PC: Prakash Hegde |
ಈ ಟೀವಿ ನ್ಯೂಸ್ ನಲ್ಲಿ ಇದರ ಬಗ್ಗೆ ಸಂಜೆ ಪ್ರಸಾರವಾದ ಕಾರ್ಯಕ್ರಮ ಗಮನ ಸೆಳೆಯಿತು. ಅದನ್ನು ಸಿದ್ಧ ಮಾಡಿದ ರೀತಿ, ಅದನ್ನು ಜನರ ಮುಂದೆ ಇಟ್ಟ ಬಗೆ, ಅದಕ್ಕೆ ವಾಯ್ಸ್ ಓವರ್ ಮಾಡಿದವರು , ಆ ಸ್ಪಷ್ಟತೆ, ಕಾರ್ಯಕ್ರಮದಲ್ಲಿ ಪೂರಕ ದೃಶ್ಯ ಜೋಡಣೆ ಎಲ್ಲವೂ ಮನ ಸೆಳೆಯಿತು.
@ ಬಿಗ್ ಬಾಸ್ ಮನೆಯಿಂದ ಗಾಯಕ ರವಿ ಮೂರೂರ್ ಹೊರ ಬಂದ ಬಳಿಕ ಅತ್ಯಂತ ಆಹ್ಲಾದ ಉಂಟಾಗುವಂತೆ ಇತ್ತು.. ಅವರು ಹೊರ ಬಂದಿದ್ದಕ್ಕೆ ಅಲ್ಲ ಅವರನ್ನು ಸಂದರ್ಶಿಸಿದ ವಾಹಿನಿಗಳು ಆ ಕಲಾವಿದರ ಕೈಲಿ ಹಾಡು ಹಾಡಿಸಿ ಮಾನಸೋಲ್ಲಾಸ ಹೆಚ್ಚಿಸಿದರು.
ಸುವರ್ಣ ನ್ಯೂಸ್ ನಿರೂಪಕ, ಪತ್ರಕರ್ತ ರಾಘವೇಂದ್ರ ಅವರ ಸಂದರ್ಶನ ನೋಡುವ ಅವಕಾಶ ಸಿಕ್ತು. ಅತ್ಯುತ್ತಮ ರೀತಿಯಲ್ಲಿ ಸಂದರ್ಶಿಸುವ ನಿರೂಪಕರಲ್ಲಿ ರಾಘವೇಂದ್ರ ಸಹ ಒಬ್ಬರು..ಚಂದದ ಕಾರ್ಯಕ್ರಮ.. ಚಂದದ ಹಾಡುಗಾರ ರವಿ ...
ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ... ಆಹಾ ಥ್ಯಾಂಕ್ಸ್ ರವಿ ಅವರೇ ಖುಷಿ ಕೊಡ್ತು..
ಹಾಡಿನಿಂದ ಮಾತ್ರವಲ್ಲ ರವಿ ಬಿಗ್ ಬಾಸ್ ಮನೆಯಲ್ಲಿ ಮಾಡಿದ ಮಿಮಿಕ್ರಿ , ಆ ಡ್ಯಾನ್ಸ್ ಸಕತ್ ಖುಷಿ ಕೊಡ್ತು.. ಸಿನಿಮಾದವರಿಗೆ ಈ ಪ್ರತಿಭೆ ಕಣ್ಣಿಗೆ ಬಿದ್ರೆ ಕನ್ನಡಕ್ಕೆ ಮತ್ತೋರ್ವ ಉತ್ತಮ ಕಲಾವಿದನ ಸೇರ್ಪಡೆ ಆಗುತ್ತದೆ ಚಿತ್ರರಂಗದಲ್ಲಿ..
