮನಸ್ಥತಿಯವರೂ ಇದ್ದಾರೆ.ಹೀಗೆ ಪ್ರೋತ್ಸಾಹಿಸಿ ಬೆಳೆಸುವ ರೆಮೋ ಗ್ರೂಪ್ ಬಗ್ಗೆ ತುಂಬಾ ಗೌರವ.. ರೆಮೊ ಶಿಷ್ಯ ಧರ್ಮೇಶ್ ಇಂಥ ವಿಷಯದಲ್ಲಿ ಹಿಂದೆ ಉಳಿದಿಲ್ಲ. ವಿಕಾಸ ಗ್ರೂಪಿಗೆ ಅವಕಾಶ ನೀಡಿ ರಾಷ್ಟ್ರೀಯ ಚಾನೆಲ್ ಮೂಲಕ ಪ್ರಪಂಚದ ಮುಂದೆ ಬರುವಂತೆ ಮಾಡಿದರು. ಆ ಗ್ರೂಪ್ ಮಾಡಿದ ನೃತ್ಯ,ಅದರ ಸಂಯೋಜನೆ ಅದ್ಭುತ.. ಇದು ಮಾತ್ರವಲ್ಲ ಸಾಮಾನ್ಯವಾಗಿ ಡ್ಯಾನ್ಸ್ ಪ್ಲಸ್ ಅನೇಕ ಕಾರಣಗಳಿಂದ ವಿಶೇಷ ಅನ್ನಿಸುತ್ತದೆ.ನಾನು ಮೇಲೆ ಹೇಳಿದ ಡ್ಯಾನ್ಸ್ ನೋಡಿದ್ದು ಕಳೆದ ವಾರವಲ್ಲ ಅದರ ಹಿಂದಿನ ವಾರ ಪ್ರಸಾರವಾಗಿದ್ದು.ಬರೆಯೋಕೆ ಆಗಿರಲಿಲ್ಲ ಈಗ ಹೇಳ್ತಾ ಇದ್ದೀನಿ.ಕೆಲವು ಸರ್ತಿ ರೀ ಟೆಲಿಕಾಸ್ಟ್ ನೋಡ್ತೀನಿ .. ಅದಕ್ಕೆ ಬರೆಯೋದು ತಡ ಆಗಿರುತ್ತದೆ.ನಿರೂಪಕ ರಾಘವ್ ಅತ್ಯುತ್ತಮ ಡ್ಯಾನ್ಸರ್ ಅವರಿಗೆ ಆಗಾಗ ಡ್ಯಾನ್ಸ್ ಮಾಡಲು ಅವಕಾಶ ಕೊಡಿ ಮಾಸ್ಟರ್.. ಅವರ ಡ್ಯಾನ್ಸ್ ನೊಡಲು ಇಷ್ಟವಾಗುವಂತಿರುತ್ತದೆ.
ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುವ ಮತ್ತೊಂದು ನನಗೆ ಸಕತ್ ಇಷ್ಟವಾದ ಧಾರವಾಹಿ ನಜರ್.. ಭೂತ ದೈಯ್ಯಗಳಕಥೆ..ಒಂದಕ್ಕೊಂದು ಅರ್ಥ ತಾತ್ಪರ್ಯ ಇಲ್ಲ, ಕಥೆಯಂತೂ ಹೇಗೋ ಆರಂಭವಾಗಿ ಹೇಗೋ ಮುಗಿದು ಮತ್ತಿನ್ಹೇಗೋ ಶುರುವಾಗುತ್ತದೆ.ಇದರ ಬಗ್ಗೆ ಮುಂದೆ ಎಂದಾದರೂ ಹೇಳ್ತೀನಿ :-)
ಅನ್ಶ್, ಪಿಯಾ, ವೇದಶ್ರೀ, ಚೈತಾಲಿ ಅನ್ಶ್ ಅಪ್ಪ ಅಮ್ಮ, ಚಿಕ್ಕಪ್ಪ, ,ಮಕ್ಕಳು, ಪಿಯಾ ಅಪ್ಪ ನಿಶಾಂತ್, ತಂಗಿ ಸಾವಿ, ನಮನ್ ಅವನ ಹೆಂಡತಿ ದಿಲ್ರುಬಾ.. ಜೊತೆ ಬಹುಮುಖ್ಯ ಪಾತ್ರಧಾರಿ ಮೋಹನ .. ಸಧ್ಯಕ್ಕೆ ದಿಲ್ರುಬಾ ಸತ್ತಿದ್ದಾಳೆ.. ಆಕೆನೂ ಬದುಕ ಬೇಕ್ರಿ.. ಅಕೆ ಇಲ್ಲದ ನಜರ್ ಸ್ವಲ್ಪ ಬೋರ್ ...ನಾನು ಟಿವಿಯಲ್ಲಿ ನೋಡಲು ಆಗದೆ ಇರುವ ದಿನ ಆಪ್ ಮೂಲಕ ಎಪಿಸೋಡ್ ನೋಡ್ತಿನಿ.. ಜೀವನದಲ್ಲಿ ಭಿನ್ನತೆ ಇರಬೇಕು ಅಂದ್ರೆ ನಜರ್ ನೋಡಬೇಕು ಕಣ್ರಿ.. :-)

No comments:
Post a Comment