ಸಾಮಾನ್ಯವಾಗಿ ನಾನು ವಾಹಿನಿಗಳನ್ನು ವೀಕ್ಷಿಸುವಾಗ ಕಾರ್ಯಕ್ರಮಗಳನ್ನು ನಡೆಸಿ
ಕೊಡುವ ನಿರೂಪಕರನ್ನು , ಅವರ ಭಾಷೆ ಬಳಕೆ,
ಆಂಗಿಕ ಶೈಲಿಯನ್ನು ಗಮನಿಸ್ತೀನಿ.. ಕೆಲವರು ಪೆಕರು ಪೆಕರಾಗಿ ಮಾತಾಡೋ ರೀತಿ ಭಯಂಕರ
ನಗು ಬರುತ್ತೆ, ಜೊತೆಗೆ ಅಸಹ್ಯ
, ಹೇವರಿಕೆ ಸಹ ಆಗುತ್ತೆ. ಅದರಲ್ಲೂ ಕಾಮಿಡಿ ಚಾನೆಲ್
ಗಳ ಗೋಳು ಅಂದ್ರೆ
ಇಂತಹ ನಿರೂಪಕರ ಆಯ್ಕೆ.
ನಿರೂಪಕರು ಅಂದಾಗ ನೆನಪಿಗೆ ಬರುವಾತ ಅಕುಲ್ ಬಾಲಾಜಿ.
ಈ ತೆಲುಗು
ಶೈಲಿಯ ಕನ್ನಡಿಗ ಅಕುಲ್ ಬಾಲಾಜಿ..
ಮಾತಾಡುವಾಗ ತೆಲುಗು ಘಮಲು
ಕನ್ನಡದಲ್ಲಿ ಗೊತ್ತಾಗ್ತಾ ಇರುತ್ತೆ.. ಆದರು ಆತನ
ಬಗ್ಗೆ ನನಗೆ ಒಂದಷ್ಟು ವಿಶ್ವಾಸ ಇದೆ.. ಅದಕ್ಕೆ
ಕಾರಣ ಅವರು ಜನರ ಜೊತೆ ಮಾತನಾಡುವ ಪರಿ ..ಆರಂಭದಲ್ಲಿ ನಾನು ಪ್ರಿಯಾಂಕ ಪತ್ರಿಕೆಯಲ್ಲಿ ಇದ್ದಾಗ ಅಕುಲ್
ಆಗಿನ್ನೂ ಸಿನಿಮಾ
ಇಂಡಸ್ಟ್ರಿ ಗೆ
ಹೊಸಬರು . ಪತ್ರಿಕೆಗೆ ಬಂದಾಗ ನಾನು
ಅವರ ಸಂದರ್ಶನ ಮಾಡಿ ಬರೆದಿದ್ದೆ. ಅದಾದ ಬಳಿಕ ಅವರು
ಸಿನಿಮಾ, ಟೀವಿ, ನಿರೂಪಣೆಯ ಮುಖಾಂತರ ಬದುಕನ್ನು ಬೆಳೆಸಿಕೊಂಡರು. ಇತ್ತೀಚಿಗೆ ಟೀವಿ ಪತ್ರಿಕೆ ಒಂದರಲ್ಲಿ ಕೆಲಸ
ಮಾಡುವಾಗ ಅವರಿಗೆ ಪ್ರಶಸ್ತಿ ನೀಡಲು ಪತ್ರಿಕೆಯ ಹೆಡ್ಡು.. ನಿರ್ಧರಿಸಿದಾಗ ನಾನು ಅಕುಲ್ರನ್ನು ಫೋನ್
ಮುಖಾಂತರ ಭೇಟಿ ಆಗಿದ್ದೆ !! ಅದಾದ
ಬಳಿಕ ಕಳೆದ ವರ್ಷ
ಚಿತ್ರ ಸಿನಿಮಾ ಪತ್ರಿಕೆಗೆ ಅವರ ಸಿನಿಮ ಒಂದಕ್ಕೆ ಮೂರು ಹೀರೋಗಳನ್ನು ಸಂದರ್ಶನ ಮಾಡುವಾಗ.. ( ಮಲ್ಟಿ ಸ್ಟಾರರ್ - ಶ್ರೀ ಮುರಳಿ-ಅಕುಲ್
ಬಾಲಾಜಿ-ಶ್ರೀಕಿ) ಇವರಿಗೆ
ಮಾತಿನ ಮಧ್ಯೆ ಹಳೆಯದನ್ನು ನೆನಪಿಸಿದೆ.. ಬರೆಯೋರ ಅದರಲ್ಲೂ ನನ್ನಂತಹ ಪುಡಿ ಪತ್ರಕರ್ತರ ಹಣೆ ಬರಹವೇ ಇಷ್ಟು...
