ಇಂತಹದ್ದೊಂದು ಘಟನೆ ನಡೆಯ ಬಹುದು ಎಂದು ನಾನು ಕನಸು ಮನಸಿನಲ್ಲೂ ನೆನೆಸಿರಲಿಲ್ಲ. ಕ್ರಿಸ್ಮಸ್ ದಿನ ನಮ್ಮ ಮನೆ ಒಟ್ಟು ನಮ್ಮ ಖಾನ್ದಾನ್ಗೆ ಸೇರಿದ ಇಬ್ಬರು ಬಾಲಕರ ಜನ್ಮದಿನ. ಇಬ್ಬರು ಅಣ್ಣಂದಿರ ಮಕ್ಕಳೇ. ಹಿಂದಿನ ದಿನ ಒಬ್ಬ ಅಣ್ಣನ ಮಗನ ಹುಟ್ಟು ಹಬ್ಬ ಆಗಿತ್ತು.ಇಪ್ಪತೈದರ ರಾತ್ರಿ ಒಂಬತ್ತು ಗಂಟೆ ನನ್ನ ಅಣ್ಣನ ಮಗ ಬೈಕ್ ಆಕ್ಸಿಡೆಂಟ್ ನಲ್ಲಿ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದ. ಅವ ನನ್ನ ಕಸಿನ್ ಮಗ ಆದರು, ದೂರದ ಊರಲ್ಲಿದ್ದರು ಸಹ ಸೋಶಿಯಲ್ ನೆಟ್ ವರ್ಕ್ ಕಾರಣದಿಂದ ಎಲ್ಲರೊಂದಿಗೆ ಹೆಚ್ಚಿನ ಬಾಂಧವ್ಯ ಬೆಳೆದಿದೆ ನನಗೆ. ಇಪ್ಪತ್ನಾಲ್ಕನೇ ತಾರೀಖು ಹುಟ್ಟುಹಬ್ಬ ಆಚರಿಸಿಕೊಂಡವನು ಇಪ್ಪತ್ತೈ ದರಂದು ಜೀವ ಕಳೆದುಕೊಂಡ ಅಂದ್ರೆ ಹೇಗಿರ ಬೇಡ ನಮ್ಮ ಮನಸ್ಥಿತಿ ? ದೂರದ ಹಳ್ಳಿಯಲ್ಲಿ ಇರುವ ಅವರ ಕುಟುಂಬದಲ್ಲಿ ಇಂತಹದೊಂದು ಬರಸಿಡಿಲು.. ತೇಜು - ತೇಜಸ್ ಸತ್ತಿದ್ದಾನೆ ಎನ್ನುವ ಸುದ್ದಿ ತುಂಬಾ ದುಃಖ ನೀಡಿತು. ಎಲ್ಲವನ್ನು ಸ್ವೀಕರಿಸಿ ಮತ್ತೆ ಕೆಲಸದಲ್ಲಿ ಮಗ್ನಳಾದರು ಸಹ , ಎರಡು ದಿನ ಬ್ಲಾಗಿಂಗ್ ಮಾಡಿದ್ರು ಏಕಾಗ್ರತೆ ಹಾಳಾಗಿತ್ತು. ಈ ಸಾವು ನ್ಯಾಯವೇ ಎಂದು ಪದೇಪದೇ ಅನ್ನಿಸಿತ್ತು. ಆ ನಿಸ್ಸಹಾಯಕ ತಾಯಿ ತಂದೆ ನೆನಪು.. ಅ ಪಾಪದವರ ಸಂಕಟ ವಿವರಿಸೋಕೆ ಆಗಲ್ಲ..
........
ಕಳೆದವಾರದಲ್ಲಿ ಪ್ರಸಾರವಾದ ಬಿಗ್ ಬಾಸ್ ನಲ್ಲಿ ಕ್ಯಾಪ್ಟನ್ ಸ್ಥಾನಕ್ಕೆ ಸಂಬಂಧಪಟ್ಟ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಆ ಪರಿ ಇಡ್ಲಿ ತಿಂದ ಕಿಟ್ಟಿ ಮತ್ತು ಅಯ್ಯಪ್ಪ ಅವರ ವಿಷಯಕ್ಕಿಂತ ಅವರ ಜೊತೆ ಆ ರಾತ್ರಿ ಮನೆಯಲ್ಲಿ ಮಲಗಿದ್ದವರ ಕಷ್ಟ ನೆನೆದು ಅಯ್ಯೋ ಪಾಪವೇ ಎಂದು ಅನ್ನಿಸಿತ್ತು ;-)
ನನ್ನ ಕಸಿನ್ ಗೋಪಾಲನಿಗೆ ಬಿಗ್ ಬಾಸ್ ಸಕತ್ ಇಷ್ಟ. ನನ್ನ ನೇಟಿವ್ ನಲ್ಲಿ ಇರೋದು ಅವನು. ಮೊದಲ ಸೀಸನ್ ನಲ್ಲಿ ಅವನಿಗೆ ಹೆಚ್ಚು ಆಕರ್ಷಿಸಿದ್ದು ಚಂದ್ರಿಕಾ. ಚಂದ್ರಜ್ಜಿ ಅಂತ (ಕೀಟಲೆಗೆ ) ಹೇಳ್ತಾ ಇದ್ದ.. ಎರಡನೆಯ ಸೀಸನ್ ಗಿಂತ ಅವನಿಗೆ ಈಗ ಹೆಚ್ಚು ಇಷ್ಟ ಆಗಿದೆ ಅದಕ್ಕೆ ಕಾರಣ ಸುಷ್ಮಜ್ಜಿ ;-)..
