ಭಟ್ಟರ ವಾಸ್ತುಪ್ರಕಾರ ಬಂದಿದ್ದೆ ತಡ ಬ್ಯಾಡ ಬ್ಯಾಡಾಂದ್ರೂ ಸೋಷಿಯಲ್ ನೆಟ್ ವರ್ಕ್ ನಲ್ಲಿ ಮಂದಿ ತಮಗೆ ಇಷ್ಟ ಬಂದ ಕಮೆಂಟ್ ಹಾಕಿ ಹಾಕಿ ಜಗ್ಗೇಶ್ ಅವರಿಗೆ ಕೋಪ ಬರಿಸಿದ್ದು ಸತ್ಯ. ಆದರೂ ವಾಸ್ತು ಪ್ರಕಾರದ ಬಗ್ಗೆ ಮಂದಿಗೆ ಕುತೂಹಲ ಇದ್ದೆ ಇದೆ ಬುಡಿ.
ವಾಸ್ತು ಪ್ರಕಾರದಲ್ಲಿ ಟಿ ಏನ್ ಸೀತಾರಾಮ್ ಮಾಡಿರುವ ಪಾತ್ರಕ್ಕೆ ಮೊದಲು ಬ್ರಹ್ಮಾಂಡ ಗುರುಜೀ ನರೇಂದ್ರ ಬಾಬು ಶರ್ಮ ಅವರನ್ನು ಆಯ್ಕೆ ಮಾಡಲಾಗಿತ್ತು, ಅವರು ತಿರಸ್ಕರಿಸಿದ ಬಳಿಕ ಆ ಜಾಗಕ್ಕೆ ಟಿ ಏನ್ ಎಸ್ ಬಂದ್ರು ಎನ್ನುವ ಸಂಗತಿ ನನ್ನ ಎಫ್ಬಿ ದೋಸ್ತ್ ಬಾಬ ಪ್ರಸಾದ್ ವೆಂಕಟೇಶ್ ಬರಕೊಂಡಿದ್ದರು.ಅದೇ ಆ ಪಾತ್ರ ಕಾಳಿ ಮಠ ಸ್ವಾಮಿ ಮಿಸ್ಟರ್ ಕೂಗುಮಾರಿಗೆ ನೀಡಿದ್ದರೆ ಆಹಾ ! ತಪ್ಪದೆ ಓಕೆ ಅಂದು ಬಿಡ್ತಾ ಇದ್ರೂ..
@ಮಧುಸೂಧನ್ ಪ್ರಭಾಕರ್ ರಾವ್ ಎನ್ನುವ ವರದಿಗಾರ ಸುವರ್ಣ ನ್ಯೂಸ್ ನಲ್ಲಿ ಇದ್ದಾರೆ. ಸೀರಿಯಸ್ ಆಗಿರುವ ನ್ಯೂಸ್ ಸಹ ನಗುಮುಖದಲ್ಲಿ ಹೇಳುವ ಅಭ್ಯಾಸ ಇವರದ್ದು. ಅದೇರೀತಿ ಎಫ್ ಬಿಯಲ್ಲಿ ಸೀರಿಯಸ್ , ಆ ವಿಷ್ಯ ಈ ವಿಷ್ಯ ಏನೇ ಹಾಕಲಿ ಅವರು ತಮ್ಮ ಪೋಸ್ಟ್ ಕೊನೆಯಲ್ಲಿ ನಿಮ್ಮ ಪ್ರೀತಿಯ ಅಂತ ಮುಕ್ತಾಯ ಮಾಡ್ತಾರೆ..
