ಮಾರಿಬಿಡಿ... ;-)


ಕಳೆದ ಕೆಲವು ದಿನಗಳಿಂದ ನಮ್ಮೂರಲ್ಲಿ ಜಾತ್ರೆ. ಸಕತ್ ಖುಷಿ ಕೊಡ್ತು ನನಗೆ. ಜಾತ್ರೆ ಎಲ್ಲೇ ಆಗಲಿ ಅದರಲ್ಲೂ ಭಾರತದಲ್ಲಿ ಎಲ್ಲೇ ಆಗಲಿ , ಇಡಿ ಭಾರತೀಯರ ಮನಸ್ಥಿಗೆ ಅನುಗುಣವಾಗುವಂತೆ ಅಲ್ಲಿ ಅಂಗಡಿಗಳು ಬಂದಿರುತ್ತದೆ. ಆ ಅಂಗಡಿಗಳು ನಮ್ಮ ಭಾರತೀಯತೆಯನ್ನು ಎತ್ತಿ ತೋರುತ್ತದೆ. ನನಗೆ ಸ್ವಲ್ಪ ರಾಜಸ್ತಾನಿ ಶೈಲಿಯ  ಸರ ಬಳೆಗಳು, ಕಡಗಗಳು ಇಷ್ಟ. ಅಂತಹವು ಇಂತಹ ಜಾತ್ರೆಗಳಲ್ಲಿ ಸಿಗುತ್ತದೆ. ಬೆಂಗಳೂರು ಮಹಾನಗರದಲ್ಲಿ ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ವಿನೂತನವಾದ ಅನುಭವ.

ಬಿಗ್ ಬಾಸ್ ರಿಯಾಲಿಟಿ ಷೋ ಸಾಕಷ್ಟು   ಜನರಿಗೆ ಆಪ್ಯಾಯವಾದ ಕಾರ್ಯಕ್ರಮ. ಸ್ವಲ್ಪ ಜಾಸ್ತಿ ಓದಿದ್ದೀವಿ, ಸಕತ್ ಸಾಹಿತ್ಯ ಕಂಡಿದ್ದೀವಿ ಎನ್ನುವವರಿಗೆ ಅಷ್ಟೊಂದು ಇಷ್ಟವಾಗದ ಕಾರ್ಯಕ್ರಮ. ನನ್ನಂತಹ ಅತಿ ಸಾಧಾರಣ ಬರಹಗಾರರರು, ನನ್ನಂತಹ ಪುಡಿ ಪತ್ರಕರ್ತರಿಗೆ ಇಷ್ಟ ಆಗುವ ಕಾರ್ಯಕ್ರಮಗಳು ಅಂದ್ರೆ ಅಡಿಗೆ, ಫ್ಯಾಶನ್, ಬಿಗ್ ಬಾಸ್ ರಿಯಾಲಿಟಿ ಷೋ, ಮನಕ್ಕೆ ಮುದ ನೀಡುವ ಕಾರ್ಯಕ್ರಮಗಳು, ರಂಗೋಲಿ ಹಾಕುವುದು, ಗಾರ್ಡನಿಂಗ್, ಅಡುಗೆಯನ್ನು ಮಾಡುವುದು, ಸಾಮಾನ್ಯ ಜನತೆಗೆ ಅರ್ಥವಾಗುವ ರೀತಿಯಲ್ಲಿ ಬರೆಯುವುದು.. ಎಲ್ಲವನ್ನು ಅಬ್ಬೋ ಅನ್ನುವಂತೆ ನೋಡದೆ ಆಹಾ ಎಂದು ಆನಂದಿಸುವುದು .. ಹೀಗೆ ಹತ್ತು ಹಲವಾರು.
ಬಿಗ್ ಬಾಸ್ ರಿಯಾಲಿಟಿ ಷೋ ಯಾವ ಭಾಷೆ ಅನ್ನೋದು ಮುಖ್ಯವಲ್ಲ ಅದು ಯಾವ ರೀತಿಯ ಸಂದೇಶಗಳು, ಮನಸ್ಥಿತಿಗಳನ್ನು ಪ್ರಕಟ ಪಡಿಸುತ್ತೆ ಅನ್ನುವ ಅಂಶಕ್ಕೆ ಹೆಚ್ಚು ಬೆಲೆ ಕೊಡ್ತೀನಿ ನಾನು.
ಕಲಿಯೋ ಮನಸ್ಸಿದ್ದರೆ ಎಲ್ಲಾ ಅಂಶಗಳ ಮೂಲಕವೂ ಕಲಿಯ ಬಹುದಲ್ಲವೇ !

