ಇಂದು ಪುಸ್ತಕ ಬಿಡುಗಡೆಗೆ ಹೋಗಿದ್ದೆ.. ಹೆಚ್ಚಾಗಿ ನಾನು ಇಂತಹ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ಇತ್ತೀಚೆಗೆ... ಕಾರ್ಯಕ್ರಮ ತುಂಬಾ ಚೆಂದ ಇತ್ತು.. ಪುರುಷೋತ್ತಮ ಬಿಳಿಮಲೆ ಸೇರಿದಂತೆ ವೇದಿಕೆ ಮೇಲಿದ್ದವರೆಲ್ಲರದ್ದು ಮಾತು ಸಕತ್ತಾಗಿತ್ತು...
ಕಾರ್ಯಕ್ರಮವೆಲ್ಲ ಪೂರ್ಣ ಆದ ಬಳಿಕ.. ಎಲ್ಲರು ಅತ್ತಿತ್ತ ವಿಂಗಡಣೆ ಆದರು.. ನಾವು ಒಂದಷ್ಟು ಜನರು ಒಟ್ಟಿಗೆ ಸೇರಿದೆವು.. ಮಾತಿನ ಮಧ್ಯೆ ಬಂಡ ಅದಕ್ಕಿಂತಲೂ ಹೆಚ್ಚಿನ ಪ್ರಾಧಾನ್ಯತೆ ಪಡೆದ ಸಂಗತಿ ಅದರಲ್ಲೂ ಟೀವಿ ಷೋ ಅಂದರೆ ಕಾಮಿಡಿ ವಿತ್ ಕಪಿಲ್... ಕಲರ್ ವಾಹಿನಿಯ ಕಾಮಿಡಿ ಕಪಿಲ್ ವಿಷಯವನ್ನು ಬೆಂಗಳೂರಿನ ಕನ್ನಡ ಬುಕ್ ರಿಲೀಸ್ ನಂತರ ಮಾತಾಡ್ತಾರೆ ಹೆಣ್ಣುಮಕ್ಕಳು ಅಂದ್ರೆ ಆ ಕಾರ್ಯಕ್ರಮ ಅದೆಷ್ಟು ಖುಷಿ ಕೊಟ್ಟಿರ ಬಹುದು ಅಲ್ವೇ!
ಕಾಮಿಡಿ... ಕಾರ್ಯಕ್ರಮದಲ್ಲಿ ನನಗೆ ಕಪಿಲ್ ಅಲ್ಲದೆ ಎಲ್ಲ ಪಾತ್ರಗಳು ಇಷ್ಟ ಆಗುತ್ತದೆ.ಆದರೆ ನಾನು ಪ್ರತಿಬಾರಿ ಕಾಯುವುದು ಸಿದ್ದು ಪಾಜಿ ಧರಿಸಿರುವ ಪಗಡಿ ಯಾವ ಕಲರ್ ಅಂತ ನೋಡೋಕೆ (ಇದು ನಾನು ಬಟ್ಟೆ ತಗೊಳೋಕೆ ಸಾಕಷ್ಟು ಸಹಾಯ ಮಾಡಿದೆ ಅನೇಕ ಸಂದರ್ಭಗಳಲ್ಲಿ ;-) }ಮತ್ತು ದಾದಿ , ಬುವ , ಪಲಕ್ ... ಬಿಟ್ಟು ಅತ್ತೆ ಮತ್ತು ಅಜ್ಜಿ ಸಕತ್ ಖುಷಿ ಕೊಟ್ಟಿದ್ದಾರೆ ನಟನೆ ಮುಖಾಂತರ, ಅದೇ ರೀತಿ ಪಲಕ್ ಸಹಿತ..
ಇಲ್ಲಿ ಪಾತ್ರಗಳ ಕಲಸುಮೇಲೋಗರ ಇಲ್ಲ ... ಆದ ಕಾರಣ ಇಷ್ಟ ಆಗುತ್ತೆ.
ಕನ್ನಡದಲ್ಲಿ ಸುವರ್ಣ ಸುದ್ದಿ ವಾಹಿನಿಯಲ್ಲಿ ಖುಷಿ ಕೊಡುವ ಕಾರ್ಯಕ್ರಮ ವಿಶ್ವ ಅವರ ಉಡೀಸ್...ವಿಶ್ವ ಜೊತೆಯ ಸಹ ಕಲಾವಿದ ಇತ್ತೀಚೆಗೆ ನನ್ನ ತಾಯಿ ಅವರ ತವರೂರಿಗೆ ಬಂದಿದ್ದರು ಮಿಮಿಕ್ರಿ ಕಾರ್ಯಕ್ರಮ ನಡೆಸಲು. ಅವರದ್ದು ಸಾಮಾನ್ಯ ಜೋಕ್ಸ್ ಬಿಡಿ... ಆದರೆ ಮಾತಿನ ನಡುವೆ ಆತ ಅಲ್ಲಿನವರಿಗೆ ನಿಮ್ಮ ಬಳಿ 3ಜಿ ಫೋನ್ ನೋಡಿದ್ದಿರಾ ಅಂದ್ರು...ಒಂದರ್ಥಲ್ಲಿ ಅಲ್ಲಿನವರಿಗೆ ಅದರ ಬಗ್ಗೆ ಅರಿವೇ ಇಲ್ಲವೇನೋ ಎನ್ನುವಂತೆ ಮಾತಾಡಿದರು.. ನನ್ನ ತಾಯಿಯ ತವರೂರಲ್ಲಿ ಅಂದು ಪ್ರೌಢಶಾಲೆ ಐವತ್ತರ ಸಂಭ್ರಮದಲ್ಲಿ ಇತ್ತು... ಅಲ್ಲಿ ಓದಿದ ಬಹುತೇಕರು ಐಎಸ್ , ಐಪಿಎಸ್ ಮಾತ್ರವಲ್ಲ , ವಕೀಲರು, ವೈದ್ಯರು, ಟೀಚರ್ ಹೀಗೆ ಅತ್ಯುತ್ತಮ ಹುದ್ದೆಯಲ್ಲಿ ಇದ್ದಾರೆ. ಹಳ್ಳಿಯಲ್ಲಿ ಇರುವ ತಾಯಿತಂದೆಯರು ದೆಹಲಿ, ಮುಂಬೈ ಮುಂತಾದ ಕಡೆ ಇರುವ ತಮ್ಮ ಮಕ್ಕಳ ಮನೆಗೆ ಫ್ಲೈಟ್ ನಲ್ಲೆ ಓಡಾಡೋದು.. ಇರ್ಲಿ ಬಿಡಿ ಪಾಪ ಆ ಕಲಾವಿದರಿಗೆ ಏನು ಗೊತ್ತಿದೆ... ನನ್ನ ಅಮ್ಮ ನಾ ಕಂಡ ಅತ್ಯಂತ ಬುದ್ಧಿವಂತ ಹೆಣ್ಣುಮಕ್ಕಳಲ್ಲಿ ಒಬ್ಬರು.. ಟೂ ಬ್ರಿಲಿಯಂಟ್ ... ನನ್ನ ಅಮ್ಮನ ಊರು, ಅಲ್ಲಿನ ಸಾಧಕರನ್ನು ನೆನಪು ಮಾಡಿಕೊಂಡರೆ ಹೆಮ್ಮೆ ಆಗುತ್ತೆ ನನಗೆ :-)
No comments:
Post a Comment