ಪ್ರತಿಯೊಂದು ಸಂಗತಿಗೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ಯಾವುದೋ ಒಂದು ಲೇಖನ ಓದುತ್ತಿದ್ದೆ ತಂತ್ರಜ್ಞಾನವನ್ನು ನಾವು ಸರಿಯಾಗಿ ಬಳಸಿದಲ್ಲಿ ಅದು ನಮ್ಮ ಸ್ನೇಹ ಬೆಳೆಸುತ್ತದೆ , ಇಲ್ಲದೆ ಹೋದಲ್ಲಿ ಅದು ನಮ್ಮ ಶತ್ರುವಾಗುತ್ತೆಂತ. ಟೀವಿ ವಿಷಯಕ್ಕೆ ಬಂದಾಗ ಅದೇ ಅಂಶ ಹೊಂದಿಕೆ ಆಗುತ್ತೆ ನಿಜ ಆದರೆ ಅಷ್ಟು ಹೊತ್ತು ಬೇಸರ ಇಲ್ಲದೆ ನೋಡುವಂತಹ ವ್ಯವಧಾನ ಯಾರಿಗೂ ಇರಲ್ಲ ಬಿಡಿ.
ನೋಡಿದ ಕಾರ್ಯಕ್ರಮ ಮನದಲ್ಲಿ ಉಳಿದಾಗ ಮಾತ್ರ ಅದಕ್ಕೆ ಬೆಲೆ. ಕೆಲವು ಮತ್ತೆ ಮತ್ತೆ ನೋಡ ಬೇಕು ಅನಿಸುವಷ್ಟು ಚಂದ ಇದ್ದರೆ, ಒಂದಷ್ಟು ಸಾಕಪ್ಪ ಅನ್ನಿಸುವಂತೆ ಇರುತ್ತದೆ. ಆದರೆ ಒಂದಷ್ಟು ಆರಕ್ಕೂ ಎರಡೇ ಮೂರಕ್ಕೂ ಇಳಿಯದೆ ತನ್ನ ಪಾಡಿಗೆ ಏಕ ರೂಪದಲ್ಲಿ ನಡೆಯುತ್ತಾ ಸಾಗುತ್ತದೆ, ಅಂತಹ ಕಾರ್ಯಕ್ರಮದಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ ಥಟ್ ಅಂತ ಹೇಳಿ ಸಹ ಒಂದು. ಅಲ್ಲಿ ಪುಸ್ತಕಗಳು, ಪ್ರಶ್ನೆಗಳು ಮಾತುಗಳು ಮತ್ತು ಮಾಹಿತಿಗಳು ಎಲ್ಲವು ಚಂದ. ಡಾ. ನಾ . ಸೋಮೇಶ್ವರ ಅವರ ನಿರೂಪಣಾ ಶೈಲಿ ಸಹ ಆಪ್ತ ಅನ್ನಿಸುತ್ತೆ.ಇಷ್ಟು ದಿನಗಳಾದರೂ ಯಾರಿಗೂ ಬೋರ್ ಹೊಡಿಸಿಲ್ಲ.
ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಸಂತಸದ ಸಂಗತಿ ಅಂದ್ರೆ ಅದು ಪ್ರಸಾರ ಆಗುವ ವೇಳೆಯಲ್ಲಿ ಬದಲಾವಣೆ. ಮತ್ತೆ ಒಂಬತ್ತೂವರೆಗೆ ಪ್ರಸಾರ ಆಗ್ತಾ ಇರೋದು ನಿಜಕ್ಕೂ ಖುಷಿಯ ಸಂಗತಿ. ವೀಕ್ಷಕರಿಗೆ ಬೋರ್ ಆಗದೆ ಮುನ್ನಡೆಸಿಕೊಂಡು ಹೋಗುವ ಸುಂದರ ಕಾರ್ಯಕ್ರಮ.
@ ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ ಮತ್ತೊಂದು ಸುಂದರ ಕಾರ್ಯಕ್ರಮ ಮಧುರ ಮಧುರವಿ ಮಂಜುಳಾ ಗಾನ.. ಹಳೆಯ ಹೊಸದರ ಸಮ್ಮಿಲನ. ಜೊತೆಗೆ ಹೊಸ ಪ್ರತಿಭೆಗಳ ಅನಾವರಣ . ಸದಾ ಉತ್ಸಾಹ ಹೆಚ್ಚಿಸುವ ಕಾರ್ಯಕ್ರಮ. ಚಂದನದ್ದಲ್ಲಿ ಈ ಕಾರ್ಯಕ್ರಮ ಸಹಿತ ಯಾವುದೇ ಗಲಾಟೆ -ಅಬ್ಬರ ಇಲ್ಲದೆ ಮುನ್ನಡೆಯುವ., ವೀಕ್ಷಿಸಲು ಖುಷಿ ಅನ್ನಿಸುವ ಕಾರ್ಯಕ್ರಮ ಸಚ್ಚಿ!
@ ಇದೆ ವಾಹಿನಿಯ ಅಡುಗೆ ಕಾರ್ಯಕ್ರಮ ಸಹ ತುಂಬಾ ಆಸಕ್ತಿಯಿಂದ ವಿಕ್ಕ್ಷಿಸುವಂತೆ ಇರುತ್ತದೆ. ನಿರೂಪಕಿಯರು ಪಾಪ ಸ್ವಲ್ಪ ಹೆಚ್ಚೇ ತಲೆ ಅಲುಗಾಡಿಸ್ತಾರೆ ಮಾತಾಡುವಾಗ ಅನ್ನೋದು ಬಿಟ್ರೆ ಇನ್ನು ಎಲ್ಲ ವಿಷಯದಲ್ಲೂ ಪರ್ಫೆಕ್ಟ್.
comments :
No comments:
Post a Comment