 ಬಿಗ್ ಬಾಸ್ ನಲ್ಲಿ ಈ ಬಾರಿ ಟಾಸ್ಕ್ ಮಜಾ ಕೊಡ್ತಾ ಇದೆ. ಆನಂದ್, ಶ್ರುತಿ ಮತ್ತು ಮಿತ್ರ  ಅವರು ಮೊದಲ ಸ್ಥಾನದಲ್ಲಿ ನಿಲ್ತಾರೆ  ಮನೋರಂಜನೆ ನೀಡುವ ವಿಷಯದಲ್ಲಿ. ಚಂದನ್ ಮತ್ತು ರೆಹಮಾನ್ ಸಹ ಇಷ್ಟ ಆಗ್ತಾರೆ ತಮ್ಮ ಇನ್ವಾಲ್ಮೆಂಟ್ ನಿಂದ.. ಪಾಪ ಗೌತಮಿ ಪಾತ್ರವನ್ನು ತುಂಬಾ ಸೀರಿಯಸ್ ಆಗಿ ತಗೊಂಡು ಜೈಲ್ ಭರೋ  ಚಳುವಳಿಯಲ್ಲಿ ಇರೋದ್ ನೋಡಿದ್ರೆ ಇನ್ನು ಮಾಗಬೇಕು ಆ ಹುಡುಗಿ ಅಂತ ಅನ್ನಿಸುತ್ತೆ.. ಸುನಾಮಿ , ಪೂzaa  ಕಥೆ ಬೋರ್ ಹೊಡಿತು ಬಿಡಿ.. ಚಂದನ್ ಆಕೆಯ ಬಗ್ಗೆ ಲೂಸ್ ಟಾಕ್ ಮಾಡಿದರು ಪೂzaa  ನೀಡಿದ ಶಿಕ್ಷೆ ಅತಿ ಅಸಹ್ಯ ಅನ್ನಿಸಿತು..ನಾವು ಕ್ಷಮಿಸಿ ನಮ್ಮ ವಿಶೇಷತೆ ತೋರಬೇಕು..
ಕೃತಿಕ ಮಾತ್ರ  ಅತ್ತೆ ಮೇಲೆ ಸದಾ ಚಾಡಿ ಹೇಳುವ ಸೊಸೆ ಮನಸ್ಥಿತಿ .
 ಎಲ್ಲಾ  ಓಕೆ ಆದರೆ ಒಂದು ಬಾರಿಯೂ ನಾಮಿನೇಟ್ ಆಗದೆ ಇರುವವರು ಬಿಗ್ ಬಾಸ್ ಮನೆಗೆ ಸರಿಯಾದ ಮೆಂಬರ್ ಅಲ್ಲ ಅಂತ ಎಲ್ಲರ   ಅಭಿಪ್ರಾಯ. ಕಾರಣ ಇಷ್ಟೇ ಹೊರ ಪ್ರಪಂಚಕ್ಕೆ ಹೆದರಿ ಅಲ್ಲಿರುವವರು ಪಾಪ ಯಾರೂ ನಿರ್ಧಾರ ತಗೋತಾ ಇಲ್ಲ.. ಆಟ ಅಂದ್ರೆ ಆಟ.. ಇಲ್ಲಿ ಎಲ್ಲರು ಒಂದೇ..
Image result for doubt
ಓಎಲ್ಎಕ್ಸ್ ನಲ್ಲಿ ಮಾರಿಬಿಡಿ ಇದು ಆರಂಭದಿಂದಲೂ ನಮಗೆಲ್ಲ ಮಜಾ ಕೊಡುವ ವಾಕ್ಯ.. ಯಾಕೆ ಅಂದ್ರೆ ಸಿಟ್ಟು ಬಂದಾಗ, ಕಿಂಡಲ್ ಮಾಡುವಾಗ  ಓಎಲ್ಎಕ್ಸ್ ನಲ್ಲಿ  ಮಾರಿಬಿಡಿ ..ಅನ್ನೋದು ಸಾಮಾನ್ಯ .  ಆದರೆ ಕಿಚ್ಚ  ಸುದೀಪ್ ನೀವು ಮತ್ತು ಅನಂತ್ ನಾಗ್ ಸಾರ್ ಅವರು  ನಟಿಸಿರುವ ಓಎಲ್ಎಕ್ಸ್ ಜಾಹೀರಾತಿನಲ್ಲಿ  ಅಷ್ಟು ಹಳೆ ಫೋನ್ ಅಷ್ಟೊಂದು ಫಂಕಿ ಹುಡುಗಿ ತಗೊತಾಳಾ ?.. ಈ ಜಾಹೀರಾತನ್ನು ಓಎಲ್ಎಕ್ಸ್ ನಲ್ಲಿ  ಮಾರಿಬಿಡಿ... ;-)
@ ಪಾಪ ನಮ್ಮ ಶಿವಣ್ಣ ಅಷ್ಟೊಂದು ಡೀಸೆಂಟ್ ಅವರಿಗೆ ಡಬ್ಬು ಡಬ್ಬು ಅಂತ ಹೇಳಿ ದಾರಿ ತಪ್ಪಿಸಿ ಮುದ್ದೆ ಸೋಪ್ಸಾರು  ಪ್ರೇಂಗೆ  ಟೆನ್ ಸನ್ ಮಾಡಿ ಬುಟ್ರೆ ಎಂಗೆ ?
@ ಅನಂತ್ ನಾಗ್ ಅವರ ಸಂದರ್ಶನ ಮಾಡಲು  ಎಷ್ಟೆಲ್ಲಾ  ಕಷ್ಟಪಟ್ರಿ. ಆ ಕಷ್ಟದಲ್ಲಿ ನೀವು ನಿಮ್ಮ ಕೂದಲಿಗೆ ಬ್ಯಾಂಡ್ ಹಾಕೋದನ್ನೇ ಮರೆತೇ ಬಿಟ್ಟಿರಲ್ಲ.. ಆ ರಬ್ಬರ್ ಬ್ಯಾಂಡನ್ನು  ಓಎಲ್ಎಕ್ಸ್ ನಲ್ಲಿ  ಮಾರಿ ಬಿಟ್ರ ;-)
(ಅನಂತ್ ನಾಗ್ ಮತ್ತು ಶಿವಣ್ಣ ನವರ  ಸಂದರ್ಶನಕ್ಕೆ ಥಮ್ಸ್ ಅಪ್  )

ವಿಭಿನ್ನ.



