PC: Prakash Hegde
ಕಳೆದ ಭಾನುವಾರ ಬಹುದಿನಗಳ ಬಳಿಕ ಜೇಮ್ಸ್ ಬಾಂಡ್ OO7 -ಸ್ಪೆಕ್ಟ್ರೆ ಗೆ ಹೋಗಿದ್ದೆ. ಬಾಂಡ್ ಸಿನಿಮಾಗಳಲ್ಲಿ ಬರಿ ಕತ್ತಲು, ಇಲ್ಲದೆ ಹೋದರೆ ಇದ್ದಬದ್ದ ಮನೆ , ಕಾರು, ವಿಮಾನ, ಹೆಲಿಕಾಪ್ಟರ್ ಎಲ್ಲವನ್ನು ಒಡೆದು ಹಾಕುವ ತಂತ್ರಗಾರಿಕೆ. ಶಬ್ದಮಯ. ಆದರು ಮಜಾ ಸಿಗುತ್ತೆ ಅಂತಹ ಸಿನಿಮಾಗಳಿಂದ. ಎಂತಹ ವಿಶೇಷ ಕ್ರೌರ್ಯ ಇರುತ್ತೆ . ಡಡಾಂಟ...ಡಾ...ಅ...ಅ... ಡಿಶ್ಕುಲ್ .. ಇಂತಹದ್ದೇ ಶಬ್ದ....ಕಲರ್ ವಾಹಿನಿಯಲ್ಲಿ ಬಿಗ್ ಬಾಸ್ ಗಲಾಟೆ ಈಗ ಶ್ರುತಿಕಡೆ ತಿರುಗಿರುವುದು ಮಾತ್ರ ನಿರೀಕ್ಷಿತ ಸಂಗತಿ. ಶ್ರುತಿ ಬಗ್ಗೆ ಹೆಚ್ಚು ಇಷ್ಟ ಆಗಿದ್ದು ಬಿಗ್ ಬಾಸ್ ಕಾರ್ಯಕ್ರಮದಿಂದ.. ಆಕೆಯ ಬದುಕಲ್ಲಿ ಏನೆಲ್ಲಾ ನಡೆಯಿತು.. ಆಕೆಯನ್ನು ಮತ್ತಷ್ಟು ಗಟ್ಟಿ ಗೊಳಿಸುವ ರಿಯಾಲಿಟಿ ಷೋ ಇದು.. ಬೇರೆಯವರ ಅಸೂಯೆ ಶ್ರುತಿಯ ಒಳ್ಳೆಯ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ತೋರುತ್ತೆ ಅನ್ನುವ ಅಂಶದ ಬಗ್ಗೆ ಕುತೂಹಲವಿದೆ. ಈ ಕಾರ್ಯಕ್ರಮದಲ್ಲಿ ಅಯ್ಯಪ್ಪ ನಿಜಕ್ಕೂ ಸರಿಯಾಗಿ ಗೇಂ ಆಡ್ತಾ ಬಂದಿದ್ದಾರೆ. ಎಲ್ಲರನ್ನು ಡಿವೈಡ್ ಅಂಡ್ ರೂಲ್.
ನಿಜ ಹೇಳ ಬೇಕೆಂದರೆ ಆತ ಕ್ರಿಕೆಟ್ ಟೀಮ್ ನಲ್ಲೂ ಇದೆ ಸ್ಟ್ರಾಟಜಿ ಬಳಸಿ ಹೆಚ್ಚು ಬೆಳೆದರಾ ಅಂತ ಅನ್ನಿಸುತ್ತೆ. ಏನೇ ಇರಲಿ ಈ ಬಾರಿ ಅಲಂಕಾರದ ಕಾನ್ಸೆಪ್ಟ್ ಖುಷಿ- ಮಜಾ ಕೊಡ್ತು. ಇನ್ನು ಹಾಗೆ ನೋಡೋಕೆ ಹೋದ್ರೆ ಹುಚ್ಚಾಸ್ಪತ್ರದು ಅಷ್ಟೊಂದು ಖುಷಿ ನೀಡಲಿಲ್ಲ ಬಿಡಿ.