ಅವರು ಯಾರ ಪ್ರೀತಿಯವರು ಎನ್ನುವ ಸಂಗತಿ ನಮಗೆ ಗೊತ್ತಾದರೆ ಮತ್ತೂ ಒಳ್ಳೆಯದು :-)
@
ಜೀ ಹಿಂದಿ ವಾಹಿನಿಯಲ್ಲಿ ಡಿಐಡಿ ಅಮ್ಮಂದಿರ ಸ್ಪೆಶಲ್ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಅದರಲ್ಲಿ ಸೌಮ್ಯಶ್ರೀ ಎನ್ನುವ ಕನ್ನಡ ಸ್ಪರ್ಧಿ ಇದ್ದಾರೆ. ಸಕತ್ ಎನರ್ಜಿ ಆಕೆಯ ಡ್ಯಾನ್ಸ್ ನಲ್ಲಿದೆ. ಖುಷಿ ಕೊಟ್ಟ ಸಂಗತಿ ಅಂದ್ರೆ ಆಕೆ ಕನ್ನಡದಲ್ಲಿ ಮಾತಾಡಿದ್ದು. ಅವರ ತಾಯಿ ಪತಿ ಎಲ್ಲರು ಕನ್ನಡದಲ್ಲಿ ಮಾತಾಡಿದ್ದು.ಕರ್ನಾಟಕದಲ್ಲೇ ನಾವಿದ್ದರೂ ಬೇರೆ ಭಾಷೆಯ ವೇದಿಕೆಯಲ್ಲಿ ಮಾತೃ ಭಾಷೆ ಕೇಳಿದಾಗ ಸಕತ್ ಖುಷಿ ಅನ್ನಿಸುತ್ತೆ..
ಗೀತಾ-ಗೋವಿಂದ ಮತ್ತು ಟೆರೆನ್ಸ್ ತೀರ್ಪು, ಮುಖ್ಯವಾಗಿ ಅದರ ಎಂಜಾಯ್ ಮೆಂಟ್ ಎಲ್ಲವೂ ಆಹಾ!
@@
ಸ್ಟಾರ್ ವಾಹಿನಿಯ ಮಾಸ್ಟರ್ ಶೆಫ್ ಕಾರ್ಯಕ್ರಮದ ಕೊನೆಯ ಆರ. ಸಾಕಷ್ಟು ಆಸಕ್ತಿಯಿಂದ ನಾನು ವೀಕ್ಷಣೆ ಮಾಡುತ್ತಿರುವ ಕಾರ್ಯಕ್ರಮಗಳಲ್ಲಿ ಇದೂ ಸಹ ಒಂದಾಗಿದೆ. ಅದು ಮುಗಿದರೆ ಸ್ವಲ್ಪ ಮಿಸ್ ಮಾಡಿಕೊಳ್ಳುತ್ತೇನೆ. ಯಾಕೇಂದ್ರೆ ಕೆಲವು ಕಾರ್ಯಕ್ರಮಗಳು ಮನಸ್ಸು ಸೆಳೆದು ಬಿಡುತ್ತದೆ. ಜೊತೆ ಅದರ ಗ್ಲಾಮರಸ್ ತೀರ್ಪುಗಾರರಾದ ಕಾಮ್ ಸಂಜೀವ್, ಸ್ಟೈಲೀಶ್ ರಣವೀರ್ ಮತ್ತು ಕೂಲ್ ವಿಕಾಸ್ ಒಂದರ್ಥದಲ್ಲಿ ಎಲ್ಲರನ್ನು ಮಿಸ್ ಮಾಡಿಕೊಳ್ತೇನೆ :-)
1 comment:
ವಾಸ್ತು ಪ್ರಕಾರ ನಾನೂ ನೋಡಬೇಕಿದೆ, so no comments...
ಮಧು ಅವರಿಗೆ ಕಿವಿ ಹಿಂಡುತ್ತೇನೆ!
ಸೌಮ್ಯಶ್ರೀಗೆ ಬಾಳುಮೆ ತುಂಬ ಶುಭಾಶಯ.
ಮಾಸ್ಟರ್ ಶೆಫ್ ಮುಂದುವರಿದ ಭಾಗವೂ ಸ್ವಾಗತಾರ್ಹ!
Post a Comment