ಮೀಲೋ ಎವರು  ಕೋಟೀಶ್ವರುಡು ಮಾ ಟೀವಿಯಲ್ಲಿ ಮೂರನೇ ಅವತರಣಿಕೆ ಆರಂಭವಾಗಿದೆ. ಈ ವಾಹಿನಿಯಲ್ಲಿ ಪ್ರಸಾರವಾಗುವ  ಇದು ಕೌನ್ ಬನೇಗಾ ತೆಲುಗು ಅವತರಣಿಕೆ. ಇದರಲ್ಲಿ ಅತ್ಯಂತ ಆಸಕ್ತಿಕರ ಅಂಶ ಎಂದರೆ ನಮ್ಮಂತಹ ಸ್ಪರ್ಧಿಗಳ ತಪ್ಪು ಉತ್ತರ ಮತ್ತು ಗ್ರೀಕು ವೀರುಡಾ ಎನ್ನುವ ಅಗ್ಗಳಿಕೆ ಮತ್ತು ತೆಲುಗು ಚಿತ್ರರಂಗದ ಮನ್ಮಥ ನಾಗಾರ್ಜುನ. ಕೇವಲ ಅವರ ಮಾರ್ವಲೆಸ್ ಸ್ಟೈಲ್ಸ್ ನಿಂದ ಮಾತ್ರವಲ್ಲ ಅವರ ಬಾಡಿ ಲಾಂಗ್ವೇಜ್, ಅವರ ಮಾತಿನ ಶೈಲಿ ಹಾಗು ಆ ಕಾರ್ಯಕ್ರಮವನ್ನು ನಡೆಸಿಕೊಡುವ ರೀತಿ ವಿಭಿನ್ನ.
ಇತ್ತೀಚಿಗೆ ಆ ಕಾರ್ಯಕ್ರಮದ ಮೂರನೇ ಅವತರಣಿಕೆ ಆರಂಭವಾಯಿತು. ಅದರಲ್ಲಿ ಕೆಲವು ಪ್ರಶ್ನೆಗಳು   ಸರಳವಾಗಿದ್ದರು ಉತ್ತರಿಸದ  ಸ್ಪರ್ಧಿಗಳ ಬಗ್ಗೆ ಅನುಕಂಪ ತೋರುತ್ತಾ  ಅವರ ಮನವನ್ನು ಆರಾಮ ಮಾಡಿ  ಹೆಚ್ಚು ಹೆಚ್ಚು ಗೆಲ್ಲುವಂತೆ ಮಾಡುವ ಪ್ರಯತ್ನದಲ್ಲಿದ್ದರು ನಾಗ್.
ಮೋಸ್ಟ್ ಸ್ಟೈಲೀಶ್  ಹೀರೋ ನಾಗ್ ಅವರ ಸಂದರ್ಶನ ಒಮ್ಮೆ ಈ ಟೀವಿ ತೆಲುಗು ವಾಹಿನಿಯಲ್ಲಿ ಪ್ರಸಾರವಾಗ್ತಾ ಇತ್ತು. ಅದರಲ್ಲಿ ಅವರು ತಾವು ಚಿತ್ರರಂಗಕ್ಕೆ ಬಂದಾಗಿನ ಅನುಭವಗಳನ್ನು ಹೇಳುತ್ತಿದ್ದರು. ಪ್ರಸಿದ್ಧ ನಿರ್ದೇಶಕ ರಾಘವೇಂದ್ರ ರಾವ್ ಅವರ ನೇತೃತ್ವದ ಸೌಂದರ್ಯ ಲಹರಿ ಕಾರ್ಯಕ್ರಮ ಅದು.
 ನಾಗ್ ಚಿತ್ರರಂಗಕ್ಕೆ  ಬಂದಾಗ ಅಲ್ಲಿ ಅದಾಗಲೇ ಶ್ರೀದೇವಿ ಮತ್ತು ಸುಹಾಸಿನಿ ಅವರು ಹೆಸರು ಮಾಡಿದ   ನಟಿಯರಾಗಿದ್ದರು, ಅವರ ಕಣ್ಣಿಗೆ ನಾಗ್ ಪಾಪದ ಬಾಲಕ. ನಾಗ್ ಜೊತೆ ಮಾತೆ ಆಡದೆ ತಮ್ಮ ಲೆವೆಲ್, ಜಂಬಾ ತೋರಿಸುತ್ತ ಇದ್ದರಂತೆ. ಎಂತಹ ದೊಡ್ಡ ಹೀರೋ ಮಗನಾದರೂ ತಮ್ಮ ಸಾಧನೆಯ ಹಾದಿಯಲ್ಲಿ ಕಿರಿಯರು ಆಗಿದ್ದ ಆಗಿನ ನಾಗ್ ಯಾವರೀತಿ ಅನುಭವ ಹೊಂದಿದ್ದರು ಎನ್ನುವ ಮಾತನ್ನು ಹೇಳಿದ್ದರು ಆ ಕಾರ್ಯಕ್ರಮದಲ್ಲಿ .
ಸಾಮಾನ್ಯವಾಗಿಅಪ್ಪನಂತೆ ಯಶಸ್ವಿ ಆಗುವುದು ಅನೇಕ ಕಲಾವಿದರ ಕೈಲಿ ಸಾಧ್ಯವಾಗಿಲ್ಲ..ಕೆಲವರು ಮಾತ್ರ ಈ ಸಂಗತಿ ಸಾಧ್ಯ ಮಾಡಿಕೊಂಡಿದ್ದಾರೆ ಅದರಲ್ಲಿ ನಾಗ್ ಸಹ ಒಬ್ಬರು.
Image result for orange color  flowers
@ ಈಟೀವಿ ತೆಲುಗು ವಾಹಿನಿಯಲ್ಲಿ ಹಾಸ್ಯ ನಟ ಅಲಿ ಅವರ ಅಲಿ 369  ಗೇಂ ಷೋ ಪ್ರಸಾರವಾಗುತ್ತಿದೆ. ಅದರಲ್ಲಿ ಬರುವವರಿಗಿಂತ ಅಲಿ ಹಾಸ್ಯ, ಅವರ ಅದರಲ್ಲಿ  ಭಾಗವಹಿಸುವಿಕೆ ನೋಡುವ ಸಲುವಾಗಿ ವೀಕ್ಷಕರು ಕೂರ್ತಾರೆನೋ ಟೀವಿ ಸೆಟ್ ಮುಂದೆ.ಒಟ್ಟಾರೆ ಬೇಸರ ಆಗದೆ ನೋಡುವಂತೆ ಮಾಡುವ ಕಾರ್ಯಕ್ರಮ. ಸಾಯಿ ಕುಮಾರ್ ಅವರ ವಾವ್ ರಿಯಾಲಿಟಿ ಷೋ ನಂತರ  ಅಲಿ ಕಾರ್ಯಕ್ರಮ ಹೆಚ್ಚು ಇಷ್ಟವಾಗಿದ್ದು ನನಗೆ. ಸಾಯಿ ಅವರ ಚೆಕ್ ಚೇಸ್ತೆ ಹೇಳುವ ರೀತಿ ಅನನ್ಯವಾಗಿತ್ತು. ಅದೇರೀತಿ ಅಲಿ ಅವರ ಶೈಲಿ ಹಾಗೂ ಭಾಗವಹಿಸುವಿಕೆ ಇಷ್ಟ ಆಗುವ ಅಂಶಗಳು . 

