ಪ್ಲೀಸ್ :-)

Image result for pink flower

ಸ್ಟಾರ್  ಹಿಂದಿ ವಾಹಿನಿಯಲ್ಲಿ ರಿಶ್ತೋಂಕಾ ಚಕ್ರವ್ಯೂಹ್ ಎನ್ನುವ ಹೆಸರಿನ ಧಾರವಾಹಿ ಪ್ರಸಾರವಾಗ್ತಾ ಇದೆ. ಅದರ ಕಥೆ, ಡೈಲಾಗ್ ಮತ್ತು ಪಾತ್ರಗಳು ತುಂಬಾ ಚೆನ್ನಾಗಿವೆ. ಸಂಭಾಷಣೆ ಸಕತ್ ಲವಲವಿಕೆಯಿಂದ ಕೂಡಿವೆ ಎಂದೇ ಹೇಳಬಹುದು. ಸಾಮಾನ್ಯವಾಗಿ ಹೆಚ್ಚು ಕಡಿಮೆ ಒಂದೇ ರೀತಿಯ ಡೈಲಾಗ್ ಗಳು ಹೆಚ್ಚಿನ ಧಾರವಾಹಿಗಳಲ್ಲಿ ಇರುತ್ತವೆ. ಅವುಗಳನ್ನು ಕೇಳಿಕೇಳಿ ಬೋರೆದ್ದು ಹೋಗಿರುವ ಇಂತಹ ಕಾಲದಲ್ಲಿ ಈ ಧಾರವಾಹಿಯ ಡೈಲಾಗ್ ಗಳು ಖುಷಿ ಕೊಡ್ತಾ ಇದೆ.
ಇದರ ಮುಖ್ಯ ಪಾತ್ರಗಳಾದ ಸತ್ರುಭ, ಅನಾಮಿ, ಅಧಿರಾಜ್,ಆತನ ತಂದೆ,  ಹಿರಿಯ ರಾಜ ರಾಣಿ, ಸುಧ, ಪೂಜನ್ ಆತನ ಹೆಂಡತಿ,ಮಗ ಎಲ್ಲರ ನಟನೆ ಸಕತ್ ಸಕತ್.
ಅನಾಮಿ ಪಾತ್ರಧಾರಿ ನಟಿ ಜಿ ಹಿಂದಿ ವಾಹಿನಿಯಲ್ಲಿನ ಸೀರಿಯಲ್  ಒಂದರಲ್ಲಿ ಭಯ-ಸಂಕೋಚದ ಹುಡುಗಿಯಾಗಿ ಗಮನ ಸೆಳೆದಿದ್ದುದಕ್ಕಿಂತ ಈ ಧಾರವಾಹಿಯಲ್ಲಿ ಇಷ್ಟ ಆಗ್ತಾರೆ. ಅದೇ ರೀತಿ ಸತ್ರುಭ ಪಾತ್ರಧಾರಿ ನಟನೆ ಅದ್ಭುತ.
ಈ ಧಾರವಾಹಿಯನ್ನು ಕನ್ನಡಕ್ಕೆ ತಂದರೆ ಸತ್ರುಭ ಪಾತ್ರಕ್ಕೆ ಸರಿಯಾದವರನ್ನೇ ಆಯ್ಕೆ ಮಾಡಬೇಕು. 
Image result for pink flower
## ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೇರಿ ದುರ್ಗಾ ಧಾರವಾಹಿ ಸಾಕಷ್ಟು ಬದಲಾವಣೆಗಳನ್ನು ಕಂಡಿವೆ. ಆಗಾಗ ಥ್ರಿಲ್ಗಳು ಕೊಡುತ್ತಾ ವೀಕ್ಷಕರ ಗಮನ ಸೆಳೆಯುವಲ್ಲಿ ಈ ಧಾರವಾಹಿ ಮುಂದಿದೆ. ದುರ್ಗಾ ಪಾತ್ರಧಾರಿ, ಅವರತ್ತೆ ಜೆಸ್ಸಿ ಗಾಯತ್ರಿದೇವಿ, ಪ್ರಿನ್ಸ್, ದುರ್ಗ ಅಪ್ಪ, ಚಿಕ್ಕಪ್ಪ, ಅಮ್ಮ ,ಚಿಕ್ಕಮ್ಮ, ಅಕ್ಕ, ಹಳೆ ಕೋಚ್ ರಾಣ ಎಲ್ಲರ ನಟನೆ ಬಗ್ಗೆ ಹೇಳುವಂತಿಲ್ಲ. ಆದರೇ ರಾಣ ಬದುಕಲ್ಲಿ ಬದಲಾವಣೆ ತರದೇ, ದುರ್ಗಾ ಜೀವನದಲ್ಲಿ ಹೊಸತನ ಕೊಡದೇ ನಮ್ಮಂತಹ ವೀಕ್ಷಕರಿಗೆ ನೋವು ಉಂಟು ಮಾಡುತ್ತಿದ್ದಾರೆ ಈ ಸೀರಿಯಲ್ ಮಂದಿ. ಅದರ ಬಗ್ಗೆ ಗಮನ ಹರಿಸಿ ಪ್ಲೀಸ್ :-)

No comments: