ಬಹಳ ದಿನಗಳಾಯ್ತು ಬ್ಲಾಗಿಂಗ್ ಮಾಡಿ.. ನನಗೆ ಅತ್ಯಂತ ಹೆಚ್ಚು ಪ್ರಿಯವಾದ ಬ್ಲಾಗ್ ಇದು.. ಟೀವಿ ಕಾರ್ಯಕ್ರಮಗಳ ಬಗ್ಗೆ ವಿಮರ್ಶೆ ನನಗೆ ತೋಚಿದಂತೆ ಬರೆಯುವ ಹವ್ಯಾಸವು ನನಗೆ ಸಾಕಷ್ಟು ಮುದ ನೀಡಿದೆ... ಸಾಮಾನ್ಯವಾಗಿ ನನಗೆ ಯಾರ ಬಗ್ಗೆಯೂ ಕೋಪ ಅಸಹನೆ ಇಲ್ಲ, ಆ ಗಳಿಗೆಯಲ್ಲಿ ಅನ್ನಿಸಿದ್ದನ್ನು ದಾಖಲಿಸುವ ಮನಸ್ಸು ಅಷ್ಟೇ.
ಆದರು ಯಾಕೋ ಎರಡು ದಿನದಿಂದ ಮನಕ್ಕೆ ಬೇಜಾರಾಗಿದೆ.. ಸಾಮಾನ್ಯವಾಗಿ ದೊಡ್ಡ ಸಂಸ್ಥೆಗಳಿಂದ ಇಂತಹ ಅಚಾತುರ್ಯ ನಡೆದದ್ದು ಹೇಗೆ ಅಂತ.. ಟಿವಿ ನೈನ್ ನವರು ಇಬ್ಬರು ಸಾಹಸಿ ಯುವ ಪತ್ರಕರ್ತರನ್ನು ಬಾವಿಗೆ ದೂಕಿ ಆಳ ನೋಡಿದ್ರಲ್ಲ ಅತ್ಯಂತ ಖೇದಕರ ಸಂಗತಿ ! ಸಂಸ್ಥೇನೂ ಬಚಾವ್ ಆಗುತ್ತೆ .. ಎಲ್ಲರು, ಆದರೆ ಆ ಸಾಹಸಿಗಳು... ಇರ್ಲಿ.. ಏನು ಹೇಳೋಕೆ ಆಗಲ್ಲ ಇಂತಹ ಅನಾಹುತಗಳ ಬಗ್ಗೆ !
@ ಹೆಚ್ಚು ಗೊತ್ತಿರುವ ಅಥವಾ ಗಾಡ್ ಫಾದರ್ ಗಳಿಂದ ಮೇಲೆ ಬಂದಿರುವ... ಇಂತಹ ವಿಶೇಷಣಗಳು ಇರುವಂತಹ ಯಾವುದೇ ಪ್ರತಿಭೆ ಬಗ್ಗೆಯೂ ಹೆಚ್ಚಿನ ಆಸಕ್ತಿ ಇರೋದಿಲ್ಲ, ಆದರೆ ತಮ್ಮ ಸ್ವ ಪ್ರಯತ್ನದಿಂದ ಮೇಲೆದ್ದಿರುವ ಪ್ರತಿಭೆಗಳು ಅಂದ್ರೆ ಜಾಸ್ತಿನೇ ಪ್ರೀತಿ. ಅಂತಹ ಪಟ್ಟಿಗೆ ಸೇರ್ಪಡೆ ಆಗೋರು ಸೋನಿ ಟೀವಿಯ, ಬೂಗಿ ವೂಗಿ ಕಾರ್ಯಕ್ರಮ. ಅತಿ ಹೆಚ್ಚಿನ ಖುಷಿ ಕೊಡುತ್ತೆ ಅಲ್ಲಿನ ಜಡ್ಗಳು, ನಿರೂಪಕರು ಮತ್ತು ಅಪರೂಪದ ಪ್ರತಿಭೆಗಳ ಸಾಧನೆ ಕಂಡಾಗ.
ಅದೇ ರೀತಿ ಜೀ ವಾಹಿನಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸಹ ಅಷ್ಟೇ ಪ್ರಿಯ ನನಗೆ. ಇತ್ತೀಚೆಗಷ್ಟೇ ಹರೆಯದ ಪ್ರತಿಭೆಗಳ ಈ ಕಾರ್ಯಕ್ರಮವನ್ನು ಆಸ್ಥೆಯಿಂದ ವೀಕ್ಷಿಸ್ತಾ ಇದ್ದೆ. ಈಗ ಮಕ್ಕಳ ಕಾರುಬಾರು.. ತಪ್ಪದೆ ಸಮಯ ಮಾಡಿಕೊಂಡು ನೋಡುವ ಕಾತುರ ಇದೆ... ಆಹಾ !
No comments:
Post a Comment