ಎಂತಹ ನಿಸ್ಸಹಾಯಕತೆ ... ಛೆ!


ಯು ಆರ್ ಅನಂತ ಮೂರ್ತಿಯವರ ಸಾವು.. ಅವರ ವಿವಾದ ... ಅವರ ಬಗ್ಗೆ ಹರಡಿದ್ದ ಕಳಪನೆಗಳು.. ಊಹೆಗಳು.. ವಾಸ್ತವ ಯಾಕೋ ಕಳೆದೆರಡು ದಿನಗಳಿಂದ ಹೆಚ್ಚು ಬೇಸರ.. ನೋವು ಸಣ್ಣ ಮಟ್ಟದಲ್ಲಿ ಅಳು ಬರುವಂತೆ ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ..

ಎಲ್ಲ ವಾಹಿನಿಗಳು ಆ ಹಿರಿಯ ಚೇತನಕ್ಕೆ ತಮ್ಮದೇ ಆದ ರೀತಿಯಲ್ಲಿ  ನಮನ ಸಲ್ಲಿಸಿತು. ಇಂದು ಚಂದನವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಹಿರಿಯ ಸಾಹಿತಿ-ವಿಮರ್ಶಕ  ಡಾ  ಸಿ  ಎನ್  ರಾಮಚಂದ್ರನ್ , ಪತ್ರಕರ್ತ  ಮತ್ತು ಫೇಸ್ ಬುಕ್ ಮಿತ್ರ ಜೋಗಿ  ಮತ್ತು ಷಡಕ್ಷರಿ ಅವರ ಸಂದರ್ಶನ ಹಾಗೆ ಅನ್ನುವುದಕ್ಕಿಂತ ಅವರ ಜೊತೆಗೆ ನಡೆಸಿದ ಮಾತುಕತೆ ಯು ಆರ್ ಅನಂತ್ ಮೂರ್ತಿ ಅವರ ಅನೇಕಾನೇಕ ಸಂಗತಿಗಳ ಅನಾವರಣ ... ನಿಜ ಹೇಳ ಬೇಕೆಂದರೆ ತುಂಬಾ ಅಚ್ಚುಕಟ್ಟಾಗಿತ್ತು. ಅನಂತ  ಮೂರ್ತಿ ಅವರು ಮೋದಿ ಅವರು ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಎನ್ನುವ ಮಾತನ್ನು ಯಾವ ರೀತಿ ಬೆಳೆಸಿದರು ಮಾಧ್ಯಮದವರು, ಹೇಗೆ ಅವರನ್ನು ತೇಜೋವಧೆ ಮಾಡಿದರು ಎನ್ನುವ ಸಂಗತಿ ಹೇಳುವಾಗ ಸಕತ್ ನೋವಾಯಿತು.ಹಿರಿಯ ಜೀವ ಆ ಬಳಿಕ ಅದೆಷ್ಟು ಹಿಂಸೆ ಅನುಭವಿಸಿರ ಬೇಕು. 
ಗೆಳತಿ ಅಂಜಲಿ ರಾಮಣ್ಣ ಅನಂತ ಮೂರ್ತಿ ಅವರ ಮರಣದ ರಾತ್ರಿ ಒಂದು ಸಂಗತಿ ಬರೆದು ಕೊಂಡಿದ್ದರು ತಮ್ಮ ವಾಲ್ ನಲ್ಲಿ 
ಆ ದಿನ ಅವರೇ ಫೋನ್ ತೆಗೆದುಕೊಂಡರು. " ಓಹ್ , ಯಾವಾಗ ದೇಶ ಬಿಡ್ತೀರಿ ಅಂತ ಕೇಳೊಕ್ಕೆ ಮಾಡುವವರ ಕಾಲ್ ಅಂದುಕೊಂಡೆ " ಅಂದರು.
ಎಷ್ಟೇ ಗಟ್ಟಿ ಮನುಷ್ಯ ಆದರೂ ವಿವಾದ, ಅವಮಾನ, ಸಲ್ಲದ ಅನುಮಾನಗಳಿಂದ ಕಂಗೆಡುತ್ತಾನೆ. ಅದರಲ್ಲೂ ಆ ವಯಸ್ಸಿನಲ್ಲಿ....ಇದಂತೂ ನಾ ಹತ್ತಿರದಿಂದ ಕಂಡುಕೊಂಡ ಸತ್ಯ. 
ಈ ಕಾರಣಕ್ಕೇ ಅನಂತಮೂರ್ತಿಯವರ ಬಗ್ಗೆ ಮನಸ್ಸು ಮರುಗುತ್ತೆ. ಅವರೇನೋ ತುಂಬಾ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು.
but, ನಾನು ಮಾತ್ರ 'ಸರ್' ಗಿಂತ ಹೆಚ್ಚು ಆತ್ಮೀಯತೆ ಬೆಳಸಿಕೊಳ್ಳಲೇ ಇಲ್ಲ. My bad !  
ಅವರು ಈಗಿರುವ ಕಡೆಯಲ್ಲೂ ಅವರೇ ಆಗಿರುತ್ತಾರೆ. ಅಷ್ಟಂತೂ ಖಚಿತ.