ಸಣ್ಣ ಸಣ್ಣ ಹಾಸ್ಯ



PC: Prakash Hegde
ಚಂದದ ಕಾರ್ಯಕ್ರಮಗಳನ್ನು ನೀಡುವ ಚಂದನ ವಾಹಿನಿಯ ಅತಿ ಚಂದದ ಕಾರ್ಯಕ್ರಮ ಥಟ್ ಅಂತ ಹೇಳಿ. ಡಾ. ನಾ ಸೋಮೇಶ್ವರ್ ಅವರ ಈ ಯಶಸ್ವಿ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಶುಕ್ರವಾರ ವಿಶೇಷ ಅತಿಥಿಗಳು ಬರುತ್ತಿರುತ್ತಾರೆ. ಆದರೆ ಈ ಬಾರಿ ಆ ಪರಂಪರೆ ಇರಲಿಲ್ಲ ಆ ವಿಷ್ಯ ಬಿಡಿ. ಇತ್ತೀಚಿನ ಶುಕ್ರವಾರ ಒಂದರಲ್ಲಿ ಪ್ರಸಿದ್ಧ ಕವಿ, ಚಿತ್ರ ಸಾಹಿತಿ, ಲೇಖಕ , ಮೇಷ್ಟು  ದೊಡ್ಡ ರಂಗೇ ಗೌಡ್ರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಅದೂ ಸಹ ಒಂದು. ಹಿರಿಯ, ಮಾಗಿದ ಬರಹಗಾರ ತಮ್ಮ ಅನುಭವ ಮನದ ಮಾತನ್ನು ಹೇಳುತ್ತಾ ಅರ್ಧಗಂಟೆ ಸಾಲದು ತನ್ನಂತಹ ಸಮುದ್ರಕ್ಕೆ ಎನ್ನುವ ಅಂಶವನ್ನು ವೀಕ್ಷಕರ ಮುಂದೆ ತಿಳಿಸಿದರು. ಅತ್ಯಂತ ಖುಷಿ ಕೊಡ್ತು ಅವರ ಮಾತಿನ ಶೈಲಿ, ಅಗಾಧವಾದ ವಿಚಾರಧಾರೆ ಎಲ್ಲವು ಸಹ.. ಮಾತಿನ ನಡುವೆ ಹೆಚ್ಚುಬಾರಿ ಇತ್ತೀಚಿನ  ಕವಿಗಳು ಪ್ರಗಾಥ (ಭಾವಗೀತ ಶೈಲಿ )ಗಳನ್ನು ಬರೆಯುವುದನ್ನು ಬಿಟ್ಟಿದ್ದಾರೆ ಎನ್ನುವ ಅಂಶ  ಹೇಳಿದರು. ಗೌಡ್ರು ಹೇಳಿದಂತೆ ನಮ್ ಈಗಿನ  ಕವಿಗಳು ಅದರತ್ತ ಗಮನ ಹರಿಸಿದೆರೆಷ್ಟು ಚಂದ..

look at the caption! very apt,right?
ಈ ಟೀವಿ ಕನ್ನಡ ಸುದ್ದಿ ವಾಹಿನಿಯಲ್ಲಿ ಎದೆ ತುಂಬಿ ಹಾಡಿದೆನು ಕಾರ್ಯಕ್ರಮ ಆರಂಭವಾಗಿ ಬಹಳ ತಿಂಗಳುಗಳು   ಪೂರ್ಣಗೊಂಡಿದ್ದರು, ಅದನ್ನು ವೀಕ್ಷಿಸಲು ಆರಂಭ ಮಾಡಿದ್ದು ಇತ್ತೀಚಿನ ದಿನಗಳಲ್ಲಿ. ಅದಕ್ಕೆ ಕಾರಣ ನಮ್ಮಮನೆಗೆ ಇತ್ತೀಚೆಗಷ್ಟೇ ಈ ಟೀವಿ ನ್ಯೂಸ್ ಆರಂಭವಾಗಿದ್ದು. ವಿಶ್ವದ ಮಹಾನ್ ಗಾಯಕರಲ್ಲಿ ಒಬ್ಬರಾದ ಡಾ. ಎಸ್ ಪಿ ಬಾಲಸುಬ್ರಮಣ್ಯಂ ಅವರ ಕಂಠಸಿರಿ, ಅವರ ತೀರ್ಪು, ಮಕ್ಕಳಿಗೆ ತಿಳಿಸಿಕೊಡುವ  ಮಾಹಿತಿ , ಜೊತೆಗೆ ಆ ಕಾರ್ಯಕ್ರಮಕ್ಕೆ ಬರುವ ವಿಶೇಷ ಅತಿಥಿಗಳು ಎಲ್ಲವು ಚಂದ. ಒಂದು ಉತ್ಕೃಷ್ಟ  ಕಾರ್ಯಕ್ರಮಗಳಲ್ಲಿ ಒಂದು ಅದು. ಆ ಕಾರ್ಯಕ್ರಮದಲ್ಲಿ ಪುತ್ತೂರು ನರಸಿಂಹ  ನಾಯಕ್ ಅವರು ಮುಖ್ಯ ಅತಿಥಿಯಾಗಿ ಬಂದಿದ್ದ  ಎಪಿಸೋಡ್ ನಲ್ಲಿ  ಡಾ. ಭಾರತಿಯವರು ಸಹಿತ ಬಂದಿದ್ದರು. ಅದೇ ದಿನ ಡಾ. ವಿಷ್ಣುವರ್ಧನ್ ಅವರ ಸಮಾಧಿಗೆ ಸಂಬಂಧ ಪಟ್ಟ ಎಲ್ಲ ಸಮಸ್ಯೆಗಳು ಪರಿಹಾರ ಆದ ಬಗ್ಗೆ ಎಸ್ ಪಿ ಬಿ ಅವರು ಹೇಳುತ್ತಿದ್ದರು. 
ಅದು ಒಳ್ಳೆಯ ಸಂಗತಿ, ಆದರೆ ಅಂದು ಸ್ಪರ್ಧಿಯೊಬ್ಬ ಗರಗರನೆ ಹಾಡನ್ನು ಹಾಡಿದ್ದ. ಹೆಚ್ಚು ಖುಷಿ ಕೊಡ್ತು. ಕಾರಣ ಇಷ್ಟೇ ಅದರ ಮಾಧುರ್ಯ. ಅದರ ಮೂಲ ಗಾಯಕ  ಎಸ್ ಪಿಬಿ ಅವರ ಮುಂದೆ ಈ ಬಾಲಕ ಹಾಡಿದ್ದು, ಅದರಲ್ಲಿನ ಕೆಲವು ಅಂಶಗಳನ್ನು ತಿದ್ದಿ ಹೇಳಿಕೊಟ್ಟ ಸಂಗತಿಗಳು  ಎಲ್ಲವು ಚಂದ ಚಂದ..
..... ನಿನ್ನೆ ಸಹ ಮತ್ತೆ  ಎದೆ ತುಂಬಿ ಹಾಡಿದೆನು ವೀಕ್ಷಣೆ ಮಾಡಿದೆ . ಆ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಸಿದ್ಧ ಹಾಡುಗಾರ್ತಿ ಬಿ ಆರ್ ಛಾಯಾ ಅವರು ಬಂದಿದ್ದರು ವಿಶೇಷ ಅತಿಥಿಯಾಗಿ. ಅವರ ಕಂಠ ಮಾಧುರ್ಯದ ಬಗ್ಗೆ ಹೇಳುವಷ್ಟಿಲ್ಲ. ಯಾವರೀತಿ ಜಾನಪದ ಹಾಡುಗಳನ್ನು ಹಾಡಬೇಕು, ಅದರೊಳಗಿನ ಭಾವ ವ್ಯಕ್ತಪಡಿಸ ಬೇಕು ಎನ್ನುವ ಪ್ರತಿಯೊಂದು ಸಂಗತಿಯನ್ನು ವಿವರಿಸಿದರು ಬಿ ಆರ್ ಛಾಯ ಅಲ್ಲಿ ಬಂದಿದ್ದ ಪುಟಾಣಿಗಳಿಗೆ . ಬಿ ಆರ್ ಆ ಛಾಯ ಅವರು ಮೊಟ್ಟಮೊದಲು ಹಾಡಿದ ತಮಿಳು ಜಾನಪದದ ಹಾಡಿನ ಬಗ್ಗೆ, ಅದರಲ್ಲಿನ ಸ್ಪಷ್ಟತೆ ಬಗೆ ಖುದ್ದು ಬಾಲು ಮಾಸ್ಟರ್  ಖುಷಿ ಪಟ್ಟು ಆ ಹೆಣ್ಣುಮಗಳ ಪ್ರತಿಭೆಯನ್ನು ಮತ್ತೆ ಮತ್ತೆ ಗೌರವಿಸಿದರು. ಇಂತಹ ಮಾಸ್ಟರ್ ಗಳ ಕೈಲಿ ಹೊಗಳಿಸಿಕೊಳ್ಳುವುದು ಅಂದ್ರೆ ಸುಮ್ಮನಲ್ಲ. ಛಾಯ ಅವರ ಪತಿ ಪದ್ಮಪಾಣಿ ಜೋಡಿದಾರ್ ಅವರು ನನ್ನ ಫೇಸ್ ಬುಕ್ ಮಿತ್ರರು. ನಾನು ಅನೇಕ ಕಾರ್ಯಕ್ರಮಗಳಲ್ಲಿ ಅವರನ್ನು  ಭೇಟಿ ಆಗಿದ್ದರು ಅವರಿ ನಾನ್ಯಾರು ಎನ್ನುವುದು ಗೊತ್ತಿಲ್ಲ. ಅದು ಸಹಜವಾದ ಒಂದು ಅಂಶ . 
ಆದರೆ ಎಫ್ ಬಿಯಲ್ಲಿ ಆಗಾಗ ಅವರ ಗೋಡೆಯಲ್ಲಿ ಅಂಟಿಸಿರುವುದನ್ನು ಓದುವ, ನಗು ಬಂದ್ರೆ ನಗುವ ಕೆಲಸ ಮಾಡ್ತಾ   ಇರ್ತೇನೆ. ಮೇಲೆ ಹಾಕಿರುವ ಚಿತ್ರ ಅಂತಹ ಒಂದು ಉಲ್ಲಾಸ ಹೆಚ್ಚಿಸಿದ ಸಂಗತಿ. ನಿನ್ನೆ ಅವರು ಕಾರ್ಯಕ್ರಮ ವೀಕ್ಷಿಸುತ್ತಾ ಈ ಅಂಶವನ್ನು ಎಲ್ಲರ ಗಮನಕ್ಕೆ ತಂದಿದ್ದಾರೆ.  ಸಣ್ಣ  ಸಣ್ಣ ಹಾಸ್ಯಗಳು ಎಷ್ಟೊಂದು ಉಲ್ಲಾಸ ನೀಡುತ್ತದೆ ಅಲ್ವೇ..

