ತಪ್ಪು ...ತಪ್ಪು !!



ಅದ್ಯಾಕೋ ಇತ್ತೀಚಿಗೆ ಹೆಸರುಗಳನ್ನೂ ತಪ್ಪು ಬರೀತಾ ಇದ್ದೀನಿ, ಅಂದ್ರೆ ಸಾಧಕರ ಹೆಸರು ತಪ್ಪು ಬರೆಯೋಕೆ ಆರಂಭ ಮಾಡಿದ್ದೇನೆ . ತಲೆ ಎಲ್ಲೋ ಇದೆ ಎನ್ನುವುದು ಇದರ ಅರ್ಥವಲ್ಲ ಪ್ರಾಯಶಃ ಸ್ವಲ್ಪ ಜಾಸ್ತಿನೇ ಬ್ಯುಸಿ ಆಗಿರೋದು ಇದಕ್ಕೆ ಕಾರಣ ಎಂದೇ ಹೇಳ ಬಹುದು.. ನಿನ್ನೆ ಬರೆದ ಪೋಸ್ಟ್ ನಲ್ಲಿ  ಡಾ  ಸಿ  ಎನ್  ರಾಮಚಂದ್ರನ್  ಅವರ ಹೆಸರನ್ನು ಬೇರೆ ಬರೆದಿದ್ದೆ. ಇತ್ತೀಚಿಗೆ ಬರೆದ  ಪೋಸ್ಟ್ ನಲ್ಲಿ ಡಿವೈನ್ ಪಾರ್ಕ್  ಡಾ .  ಚಂದ್ರಶೇಖರ ಉಡುಪ ಅವರ ಹೆಸರು ಸಹಿತ.ನನ್ನ ಅಣ್ಣ ರವಿ ಇದನ್ನು ನನ್ನ ಗಮನಕ್ಕೆ ತಂದರು..  ಪ್ರಿಂಟ್ ಮೀಡಿಯಾದಲ್ಲಿ ಇದ್ದು ಸಹ ಈ ರೀತಿ ತಪ್ಪು ಮಾಡ್ತಾ ಇರೋದು ಅಕ್ಷಮ್ಯ.. ಈ ಮೂಲಕ ನಾನು ಮಾಡಿದ ಈ ಮಿಸ್ಟೇಕ್ ಗಳಿಗೆ ಹಿರಿಯರಿಂದ ಕ್ಷಮೆ ಯಾಚಿಸ್ತೀನಿ.. ತಪ್ಪಾಗಿರುವುದನ್ನು  ಆ ಬಳಿಕ ಬರೆದು   ಸರಿಪಡಿಸ್ತಿವಿ ನಿಜ ಆದ್ರೆ ಆದರೆ ತಪ್ಪಂತು ಮಾಡಿರೋದು ನಿಜ ತಾನೇ :-) ಅಗೇನ್ ಕ್ಷಮೆ ಇರಲಿ ಈ ಪಾಮರಳ  ಮೇಲೆ ಪ್ರಿಯ ಓದುಗರೇ! 

ಗೆಳೆಯ ಬದರಿನಾಥ್   ಈಗಷ್ಟೇ ಒಂದು ಸುದ್ದಿ ಹೇಳಿ ಮನಕ್ಕೆ ಬೇಸರ ಉಂಟು ಮಾಡಿದ್ರು.. ಅವರು ಹೇಳಿದ ಸಂಗತಿ ಹಾಗಿತ್ತು.. ದೃಶ್ಯ ಮಾಧ್ಯಮ ಅದೆಷ್ಟು ಅತಂತ್ರ ಅನ್ನೋದು ಮತ್ತೆ ಮತ್ತೆ ಸಾಬೀತಾಯಿತು.. ಇರಲಿ ಬಿಡಿ ಆ ಸಂಗತಿ !!

