ಏನ್ ಮಾಡ್ತಾ ಇರ್ತಾರೆ

Image result for flowers drawings
“You have to grow from the inside out. None can teach you, 
none can make you spiritual. 
There is no other teacher but your own soul.” 
― Swami Vivekananda

ಇಂದು ವಿವೇಕಾನಂದರ ಹುಟ್ಟುಹಬ್ಬ.. ನನ್ನ ಪ್ರೀತಿಯ ಗುರುದೇವ..ಆದರ್ಶ ಅವರು .. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಗುರುದೇವ..

ಕಳೆದವಾರ ಪುಟ್ಟಆಕ್ಸಿಡೆಂಟ್ ಆಯ್ತು.. ಕೈಗೆ ಸ್ವಲ್ಪ ಗಾಯ ಆಗಿದೆ.. ಕೀ ಬೋರ್ಡ್ ಮುಟ್ಟುವ..ತಟ್ಟುವ ಯಾವ ಕೆಲಸ ಆಗದ ಸ್ಥಿತಿ. ನಾನು ಎಡಗೈ ಬರಹಗಾರ್ತಿ  ಆದ ಕಾರಣ ಸ್ವಲ್ಪ ಸೇಫ್ .. ಆದರೂ ಸಹ ಕೀ ಬೋರ್ಡ್ಗೆ ಎರಡು ಕೈಗಳು ಬೇಕಾಗಿರುತ್ತೆ..ಇನ್ನು ಬೆರಳ ಹುಣ್ಣು ಮತ್ತು ಮೈಕೆ ನೋವು ಹಾಗೇ ಇದೆ.. ಮಲಗಿದರೆ.. ಆಗಿರುವ ಸಮಸ್ಯೆ ಬಗ್ಗೆ ಚಿಂತಿಸುತ್ತಾ ಕೂತರೆ ಅದರ ಪರಿಣಾಮ ಹೆಚ್ಚಾಗುತ್ತೆ.. ಅಂದು ಅಂದ್ರೆ ಬಿದ್ದ ದಿನವು ಸಹ ನಾನು ಆಫೀಸಿಗೆ ಹೋಗಿ ಕೆಲಸ ಮಾಡಲು ಆರಂಭ ಮಾಡಿದ್ದೆ.. ಮಧ್ಯಾಹ್ನ ಆಗುವಷ್ಟರಲ್ಲಿ ಇಡೀ ದೇಹವೆ ಚೂರು ಚೂರು ಆದ ನೋವು.. ಬಲಭಾಗಕ್ಕೆ ಬಿದ್ದಾಗ ಆದಂತಹ  ಗಾಯ..ರಕ್ತ . ಎಡ ಪಾದಕ್ಕೆ ಹೆಜ್ಜೆ ಇಡಲು ಸಾಧ್ಯವಾಗದೆ ಇರುವ  ಪರಿಸ್ಥಿತಿ. ನಮ್ಮ ಬಗ್ಗೆ ನಾವು ತಿಳಿಯ ಬೇಕಾದರೆ ಆಗಾಗ ಇಂತಹದ್ದೇನಾದರು ಆಗ್ತಾ ಇರಬೇಕೇನೋ  ಗೊತ್ತಿಲ್ಲ. ಸಾಮಾನ್ಯವಾಗಿ ನನಗೆ ತೊಂದರೆ ಆದ ಬಗ್ಗೆ ನಾನು ನನ್ನ ಬ್ಲಾಗ್ ಅಥವಾ ನನ್ನ ಫ್ರೆಂಡ್ಸ್ಗೂ ಸಹ ಹೇಳೋಲ್ಲ. ಕಳೆದವಾರ ಅಂದ್ರೆ ಶನಿವಾರ ನಾನು ಹಾಕಿದ ಪೋಸ್ಟ್ ಒಂದರ ಬಗ್ಗೆ ಬಂದ ಬೃಹತ್ ಅಭಿಪ್ರಾಯಕ್ಕೆ - ಅಭಿಮತಕ್ಕೆ  ಗೊತ್ತಿಲ್ಲ ನನಗೆ ಏನು ಹೇಳ ಬೇಕು ಅಂತ.. ಯಾಕೇಂದ್ರೆ ನನ್ನ ಕನ್ನಡ ಅಷ್ಟೊಂದು ಗಟ್ಟಿಯಿಲ್ಲ.. ನಾನು ಉತ್ತರಿಸಲು ತಡವಾದುದಕ್ಕೆ.. ಬೇರೆ ಬೇರೆಯ ರೀತಿಯಲ್ಲಿ ವಿಷಯಗಳು..ಟ್ಯಾಗುಗಳು ಹರಡಿ... ಕೈ ನೋವುತ್ತಿದ್ದರು ಎದ್ದು ಉತ್ತರಿಸುವ ಒಂದು ಪರಿಸ್ಥಿತಿ.