ನಾರದ..

Displaying IMG-20151126-WA0020.jpg
PC: Yagnapala  V. Ghatt


ಬಿಗ್ ಬಾಸ್ ಕಾರ್ಯಕ್ರಮ ವೀಕ್ಷಿಸುತ್ತಿದ್ದರೆ ಅನೇಕ ಅಂಶಗಳು ಗೋಚರವಾಗುತ್ತಾ ಸಾಗುತ್ತದೆ. ಮನುಷ್ಯನ ಸಂಬಂಧಗಳು ಎಷ್ಟು ನಿಗೂಢ ಮತ್ತು, ಅದೆಷ್ಟು  ಜಾಳು ಜಾಳು ಅಂತ ಸಹಿತ ಅನ್ನಿಸುತ್ತದೆ. ಆದರೂ ಈ ನಾಗರಿಕ ಸಮಾಜದಲ್ಲಿ ಒಂದು ಬಗೆಯ ಮುಖವಾಡ  ಧರಿಸಿ ಬದುಕುವ ಪ್ರಯತ್ನ ಮಾಡುತ್ತಲೇ ಸಾಗುತ್ತಾರೆ  ಮಂದಿ .


Displaying IMG-20151126-WA0020.jpg
ನನಗೆ ಎಫ್ ಬಿ  ಸೇರಿದಂತೆ ಸಾಮಾಜಿಕ ಜಾಲತಾಣಗಳು, ನನ್ನ ಬ್ಲಾಗ್  ನಿಂದ ಅನೇಕ ಫ್ರೆಂಡ್ಸ್ ಆಗಿದ್ದಾರೆ. ಒಂದಷ್ಟು ಜನರು ಬೈ  ಅಂತ ದೂರ ಹೋಗಿದ್ದಾರೆ, ಒಂದಷ್ಟು ಮಂದಿ ಆಪ್ತರಾಗಿ ಹಾಗೆ ಉಳಿ ದಿದ್ದಾರೆ. ಕೆಲವರು ನನ್ನ ಜೊತೆ  ಮಾತುಕತೆಯನ್ನು ಆಡಿ  ತಮ್ಮ ವಿಶ್ವಾಸ  ತೋರಿದರೆ, ಒಂದಷ್ಟು ಜನ ಮನದಲ್ಲಿ ಗೌರವ ಉಳಿಸಿಕೊಂಡು ತಮ್ಮ ರಂಗದಲ್ಲಿ ಬೆಳೆಯುವ ವಿಷಯದಲ್ಲಿ ಮಗ್ನರಾಗಿದ್ದಾರೆ. ಗೌರವ ಉಳಿಸಿಕೊಂಡವರ ಬಗ್ಗೆ ನನಗೆ ಸ್ಪಷ್ಟವಾದ ನಂಬಿಕೆ ಇದೆ . ಯಾಕೆಂದ್ರೆ ಅವರ ಸೋಲಿನ ಸಮಯದಿಂದ  ಪ್ರತಿ ಗೆಲುವಿನ ಹೆಜ್ಜೆ ಕಂಡಿದ್ದೇನೆ . ಅವರಲ್ಲಿ ಬಿಗ್ ಬಾಸ್ ನಲ್ಲಿ ವಾಯ್ಸ್ ಓ ವರ್ ಮಾಡುತ್ತಿರುವ  ಪ್ರದೀಪ್  ಬಡಕ್ಕಿಲ , ಶ್ರೀ ಮುರಳಿ ಸಿನಿಮಾ ರಥಾವರದ  ಎಡಿಟರ್ ಶಿವಶಂಕರ್  ಗೌಡ.
ಆರಂಭಿಕ ಹಂತದಲ್ಲಿ ಪ್ರದೀಪ್ ಧ್ವನಿ ಮೂಲಕ ಜನರ ಮನಕ್ಕೆ ತಲುಪಿದ್ದರೂ ಸಹಿತ ಅದು ಅವರೇ ಎಂದು ಜನಕ್ಕೆ ಗೊತ್ತಿರಲಿಲ್ಲ. ಆದರೆ ಸಾಧನೆ - ಪ್ರಯತ್ನ, ಅದೃಷ್ಟ ಎಲ್ಲವೂ ಈಗ ಈ ಟೀವಿ ಕನ್ನಡದ  ಎಲ್ಲ ಕಾರ್ಯಕ್ರಮಗಳ ಪ್ರೊಮೊ ಗಳಿಗೆ, ಬಿಗ್ ಬಾಸ್ ಮನೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಿಗೆ ಧ್ವನಿ  ಕೊಡುವ ಒಂದು ಅವಕಾಶ ದೊರೆತು.. ಅವರು ಎದುರು ಸಿಕ್ಕಾಗ ಜನಕ್ಕೆ ತಿಳಿದೇ ಇದ್ರೂ ಅವರ ಧ್ವನಿ ಕೇಳಿದಾಗ ಪ್ರದೀಪ್ ಅನ್ನುವಷ್ಟು ಬೆಳೆ ದಿದ್ದಾರೆ. (ಸಿನಿಮಾ - ಸೀರಿಯಲ್ಲು ಎಲ್ಲಾ ಕಡೆ ಅಭಿನಯ ಚಾತುರ್ಯ ತೋರಿಸಿದ್ದಾರೆ ಪ್ರದೀಪ್ )