ಲೇಯ್ ಅವರು ತುಂಬಾ ಗ್ಲಾಮರ್ ಹೆಣ್ಣುಮಕ್ಕಳು ಅವ್ರ ಬಗ್ಗೆ ಹೀಗ್ ಹೇಳಿದ್ರೆ ಅಷ್ಟೇ ಆಮೇಲೆ ಇಬ್ಬರು ಯಾರಿಗೂ ಕ್ಯಾರೆ ಅನ್ನದ ಹೆಣ್ಣುಮಕ್ಕಳು..ಎಚ್ಚರ ಇರಲಿ ಅಂದ್ರು ಅವನು ವಾಟ್ಸ್ ಅಪ್ ನಲ್ಲಿ ಇರುವ ನಮ್ಮ ಗ್ರೂಪ್ ನಲ್ಲಿ ಬಿಗ್ ಬಾಸ್ ರೀತಿಯಲ್ಲಿ ಚಾಟ್ ಮಾಡೋದು, ಅಂದು ಚಂದ್ರಜ್ಜಿ ಇಂದು ಸುಷ್ಮಜ್ಜಿ ತಪ್ಪದೆ ನೋಡಿ ಬಿಗ್ ಬಾಸ್ ಅಂತ ಹಾಕಿ ನೋಡದೆ ಇರುವವರು ಸಹ ನೋಡುವಂತೆ ಮಾಡಿದ್ದಾನೆ ....
ವೀಕ್ಷಕರು ಎಲ್ಲೇ ಇರಲಿ ಆದ್ರೆ ಬಿಗ್ ಬಾಸ್ ಬಗ್ಗೆ ಇಷ್ಟಪಟ್ಟಿದ್ದಾರೆ. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ .. ಕಳೆದವಾರ ನಮ್ಮ ಆಫೀಸಿಗೆ ಒಂದು ಫೋನ್ ಬಂತು.. ಮಾಡಿದವರು ಮುಂಬೈ ಕನ್ನಡಿಗ. ಆತನಿಗೆ ಬಿಗ್ ಬಾಸ್ ಇಷ್ಟ ಕಾರ್ಯಕ್ರಮವಂತೆ. ಮೇಡಂ ನೀವ್ಯಾಕೆ ಬಿಗ್ ಬಾಸ್ ಬಗ್ಗೆ ಲೇಖನ ಬರೆಯೋಲ್ಲ ಅಂದರು. ಆತನಿಗೆ ನಾನು ಈ ಮೊದಲು ಬರೆದ ಬಿಗ್ ಬಾಸ್ ಲೇಖನ ಹಿಡಿಸಿತ್ತು, ಅದು ಬಹಳ ಹಳೆಯ ಕಥೆ.. ಈಗ ನಾನು ಸಿನಿಮಾ ಪತ್ರಿಕೆಯಲ್ಲಿ ಬರೀತಾ ಇಲ್ಲ ಆದ್ದರಿಂದ ಈ ಬಗ್ಗೆಆಶ್ವಾಸನೆ ನೀಡಲಾರೆ ಎಂದೆ..ಆತನಿಗೆ ಅಯ್ಯಪ್ಪ ನ ಆಟಗಳು ಇಷ್ಟ.. ಹೆಣ್ಣು ಹೈಕಳ ಜೊತೆಯಾಟ.. ನಾವೆಲ್ಲಿ ಬರೆಯೋಣ ಅದರ ಬಗ್ಗೆ ??
ವೆಲ್ ಸುದೀಪ್ ... ದೀಪ್.. ಕಿಚ್ಚ ಹ್ಯಾಪಿ ನ್ಯೂ ಇಯರ್ ...
ನಾನ್ಯಾಕೆ ಇವತ್ತು ವಿಶ್ ಮಾಡ್ತಾ ಇದ್ದೀನಿ ಅಂದ್ರೆ ಪ್ರತಿ ಬಾರಿ ಮಾತು ಮಾತಿಗೂ ಅಷ್ಟು ಸರ್ತಿ ವೀಕ್ಷಕರಿಗೆ, ಬಿಗ್ ಬಾಸ್ ಮನೆಯಲ್ಲಿ ಇರುವ ಎಲ್ಲರಿಗೂ ಹ್ಯಾಪಿ ನ್ಯೂ ಇಯರ್ ಅಂತ ಹೇಳ್ತಾನೆ ಇದ್ರಲ್ಲ ಸುದೀಪ್ . ಅವತ್ತು ನಿಮಗೆ ಹೇಳೋಕೆ ಸಾಧ್ಯ ಇರಲಿಲ್ಲ ಅಲ್ವೇ ಅದಕ್ಕೆ ಈಗ ಹೇಳಿದ್ದೇನೆ ..ಅಷ್ಟು ಸರ್ತಿ ಹ್ಯಾಪಿ ನ್ಯೂ ಇಯರ್ ಅಂತ ಹೇಳ್ತಾನೆ ಇದ್ರಲ್ಲ ಯಾಕ್ ಹಿಂದಿನ ದಿನದ ಎಫೆಕ್ಟ್ ಹಂಗೆ ಉಳಿದು ಕೊಂಡಿತ್ತಾ .. ಛೇ! ನನ್ನದಲ್ಲ ಈ ಡೌಟ್ ನಿಮ್ಮ ಅಭಿಮಾನಿಗಳದ್ದು ... ಹ್ಯಾಪಿ ನ್ಯೂ ಇಯರ್ ;-)
ವೆಲ್ ತುಂಬಾ ಚಂದ ಕಾಣಿಸ್ತಾ ಇದ್ರಿ ಸಂಡೆ ದಿನ.. ಲೈಕ್ ಇಟ್ ಯಾ
No comments:
Post a Comment