@ ಇಂದು ಪೂರಕವಾಗಿ ಮುಂಜಾನೆ ವಿದೇಶಿ ಚಾನೆಲ್  ಅಲ್ ಜಜೀರ ವೀಕ್ಷಿಸಿದೆ.. ಅದರಲ್ಲಿ ನಿರ್ದಾಕ್ಷಿಣ್ಯವಾಗಿ  ನಿಷ್ಪಾಪಿ ಜನರನ್ನು ಬಾಂಬ್ ಗಳ ಮೂಲಕ ಸಾಯಿಸಿದ ಭಯೋತ್ಪಾದಕರು ವಿಶ್ವದ ಪ್ರಸಿದ್ಧ ಧರ್ಮದ ಅನುಯಾಯಿಗಳು.. ಅತಿ ಹೆಚ್ಚ್ಗು ದುಖ ಅನ್ನಿಸಿದ್ದು  .. ಒಬ್ಬಾತ ಮುರಿದು ಚೂರಾದ ಒಂದು ಬಿಲ್ಡಿಂಗ್ ತೋರಿಸುತ್ತ ಇದು ಹೆಣ್ಣು ಮಕ್ಕಳ ಶಾಲೆ, ಇದರಲ್ಲಿ ಕೇವಲ ಹೆಣ್ಣುಮಕ್ಕಳು ಓದುತ್ತಾ ಇದ್ದುದು. ಇಲ್ಲಿದೆ ನೋಡಿ ಅವರ ಅಪ್ಲಿಕೇಶನ್.. ನಾವು ಪ್ರಪಂಚದ ಜೊತೆ ಬಾಳಲು ಇಷ್ಟ ಪಡ್ತೀವಿ.. ಪ್ರಪಂಚದ ಭಾಗ ಆಗಲು ಇಷ್ಟ. ಆದರೆ ಸಾಮಾನ್ಯವಾಗಿ ಕೇವಲ ಮಿಲಿಟರಿ ನೆಲೆಗಳ ಮೇಲೆ  ದಾಳಿ ಆಗಿದೆ ಎಂದು ಮಾಧ್ಯಮಗಳು ಮತ್ತು ಸರ್ಕಾರವು ಬಿಂಬಿಸುತ್ತದೆ. ಆದರೆ ಎಲ್ಲ ಕಡೆ ದಾಳಿ ಆಗಿದೆ. ನಮಗೆ ವಿಶ್ವದ ಎಲ್ಲ ಧರ್ಮಗಳ  ಬಗ್ಗೆ ಗೌರವ ಇದೆ...ಹೀಗೆ ಆ ದೇಶದ ಸ್ಥಳೀಯ ವ್ಯಕ್ತಿ ವರ್ಣಿಸುತ್ತಿದ್ದಾಗ ಮನಸ್ಸು ಕಲಕಿ ಹೋಯ್ತು ಎಂತಹ ನಿಸ್ಸಹಾಯಕತೆ  ... ಛೆ! 
ಜನಪ್ರಿಯತೆಗಾಗಿ ಮತ್ತು ಬಿಟ್ಟಿ ಪ್ರಚಾರದ ಹುಚ್ಚಿನಲ್ಲಿ ಕೆಲವೊಂದನ್ನು ಕಾಲ ಕೆಳಕ್ಕೆ ಹಾಕಿ ತುಳಿಯುವ .. ಒಂದಷ್ಟನ್ನು ಸುಖಾಸುಮ್ಮನೆ ಮೇಲೆತ್ತುವ ಕೆಲಸ ಸಾಗಿದೆ.. ದುರಾದೃಷ್ಟಕರ ಸಂಗತಿ ಎಂದರೆ ಈ ಎರಡು ವರ್ಗಗಳಿಗೆ ಮಾತ್ರವಲ್ಲ ಅಂತಹ ವ್ಯಕ್ತಿತ್ವಗಳಿಂದ ಸಮಾಜಕ್ಕೂ ಹೆಚ್ಚಿನ ಪ್ರಯೋಜ ಆಗಿಲ್ಲ..ಯಾವ ಧರ್ಮ ಮತ್ತು ಜಾತಿ ಇಲ್ಲಿ ಏನು ಮಾಡಲ್ಲ.. ವಿಶ್ವದ ಪ್ರಸಿದ್ಧ ಧರ್ಮಗಳು ಒಡೆದಿರುವುದು ಇದಕ್ಕೆ ಸಾಕ್ಷಿ. ಮತ್ತು ಒಂದೇ ಧರ್ಮದವರು ಅದೇ ಧರ್ಮದ ಮತ್ತೊಂದು ಪಂಗಡದ ನಿಷ್ಪಾಪಿ ಜೀವ ತೆಗೆಯುತ್ತಿರುವುದೇ ಸಾಕ್ಷಿ.. ಭಾರತದಲ್ಲಿ ಜಾತಿ ಪ್ರಭಾವ ಇದ್ದರೇ ವಿಶ್ವದಲ್ಲಿ ಧರ್ಮ ಪ್ರಭಾವ.. ಎರಡೂ ಕಡೆ ಮನುಷ್ಯನ ಹೀನ ಮನಸ್ಥಿತಿ ಅವಘಡಗಳಿಗೆ ಕಾರಣ ... 

