ಜೀ ಕನ್ನಡ ವಾಹಿನಿಯಲ್ಲಿ ರಾಧಾ ಕಲ್ಯಾಣ ಎನ್ನುವ ಹೆಸರಿನ ಧಾರವಾಹಿ ಪ್ರಸಾರ ಆಗ್ತಾ ಇದೆ.ಸರಳವಾದ ಕಥಾ ಹಂದರ ಇರುವ ಧಾರವಾಹಿ ಅದು. ಅದ್ರಲ್ಲಿ ರಾಧಾ ಪಾತ್ರಧಾರಿ ಆಗಿರ ಬಹುದು ಅಥವಾ ಕ್ರಿಶ್ , ಅವ್ರ ತಾಯಿ, ಅಜ್ಜಿ,ತಮ್ಮ, ಅತ್ತೆ ಅಲ್ಲದೆ ರಾಧಾ ತಂದೆ, ಅಜ್ಜಿ , ತಂಗಿ ವಿಲನ್ ಮುನಿ ಯಾರೇ ಆಗಿರ ಬಹುದು ನಟನೆ ಖುಷಿ ಕೊಡುತ್ತೆ.. ಅದರಲ್ಲೂ ಕತ್ತರಿಗುಪ್ಪೆ ಕಾಂತಮ್ಮ ಪಾತ್ರ ಜಾಸ್ತಿ ಗಮನ ಸೆಳೆಯುತ್ತದೆ. ಯಾರ ಬದುಕಲ್ಲೂ ಇಂಥವರು ಬರ ಬಾರದು.. ಆದರೆ ಜೀವನದಲ್ಲಿ ನಾವು ಅಂದುಕೊಂಡಂತೆ ಎಲ್ಲಾಗುತ್ತೆ ಹೇಳಿ..
ರಾಧಾ ಪಾತ್ರಧಾರಿ ಎಷ್ಟು ಮುದ್ದೋ ಅಷ್ಟು ಚಂದ ಹೀರೊ ಕ್ರಿಶ್ ನಟನೆ .. ಕೆಲವೊಂದು ಧಾರಾವಾಹಿಗಳು ಅಷ್ಟೊಂದು ಇಷ್ಟ ಆಗಲ್ಲ ವೀಕ್ಷಣೆ ಮಾಡುವುದಕ್ಕೆ...ಆದರೆ ರಾಧಾ ಕಲ್ಯಾಣ ಆರಂಭದಿಂದಲೂ ಆಸಕ್ತಿ ಉಳಿಸಿ ಕೊಂಡಿದೆ.. ಸಂಭಾಷಣೆ ಸಹ ಚುರುಕಾಗಿದೆ..
ಶಂಕರ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು, ಸಂಗೀತ, ಪ್ರವಚನ, ಆಧ್ಯಾತ್ಮ ಎಲ್ಲವೂ ಇಷ್ಟವಾಗುತ್ತದೆ. ಸಂಗೀತ ಸುರಭಿ ಎನ್ನುವ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪ್ರಾಸ ಆಗ್ತಾ ಇದೇ..ಕ್ಲಾಸಿಕಲ್ ಸಂಗೀತದ ಬಗ್ಗೆ ಸಕತ್ ಆಸಕ್ತಿ ಇದ್ದವರಿಗೆ ಈ ಕಾರ್ಯಕ್ರಮ ತುಂಬಾ ಇಷ್ಟವಾಗುತ್ತದೆ.ಸಾಮಾನ್ಯವಾಗಿ ದಸರಾ ಮತ್ತು ರಾಮನವಮಿ ಸಮಯದಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಹವಾ! ಆಗಂತು ಎಲ್ಲೆಲ್ಲೂ ಸಂಗೀತವೇ ಅನ್ನುವ ಸುಮಧುರ ವಾತಾವರಣ ಇರುತ್ತದೆ. ಶಂಕರ ವಾಹಿನಿಯವರ ಸಂಗೀತ ಸುರಭಿ ಕಾರ್ಯಕ್ರಮ ಸಹ ಅಂತಹದ್ದೇ ಖುಷಿ ನೀಡುತ್ತದೆ ..
No comments:
Post a Comment