ಶಿವು ಅಂತಾನೆ ಕರೆಯೋದು ಇವನನ್ನು .  ರಥಾವರ ಆತನ ಬದುಕಲ್ಲಿ ತಿರುವು ನೀಡಿದೆ . ಚಿತ್ರರಂಗದ ಪ್ರಸಿದ್ಧ  ಸಂಕಲಕಾರರಲ್ಲಿ ಒಬ್ಬರಾದ ಶ್ರೀಕಾಂತ್ ಅವರ ತಮ್ಮ ನಮ್ಮ ಶಿವು. ಒಂದರ್ಥದಲ್ಲಿ ಆತ  ನನಗೆ  ಪ್ರೀತಿಯ ತಮ್ಮ. ನಮ್ಮದು ಜಾತಿ, ಧರ್ಮ, ನೆಂಟಸ್ತಿಕೆಯ ಬಾಂಧವ್ಯವಲ್ಲ, ಆದರೆ ಇಬ್ಬರದ್ದು  ಆಪ್ತತೆ, ಮನದ ಬಾಂಧವ್ಯ . ತುಂಬಾ ವರ್ಷಗಳಿಂದ ನಮ್ಮ ಸ್ನೇಹ ಇದೆ. ಈ ತಮ್ಮ   ಶಿವು  ಈಗ ರಥಾವರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾನೆ . ಅದು ಇದೇ  ತಿಂಗಳ 4 ನೇ  ತಾರೀಖು ಜನರ ಮುಂದೆ ಬರ್ತಾ  ಇದೆ. ಅವನ ಕೆಲಸಕ್ಕೆ ಇಷ್ಟಪಟ್ಟ ಕ್ರಿಯೇಟಿವ್ ನಿರ್ದೇಶಕರು ಕೆಲಸ ಮಾಡಲು ಅವಕಾಶ ನೀಡಿದ್ದಾರೆ ತಮ್ಮ ಮುಂದಿನ ಚಿತ್ರಗಳಲ್ಲಿ ಅದಕ್ಕಿಂತ ಸಂತೋಷದ ಸಂಗತಿ ಏನಿದೆ ? ಒಳ್ಳೆದಾಗಲಿ .. ಹೆಚ್ಚು ಹೆಚ್ಚು ಬೆಳೆಯಲಿ  ನಮ್ ಶಿವು.

Image result for doubt pics
ಬಿಗ್ ಬಿಗ್ ಬಿಗ್ ಬಾಸ್ ಹೌದು ಸ್ವಾಮಿ ...ಹೀಗೆ ನಿಮಗೊಂದು ಸುಂದರವಾದ ಹೆಸರು ಪ್ರಶಸ್ತಿ ಸಿಗುತ್ತೆ ಅಂತ ನನಗೆ ಗೊತ್ತೇ ಇರಲಿಲ್ಲ ಕಿಚ್ಚ.. ನಮ್ ಆನಂದ್ ಹಾಕಿದ ಜನಿವಾರವ  ಹಾಡಿನ ಮೂಲಕ ನಿಮ್ಮನ್ನು ನಾರದನನ್ನಾಗಿ ಮಾಡಿಬಿಟ್ಟರೆ ;-)
 ನಮ್ಮನ್ನು  ಕಾಡುವ ಕಟ್ಟಕಡೆಯ ಪ್ರಶ್ನೆ ಹೀಗೂ ಉಂಟೆ  ಉಂಟೇ  ...
ಸ್ನೇಹ ಪ್ರೀತಿ, ಬಾಂಧವ್ಯ, ನಂಬಿಕೆ ಎಲ್ಲದರ  ಮಧ್ಯೆ  ಒಂದು ಅನುಮಾನದ ಸಣ್ಣ  ಗೆರೆ ಇರುತ್ತೆ.  . ಅದು ಅಗೋಚರವಾಗಿರುತ್ತದೆ. ಆ ಗೆರೆ ದಾಟಿದರೆ ನೋವು, ಅಪಮಾನ, ಎಲ್ಲವು ಎದುರಾಗುತ್ತದೆ. ಪೂಜಾ ವಿಷಯದಲ್ಲಿ ಹೀಗಾಗಿದ್ದು  ನಮಗೆ ನಿರೀಕ್ಷಿತ ಆಗಿದ್ದರು ಸಹ ಪಾಪ ಹೀಗಾಗ ಬಾರದಿತ್ತು ಅಂತ ಅನ್ನಿಸಿದ್ದು ಸತ್ಯ. ಅಯ್ಯಪ್ಪ ಎಂತಹ ಆಟಗಾರ!. ಲಾಲಿಪಪ್ ರೌಂಡ್ ನಲ್ಲಿ ಮುತ್ತು ಕೊಟ್ಟವರ ಚಿತ್ರಗಳನ್ನು ಮುಂದೆ ಇಟ್ಟರೆ ಮತ್ತೆ ಆಕೆ ಏನ್ ಮಾಡ್ತಾರೆ ಅನ್ನುವುದು ವೀಕ್ಷಕರಿಗೆ ಗೊತ್ತೇ ಇದೆ..
ಆದರೆ  ಬ್ರದರ್ ಮತ್ತು ಸಿಸ್ಟರ್ ಬಗ್ಗೆ ನಾವು ಮಾತ್ರವಲ್ಲ ಅನೇಕ ಸ್ನೇಹಿತರು ತಮ್ಮ ಅಭಿಪ್ರಾಯ ಸಹ ಪ್ರಶ್ನಾರ್ಥಕವಾಗಿದೆ ಸುದೀಪ್ ..
ನಾನು ಹತ್ತು ವರ್ಷದಿಂದ ಮಾಧ್ಯಮದಲ್ಲಿ ಇದ್ದೇನೆ ನನಗೆ ಗೊತ್ತು ಬಾಯ್ ಬಿಡಿಸೋದು.. ಆದರೆ ನಾನು ಹಾಗೆ ಮಾಡಲಿಲ್ಲ  ಎನ್ನುವ ಮಾತು ತಮ್ಮ ಜೊತೆ ಮಾತಾಡಿದ  ಕಾಲರ್ ಬಗ್ಗೆ ಮಾತಾಡುತ್ತಾ  ತಮ್ಮ ಜೊತೆಗಾರರ ಜೊತೆ ಹೇಳಿದ್ರು ಬ್ರದರ್..! ನಿಜ ಹೇಳಿ ಜನರ ಮುಂದೆ ಮಾಧ್ಯಮದ ಶಕ್ತಿ ಎಷ್ಟಿದೆ ? ನಮಗೆ ಒಂದು ಸಂಸ್ಥೆಯಿಂದ ಮಾತ್ರ  ಬೆಲೆ ಸಿಕ್ಕೋದು ಅಲ್ವೇ !!