@@ ಉದಯವಾಹಿನಿಯಲ್ಲಿ ಶಾಲಿನಿ ನಡೆಸಿಕೊಡುವ   ಮಕ್ಕಳ ಕಾರ್ಯಕ್ರಮ ಅತ್ಯುತ್ತಮ ಅಂತ ಪದೇಪದೇ ಹೇಳೋಕೆ ಇಷ್ಟ  ಪಡ್ತೀನಿ.. ಮುಖ್ಯವಾಗಿ ತುಂಬಾ ಲವಲವಿಕೆಯ   ಹೆಣ್ಣುಮಗಳು ಆಕೆ . ಈ ವಾರ ಕೊಡಗಿನ ಮಕ್ಕಳ ಸಾಹ ಪ್ರಸಾರ ಆಯ್ತು. ವಿಷದ ಅಂದ್ರೆ ಆಅ ಮಕ್ಕಳಿಗೆ ಕೊಡಗು ಭಾಷೆಯನ್ನೂ ಅವರ ಪೋಷಕರು ಹೇಳಿಕೊಟ್ಟಿಲ್ಲ.. ಆ ಭಾಷೆಯು ಮುಖ್ಯ ಅಲ್ವ ಮಕ್ಕಳಿಗೆ?  ಈ ಕಾರ್ಯಕ್ರಮದಲ್ಲಿ  ಶಾಲಿನಿ ಮಕ್ಕಳ ಜೊತೆ ಮಾತಾಡುವ ಶೈಲಿ ಸಹಿತ ಚಂದ ಇದೆ.. ಮಕ್ಕಳ ಜೊತೆ ಮಕ್ಕಳಾಗುತ್ತಾ  .. ಅವರ ಅಪ ಅಮ್ಮಂದಿರ ಕಾಲು ಎಳೆಯುವ ಕೆಲಸ ಮಾಡುವ ಶಾಲಿನಿ ಪಾಪ ಪಾಂಡು ಧಾರಾವಾಹಿಯ ಪಾಚೋ ಗಿಂತ ಜಾಸ್ತಿ ಇಷ್ಟ ಆಗ್ತಾರೆ. ಅಲ್ಲದೆ, ಈಟೀವಿ ಯಲ್ಲಿ ಪ್ರಸಾರ ಆಗುವ  ಕಾಮಿಡಿ ಸರ್ಕಲ್ ನಲ್ಲೂ ಸಹಿತ ಈಕೆಯ ಭಾಗವಹಿಸುವಿಕೆ ಲುಂಗಿ ಡ್ಯಾನ್ಸ್ ಲುಂಗಿ ಡ್ಯಾನ್ಸ್ ನಂತೆ :-) ಸಕತ್! 
@@  ಹೇಳಿಕೊಳ್ಳುವಷ್ಟು ಹಾಸ್ಯ ಇಲ್ಲದೆ ಇದ್ರೂ ಈ ಧಾರವಾಹಿ ಸ್ವಲ್ಪ ಆಕರ್ಷಣೆ ಉಳಿಸಿ ಕೊಂಡಿದೆ. ಮಾಸ್ಟರ್ ಮಿಸ್ಟರ್ ಆನಂದ್  ಧಾರವಾಹಿ ರೋಬೋ ಬಗ್ಗೆ ಮತ್ತು ಬಳ್ಳಾರಿ ನಾಗ ಬಗ್ಗೆ ಹೇಳ್ತಾ ಇರೋದು.. ಆ ಧಾರವಾಹಿ ಫ್ಯಾನ್ಗಳು ಒಂದಷ್ಟು ಜನ ಇದ್ದಾರೆ ನಮ್ಮ ಮನೆಯಲ್ಲಿ.. ಸ್ವಲ್ಪ  ಜಾಸ್ತಿನೇ ಇಷ್ಟ ಪಟ್ಟು ನೋಡ್ತಾರೆ.. ನಮ್ಮ ಕುಟುಂಬಕ್ಕೆ ಸೇರಿದವರು.. ಹಿಂದೆ ಸುವರ್ಣ  ವಾಹಿನಿಯಲ್ಲಿ  ಪ್ರಸಾರ ಆಗಿದ್ದ ಎಸೆಸೆಲ್ಸಿ  ನನ್ ಮಕ್ಕಳು ಸಹ ನೋಡೋ ಗುಂಪು ಒಂದಿತ್ತು.. ಈಗ ಅವರು ರೋಬೋ ಗೆ ಶಿಫ್ಟ್ ಆಗಿದ್ದಾರೆ...
@@ ಸೋನಿ ವಾಹಿನಿಯಲ್ಲಿ ಮತ್ತೆ ಕೌನ್ ಬನೇಗ ಆರಂಭ ಆಗಿದೆ.. ಎಷ್ಟು ಬಾರಿ ಬಿಗ್ ಬಿ ಆ ರಿಯಾಲಿಟಿ ಷೋ  ನಡೆಸಿಕೊಟ್ರು ಬೇಜಾರು ಆಗಲ್ಲ.. ಅತ್ಯುತ್ತಮ ನಿರೂಪಕ ಮುಖ್ಯವಾಗಿ ಅತ್ಯಂತ ಆಕರ್ಷಣೆ ಉಂಟು  ಮಾಡುವ ನಿರೂಪಕರು ಬಿಗ್ ಬಚ್ಚನ್.. ಆ ನಗು, ಮಾತಿನ ಶೈಲಿ ಎವರ್   ಗ್ರೀನ್ :-) ವಾವ್ ಸರ್ಜಿ ವಾವ್ ! 

1 comment:

Badarinath Palavalli said...

-ಮುದ್ರಣ ಮತ್ತು ವಿಧ್ಯುನ್ಮಾನ ಮಾದ್ಯಮಗಳಲ್ಲಿ ತಪ್ಪಾಗಿ spell ಮಾಡುವುದು ಮತ್ತು ಹೆಸರುಗಳನ್ನು ತಪ್ಪಾಗಿ ಬರೆಯುವುದು ಅಕ್ಷಮ್ಯವಾದರೂ ಸಹ ತಮ್ಮ ಒತ್ತಡದ ಕಾರ್ಯ ಬಾಹುಳ್ಯ ನಮಗೂ ಅರ್ಥವಾಗುತ್ತದೆ.

-ಏನು ಮಾಡೋದು, ಕೆಲಸ ಮಾಡುವ ಸಂಸ್ಥೆಗಳಲ್ಲಿ ಪರಿವರ್ತನೆಗಳು ಅನಿವಾರ್ಯ.

-ಪಾಚೂ ಅವ್ರು ಒಳ್ಳೆಯ ನಿರೂಪಕಿ.

-ಜಹ ಬಿಗ್ ಬೀ ಹೈ ಉದರ್ TRP ರಹೇಗ!.