PC: Prakash Hegde |
ಸಾಕಷ್ಟು ಸರ್ತಿ ಟೀವಿ ಕಾರ್ಯಕ್ರಮಗಳ ಬಗ್ಗೆ ಬರಿಯ ಬೇಕು ಎಂದುಕೊಂಡರೂ ಅದು ಸಾಧ್ಯವಾಗುವುದೇ ಇಲ್ಲ. ಕೆಲವು ಬಾರಿ ಟೀವಿ ಕಾರ್ಯಕ್ರಮಗಳು ಅಂದರೆ ವಿಶೇಷವಾದ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗಿರುವುದಿಲ್ಲ. ಅಂತಹ ಸಮಯದಲ್ಲಿ ಏನನ್ನು ಬರೆಯಲಾಗದೆ ಹಾಗೆ ಸುಮ್ಮನೆ ಇದ್ದು ಬಿಡುತ್ತೇನೆ. ಅದಷ್ಟೇ ಉತ್ತರ ಸರಿಯಾಗಿರುವುದು ಅಂತ ಹೇಳೋಕೆ ಇಷ್ಟ ಪಡ್ತೀನಿ :)
ಆದರೆ ಕೆಲವೊಂದು ಕಾರ್ಯಕ್ರಮಗಳು ನಾಲ್ಕೈದು ದಿನಗಳ ಹಿಂದೆ ವೀಕ್ಷಿಸಿದ್ದರು ಸಹಿತ, ಅಥವಾ ಒಂದು ವಾರದ ಹಿಂದೆ ನೋಡಿದ್ದರು ಅದರ ಬಗ್ಗೆ ಹೇಳಲೇ ಬೇಕು ಅನ್ನುವ ತುಡಿತ ಇರುತ್ತದೆ.. ಅದರಲ್ಲಿ ಒಂದೆರಡು ಅಂದ್ರೆ ಟೀವಿ ನೈನ್ ವಾಹಿನಿಗೆ ಸಂಬಂಧ ಪಟ್ಟಿದ್ದು. ಕಳೆದ ಶನಿವಾರ ಈ ವಾಹಿನಿಯಲ್ಲಿ ನಿರೂಪಕ ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ವಿಷಯ ತೆಗೆದುಕೊಂಡಿದ್ದರು. ಪ್ರಸ್ತುತ ಭವಿಷ್ಯದ ಹಾಗೂ ಭೂತಕಾಲದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟಗಳಲ್ಲಿ ರಸ್ತೆಗುಂಡಿ, ತೊಂದರೆ, ಸಮಸ್ಯೆ ಇತ್ಯಾದಿ ಇತ್ಯಾದಿ. ಆದರೆ ಪರಿಸ್ಥಿತಿಯಲ್ಲಿ ಬದಲಾವಣೆ ಊಹುಂ ಏನೂ ಆಗಿಲ್ಲ.
ಮುಖ್ಯವಾಗಿ ಇಂತಹ ವಿಷಯ ಚರ್ಚೆ ಮಾತ್ರ ಆಗದೆ ಸರ್ಕಾರದ ಗಮನಕ್ಕೆ ತರುವಂತೆ ಪ್ರಯತ್ನ ಮಾಡ ಬೇಕು.. ಇಲ್ಲದೆ ಹೋದರೆ ಅದು ಬರಿ ಚರ್ಚೆ ಆಗಿ ಉಳಿದು ಬಿಡುತ್ತದೆ..
@ ಇದೇ ವಾಹಿನಿಯಲ್ಲಿ ಭಾನುವಾರ ಮತ್ತೊಂದು ಕಾರ್ಯಕ್ರಮ ನೋಡಿದೆ.. ಊಲಾಲ ಅಂತ ಅದರ ಶೀರ್ಷಿಕೆ ಇತ್ತು. ತುಂಬಾ ಇಷ್ಟವಾದ ಕಾರ್ಯಕ್ರಮಗಳಲ್ಲಿ ಅದು ಒಂದು. ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಮಾತ್ರ ಕನ್ನಡ ಮಾತನಾಡುವ ಇಲ್ಲವೇ ಚಂದದ ಕನ್ನಡದ ಹೆಣ್ಣು ಮಕ್ಕಳು ಕಂಡಾಗ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ ಎಂದು ಉಲಿಯುವವವರು ಬೇಕಾದಷ್ಟು ಮಂದಿ ಇದ್ದಾರೆ..
ಆ ವಿಷ್ಯ ಬಿಡಿ ಈ ಊಲಾಲ ಕಾರ್ಯಕ್ರಮದ ವಿಶೇಷ ಅಂದ್ರೆ ಕ್ಯಾಮರೋನ್ ಗೆ ಸೇರಿದ ವ್ಯಕ್ತಿ ಕೇಮ್ ಬ್ರೇವ್ ಕನ್ನಡ ಹಾಡು ಹಾಡುತ್ತಾ ರಂಜಿಸುತ್ತಿದ್ದರು. ಅವರು ವೈ ಡಿಸ್ ಕೊಲವರಿ ಡಿ ಎಂದು ಹಾಡಿ ವೀಕ್ಷಕರ ಖುಷಿ ಹೆಚ್ಚಿಸುತ್ತಿದ್ದರು. ಅದಾದ ಬಳಿಕ ನೈಜೀರಿಯಾದ ವ್ಯಕ್ತಿ -- ಹುಟ್ಟಿದರೆ ಕನ್ನಡ ನಾಡಲಿ ಹುಟ್ಟ ಬೇಕು ಹಾಡು ಹಾಡಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಓದಲು ಬಂದಿದ್ದ ಈ ವಿದೇಶಿ ವಿದ್ಯಾರ್ಥಿಗಳು ಹಾಡಿದ ಅಪ್ಪಟ ಶುದ್ಧ ಕನ್ನಡದ ಹಾಡನ್ನು ಕೇಳಿ ಆಹಾ ಖುಷಿ ಆಯ್ತು. ಯಾಕೆಂದ್ರೆ ಸಂಪೂರ್ಣವಾಗಿ ಭಿನ್ನವಾದ ಭಾಷೆಯ ಹಾಡನ್ನು, ಅದರಲ್ಲೂ ಕಸ್ತೂರಿ ಕನ್ನಡದ ಹಾಡು ಸ್ಪಷ್ಟವಾಗಿ ಹಾಡಿದರು ಅಂದ್ರೆ ನನಗಂತೂ ಸಕತ್ ಇಷ್ಟ ಆಯ್ತು.. ನಮ್ ಕೃಷ್ಣೆ ಗೌಡ್ರಂತೆ ಹೇಳಿಕೊಟ್ಟಿದ್ದು ಕನ್ನಡವಾ.. ನಿಮಗೊಂದು ನಮುಸ್ಕಾರ ಸರ್ .. ಮತ್ತೆ ಪ್ರಸಾರ ಆದ್ರೆ ನೋಡಿ ಚೆನ್ನಾಗಿದೆ ಕಾರ್ಯಕ್ರಮ..
No comments:
Post a Comment