ಆ ವಿಷ್ಯದ ಚರ್ಚೆ ಯಾಕೆ.. ಸುದೀಪ್   ? ನನ್ನ ಪ್ರಿಯ ಮಿತ್ರ -ಓದುಗ  ರಂಜಿತ್ ಅಡಿಗ ಅಕಸ್ಮಾತ್ .. ಹೀಗೆ ಆದ್ರೆ ಎನ್ನುವುದನ್ನು ಬ್ರದರ್ ಬಗ್ಗೆ  ಬರೆದಿದ್ದಾರೆ . ಅದನ್ನು  ರಂಜಿತ್ ಮಾಣಿ  ಅನುಮತಿ ಮೇರೆಗೆ ಇಲ್ಲಿ ಅಂಟಿಸಿದ್ದೇನೆ ...
 ರೆಹಮಾನ್ ಬಿಗ್ ಬಾಸ್ ನಿಂದ ಹೊರಬಂದಾಗ.
ಸುದೀಪ್: ನಿಮ್ಮ ಪ್ರಕಾರ ಬಿಗ್ ಬಾಸ್ ಮನೆ ಒಳಗೆ ಇರೋರಲ್ಲಿ ಹೆಚ್ಚು ಪ್ರಾಮಾಣಿಕ ಯಾರು?
ರೆಹಮಾನ್: ನೇಹ. ಯಾಕಂದ್ರೆ ನಾನು ಅವಳ ಜೊತೆ ಹೆಚ್ಚು ಸಮಯ ಕಳೆದಿರೋದ್ರಿಂದ ಅವಳು ಪ್ರಾಮಾಣಿಕ ಅಂತ ಹೇಳೋಕೆ ಇಷ್ಟ ಪಡ್ತೀನಿ ಸುದೀಪ್ ಸರ್.

ಸುದೀಪ್: ನಿಮ್ಮ ಪ್ರಕಾರ ಬಿಗ್ ಬಾಸ್ ಮನೆ ಒಳಗೆ ಇರೋರಲ್ಲಿ ಕ್ಲೀನ್ ಇರೋರು ಯಾರು?
ರೆಹಮಾನ್: ನೇಹ. ಯಾಕಂದ್ರೆ ನಾನು ಅವಳ ಜೊತೆ ಹೆಚ್ಚು ಸಮಯ ಕಳೆದಿರೋದ್ರಿಂದ ಅಲ್ಲದೇ ನಾನು ನೋಡಿರೋ ಹಾಗೆ ಅವಳ ಮನಸ್ಸು ಮತ್ತೆ ಅವಳು ಇರೋದು ತುಂಬಾನೆ ಕ್ಲೀನ್ ಅಂತ ಹೇಳೋಕೆ ಇಷ್ಟ ಪಡ್ತೀನಿ ಸುದೀಪ್ ಸರ್.
ಸುದೀಪ್: ಬಿಗ್ ಬಾಸ್ ಮನೆ ಹೇಗನ್ನಿಸ್ತು?
ರೆಹಮಾನ್: ಬಿಗ್ ಬಾಸ್ ಬಗ್ಗೆ ಅಷ್ಟೋಂದ್ ಗೊತ್ತಿಲ್ಲ. ಆದ್ರೆ ನೇಹ ತುಂಬಾ ಒಳ್ಳೇ ಹುಡುಗಿ. ನಾನು ಅವಳ ಜೊತೆ ಹೆಚ್ಚು ಸಮಯ ಕಳೆದಿರೋದ್ರಿಂದ...
ಸುದೀಪ್: ಬಿಗ್ ಬಾಸ್ ಮನೆ ಒಳಗೆ ಊಟ ತಿಂಡಿ ಹೇಗಿತ್ತು?
ರೆಹಮಾನ್: ನೇಹ. ಯಾಕಂದ್ರೆ ನಾನು ಅವಳ ಜೊತೆ ಹೆಚ್ಚು ಸಮಯ ಕಳೆದಿರೋದ್ರಿಂದ ನಾವಿಬ್ರೂ ಊಟ ತಿಂಡಿ ನ ಶೇರ್ ಮಾಡ್ಕೋತಿದ್ವಿ.
ಸುದೀಪ್: ರೆಹಮಾನ್ ನನ್ನ ಪ್ರಶ್ನೆ ಅದಲ್ಲ.. ಹೋಗ್ಲಿ ಬಿಡಿ
.