 @ ಕಳೆದ ಶುಕ್ರವಾರ ಚಂದನ ವಾಹಿನಿಯಲ್ಲಿ  ಥಟ್ ಅಂತ ಹೇಳಿ ಕಾರ್ಯಕ್ರಮ ತುಂಬಾ ಇಷ್ಟ ಆಯ್ತು. ಅದಕ್ಕೆ ಕಾರಣ ಅಂದಿನ ಅತಿಥಿಗಳು. ಅದರಲ್ಲೂ ಅತಿಥಿಗಳಲ್ಲಿ ಒಬ್ಬರಾದ ಅಶ್ವಥ್ ನಾರಾಯಣ ಅವರ ಜೊತೆಗೆ ನಮ್ಮ ನಾ ಸೋಮೇಶ್ವರ್ ಮೇಷ್ಟು ಮಾತುಕತೆ ನಡೆಸಿದರು.ಇಲ್ಲಿ ಪ್ರಶ್ನೆಗಳು ಹಾಗೂ ಪುಸ್ತಕ ಒಂದು ನೆಪ ಅಷ್ಟೇ.
ಅಶ್ವಥ್ ನಾರಾಯಣ ಸರ್ ಅವರನ್ನು ನಡೆದಾಡುವ ವಿಶ್ವಕೋಶ ಎಂದು ಹೇಳುತ್ತಾರೆ ಎನ್ನುವ ಮಾತನ್ನು ಸೋಮೇಶ್ವರ್ ಸಾರ್ ಅವರು ಈ ಸಮಯದಲ್ಲಿ ತಿಳಿಸಿದರು. ಪ್ರಾಯಶಃ ಅವರೇ ಅನ್ನಿಸುತ್ತೆ ಲಾರ ಇಂಗಲ್ಸ್ ಅವರ ಕನ್ನಡ ರೂಪಾಂತರವನ್ನು ಕನ್ನಡಿಗರಿಗೆ ನೀಡಿದ್ದು..
ಕನ್ನಡದಲ್ಲಿ ಇರುವಷ್ಟು ಸಾಹಿತ್ಯ ಭಂಡಾರ ಬೇರೆಲ್ಲೂ ಇಲ್ಲ ಎಂದು ಹೇಳಲ್ಲ :).. ಆದರೇ, ವಿಶ್ವದ ಕೆಲವೇ ಕೆಲವು ಭಾಷೆಗಳಿಗೆ ಮಾತ್ರ  ಭಾಷೆಯೊಂದಿಗೆ ಆಡುವ ಶಕ್ತಿಯಿದೆ..ಅದರಲ್ಲಿ ಕನ್ನಡ ಸಹ ೊಂದಾಗಿದೆ. ಒಂದು ಪದಕ್ಕೆ ನಾನಾರ್ಥ ನೀಡುವ  ಶಕ್ತಿ ಇರುವ ಕನ್ನಡದ ಬಗ್ಗೆ ಎಷ್ಟು ಹೇಳಿದರು ಸಾಲದು. ಒಂದು ಲೇಖನ ಬರೆಯುವಾಗ ಒಮ್ಮೊಮ್ಮೆ ಅದೆಷ್ಟು ಚಿಂತನೆಗೀಡು ಮಾಡುತ್ತದೆ ಅಂದ್ರೆ ಒಂದು ಪದದ ಸಮಾನಾರ್ಥಕವನ್ನು ಹುಡುಕಿ ಬರೆಯುವಷ್ಟರಲ್ಲೇ ಸಮಯ ಕರಗಿರುತ್ತದೆ.. ಆದರೂ ಆ ಮೂಲಕ ಸಾಕಷ್ಟು ಸಗತಿಗಳನ್ನು ತಿಳಿಯುವ ಒಂದು ಅವಕಾಶ ..
ಅಶ್ವಥ್ ನಾರಾಯಣ ಸರ್ ಅವರು ವೆಂಕಣ್ಣಯ್ಯನವರ  ಬಗ್ಗೆ ಹೇಳುತ್ತಾ ಅವರು ಆಧ್ಯಾತ್ಮದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು, ಒಮ್ಮೆ ದೇವರಕೋಣೆಗೆ   ಹೋದರೆ ಕೆಲವು ಗಂಟೆಗಳು ಬರುತ್ತಿರಲಿಲ್ಲ .. ಅಲ್ಲಿ ಏನ್ ಮಾಡ್ತಾ ಇರ್ತಾರೆ ಎನ್ನುವ ಜನರ ಪ್ರಶ್ನೆಗೆ ಬೆಳಗೆರೆ ಕೃಷ್ಣ ಶಾಸ್ತ್ರಿ ಅವರು  ಉತ್ತರ ನೀಡಿದ್ದರು. ದೇವರ ಕೋಣೆಯಲ್ಲಿ ಕುಳಿತು ದೇವರ  ಧ್ಯಾನ, ಪೂಜೆ, ಪುನಸ್ಕಾರದ ಜೊತೆಗೆ, ತಮ್ಮ ಶಾಲಾ ಮಕ್ಕಳ ಕರಡು ತಿದ್ದುವುದು, ಗ್ರಂಥ ಸಂಪಾದನೆಗೆ ಸಂಬಂಧಪಟ್ಟ ಕೆಲಸ ಹೀಗೆ ಕನ್ನಡದ ಕೆಲಸಗಳಲ್ಲಿ ಸಂಪೂರ್ಣವಾಗಿ ಮಗ್ನರಾಗಿರುತ್ತಿದ್ದರಂತೆ. ಏನು ನೀವು ಹೀಗೆ ಅಂದಾಗ ಕನ್ನಡದ ಕೆಲಸ ದೇವರ ಕೆಲಸ ಎಂದು ಉತ್ತರಿಸಿದ್ದರಂತೆ ಆ ಮಹನೀಯರು ಎಷ್ಟು ಅದ್ಭುತ ಅಲ್ವೇ! ಖುಷಿ ಆಯ್ತು ಆ ಮಾಹಿತಿ  ಕೇಳಿ.. ಶುಕ್ರವಾರದ ಥಟ್ ಅಂತ ಹೇಳಿ ಕಾರ್ಯಕ್ರಮ ಈರೀತಿಯ ವಿಭಿನ್ನತೆ ಹೊಂದಿರುತ್ತದೆ.. ಹೆಚ್ಚು ಆಸಕ್ತಿಯಿಂದ ಕಾಯುವ ದಿನ ಅದು ನನಗೆ..
ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಯೇಗ್ದಾಗೆಲ್ಲ ಐತೆ ಓದಿ ಅದು ಸಹ ಅತ್ಯಂತ ಖುಷಿ ನೀಡುವ ಕೃತಿ.. 

No comments: