ನಿನ್ನೆ ಈ ಟೀವಿ ಕನ್ನಡ ವಾರ್ತಾವಾಹಿನಿಯ ಉದ್ಘಾಟನೆಯ ನೇರ ಪ್ರಸಾರ ಇತ್ತು. ಈಟೀವಿ ಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭಾಷಣ ಇತ್ತು. ನೇರವಾಗಿ ದೃಶ್ಯ ಮಾಧ್ಯಮಗಳ , ಅದರಲ್ಲೂ ವಾರ್ತಾ ವಾಹಿನಿಗಳ ಬಗ್ಗೆ ತಿಳಿಸಿದರು. ನನಗೆ ಸಿದ್ದು ಅವರ ಮಾತುಗಾರಿಕೆ ಅಂದ್ರೆ ಜಾಸ್ತಿ ಇಷ್ಟ. ಅವರೀಗ ಮುಖ್ಯಮಂತ್ರಿ ಆಗಿರ ಬಹುದು, ಆದರೆ ಅದಕ್ಕಿಂತ ಮುಂಚಿನಿಂದಲೂ ರಾಜಕೀಯ ನಾಯಕ ಮತ್ತು ಉತ್ತಮ ವಾಗ್ಮಿ ಆಗಿದ್ದಾರಲ್ಲ.ಅವರ ಮಾತಿನಲ್ಲಿ ಇರುವ ತಿಳಿ ಹಾಸ್ಯ, ಮೊನಚು, ವಿಷಯವನ್ನು ಹೇಳುವ ಪರಿ .. ಹಾಗೆಂದು ಅವರು ಹೇಳಿದ್ದೆಲ್ಲಾ ಇಷ್ಟ ಆಗುತ್ತೇ ಎಂದಲ್ಲ. ನಿನ್ನೆ ಅವರು ದೃಶ್ಯಮಾಧ್ಯಮಗಳ ಕಾರ್ಯ ವೈಖರಿ, ಅವರು ವ್ಯಕ್ತಿತ್ವಗಳನ್ನು ತೇಜೋವಧೆ ಮಾಡಲು ಪ್ರಯತ್ನಿಸುವ ರೀತಿ ಇಲ್ಲದ ಬಗ್ಗೆ ಹೇಳುತ್ತಾ, ಆರೀತಿ ಮಾಡಿದರೆ ಆ ವ್ಯಕ್ತಿಗೆ ತೇಜೋವಧೆ ಆಗುತ್ತೆ ವಿನಃ ಸಮಾಜಕ್ಕೆ ಮತ್ತು ಜನಗಳಿಗೆ ಏನು ಪ್ರಯೋಜನ ಇಲ್ಲ ಅಂದ್ರು..ಅದು ಸತ್ಯ ಬಿಡಿ ಯಾರ ಬಗ್ಗೆ ಎಷ್ಟೇ ಕಾರ್ಯಕ್ರಮ ಮಾಡಿದರು ಸಹ ಜನರು ತಮ್ಮ ನಾಯಕನಿಗೆ ಓಟು ಹಾಕಿ ಗೆಲ್ಲಿಸೋದು..
@@ ಟೀವಿ ನೈನ್ ನಲ್ಲಿ ಅಂಬರೀಶ್ ಅವರ ಜೊತೆಗೆ ಮಾತುಕತೆಯನ್ನು ಆಡಿದ ಕಾರ್ಯಕ್ರಮ ಪ್ರಸಾರ ಆಗ್ತಾ ಇದೆ. ಅಂಬಿ ಅವರನ್ನು ನೋಡಿ ಹೆಚ್ಚು ಖುಷಿ ಆಗ್ತಾ ಇದೆ. ಏನಾಗಿದೆ ಎನ್ನುವ ಸಂಗತಿ ಅರಿಯದಷ್ಟು ನಿಗೂಡ ಇತ್ತು .. ರೆಹಮಾನ್ ಮುಖ್ಯ ನಿರೂಪಕರಾಗಿದ್ದರೆ. ಘೋಶಾಲ್ ಜೊತೆಗಿದ್ದಾರೆ.. ತುಂಬಾ ವಿಶೇಷವಾದ ಕಾರ್ಯಕ್ರಮ.. ಗೆಟ್ ವೆಲ್ ಸೂನ್ ಅಂಬಿ ಬ್ರೋ!
@@@ರವಿಚಂದ್ರನ್ ಸಿನಿಮಾದಲ್ಲಷ್ಟೊಂದು ಗ್ಲಾಮಿ ಆಗಿ ಕಂಡಿದ್ದ ಪೂನಂ ದಿಲ್ಲೊನ್ ಈಗ ಸೋನಿ ವಾಹಿನಿಯಲ್ಲಿ ಏಕ್ ನಯಿ ಪೆಹಚಾನ್ ಅನ್ನುವ ಸೀರಿಯಲ್ ಮುಖಾಂತರ ಮತ್ತೆ ಬಂದಿದ್ದಾರೆ. ಕನ್ನಡ ದ ಯುದ್ಧಕಾಂಡ ಚಿತ್ರದಲ್ಲಿ ರವಿಚಂದ್ರನ್ ಅವರ ಜೊತೆ ನಟಿಸಿದ್ದ ಆ ಕಲಾವಿದೆ.. ಈಗ ಈ ಧಾರವಾಹಿ ಮುಖಾಂತರ ನಯಿ ಪೆಹಚಾನ್ ರೀತಿನೇ ಇದ್ದಾರೆ. ಚೆನ್ನಾಗಿದೆ ಧಾರವಾಹಿ , ಅದಕ್ಕಿಂತ ಗ್ಲಾಮಿ ಪೂನಂ ಅವರನ್ನು ಇಂತಹ ಪಾತ್ರಗಳಲ್ಲಿ ನೋಡುವಾಗ ಆಹಾ ಅಂತ ಅನ್ನಿಸುತ್ತೆ!
@@ ಇದೆ ವಾಹಿನಿಯಲ್ಲಿ ಪ್ರಸಾರ ಆಗೋ ಮತ್ತೊಂದು ಧಾರವಾಹಿ ಮೈ ನಾ ಭೂಲುಂಗಿ ತೆಲುಗು ಸಿನಿಮಾದ ಕಥೆಯಂತೆ ಇದೆ.. ಸಕತ್ ಮಜಾ ಸಿಕ್ಕಿದೆ ನನಗೆ.. ಆದಾಗ ತಪ್ಪದೆ ನೋಡ್ತೀನಿ.. ಮೂರು ತಿಂಗಳಿಗೆ ಆಕೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡು, ಹಾಡು ಕಲಿತು, ಪಾಪ್ಯುಲರ್ ಆಗಿ .. ವಾವ್ .. ಸಕತ್ ರೀ.. ಯಾವುದನ್ನು ಆಗಲಿ ವಿಮರ್ಶಾತ್ಮಕವಾಗಿ ನೋಡ ಬಾರದು, ಅನೇಕ ಖುಷಿಗಳು ನಮ್ಮಿಂದ ದೂರ ಆಗುತ್ತೆ.. ಈ ಧಾರಾವಾಹಿಯಲ್ಲಿ ಏನು -ಹೇಗೆ ಸಾಧ್ಯ ಅಂತ ನೋಡಿದ್ರೆ ಎಲ್ಲ ತಪ್ಪಾಗಿ ಕಾಣುತ್ತೆ.. ಆದರೆ ನನಗಂತೂ ಈ ಧಾರಾವಾಹಿಯಿಂದ ಸಕತ್ ಎಂಜಾಯ್ ಮೆಂಟ್ ಸಿಕ್ಕಿದೆ ಬಿಡಿ.. ಕಾಸ್ಮೆಟಿಕ್ ಸರ್ಜರಿ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಬರೆದಿದ್ದೇನೆ ನಾನು.. ಅದರಲ್ಲೂ ಲೈಪೋ ಸಕ್ಷನ್ ಆಪರೇಶನ್ ಕಣ್ಣಾರೆ ಕಂಡಿದ್ದೀನಿ , ಕಾಸ್ಮೆಟಿಕ್ ಗೆ ಸಂಬಂಧಪಟ್ಟ ಅನೇಕ ಚಿಕಿತ್ಸೆಗಳನ್ನು- ಅದರ ಫಲಿತಾಂಶ ನೋಡಿದ್ದೇನೆ.. ಕಥೆ ಮತ್ತು ನಿಜ ಎರಡು ಬೇರೆ ಆಗಿರೋದ್ರಿಂದ ನನಗೆ ಈ ಧಾರವಾಹಿ ಲೈಕ್ ಆಗಿದೆ..!
No comments:
Post a Comment