ಅನೇಕ ಬಾರಿ ಯಾವ ಕಾರ್ಯಕ್ರಮಗಳ ಬಗ್ಗೆ ಬರೆಯೋದು ಅಂತ ಅನ್ನಿಸುತ್ತಿರುತ್ತದೆ. ಯಾಕೇಂದ್ರೆ ಸಾಮಾನ್ಯವಾಗಿ ನಾನು ಕೆಲವು ಕಾರ್ಯಕ್ರಮಗಳನ್ನು ಹೆಚ್ಚು ನೋಡಿರ್ತೀನಿ, ಅದರ ಬಗ್ಗೆ ಪದೇಪದೇ ಬರೆಯೋಕೆ ಆಗಲ್ಲ. ಈ ಎಲ್ಲಾ ಕಾರಣಗಳಿಂದ ಬರಿಯದೆ ಇರುವುದು ಹೆಚ್ಚು ಆರಾಮ ಎಂದು ಅನ್ನಿಸುತ್ತೆ.
ಉದಯವಾಹಿನಿ ಅಂದ್ರೆ ಬಹಳಷ್ಟು ವೀಕ್ಷಕರಿಗೆ ಅದರಲ್ಲೂ ಮಹಿಳಾ ವೀಕ್ಷಕರಿಗೆ ಇಷ್ಟ ಆಗುತ್ತದೆ. ಅತಿರಂಜಕ ಧಾರಾವಾಹಿಗಳ ಪ್ರಸಾರ, ಅಲ್ಲದೆ ತನ್ನದೇ ಆದ ಛಾಪು ಒತ್ತಿರುವ ಕೆಲವು ರಿಯಾಲಿಟಿ ಷೋಗಳು... ! ಅದರಲ್ಲಿ ನನಗೆ ಶಾಲಿನಿ ನಡೆಸಿಕೊಡುವ ಕಾರ್ಯಕ್ರಮ ಅತಿ ಇಷ್ಟ. ಯಾಕೆ ಎನ್ನುವುದು ವಿವರಿಸಿ ಹೇಳ ಬೇಕಿಲ್ಲ. ಮಕ್ಕಳೇ ಮಾಣಿಕ್ಯ, ಅವರ ಮಾತುಗಳ, ಕಲ್ಪನಾ ಲಹರಿ ಅಮೋಘ. ಅದರ ಜೊತೆ ಶಾಲಿನಿಯ ಮಾತಿನ ಶೈಲಿ ಅದ್ಭುತ. ಭಾನುವಾರ ಆ ಕಾರ್ಯಕ್ರಮ ನೋಡಲು ಕಾತುರದಿಂದ ಕಾಯುವಂತಾಗುತ್ತದೆ.
@ ಉದಯ ನ್ಯೂಸ್ ಯಾವ ಕಾರಣದಿಂದ ಇಷ್ಟ ಆಗುತ್ತೆ ಅಂದ್ರೆ ಅದರಲ್ಲಿ ವಾರ್ತೆ ಓದುವವರು ಸ್ಫುಟವಾದ ಕನ್ನಡದಲ್ಲಿ ವಾರ್ತೆ ಓದುತ್ತಾರೆ. ಆದರೆ ಬಹಳಷ್ಟು ಕನ್ನಡ ವಾಹಿನಿಗಳಲ್ಲಿ ವಾರ್ತೆ ಕೇಳೋದೇ ಹಿಂಸೆ ಆಗುತ್ತೆ. ಕೆಲವರಂತೂ ಬ್ಯಾಡ ಬಿಡಿ ನನಗ್ಯಾಕೆ !!
ಆದರೆ ಈವರೆಗೂ ಅಂತಹ ಬೇಸರ ಆಗಿಲ್ಲ ಉದಯ ನ್ಯೂಸ್ ನವರ ಬಗ್ಗೆ ಹೇಳುವುದಾದರೆ! ಸಾಕಷ್ಟು ಬದಲಾವಣೆಗಳು ಆಗಿವೆ ಉದಯ ನ್ಯೂಸ್ ನಲ್ಲೂ ಸಹಿತ.ತೀರ ಬ್ರೆಕಿಂಗ್ ನ್ಯೂಸ್ ಹಾವಳಿ ಇಲ್ಲ ಅಂದ್ರೂ ಇರುವ ನ್ಯೂಸ್ ಅಚ್ಚುಕಟ್ಟಾಗಿ ಹೇಳುತ್ತಾರೆ. ಚಂದನ ವಾಹಿನಿ ಬಳಿಕ ಜಾಗ ಪಡೆದ ಚಾನೆಲ್ ಅಂದ್ರೆ ಇದು. ಕನ್ನಡ ಕೇಳೋ ಹಂಗೆ ಇರುತ್ತೆ !
@ ಉದಯ ಮ್ಯೂಸಿಕ್ ವಿಷಯಕ್ಕೆ ಬರುವುದಾದರೆ ಹೊಸ ಹುಡುಗ ಹುಡುಗಿಯರು ಎಷ್ಟು ಸುಂದರವಾಗಿ ಕನ್ನಡ ಮಾತಾಡ್ತಾರೆ. ಇಲ್ಲಿ ನಾನು ಖುಷಿಯಿಂದ ಈ ಮಾತು ಹೇಳ್ತಾ ಇದ್ದೀನಿ ಏಕೆಂದರೆ ಸಾಮಾನ್ಯವಾಗಿ ಅತಿಯಾದ ಕಂಗ್ಲೀಷ್ ಇರುವಾಗ ಕನ್ನಡವೂ ಚೆನ್ನಾಗಿ ಮಾತಾಡೋದು, ಮುಖ್ಯವಾಗಿ ವೀಕ್ಷಕರಿಗೆ ಅರ್ಥ ಆಗುವಂತೆ ಕನ್ನಡ ಮಾತಾಡ್ತಾರೆ. ಸಿನಿ ತಾರೆಯರ ಸಂದರ್ಶನ ಸಹ ಅಷ್ಟೇ ಚಂದ ಮಾಡ್ತಾರೆ. ಲೈಕ್ ಆಗುವಂತೆ... ನ್ಯೂಸ್ ಚಾನೆಲ್ ಗಳ ವಾರ್ತಾ ವಾಚಕರಿಗಿಂತ ಈ ಬಾಲಕ ಬಾಲಕಿಯರ ಮಾತು ಕಿವಿಗೆ ಹಿತವಾಗಿರುತ್ತದೆ.
1 comment:
ಉದಯ ವಾಹಿನಿಯ ಚಲನಚಿತ್ರಗಳ ಪಟ್ಟಿ ಗಟ್ಟಿಯಿದೆ. ಆ ಮಟ್ಟಿಗೆ ಅವರೇ ನಂ.೧.
ಉದಯ ಮ್ಯೂಸಿಕ್ ಮೂಲಕ ಚಲನಚಿತ್ರ ರಂಗಕ್ಕೂ, ವಾಹಿನಿಗಳಿಗೂ ಹಲವು ನಿರೂಪಕರು ತರಬೇತಿ ಪಡೆದವರಂತೆ ವಲಸೆ ಹೋಗಿದ್ದಾರೆ!
Post a Comment