ನಾಮಿನೇಷನ್ ಸಮಯದಲ್ಲಿ ಭಾವನ ಬೆಳಗೆರೆ ತನ್ನ ಹೆಸರು ಬರುತ್ತೆ ಎಂದು ನಿರೀಕ್ಷೆ ಮಾಡಿರಲಿಲ್ಲ ಅಂತ ಕಾಣುತ್ತೆ.. ಆಕೆ ಸ್ವಲ್ಪ ಬದಲಾಗಿದ್ದು ಸ್ಪಷ್ಟವಾಗಿ ಕಾಣ್ತಾ ಇತ್ತು. ಏನೇ ಹೇಳಿ ಸುನಾಮಿ ಪೂza ಅವರು ಅಂತ ಹೇಳ್ತಾ ತಮ್ಮ ವಿಶ್ವಾಸ ಪೂಜಾಗಾಂಧಿ ಎನ್ನುವ ಬದಲಾದ ವ್ಯಕ್ತಿತ್ವದ ಬಗ್ಗೆ ತೋರಿಸ್ತಾ ಇರ್ತಾರೆ.
ಸಿಸ್ಟರ್ ನೇಹಾ ಮಾತ್ರ ತುಂಬಾ ರೆಬಲ್ ಆಗಿ ಬ್ರದರ್ ಜೊತೆ ಇದ್ದು ತಾವು ಒಳ್ಳೆವರು ಅನ್ನುವ ಪ್ರಯತ್ನ ಮಾಡ್ತಾ ಇದ್ರೂ. ಬಿಡಿ ಆಕೆ ಬಗ್ಗೆ ಹೇಳೊಂಗಿಲ್ಲ . ಯಾಕೆಂದ್ರೆ ಮಾಡೆಲ್ ಜಯಶ್ರೀ ಹೇಳಿದಂತೆ ತಿಕ್ಕಿ ತಿಕ್ಕಿ ತಿಕ್ತಾ ಇದ್ದೀನಿ ನಾನು ಮನೇಲೂ ತಿಕ್ಕಲಿಲ್ಲ ಪಾತ್ರೆನ್ನ ಅಂತ ಜೊತೆ ಅಸಹನೆಯನ್ನು ತಿಕ್ಕಿ ತಿಕ್ಕಿ ಕಕ್ಕುತಾ ಇದ್ರಲ್ಲ ಪುಣ್ಯಾತಗಿತ್ತಿ..
ಆನಂದ್ ನಿಜಕ್ಕೂ ಅತ್ಯುತ್ತಮ ಕಲಾವಿದ ಅಂತ ಮತ್ತೆ ಮತ್ತೆ ತಮಗೆ ನೀಡಿರುವ ಟಾಸ್ಕ್, ಆ ಮಿಮಿಕ್ರಿ ಮೂಲಕ ತೋರಿಸಿದ್ದಾರೆ. ಆನಂದ್ ಯಾವರೀತಿ ಮನೋರಂಜನೆ ನೀಡ್ತಾರೆ ಅಂತ ಕಾಯುತ್ತಾ ಇರ್ತೀನಿ ನಾನು.
ಸುದೀಪ್ ಸಣ್ಣ ಡೌಟ್
ಹಿಂದಿ ಬಿಗ್ ಬಾಸ್ ನಲ್ಲಿ ಸಲ್ಮಾನ್ ಬಂದಾಗ ಎಲ್ಲರು ಮುದ್ದಾಗಿ ಅದರಲ್ಲೂ ಹೆಣ್ಣುಮಕ್ಕಳು ಸಲ್ಮಾನ್ ಅಂತ ಮುದ್ದಾಗಿ ಕರೀತಾರೆ.. ನಿಮ್ಮನ್ನು ದೀಪು ಅಂತ ಕಿಚ್ಚ ಅಂತ ಯಾಕೆ ಕರೆಯೋಲ್ಲ.. ನೀವು ಸಾಕಷ್ಟು ಮಿಸ್ ಮಾಡ್ಕೋತಾ ಇದ್ದೀರಿ ಅಂತ ಅನ್ನಿಸ್ತಾ ಇಲ್ವಾ ;-)
ರವಿ ಮೂರೂರ್ ಅವರು ಭಾವನ ಬೆಳಗೆರೆಯನ್ನು ನನ್ನ ತಂಗಿ ಅಂತ ಪಾಪ ಪ್ರೀತಿಯಿಂದ ಹೇಳಿದ್ರು.. ಆಕೆ ರವಿ ಮಾಮ ರವಿ ಮಾಮ ಅಂತ ಸಂಬೋಧನೆ ಮಾಡ್ತಾ ಇದ್ರು... :-)
ನೀವು ನಿಮ್ಮ ಕೂದಲನ್ನು ಫಳಫಳ ನೆ ಹೊಳೆಯುವಂತೆ ಮಾಡಿರೋದು ಶಾಂಪೂ, ಕ್ಯಾಮರ ಅದರ ಜೊತೆಗಿನ ಬೆಳಕು ಅಥವಾ .. ;-)
No comments:
Post a Comment