ಕಳೆದೆರಡು ವರ್ಷಗಳಿಂದ ನಾನು ಬ್ಲಾಗ್ ಬರೆಯೋದನ್ನು ಬಿಟ್ಟಿದ್ದೇನೆ.. ಕಾರಣಗಳು ಏನೇ ಇರ್ಲಿ ಬರೆದಿಲ್ಲ ಅನ್ನೋದು ಸತ್ಯ. ಆದ್ರೆ ಹಾಗಂತ ನನಗಿಷ್ಟವಾದ ಕಾರ್ಯಕ್ರಮಗಳ ವೀಕ್ಷಣೆ ಮಾಡುವುದನ್ನು ಇಂದಿಗೂ ಬಿಟ್ಟಿಲ್ಲ ಬಿಡಿ. ಅದರಲ್ಲೂ ಕನ್ನಡ -ಹಿಂದಿ ಬಿಗ್ ಬಾಸ್ . ಅದನ್ನಂತೂ ತಪ್ಪದೆ ನೋಡುವ ವೀಕ್ಷಕರಲ್ಲಿ ನಾನು ಸಹ ಒಬ್ಬಾಕಿ..
ಕಿಚ್ಚಾ ಸುದೀಪಾ ಮತ್ತು ಸಲ್ಮಾನ್ ಅವರ ನಿರೂಪಣೆ , ಅವರ ಸ್ಟೈಲು, ಮಾತುಕತೆ, ಹರಟೆ ಪಂಚಾಯಿತಿ.. ಇವೆಲ್ಲವನ್ನು ವೀಕ್ಷಿಸಿ ಎಂಜಾಯ್ ಮಾಡುತ್ತಲೇ ಬಂದಿದ್ದೇನೆ.ಬಿಗ್ ಬಾಸ್ ಆರಂಭವಾದಾಗಿನಿಂದಲೂ ತಪ್ಪದೆ ನೋಡುತ್ತಿರುವ ವೀಕ್ಷಕರಲ್ಲಿ ನನ್ನ ಹೆಸರನ್ನು ಧಾರಾಳವಾಗಿ ಹೇಳ ಬಹುದೇನೋ ಅಷ್ಟರ ಮಟ್ಟಿಗೆ ಆಸಕ್ತಿ ಅದ್ರ ಬಗ್ಗೆ ನನಗೆ.
ಈ ಬಾರಿ ಕಿಚ್ಚ ಸುದೀಪಾ ಮತ್ತು ಸಲ್ಮಾನ್ ಇಬ್ಬರು ಒಂದೇ ವೇದಿಕೆಯ ಅತ್ತಿತ್ತ ಇರೋದು ನೋಡಿ ಖುಷಿಯಾಯಿತು. ಸಲ್ಮಾನ್ ಕನ್ನಡ ದಲ್ಲಿ ಅದನ್ನು ಹೇಗೆ ಹೇಳ್ತೀರಿ, ಇದನ್ನು ಹೇಗೆ ಹೇಳ್ತಿರಿ ಎಂದು ಕೆಲವೊಂದು ಕೇಳುವಾಗ ಪಾಪ ಸಲ್ಮಾನ್ ಅಂತ ಅನ್ನಿಸಿತು! ಮುಖ್ಯವಾಗಿ ಒಂದು ವಿಷ್ಯದ ಬಗ್ಗೆ ಸ್ಪಷ್ಟ ಪಡಿಸ್ತಿನಿ ಪಿರೆಂಡ್ ಸಲ್ಮಾನ್ .. ಈ ನಮ್ಮ ದೋಸ್ತಾ ದೀಪ್ ಯಾವತ್ತು ಪೂರ್ತಿ ಯಾವ್ ಭಾಷೆಯನ್ನೂ ಆಡೋದಿಲ್ಲ. ಅವರ ಕನ್ನಡಿಂಗ್ಲೀಷ್ ಕನ್ನಡದ ವೀಕ್ಷಕರಿಗೆ ಅದೆಷ್ಟು ಅಭ್ಯಾಸವಾಗಿದೆ ಅಂದ್ರೆ ಅಚ್ಚ ಕನ್ನಡದಲ್ಲಿ ಇಡೀ ಎಪಿಸೋಡ್ ನಡೆಸಿಕೊಟ್ಟು-ಗಿಟ್ಟು-ಬಿಟ್ಟರೆ ನಿಶ್ಚಯವಾಗಿ ಗಾಬರಿಯಾಗಿ ಬಿಡ್ತಾರೆ :-)
ಈ ಬಾರಿ ನಂಗೆ ತುಂಬಾ ಇಷ್ಟವಾದ ಸ್ಪರ್ಧಿ ಪ್ರಿಯಾಂಕ ಪೆದ್ದುಪೆದ್ದು ಮಾತು, ನಿಷ್ಕಲ್ಮಷವಾದ ಬೋಲ್ಡ್ ನೆಸ್ ಇಷ್ಟವಾಗುತ್ತದೆ. ಶೈನ್ ಮತ್ತು ದೀಪಕಾ ಸಹ ಇಷ್ಟ ವಾಗುತ್ತಾರೆ. ಕಲಾಕಾರ್ ಹರಿಶ್ ರಾಜ್ ಅಪರೂಪದ ಪ್ರತಿಭೆ ಸಲ್ಯೂಟ್... ಬಿಗ್ ಬಾಸ್ ಮನೆಯ ಚಾಲಾಕಿ ಆಟಗಾರ ಅಂದ್ರೆ ವಾಸುಕಿ ವೈಭವ್..
No comments:
Post a Comment