PC: Prakash hegde |
ಆದರೆ ಈ ಅಂಶವನ್ನು ಮತ್ತು ಆಮೀರ್ ಖಾನ್ ಅಸಹಿಷ್ಣುತೆಯ ವಿಷಯವನ್ನು ಜೊತೆ ಮಾಡಿಸಿ ಡಿಬೇಟ್ ಮಾಡ್ತಾ ಇದ್ರೂ ರೋಹಿತ್. ಈ ಪತ್ರಕರ್ತ - ನಿರೂಪಕರ ಬಗ್ಗೆ ಹೇಳುವಷ್ಟಿಲ್ಲ, ನನ್ನ ಕಡೆಯಿಂದ ಒಂದು ಥಂಬ್ಸ್ ಅಪ್ . ಆಮೀರ್ ಹೇಳಿರುವುದನ್ನು ತಪ್ಪಾಗಿ ಅರ್ಥೈಸಿರ ಬಹುದು, ಅಥ್ವಾ ಏನೇ ಸಂಗತಿ ಆಗಿರ ಬಹುದು ಆದರೆ ಪಾರ್ಟಿಗಳ ಮುಖಂಡರು ತಮ್ಮ ಬೆನ್ನು ತಾವು ತಟ್ಟಿ ಕೊಳ್ಳುವ ಸಂಗತಿ ಅತ್ಯಂತ ಖೇದ ಅನ್ನಿಸಿತು.
ಅದೇ ಸಮಯದಲ್ಲಿ ಹಾಗೆ ಆಂಗ್ಲ ಚಾನೆಲ್ ಗಳ ಕಡೆಗೆ ಹೋದಾಗ ಚಾನೆಲ್ ನ್ಯೂಸ್ ಏಷ್ಯ ವಾಹಿನಿಯ ಬಾಗಿಲು ತೆಗೆದಾಗ ಅಲ್ಲಿ ಮ್ಯಾನ್ಮಾರ್ ಚುನಾವಣೆಯ ಬಗ್ಗೆ ಅಲ್ಲಿ ಆ ಕ್ಷಣದಲ್ಲಿ ಜನರು ಎದುರಿಸಿದ ಒಂದು ಭಾವನೆಗಳು, ಆ ಖುಷಿ, ಆ ಆತಂಕ ಎಲ್ಲವನ್ನು ರೋಡ್ ಟು ಡೆಮಾಕ್ರಸಿ ಎನ್ನುವ ಕಾರ್ಯಕ್ರಮದಲ್ಲಿ ತೋರಿಸಲಾಗುತ್ತಿತ್ತು. ಸಂಜೆ ಐದೋವರೆಯಲ್ಲಿ ನಾನು ನೋಡಿದ್ದು, ಕಾಫಿಪ್ರಿಯಳಾದ ನನಗೆ ಕಾಫಿ ಕಡೆ ಸಹ ಗಮನ ಹೋಗದೆ ಇರುವಷ್ಟು ಇಷ್ಟವಾಯಿತು ಆ ಕಾರ್ಯಕ್ರಮ. ಅಕಸ್ಮಾತ್ ಆ ಚಾನೆಲ್ ನಿಮ್ಮ ಚಾನೆಲ್ಗಳ ಗುಚ್ಚದಲ್ಲಿ ಇದ್ರೆ , ಅದರಲ್ಲಿ ಮತ್ತೆ ಆ ಕಾರ್ಯಕ್ರಮ ಪ್ರಸಾರ ಆಗೇ ಆಗುತ್ತೆ, ನೋಡಿ ತುಂಬಾ ಭಿನ್ನವಾಗಿದೆ. ಅನೇಕ ಅಂಶಗಳನ್ನು ಸಹಿಸಿಕೊಂಡಿರುವ ಭಾರತೀಯರು, ವಿಶ್ವದ ದೊಡ್ಡ ಗಣತಂತ್ರ ದೇಶವಾದ ಭಾರತದಲ್ಲಿ ಸಹಿಷ್ಣುತೆ- ಅಸಹಿಷ್ಣುತೆಯ ಹಾಕ್ಯಾಟ. ಆದರೆ ಸ್ವಾತಂತ್ರಕ್ಕಾಗಿ, ಗಣತಂತ್ರಕ್ಕಾಗಿ ಒದ್ದಾಡಿದ ಆಂಗ್ ಸ್ಯಾನ್ ಸು ಕಿ ..ಆಕೆಯ ಶ್ರಮದ ಸಾರ್ಥಕ ಕ್ಷಣಗಳು...ಹೊಟ್ಟೆ ತುಂಬಿದಾಗ ಹಿಂಗೆ ಆಗೋದು...
PC: Raghupathi Sringeri |
No comments:
Post a Comment