@ಸ್ಟಾರ್ ಪ್ಲಸ್ ನಲ್ಲಿ ರಾಮಾಯಣ ಪ್ರಾರಂಭವಾಗಿದೆ. ಅದ್ರ ಬಗ್ಗೆ ನಾನು ಈ ಮೊದಲು ಒಂದು ಬಾರಿ ಹೇಳಿದ್ದೆ. ರಾಮಾಯಣದ ಬಗ್ಗೆ ಆಗಿರಲಿ, ಮಹಾಭಾರತದ ಬಗ್ಗೆಯೇ ಆಗಿರಲಿ ನನಗೆ ಬಹಳಷ್ಟು ಕುತೂಹಲ ಮತ್ತು ಇಷ್ಟ ಇದ್ದೆ ಇದೆ. ವಾಹಿನಿ, ಭಾಷೆ ಯಾವುದೇ ಆಗಿರಲಿ ನೋಡೋಕೆ ಇಷ್ಟ ಪಡ್ತೀನಿ. ಕೆಲವೊಂದು ಅಷ್ಟೊಂದು ಮನ ಸೆಳೆಯೋಲ್ಲ.. ಆದರೆ ಈ ಬಾರಿ ನನಗೆ ಮಾತ್ರ ಸ್ಟಾರ್ ಪ್ಲಸ್ ನಲ್ಲಿ ಪ್ರಸಾರ ಆಗ್ತಾ ಇರುವ ರಾಮಾಯಣ ತುಂಬಾ ಇಷ್ಟ ಆಗ್ತಾ ಇದೆ. ಹೊಸ ಕಾನ್ಸೆಪ್ಟ್, ಮುಖ್ಯವಾಗಿ ಅ ಕಾಲದಲ್ಲಿ ಇರಬಹುದಾದ ಕೆಲವು ಅಂಶಗಳು, ಕಾಲ್ಪನಿಕ ಅಂಶಗಳಿಗೆ ನೈಜತೆ ಜೊತೆಗೂಡಿಸಿ ಅದ್ಭುತ ರೀತಿಯಲ್ಲಿ ಕಥೆಯನ್ನು ವಿಸ್ತರಿಸಿದ್ದಾರೆ. ಆ ಅರಮನೆ, ರಾಜ ಎಂದರೆ ಇರುವ ಒಂದು ಅಡ್ಡಿ, ರಾಣಿವಾಸದೊಳಗೆ ಇರುವ ಅಸಹನೆ, ಅಸಂತೋಷ , ಹೀಗೆ ಹತ್ತಾರು ಅಂಶಗಳನ್ನು ಒಳಗೊಂಡಿದೆ.ಬಳಸಿರುವ ಉಡುಗೆ ತೊಡುಗೆ , ಸೀತೆ, ಊರ್ಮಿಳ, ಮಾಂಡವಿ, ಶ್ರುತಕೀರ್ತಿ ಪುಟ್ಟ ಬಾಲೆಯರು, ಅತ್ಯಂತ ಆಕರ್ಷಕ ರಾಮ, ನಮ್ಮ ಕಲ್ಪನೆಯಲ್ಲಿ ಇರುವಂತಹ ಪಾತ್ರಧಾರಿ, ಲಕ್ಷ್ಮಣ, ಭರತ, ಶತ್ರುಘ್ನ ಎಲ್ಲದರ ಜೊತೆ ಜನಕ, ಆತನ ತಮ್ಮ ಪ್ರತಿಯೊಂದು ಪಾತ್ರವು ತುಂಬಾ ವಿಶೇಷವಾಗಿ ತೋರಿಸಿದ್ದಾರೆ..
@ ಕಲರ್ ವಾಹಿನಿಯಲ್ಲಿ ಎರಡು ಸುಂದರ ಹಾಸ್ಯ ಕಾರ್ಯಕ್ರಮಗಳು ಪ್ರಸಾರ ಆಗ್ತಾ ಇದೆ, ಒಂದು ಬಚಾವ್, ಮತ್ತೊಂದು ಕಾಮಿಡಿ ವಿತ್ ಕಪಿಲ್..
ಕಪಿಲ್ ಕಾರ್ಯಕ್ರಮದಲ್ಲಿ ಗುತ್ತಿ, ಪಲಕ್, ದಾದಿ, ಅಡುಗೆಯವ,ಸಿದ್ದುಜಿ ಎಲ್ಲರೂ ಇಷ್ಟ ಆಗ್ತಾರೆ. ಅದೇರೀತಿ ಬಚಾವ್ ನಲ್ಲಿ ಭಾರತಿ, ಕೃಷ್ಣ, ಕರಣ್, ಶ್ರುತಿ, ಅನಿತಾ, ಅಲ್ಲದೆ ಎಲ್ಲ ಕಲಾವಿದರು ಅದ್ಭುತವಾಗಿ ನಡೆಸಿಕೊಡ್ತಾರೆ. ಸಮರ್ಥವಾಗಿ ನಗಿಸುವ ಕೆಲಸ ಮಾಡುತ್ತಾ ವೀಕೆಂಡ್ ನಗುತ್ತಾ ಕಳೆಯುವಂತೆ ಮಾಡ್ತಾರೆ..
No comments:
Post a Comment