ಅತ್ಯಂತ ಕುತೂಹಲಕಾರಿಯಾದ ಘಟ್ಟದಲ್ಲಿ ಮುನ್ನಡೆಯುತ್ತಿದೆ ಕಲರ್ ವಾಹಿನಿಯಲ್ಲಿ ಕನ್ನಡ ಬಿಗ್ ಬಾಸ್.. ಯಾಕೆ ಅಂದ್ರೆ ಕೊನೆ ಹಂತಕ್ಕೆ ಬರುತ್ತಿದೆ ಕಾರ್ಯಕ್ರಮ. ಜನ ಕಡಿಮೆ ಆಗಿದ್ದಾರೆ. ಆ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಹೆಚ್ಚು ಹೆಚ್ಚು ಭಾಗವಹಿಸಬೇಕು. ಯಾರು ಮೈಗಳ್ಳರಾಗೋಕೆ ಆಗಲ್ಲ..ಆದರು ಅವರನ್ನೇ ಹೆಚ್ಚು ಫೋಕಸ್ ಮಾಡ್ತಾರೆ ಟೀವಿ ಮಂದಿ.
ಜೋಡಿಗಳು ಒಟ್ಟಿಗೆ ನಿಂತ ಆ ಟಾಸ್ಕ್ ನಲ್ಲಿ ಆನಂದ್ ಅವರು ಮಾತು, ಆ ಓಘ , ತುಂಟ ಪ್ರತಿಕ್ರಿಯೆ ಖುಷಿ ಕೊಡ್ತು.. ಶ್ರುತಿಯವರು ಧನುರ್ಮಾಸದಲ್ಲಿ ಏನ್ ವಿಶೇಷ ಅಂದಾಗ ಜಾಣ ಕಲಾವಿದ ಅಯ್ಯಪ್ಪ ಪೂಜಾ ಅಂತ ಉತ್ರ ಕೊಟ್ರು..ಬಾಲ್ಯದಲ್ಲಿ ನಾವು ಎರಡು ಪ್ರಶ್ನೆಗೆ ಒಂದೇ ಉತ್ರ ಕೊಡುವ ಆಡ್ತಾ ಇದ್ವಿ.. ಉದಾಹರಣೆಗೆ :ಒಬ್ಬಾತ ಅಂಗಡಿಗೆ ಬಂದು ಸರ್ ಈ ದಾರಿ ಮೈಸೂರ್ ಕಡೆಗೆ ಹೋಗುತ್ತಾ ಎಂದು ಪ್ರಶ್ನಿಸುತ್ತಾನೆ, ಅದೇ ಸಮಯದಲ್ಲಿ ಹುಡುಗಿಯೊಬ್ಬಳು ಬಂದು ಅಂಕಲ್ ಈ ಚಾಕ್ಲೆಟ್ ಎಷ್ಟು ಅಂತ ಕೇಳ್ತಾಳೆ.. ಅದಕ್ಕೆ ಒಂದೇ ಉತ್ರ ನಾಕಾಣೆ ..
ಹೀಗೆ ಎರಡು ಪ್ರಶ್ನೆ ಒಂದು ಶ್ರುತಿ ಅವರದ್ದು, ಮತ್ತೊಂದು ವೀಕ್ಷಕರದ್ದು . ಎರಡಕ್ಕೂ ಒಂದೇ ಉತ್ರ ಆನಂದ್ ಕಡೆಯಿಂದ.....ಜಾಣ :-)
ಆನಂದ್ ಹಾಗೂ ಶ್ರುತಿ ಅವರು ಎಷ್ಟು ಪ್ರತಿಭಾವಂತರು ಅನ್ನೋದು ಮತ್ತೊಂದು ಟಾಸ್ಕ್ ನಿಂದಲೂ ಸಹ ಪ್ರಕಟ ಆಗಿದೆ.. ತುಂಬಾ ಖುಷಿ ಕೊಡ್ತಾ ಇದೆ..ಸಾಮಾನ್ಯವಾಗಿ ಜಗಳ , ಕದನ, ಅಸೂಯೆ, ಹೀಗೆ ಮನಸೋ ಇಚ್ಚೆಯ ಭಾವನೆಗಳನ್ನು ಹೊಮ್ಮಿಸುವ ಸ್ಪರ್ಧಿಗಳು, ಅವೆಲ್ಲ ನೋಡುವ ಕಿರಿಕಿರಿಗಿಂತ ಹೀಗೆ ಭಿನ್ನ ರೀತಿಯ ಟಾಸ್ಕ್ ಗಳು ಚಂದ ಇರುತ್ತದೆ.