ಕನ್ನಡ ನಾಡಲಿ

PC: Prakash Hegde

ಸಾಕಷ್ಟು ಸರ್ತಿ ಟೀವಿ ಕಾರ್ಯಕ್ರಮಗಳ ಬಗ್ಗೆ ಬರಿಯ ಬೇಕು ಎಂದುಕೊಂಡರೂ ಅದು ಸಾಧ್ಯವಾಗುವುದೇ ಇಲ್ಲ. ಕೆಲವು ಬಾರಿ ಟೀವಿ ಕಾರ್ಯಕ್ರಮಗಳು ಅಂದರೆ ವಿಶೇಷವಾದ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗಿರುವುದಿಲ್ಲ. ಅಂತಹ ಸಮಯದಲ್ಲಿ ಏನನ್ನು ಬರೆಯಲಾಗದೆ ಹಾಗೆ ಸುಮ್ಮನೆ ಇದ್ದು ಬಿಡುತ್ತೇನೆ. ಅದಷ್ಟೇ ಉತ್ತರ ಸರಿಯಾಗಿರುವುದು ಅಂತ ಹೇಳೋಕೆ ಇಷ್ಟ ಪಡ್ತೀನಿ :)
ಆದರೆ ಕೆಲವೊಂದು ಕಾರ್ಯಕ್ರಮಗಳು ನಾಲ್ಕೈದು   ದಿನಗಳ ಹಿಂದೆ ವೀಕ್ಷಿಸಿದ್ದರು ಸಹಿತ, ಅಥವಾ ಒಂದು ವಾರದ ಹಿಂದೆ ನೋಡಿದ್ದರು ಅದರ ಬಗ್ಗೆ ಹೇಳಲೇ ಬೇಕು ಅನ್ನುವ ತುಡಿತ ಇರುತ್ತದೆ.. ಅದರಲ್ಲಿ ಒಂದೆರಡು ಅಂದ್ರೆ ಟೀವಿ ನೈನ್ ವಾಹಿನಿಗೆ ಸಂಬಂಧ ಪಟ್ಟಿದ್ದು. ಕಳೆದ ಶನಿವಾರ  ಈ ವಾಹಿನಿಯಲ್ಲಿ ನಿರೂಪಕ ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ವಿಷಯ ತೆಗೆದುಕೊಂಡಿದ್ದರು. ಪ್ರಸ್ತುತ  ಭವಿಷ್ಯದ ಹಾಗೂ ಭೂತಕಾಲದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟಗಳಲ್ಲಿ ರಸ್ತೆಗುಂಡಿ, ತೊಂದರೆ, ಸಮಸ್ಯೆ ಇತ್ಯಾದಿ ಇತ್ಯಾದಿ.  ಆದರೆ ಪರಿಸ್ಥಿತಿಯಲ್ಲಿ ಬದಲಾವಣೆ ಊಹುಂ ಏನೂ ಆಗಿಲ್ಲ.
ಮುಖ್ಯವಾಗಿ ಇಂತಹ ವಿಷಯ ಚರ್ಚೆ ಮಾತ್ರ ಆಗದೆ ಸರ್ಕಾರದ ಗಮನಕ್ಕೆ ತರುವಂತೆ ಪ್ರಯತ್ನ ಮಾಡ ಬೇಕು.. ಇಲ್ಲದೆ ಹೋದರೆ ಅದು ಬರಿ ಚರ್ಚೆ ಆಗಿ ಉಳಿದು ಬಿಡುತ್ತದೆ..
Image result for blue flowers
@ ಇದೇ ವಾಹಿನಿಯಲ್ಲಿ ಭಾನುವಾರ ಮತ್ತೊಂದು ಕಾರ್ಯಕ್ರಮ ನೋಡಿದೆ.. ಊಲಾಲ ಅಂತ ಅದರ ಶೀರ್ಷಿಕೆ ಇತ್ತು. ತುಂಬಾ ಇಷ್ಟವಾದ ಕಾರ್ಯಕ್ರಮಗಳಲ್ಲಿ ಅದು ಒಂದು. ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಮಾತ್ರ ಕನ್ನಡ ಮಾತನಾಡುವ ಇಲ್ಲವೇ ಚಂದದ  ಕನ್ನಡದ ಹೆಣ್ಣು ಮಕ್ಕಳು ಕಂಡಾಗ  ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ  ಎಂದು ಉಲಿಯುವವವರು ಬೇಕಾದಷ್ಟು ಮಂದಿ ಇದ್ದಾರೆ..
ಆ ವಿಷ್ಯ ಬಿಡಿ ಈ ಊಲಾಲ ಕಾರ್ಯಕ್ರಮದ ವಿಶೇಷ ಅಂದ್ರೆ ಕ್ಯಾಮರೋನ್  ಗೆ ಸೇರಿದ ವ್ಯಕ್ತಿ  ಕೇಮ್ ಬ್ರೇವ್ ಕನ್ನಡ ಹಾಡು ಹಾಡುತ್ತಾ ರಂಜಿಸುತ್ತಿದ್ದರು. ಅವರು ವೈ ಡಿಸ್ ಕೊಲವರಿ ಡಿ ಎಂದು ಹಾಡಿ ವೀಕ್ಷಕರ ಖುಷಿ ಹೆಚ್ಚಿಸುತ್ತಿದ್ದರು. ಅದಾದ ಬಳಿಕ ನೈಜೀರಿಯಾದ ವ್ಯಕ್ತಿ  -- ಹುಟ್ಟಿದರೆ ಕನ್ನಡ ನಾಡಲಿ ಹುಟ್ಟ ಬೇಕು ಹಾಡು ಹಾಡಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಓದಲು ಬಂದಿದ್ದ ಈ ವಿದೇಶಿ ವಿದ್ಯಾರ್ಥಿಗಳು ಹಾಡಿದ  ಅಪ್ಪಟ ಶುದ್ಧ ಕನ್ನಡದ ಹಾಡನ್ನು ಕೇಳಿ  ಆಹಾ ಖುಷಿ ಆಯ್ತು. ಯಾಕೆಂದ್ರೆ ಸಂಪೂರ್ಣವಾಗಿ  ಭಿನ್ನವಾದ ಭಾಷೆಯ ಹಾಡನ್ನು, ಅದರಲ್ಲೂ ಕಸ್ತೂರಿ ಕನ್ನಡದ ಹಾಡು  ಸ್ಪಷ್ಟವಾಗಿ ಹಾಡಿದರು ಅಂದ್ರೆ  ನನಗಂತೂ ಸಕತ್ ಇಷ್ಟ ಆಯ್ತು.. ನಮ್ ಕೃಷ್ಣೆ  ಗೌಡ್ರಂತೆ ಹೇಳಿಕೊಟ್ಟಿದ್ದು ಕನ್ನಡವಾ.. ನಿಮಗೊಂದು  ನಮುಸ್ಕಾರ ಸರ್ .. ಮತ್ತೆ ಪ್ರಸಾರ ಆದ್ರೆ ನೋಡಿ ಚೆನ್ನಾಗಿದೆ ಕಾರ್ಯಕ್ರಮ..