1 comment:

Badarinath Palavalli said...

ಅನಂತ ಮೂರ್ತಿಯವರ ಜೊತೆ ತಮ್ಮ ಒಡನಾಟ ಇತ್ತು ಎಂಬುದೊಂದು ಹೆಮ್ಮೆಯ ವಿಚಾರ. ಒಂದೆರಡು ಅನುಭವಗಳನ್ನು ನಮಗಾಗಿ ಬ್ಲಾಗಿನಲ್ಲಿ ದಾಖಲಿಸಿರಿ.
ಸರ್ಕಾರವು ಈಗಲಾದರೂ ಮೃತರ ಹೆಸರಿನಲ್ಲಿ ಅಧ್ಯಯನ ಪೀಠ ಮತ್ತು ಸಮಾಧಿ ಸ್ಮಾರಕಕ್ಕೆ ಚಿಂತಿಸಲಿ.

ಧರ್ಮಾಂಧ ಸಂಚುಗಳ ಹಿಂದೆ funding ಮತ್ತು brain ಯಾರದು ಎನ್ನುವುದು ಚರ್ಚೆಯ ವಿಷಯವೇ!
ವಿದ್ರೋಹಿಗಳು ಯಾವುದೇ ನೆಲದ ಯಾವುದೇ ಧರ್ಮದವರಾದರೂ ಅಮಾನವೀಯ ಮನಸುಗಳಿಗೆ ನಮ್ಮ ಧಿಕ್ಕಾರವಿದೆ.
ಅಲ್ ಜೀರಾ ಟೀವಿಯ ಸ್ಟುಡಿಯೋ ನನಗೆ ಬಲು ಇಷ್ಟ.