ಕಳೆದವಾರ ಮನೆಯಿಂದ ಹೊರಗೆ ಬಂದ ಸುಷ್ಮಾ ಅವರು ಭಾವನ ಬೆಳಗೆರೆಯನ್ನು ಸ್ಲೋ ಪಾಯಿಸನ್ ಅಂತ ಕರೆದರು .. ತುಂಬಾ ಆಶ್ಚರ್ಯ ಆಯ್ತು ನನಗೆ ಆ ಪದ ಕೇಳಿ.. ಯಾಕೇಂದ್ರೆ ಭಾವನ ಓರ್ವ ಸರಳ ಮನದ ಹೆಣ್ಣುಮಗಳು.. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಆಕೆ ಟಾಸ್ಕ್ ಆಡದೆ ಇರಬಹುದು, ಆದರೆ ಅಪ್ಪಟ ಗೃಹಿಣಿ.. ಇಲ್ಲಿ ನಾನು ಗೃಹಿಣಿ ಅನ್ನುವ ಪದ ಯಾವ ಕಾರಣದಿಂದ ಬಳಸ್ತಾ ಇದ್ದೀನಿ ಅಂದ್ರೆ ಎಲ್ಲರ ಜೊತೆ ಸಮಾನಭಾವದಿಂದ ಪ್ರಯತ್ನಿಸುವ ಗುಣವೇ ಗೃಹಿಣಿ ಪಟ್ಟ..(ಇಲ್ಲಿ ನನ್ನ ಅಭಿಪ್ರಾಯದಲ್ಲಿ ಮದುವೆ ಆಗಿದ್ರೆ ಮಾತ್ರ ಈ ಪಟ್ಟ ದೊರಕ ಬೇಕಿಲ್ಲ..ಇದು ಒಂದು ವಿಶೇಷ ಸ್ಥಾನ) . ಆಕೆಗೆ ದುಡ್ಡು ಮುಖ್ಯ ಅಲ್ಲ, ಅದರ ಬಗ್ಗೆ ಕನ್ನಡ ವೀಕ್ಷಕರಿಗೆ ಹೇಳಬೇಕಿಲ್ಲ.. ದುಡ್ಡಿಗಾಗಿ ಆಕೆ ಆಡುತ್ತಿದ್ದಳು ಅನ್ನೋದು ಸುಳ್ಳು.. ಮತ್ತು ಅಪ್ಪಟ ತಾಯಿ ಕೊನೆ ಕೊನೆ ದಿನಗಳಲ್ಲಿ ಆಕೆ ತನ್ನ ಮಗಳು ಪರಿಣಿತಳನ್ನು ನೆನಪಿಸಿಕೊಂಡು ಭಾವುಕರಾಗುತ್ತಿದ್ದರು. ಭಾವನ ಹಾಯ್ ಬೆಂಗಳೂರ್ ನಲ್ಲಿ ಇದ್ದಾಗ ನಾನು ಓ ಮನಸೇಯಲ್ಲಿ ಎಂಟು ದಿನಗಳ ಕಾಲ ಕೆಲಸ ಮಾಡಿದ್ದೆ.. ಆಗ ಕಂಡ ಭಾವನ ಹೇಗಿದ್ದರೋ ಹಾಗೆ ಇದ್ರೂ ಬಿಗ್ ಬಾಸ್ ಮನೆಯಲ್ಲೂ.. ನಾನು ಒಟ್ಟಿಗೆ ಕೆಲಸ ಮಾಡುವಾಗ ತಾನಾಯಿತು, ತನ್ನ ಮೇಕಪ್ ಆಯ್ತು, ತನ್ನ ಫ್ರೆಂಡ್ಸ್, ಮೆಸೇಜ್ , ಮಾತು, ಹರಟೆ, ಸಾಧ್ಯವಾದರೆ ನಿದ್ದೆ.ಇವೆಲ್ಲ ಆಕೆಯ ದಿನಚರಿಯ ಭಾಗವಾಗಿತ್ತು. ಜಾಸ್ತಿ ಅಲಂಕಾರಪ್ರಿಯೆ ಆಕೆ..
ಆದರೆ ಸುಷ್ಮಾ ಹೇಳಿದಂತೆ ದೇವ್ರೇ ನೋ... ವೇ.. !
ಸಾವು ಒಬ್ಬ ವ್ಯಕ್ತಿಯ ಬದುಕಿನ ಕೊನೆ ಪುಟ. ಆಮೇಲೆ ಏನಾಗುತ್ತೋ ಗೊತ್ತಿರಲ್ಲ.. ಆದರೆ ನಮ್ಮಲ್ಲಿ ಮಣ್ಣು ಮಾಡುವ ಅಥವಾ ಸುಡುವ ಬಳಿಕವಷ್ಟೇ ಆತನ ಆತ್ಮಕ್ಕೆ ಶಾಂತಿ ಸಿಗೋದು. ಆ ಅತಂತ್ರ ಆತ್ಮಕ್ಕೆ ಮಾತ್ರವಲ್ಲ ಸತ್ತ ಆ ವ್ಯಕ್ತಿಯ ಕುಟುಂಬಕ್ಕೂ ನೆಮ್ಮದಿ ನೀಡಿದ ನಿಮಗೆ ನಮೋನ್ನಮಃ..ಡಿಯರ್ ಕಿಚ್ಚ ..
ನನಗೊಂದು ಡೌಟ್ ಸುದೀಪ್ ನೀವು ಅದೇ ಕಾರದ ಪುಡಿ ಕಂಪನಿಯ ಬಗ್ಗೆ ಹೇಳುವಾಗ ಮಾತ್ರ ಅದ್ಯಾಕೆ ಅಷ್ಟು ಜೋರಾಗಿ ಹೇಳ್ತೀರಿ.. ನೀವು ಪ್ರತಿ ಬಾರಿ ಆ ರೀತಿ ಹೇಳುವ ಮುನ್ನ ಕಾರವಾಗಿ ಏನಾದ್ರೂ ಮಾಡಿಕೊಡ್ತಾರ ಕಾರದ ತಿಂಡಿ ;-)
No comments:
Post a Comment