ಏನೇ ಆದರು
ಆ ಸಮಯದಲ್ಲಿ ಮಾತಲ್ಲಿ ಇದ್ದ ಭಾವ
ಇಷ್ಟ ಆಗಿತ್ತು.. ಈ ಟೀವಿ
ಯಲ್ಲಿ ಈಗ ಡ್ಯಾನ್ಸ್ ರಿಯಾಲಿಟಿ ಷೋ ನಿರೂಪಕರಾಗಿದ್ದಾರೆ ಅಕುಲ್...
ಅವರ ಷೋ ಈ
ಟೀವಿ ಕನ್ನಡದಲ್ಲಿ ನೋಡಿದಾಗ ಇವೆಲ್ಲ ನೆನಪಾಯಿತು ಇವೆಲ್ಲ !
@@ ಜೀ ವಾಹಿನಿ
DID ಲಿಲ್ ಮಾಸ್ಟರ್ ಕಾರ್ಯಕ್ರಮ ಆರಂಭ ಆಗಿದೆ..ನನಗೆ ಅತಿ
ಹೆಚ್ಚು ಇಷ್ಟ ಆಗುವ
ಕಾರ್ಯಕ್ರಮಗಳಲ್ಲಿ ಅದು ಸಹ
ಒಂದಾಗಿದೆ. ಅದರಲ್ಲಿ ಎಲ್ಲ ಮಕ್ಕಳು ಇಷ್ಟ
ಆಗ್ತಾರೆ, ಆದರೆ ಫಲಕ್
ಅನ್ನುವ ಶ್ರಾವಣ
ದೋಷ ಇರುವ ಮಗು,
ಅನುಷ್ಕ ಎನುವ ಮಾತಿನ
ಮಲ್ಲಿ ಮತ್ತು ಸಚಿನ್
ಎನ್ನೋ ಶಾಯರಿ
ಮಗು ಹೆಚ್ಚು ಗಮನ
ಸೆಳೆದಿದ್ದಾರೆ. ಫಲಕ್ ಮಾತು
ಆಡ್ತಾಳೆ ಗಿಣಿಯಂತೆ ... ಎಷ್ಟು ಜಾಣೆ
ಗೊತ್ತಾ .. ಕಿವಿ ಕೇಳಿಸದೆ ಇದ್ದರು ಆ ರಿದಂ
ಗೆ ತಕ್ಕಂತೆ ಆಕೆಯ ಕಾಲುಗಳು ಹೆಜ್ಜೆ ಹಾಕುತ್ತೆ, ಮುಖದ ಭಾವವು
ಸಹ ಅದ್ಭುತ...!
ಸಚಿನ್ ಅದೆಷ್ಟು ಜಾಣ ಮಗು ಗೊತ್ತ
ಡಾನ್ಸ್ ಜೊತೆಜೊತೆಗೆ ಶಾಯರಿ ಸಹ
ವಾವ್,, ಅನುಷ್ಕ ಮಾತು
ಕೇಳಲೇ ಬೇಕು ಅನ್ನಿಸುವಷ್ಟು ಚಂದ ಇರುತ್ತೆ. ಅದೇ ರೀತಿ
ಆಕೆಯ ಡ್ಯಾನ್ಸ್ ಸಹಿತ..
ಇನ್ನು ಜೈ ಅತ್ಯುತ್ತಮ ನಿರೂಪಕ.. ಮಾತು
ಲೀಲಾಜಾಲ, ನನ್ನ ಫೇವ್
ಗ್ರಾಂಡ್ ಮಾಸ್ಟರ್ ಮಿಥುನ್ ದಾ,ಮಾಸ್ಟರ್ ಗೀತಾಮಾ, ಮಾಸ್ಟರ್ ಅಹಮದ್ ಖಾನ್
ಎಲ್ಲರ ಬಗ್ಗೆ ಹೇಳುವಷ್ಟೇ ಇಲ್ಲ.. ಅಸಮಾನ್ಯ ಪ್ರತಿಭೆ ಮಾಸ್ಟರ್ ಮುದಸ್ಸರ್ ಸಹ ಮುಖ್ಯ
ಸ್ಪರ್ಧೆಯಲ್ಲಿ ಇದ್ದಿದ್ದರೆ ಚಂದಿತ್ತು.. ! ಆತ ಈ
ಸ್ಪರ್ಧೆಯ ಅತ್ಯಂತ ಪ್ರತಿಭಾವಂತ ಕಿರಿಯ ತೀರ್ಪುಗಾರ... ಒಳ್ಳೊಳ್ಳೆ ಅದರಲ್ಲೂ ಸಲ್ಲು BOY
ಸಿನಿಮಾಗಳಿಗೆ ಕೊರಿಯಾಗ್ರಫಿ ಮಾಡಿದ್ದಾರೆ.. ಸೊ ಅದಕ್ಕೆ
ಸ್ವಲ್ಪ ಜಾಸ್ತಿ ಇಷ್ಟ
ನನಗೆ ಮುದಸ್ಸರ್ ಬಗ್ಗೆ :-)
No comments:
Post a Comment